ನಾಡ ನಿರ್ಮಾತೃ ಕೆಂಪೇಗೌಡರ ಜಯಂತಿಗೆ ರಾಜಧಾನಿ ಸನ್ನದ್ಧ
Team Udayavani, Apr 11, 2017, 12:22 PM IST
ಬೆಂಗಳೂರು: ನಾಡಪ್ರಭು ಕೆಂಪೇಗೌಡರ 504ನೇ ಜಯಂತಿ ಆಚರಣೆಗೆ ಬಿಬಿಎಂಪಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೆಂಪೇಗೌಡ ದಿನಾಚರಣೆ ಪ್ರಯುಕ್ತ ಮಂಗಳವಾರ ಪಾಲಿಕೆ ಕೇಂದ್ರ ಕಚೇರಿ ಸೇರಿದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೇಂದ್ರ ಕಚೇರಿಯ ಕಟ್ಟಡವನ್ನು ವಿದ್ಯುತ್ ದೀಪಾಲಂಕಾರಗಳಿಂದ ಸಿಂಗಾರಗೊಳಿಸಲಾಗಿದೆ.
ಮಂಗಳವಾರ ಬೆಳಗ್ಗೆ 8ಗಂಟೆಗೆ ಮೇಯರ್ ಜಿ.ಪದ್ಮಾವತಿ ಅವರು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅದಾದ ನಂತರ ಲಾಲ್‌ಬಾಗ್‌ನಲ್ಲಿರುವ ಕೆಂಪೇಗೌಡರ ಗೋಪುರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸದ್ದು, ಅಲ್ಲಿಂದ ಕೋರಮಂಗಲದಲ್ಲಿರುವ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಮ್ಮ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.
ಬೆಳಗ್ಗೆ 9 ಗಂಟೆಗೆ ಮೇಖೀವೃತ್ತ, ಸುಂಕೇನಹಳ್ಳಿ, ಹಲಸೂರು ಕೆರೆ ಮತ್ತು ಲಾಲ್‌ಬಾಗ್‌ನಲ್ಲಿರುವ ನಾಲ್ಕು ಕೆಂಪೇಗೌಡ ಗೋಪುರಗಳಿಂದ ಪಾಲಿಕೆ ಸದಸರೊಂದಿಗೆ ಕೆಂಪೇಗೌಡರ ಜ್ಯೋತಿ ಕೇಂದ್ರ ಕಚೇರಿಗೆ ಬರಲಿದೆ. ಬೆಳಗ್ಗೆ 11 ಗಂಟೆಗೆ ಮೇಯರ್ ಅವರು ಜ್ಯೋತಿಗಳನ್ನು ಸ್ವೀಕರಿಸಿ ಕೆಂಪೇಗೌಡರ ಭಾವಚಿತ್ರಕ್ಕೆ ನಮನ ಸಲ್ಲಿಸಲಿದ್ದಾರೆ.
ಸಂಜೆ ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ.ರಾಜ್‌ಕುಮಾರ್ ಗಾಜಿನ ಮನೆಯಲ್ಲಿನ ಉತ್ತಮ ನೌಕರರ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗಳನ್ನು ಮುಖ್ಯಮಂತ್ರಿಗಳು ವಿತರಿಸಲಿದ್ದಾರೆ.
ಈ ಬಾರಿ ವಿವಿಧ ಕ್ಷೇತ್ರಗಳ 158 ಮಂದಿಗೆ ಕೆಂಪೇಗೌಡ ಪ್ರಶಸ್ತಿ
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದ್ದು, ಸಾಹಿತಿಗಳಾದ ಎಂ.ಎಚ್.ಕೃಷ್ಣಯ್ಯ, ಡಾ.ವಸುಂಧರಾ ಭೂಪತಿ, ಗಾಯಕರಾದ ಡಾ.ಮುದ್ದಮೋಹನ್, ಗುರುಕಿರಣ್, ಗುರುರಾಜ ಹೊಸಕೋಟೆ, ರಂಗಕರ್ಮಿಗಳಾದ ಶಶಿಕಾಂತ ಯಡಳ್ಳಿ ಸೇರಿದಂತೆ ಈ ಬಾರಿ 158 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಸಾಹಿತ್ಯ ಕ್ಷೇತ್ರ: ಪ್ರೊ.ಎಂ.ಎಚ್.ಕೃಷ್ಣಯ್ಯ, ಡಾ.ವಸುಂಧರಾ ಭೂಪತಿ, ಕೆ.ವಿ.ರಾಜೇಶ್ವರಿ, ಬಿ. ಸತ್ಯನಾರಾಯಣಾಚಾರ್, ಮಾಹಿರ್ ಮನ್ಸೂರ್, ಡಿ.ರಾಮಯ್ಯ.
ಸಂಗೀತ ಕ್ಷೇತ್ರ: ಡಾ. ಮುದ್ದುಮೋಹನ್, ಗುರುಕಿರಣ್, ಪಂಡಿತ ದೇವೇಂದ್ರ ಪತ್ತಾರ್, ಪಿ.ರಾಮಯ್ಯ, ಪದ್ಮಿನಿ ಎಲ್.ಓಕ್, ಗುರುರಾಜ ಹೊಸಕೋಟೆ, ಎಸ್.ಇಂದಿರಾಕೃಷ್ಣ, ಬಿ.ಆರ್.ಗೀತಾ, ನಾಗೇಂದ್ರ ಕ್ಲಾರಿಯೋನೆಟ್, ಚಿಂತಲಪಲ್ಲಿ ಕೆ. ರಮೇಶ್, ಎಂ.ಜನಾರ್ಧನ.
