ದಸರೆಗೆ ಮಾತ್ರ ಆನೆ; ಜಾತ್ರೆ,ಆಶೀರ್ವಾದಕ್ಕೆ ಬಲುಕಷ್ಟ!
Team Udayavani, Sep 21, 2017, 6:00 AM IST
ಬೆಂಗಳೂರು: ಇನ್ನು ಮುಂದೆ ದೇವಾಲಯಗಳ ಮುಂದೆ ಆನೆಯಿಂದ ಆಶೀರ್ವಾದ, ಜಾತ್ರೆಗಳಲ್ಲಿ ಆನೆ ಮೇಲೆ ದೇವರನ್ನು ಇಟ್ಟು ಮೆರವಣಿಗೆ ಮಾಡುವುದು ಕಷ್ಟದ ಕೆಲಸವಾಗಬಹುದು!
ದೇವಾಲಯಗಳೂ ಸೇರಿ 25ಕ್ಕೂ ಹೆಚ್ಚು ಕಡೆಗಳಿಂದ ಆನೆಗಳಿಗಾಗಿ ಬೇಡಿಕೆ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾರ್ಗ ಸೂಚಿಯೊಂದನ್ನು ಮಾಡಿದ್ದು, ಕಟ್ಟು ನಿಟ್ಟಿನ ಷರತ್ತುಗಳನ್ನು ಹಾಕಿದೆ. ಮೆರವಣಿಗೆ ಹಾಗೂ ಉತ್ಸವಗಳಲ್ಲಿ ಆನೆಗಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳದಂತೆ ನಿರ್ಬಂಧ ಹೇರಿ ಮಾರ್ಗಸೂಚಿ ರಚಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶದಂತೆ , ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ಸಮಿತಿ ಹೊಸ ಮಾರ್ಗಸೂಚಿ ರಚಿಸಿ ಆದೇಶ ಹೊರಡಿಸಿದೆ. ಇಡೀ ದೇಶದಲ್ಲಿ ಕೇರಳ ಹೊರತುಪಡಿಸಿದರೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿರುವ ಹೆಗ್ಗಳಿಕೆ ರಾಜ್ಯಕ್ಕೆ ದಕ್ಕಿದೆ.
ಸೆಪ್ಟೆಂಬರ್ ತಿಂಗಳಾಂತ್ಯದಲ್ಲಿ ನಡೆಯುವ ದಸರಾ ಹಬ್ಬದ ಸಂದರ್ಭದಲ್ಲಿ ದೇವರ ಉತ್ಸವ ಮೂರ್ತಿ ಮೆರವಣಿಗೆಗೆ ಆನೆಗಳನ್ನು ಬಳಸಿ ಕೊಳ್ಳಲು ಅನುಮತಿ ನೀಡುವಂತೆ ಕೋರಿ ದೇವಾಲಯದ ಆಡಳಿತ ಮಂಡಳಿಗಳು ಸೇರಿ 25 ಕ್ಕೂ ಹೆಚ್ಚು ಮನವಿಬಂದಿದ್ದು, ಬಹುತೇಕ ತಿರಸ್ಕೃತಗೊಂಡಿವೆ.
ಅರ್ಜಿಸಲ್ಲಿಸುವ ಎಲ್ಲಾ ದೇವಾಲಯ ಆಡಳಿತ ಮಂಡಳಿಗಳೂ ಮೈಸೂರು ದಸರಾಗೆ ಅವಕಾಶ ನೀಡಿದಂತೆ ನಮಗೂ ನೀಡಿ ಎನ್ನುತ್ತಾರೆ. ಆದರೆ ಆನೆಗಳನ್ನು ಬಳಸುವುದಕ್ಕೆ ಹಲವು ಪೂರ್ವ ತರಬೇತಿ- ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಪರಿಸ್ಥಿತಿ ನಿಯಂತ್ರಿಸುವುದು ಕಷ್ಟಸಾಧ್ಯ. ಆದರೆ ಅರ್ಜಿ ಸಲ್ಲಿಸುವವರು ಪೂರ್ವ ತಯಾರಿಯಿಲ್ಲದೆ ಬರುತ್ತಾರೆ. ಇನ್ನು ಮುಂದೆ ಅರ್ಜಿ ಸಲ್ಲಿಸುವವರು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸ ಬೇಕು ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಪರವಾನಗಿ ಹೊಂದಿದ ಆನೆ ಮಾಲೀಕರಿಗೂ ಬಿಸಿಮುಟ್ಟಿಸಿದ ಮಾರ್ಗಸೂಚಿ!
