ಶಿಕಾರಿಗೆ ಸಿದ್ಧವಾದ ಮೈಸೂರು ರಂಗಾಯಣ
Team Udayavani, Nov 27, 2017, 11:48 AM IST
ಬೆಂಗಳೂರು: ರಂಗ ಪ್ರಯೋಗದಲ್ಲಿ ಸದಾ ಹೊಸತನವನ್ನು ಹುಡುಕುವ ಮೈಸೂರಿನ ರಂಗಾಯಣ ಇದೀಗ ಮತ್ತೂಂದು “ಶಿಕಾರಿ’ಗೆ ಸಿದ್ಧವಾಗಿದ್ದು, ದೇಶವ್ಯಾಪಿ ರಂಗಪ್ರಿಯರ ಮನಗೆಲ್ಲಲು ವೇದಿಕೆ ಸಜ್ಜು ಮಾಡಿಕೊಳ್ಳುತ್ತಿದೆ.
ಕನ್ನಡದ ಶ್ರೇಷ್ಠ ಕಥೆ ಹಾಗೂ ಕಾದಂಬರಿಕಾರ ಯಶವಂತ ಚಿತ್ತಾಲರು ಎಪ್ಪತ್ತರ ದಶಕದಲ್ಲಿ ಬರೆದ ನವ್ಯ ಸಾಹಿತ್ಯದ ಸಂಕೀರ್ಣ ಕಾದಂಬರಿ “ಶಿಕಾರಿ’ಗೆ ಹೆಸರಾಂತ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು ರಂಗರೂಪ ನೀಡಿದ್ದಾರೆ. ಇದನ್ನು ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿ ಪ್ರದರ್ಶಿಸಲು ಮೈಸೂರಿನ ರಂಗಾಯಣ ಅಣಿಯಾಗುತ್ತಿದೆ.
ರಂಗಾಯಣದ ಹಿರಿಯ ಕಲಾವಿದರಾದ ಹುಲುಗಪ್ಪ ಕಟ್ಟಿಮನಿ, ನಂದಿನಿ ಕೆ.ಆರ್, ಕೃಷ್ಣಪ್ರಸಾದ್, ವಿನಾಯಕ ಭಟ್ ಹಾಸಣಗಿ, ಕೃಷ್ಣಕುಮಾರ್ ನಾರ್ಣಕಜೆ ಸೇರಿ ದೊಡ್ಡ ಕಲಾವಿದರ ದಂಡೇ ಹಗಲಿರುಳು ತಾಲೀಮು ನಡೆಸುತ್ತಿದೆ. ಶಿಕಾರಿ ನಾಟಕ ಈಗಾಗಲೇ ಮೈಸೂರಿನಲ್ಲಿ 9 ಪ್ರದರ್ಶನ ಕಂಡಿದು, ರಂಗಾಸಕ್ತರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರದ ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಹೈದರಬಾದ್‌ನಲ್ಲಿ ಪ್ರದರ್ಶನಕ್ಕೆ ಆಹ್ವಾನ ಬಂದಿದೆ.
ಈ ತಂಡ ಅಭಿನಯಿಸಿರುವ ತೇಜಸ್ವಿ ಅವರ “ಕೃಷ್ಣಗೌಡರ ಆನೆ’, ಮರಾಠಿ ಮೂಲದ “ಚೆಕ್‌ವೆುಟ್’, ಕುವೆಂಪು ಅವರ “ಶೂದ್ರ ತಪಸ್ವಿನಿ’, ಬಸವಲಿಂಗಯ್ಯ ನಿರ್ದೇಶನದ “ಗಾಂಧಿ ವರ್ಸೆಸ್ ಗಾಂಧಿ’, “ಕುಸುಮ ಬಾಲೆ’ ಮತ್ತು “ತಲೆದಂಡ’ ಮೊದಲಾದ ನಾಟಕಗಳು ನೂರಾರು ಪ್ರದರ್ಶನ ಕಂಡಿವೆ. ಶಿಕಾರಿ ನಾಟಕ ಕೂಡ ಆ ಸಾಲಿಗೆ ಸೇರಲಿದೆ ಎಂದು ರಂಗಾಯಣದ ಹಿರಿಯ ಕಲಾವಿದ ಕೃಷ್ಣ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಶವಂತ ಚಿತ್ತಾಲರು ದೂರದೃಷ್ಟಿಯುಳ್ಳ ಕಾದಂಬರಿಕಾರರು.”ಕುಮಟೆಗೆ ಬಂದ ಕಿಂದರಿ ಜೋಗಿ’, “ಓಡಿ ಹೋದ ಮುಟ್ಟಿ ಬಂದು’ ಎಂಬ ಕಥಾಸಂಕಲಗಳು, “ಮೂರು ದಾರಿಗಳು’, “ಶಿಕಾರಿ’, “ಛೇಧ’, “ಪುರುಷೋತ್ತಮ’ ಕಾದಂಬರಿಗಳನ್ನು ಬರೆದಿದ್ದಾರೆ. ಶ್ರೇಷ್ಠ ವಿರ್ಮಕ ಜಿ. ಎಸ್.ಅಮೂರರ ಮಾತಿನಲ್ಲಿ ಹೇಳುವುದಾರೆ ಚಿತ್ತಾರ ಶಿಕಾರಿ ಕಾದಂಬರಿ ಕನ್ನಡದ ಗತ್ತು ಎಂದು ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ಹೇಳಿದರು.
ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ, ಹೈದ್ರಾಬಾದ್, ಮುಂಬೈನಿಂದಲೂ ಶಿಕಾರಿ ನಾಟಕ ಪ್ರದರ್ಶನಕ್ಕೆ ಆಹ್ವಾನ ಬಂದಿದೆ. ದೇಶದ ಹಲವು ಭಾಗಗಳಲ್ಲಿ ಈ ನಾಟಕ ಪ್ರದರ್ಶಿಸುವ ಹಂಬಲ ರಂಗಾಯಣದ್ದಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಮೈಸೂರು ರಂಗಾಯಣ ತಂಡ ಪ್ರದರ್ಶನ ನೀಡಲಿದೆ.
● ಮಲ್ಲಿಕಾರ್ಜುನ ಸ್ವಾಮಿ, ರಂಗಾಯಣ
ಚಿತ್ತಾಲರು ಬದುಕಿರುವಾಗಲೇ ಅವರ “ಶಿಕಾರಿ’ ಕಾದಂಬರಿಯನ್ನು ರಂಗರೂಪಕ್ಕೆ ತರಬೇಕಿತ್ತು. ಅವರು ತುಂಬಾ ಖುಷಿ ಪಡುತ್ತಿದ್ದರು. ಎಪ್ಪತ್ತರ ದಶಕದಲ್ಲಿಯೇ ಕಾರ್ಪೊರೆಟ್ ಸಂಸ್ಕೃತಿಯ ಅನಾಹುತಗಳ ಬಗ್ಗೆ ಊಹಿ ಪಾತ್ರಗಳನ್ನು ರಚಿಸಿದ್ದಾರೆ. ಅವರೊಬ್ಬ ದೂರ ದೃಷ್ಟಿಯುಳ್ಳ ಕಾದಂಬರಿಕಾರ.
● ಪ್ರಕಾಶ್ ಬೆಳವಾಡಿ, ರಂಗ ನಿರ್ದೇಶಕ
ದೇವೇಶ ಸೂರಗುಪ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.