ಆನೆಗಳನ್ನು ಸಾಕಲು ಪರವಾನಿಗೆ ಹೊಂದಿರುವ ಮಾಲೀ ಕರಿಗೂ ಬಿಸಿ ಮುಟ್ಟಿಸಿರುವ ರಾಜ್ಯಸರ್ಕಾರ, ಆನೆಗಳನ್ನು ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ಕೊಂಡೊಯ್ಯುವ ಮುನ್ನ ಆನೆಯ ಆರೋಗ್ಯ ಸ್ಥಿತಿಯ ಕುರಿತು ಪಶುವೈದ್ಯಾಧಿಕಾರಿಗಳಿಂದ ಪ್ರಮಾಣಪತ್ರ ಪಡೆದುಕೊಳ್ಳಬೇಕು ಆನೆಗೆ ಅನುಕೂಲವಾಗುಂತಹ ವಿಶಾಲ ಸ್ಥಳವುಳ್ಳ ಟ್ರಕ್‌ನಲ್ಲಿ ಸಾಗಿಸಬೇಕು.
ಮುಂಜಾನೆ ಹಾಗೂ ಸಾಯಂಕಾಲದ ವೇಳೆ ಮಾತ್ರ ಸಾಗಾಟ ನಡೆಸಬೇಕು. ಬಿಸಿಲು ಇರುವಾಗ ಹಾಗೂ ರಾತ್ರಿ ವೇಳೆ ಕರೆದುಕೊಂಡು ಹೋಗಬಾರದು. 6 ಗಂಟೆಗಿಂತ ಹೆಚ್ಚಿನ ಅವಧಿ ನಡೆಸಬಾರದು . ಮಾರ್ಗಮಧ್ಯೆ ನೀರಿರುವ ಜಾಗದಲ್ಲಿ ಆನೆಯನ್ನು ವಿಶ್ರಾಂತಿಗೆ ಬಿಡಬೇಕು. ವೈದ್ಯಕೀಯ ಮುಂಜಾಗೃತಾ ಕ್ರಮಗಳನ್ನೂ ಕೈಗೊಂಡಿರಬೇಕು ಎಂದೂ ಸೂಚಿಸಲಾಗಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ಪರವಾನಿಗೆ ನವೀಕರಣ, ಆನೆಗಳ ಆರೈಕೆ ಸಂಬಂಧ ರಿಜಿಸ್ಟ್ರರ್ ದಾಖಲಿಸಬೇಕು.ಆರೋಗ್ಯಯುತ ಆಹಾರ ನೀಡಬೇಕು. ಪ್ರತಿನಿತ್ಯ ಸ್ನಾನ ಮಾಡಿಸಬೇಕು,ಕಠಿಣ ಶಿಕ್ಷೆಯ ರೂಪದಲ್ಲಿ ಸರಪಳಿಗಳಿಂದ ಕಟ್ಟಿ ಹಾಕಬಾರದು, ಮಾವುತರಿಗೆ ತರಬೇತಿ, ಗರ್ಭಿಣಿ ಆನೆಗಳ ಆರೈಕೆ, ಆನೆಗಳಿಗೆ ದಿನಂಪ್ರತಿ
ನೀಡಬೇಕಾದ ಆಹಾರ, ಸಾಗಾಣಿಕೆ, ದಂತಗಳ ಕಟಾವು, ಆಕಸ್ಮಿಕವಾಗಿ ಮೃತಪಟ್ಟ ಆನೆಗಳ ಅಂತ್ಯಸಂಸ್ಕಾರ ಹೇಗೆ ಮಾಡಬೇಕು ಎಂಬ ನಿರ್ದೇಶನಗಳನ್ನು ಆದೇಶದಲ್ಲಿ ನೀಡಲಾಗಿದೆ.
ಮಾರ್ಗಸೂಚಿ ರಚನೆ ಸಮಿತಿ
– ಸಿ. ಜಯರಾಂ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅಧ್ಯಕ್ಷರು ಸದಸ್ಯರು
– ಅಜಯ್. ಎ ದೇಸಾಯಿ, ಏಷ್ಯಾ ಆನೆಗಳ ತಜ್ಞ
– ನಿಶಾಂತ್ ಶ್ರೀನಿವಾಸಯ್ಯ, (ಐಐಎಸ್‌ಸಿ)
– ಕಾಂಪ್ಯಾಶನ್ ಅನ್‌ಲಿಮಿಟೆಡ್ ಫ್ಲಸ್ ಆ್ಯಕ್ಷನ್(ಸಿಯುಪಿಎ) ಹೆಬ್ಟಾಳ, ಪ್ರತಿನಿಧಿ
– ಮನೋಜ್ ಕುಮಾರ್, ಮುಖ್ಯ ಅರಣ್ಯ ಸಂರಕ್ಷಾಧಿಕಾರಿ, ಆನೆ ಯೋಜನೆ
– ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್
– ಅಖೀಲ ಕರ್ನಾಟಕ ಪ್ರಾಣಿದಯಾ ಸಂಘ
– ಪೀಪಲ್ಸ್ ಫಾರ್ ಆನಿಮಲ್ಸ್ ಸಂಘಟನೆ
– ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಆನೆಯೋಜನೆ ಮೈಸೂರು) ಸದಸ್ಯ ಕಾರ್ಯದರ್ಶಿ
ಮಾರ್ಗ ಸೂಚಿಯಲ್ಲೇನಿದೆ?
– ಸ್ಥಳೀಯ ಎಸ್‌ಪಿಯಿಂದ ಅನುಮತಿ ಪತ್ರ
– ಆನೆಗಳ ಸದೃಢತೆ ಬಗ್ಗೆ ಪಶುವೈದ್ಯರಿಂದ ಪ್ರಮಾಣಪತ್ರ
– ಅರಣ್ಯ ಇಲಾಖೆಯ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳ ಅನುಮತಿ
– ಮುಂಜಾನೆ ಅಥವಾ ಸಂಜೆ ಮಾತ್ರ ಮೆರವಣಿಗೆ. ಬಿಸಿಲಲ್ಲಿ ಮೆರವಣಿಗೆ ಮಾಡುವಂತಿಲ್ಲ
– ಹಿರಿಯ ಆನೆ 20 ಕಿ.ಮೀ., ಕಿರಿಯ ಆನೆ 10ಕಿ.ಮೀ. ಮಾತ್ರ ನಡೆಸಬೇಕು
– ಆನೆಗೂ, ಸಾರ್ವಜನಿಕರಿಗೂ 10 ಮೀ. ಅಂತರ
– ಪಟಾಕಿ, ಸಿಡಿಮದ್ದು ಬಳಕೆ ಮಾಡಬಾರದು
– ಗರ್ಭಿಣಿ, ಅನಾರೋಗ್ಯದಿಂದ ಬಳಲುತ್ತಿರುವ ಆನೆಯನ್ನು ಬಳಕೆ ಮಾಡಬಾರದು
– ದೇಗುಲಗಳ ಮುಂದೆ ಭಕ್ತರಿಗೆ ಆಶೀರ್ವಾದ ಮಾಡಲು ಬಳಸಬಾರದು
ಉತ್ಸವಗಳು ಹಾಗೂ ಮೆರವಣಿಗೆಗಳಿಗೆ ಆನೆಗಳನ್ನು ಬಳಸಿಕೊಳ್ಳಲು ಅನುಮತಿ ಕೋರುವುದು ಹೆಚ್ಚಾಗುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿಯೇ ವನ್ಯ ಜೀವಿ ಸಂರಕ್ಷಣಾ ಕಾಯಿದೆಯ ನಿಯಮಾವಳಿಗಳಂತೆ ಹಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿ ಮಾರ್ಗಸೂಚಿಗಳನ್ನು ರಚಿಸಲಾಗಿದೆ.
– ರಮಾನಾಥ್ ರೈ, ಅರಣ್ಯ ಸಚಿವ
ಹೈಕೋರ್ಟ್ ಆದೇಶ ಅನ್ವಯ ಹೊಸ ಮಾರ್ಗಸೂಚಿಗಳನ್ನು ರಚಿಸಿ ಆದೇಶ ಹೊರಡಿಸಲಾಗಿದೆ. ಸಾಕಾನೆಗಳ ಪೋಷಣೆ, ಬಳಕೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಸೇರ್ಪಡೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಆನೆಗಳನ್ನು ಬಳಸಿಕೊಳ್ಳಲು ಅನುಮತಿ ನೀಡುವಂತೆ ಬರುವ ಅರ್ಜಿದಾರರು ಮಾರ್ಗ ಸೂಚಿಗಳನ್ನು ಪಾಲಿಸಲೇಬೇಕು. ಈ ಮಾರ್ಗಸೂಚಿಗಳ ಉಲ್ಲಂಘನೆ ಯಾಗದಂತೆ ನಿಗಾವಹಿಸಲು ಅಧಿಕಾರಿಗಳಿಗೂ ಸೂಚಿಸಲಾಗಿದೆ.
– ಮನೋಜ್ ಕುಮಾರ್,
ಮುಖ್ಯ ಅರಣ್ಯ ಸಂರಕ್ಷಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
Sushasana Day: ಕಾಂಗ್ರೆಸ್ ಆಡಳಿತದಲ್ಲಿ ಜಂಗಲ್ ರಾಜ್ ಸೃಷ್ಟಿ: ಬಿ.ಎಲ್.ಸಂತೋಷ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.