ರಂಗಭೂಮಿ ಕ್ಷೇತ್ರ: ವಾಸು ಬೇಗೂರು, ಸುಲೋಚನ ರೈ, ಬಿ.ಆರ್.ಕವಿತಾಶೆಟ್ಟಿ, ಆನಮದ್ ಡಿ. ಕಳಸ, ಶಶಿಕಾಂತ ಯಡಳ್ಳಿ, ಮಲ್ಲಿಕಾರ್ಜುನ ಸಾವಳಗಿ, ವಿ.ನಾಗರಾಜ, ಜೂನಿಯರ್ ನರಸಿಂಹರಾಜು, ಸಿ. ರಾಮಚಂದ್ರಪ್ಪ, ಚ.ತ್ಯಾಗರಾಜು, ಎಂ.ಕೃಷ್ಣಪ್ಪ, ಕಾಳಾಚಾರ್ ಎನ್. ವೆಂಕಟರಾವ್, ಶಿವಣ್ಣ, ಡಾ. ಮುನಿನಾರಾಯಣ.
ಚಲನಚಿತ್ರ ಕ್ಷೇತ್ರ: ಬಿ.ಕೆ.ಪ್ರಕಾಶ್, ಎ.ಚಿನ್ನೇಗೌಡ, ಆರ್. ದೇವರಾಜು, ಆದಿತ್ಯ ಚಿಕ್ಕಣ್ಣ, ಸಿ.ಚಂದ್ರಶೇಖರ್, ಕೆ.ಎಸ್. ರವೀಂದ್ರನಾಥ್,
ವೈದ್ಯಕೀಯ ಕ್ಷೇತ್ರ: ಡಾ.ಕೆ.ಪಿ.ಆರ್. ಪ್ರಮೋದ್, ಡಾ.ಎಚ್.ಎಸ್. ನಾಗರಾಜ್ ಶೆಟ್ಟಿ, ಡಾ.ಅಂಜುಜಾಕ್ಷಿ ಕುಂಬಾರ್.
ನೃತ್ಯ ಕ್ಷೇತ್ರ: ಕು.ಅಸ್ಮಿಕಾ ಗಣೇಶ್, ಕಾವ್ಯ ಶ್ರೀ ನಾಗರಾಜ್, ಕು. ಟಿ.ಜೆ. ನಿವೇದಿತ, ಬಿ.ಕೆ.ದಿನಕರ, ನಾಗಭೂಷಣ್, ಓ.ಎಲ್.ಚಿರಂಜೀವಿ, ರೂಪಾ ರಾಜೇಶ್, ಪದ್ಮಜಾ ಜಯರಾಂ.
ಶಿಕ್ಷಣ ಕ್ಷೇತ್ರ: ಸುಭಾನ್ ಷರೀಫ್, ವಿ.ಪ್ರೇಮರಾಜ್ ಜೈನ್, ಡಾ.ಬಿ.ವಿ.ನರಹರಿರಾವ್, ಎನ್.ನಾಗರತ್ಮಮ್ಮ, ಎಲ್.ಲೀಲಾವತಿ, ಟಿ.ದೀಕ್ಷಿತ್, ಟಿ.ಬಾಲಕೃಷ್ಣ, ಎಸ್.ಆರ್.ಮೈಲಾರಯ್ಯ, ಡಾ.ಎಸ್.ಮಂಜುನಾಥ್.
ಕ್ರೀಡಾ ಕ್ಷೇತ್ರ: ಎಂ.ಎಸ್.ನಾಗರಾಜ್, ಜೆ.ಅರುಣ್‌ಕುಮಾರ್, ನಿತ್ಯ ರಮೇಶ್ ಕುಮಾರ್, ಎಂ.ಬಿ.ಅಯ್ಯಪ್ಪ, ಎ.ಎಸ್.ರಾಜಶೇಖರ್, ಎಸ್.ಲಿಖೀತ್, ಜಿ.ಹೈಮಾವತಿ, ಕೆ.ಎಸ್. ವಿಶ್ವಾಸ್, ಎಚ್.ಎನ್.ಕೃಷ್ಣಮೂರ್ತಿ, ಚಾರ್ಲ್ಸ್, ಎ.ಎನ್.ಸೋಮಯ್ಯ, ಕೆ.ಎಂ.ಮೀನ, ರಮಿತ್ ಆರ್. ಸಿಂದಿಯಾ, ಸ್ವಾಮಿನಾಥನ್, ಮಯೂರ್ ಡಿ. ಬಾನು, ಪ್ರಜ್ವಲ್ ಬೋಪಾಲ್, ಎಚ್.ಎಸ್. ಆನಂದೇಗೌಡ, ಎಚ್.ಎಲ್.ಶಾಮಣ್ಣಗೌಡ, ಡಿ.ನಿಶ್ಚಿಲ್, ಎಂ. ಪ್ರದೀಪ್ ಕುಮಾರ್, ಕೆ.ಶಿವಲಿಂಗಯ್ಯ, ಕೆ.ಆರ್.ಅಶೋಕ್ ಕುಮಾರ್, ಕು. ಅರ್ಚನ ಪೈ, ಜಗದೀಶ್, ಎಸ್. ಹರೀಶ್, ವಿನೋದ್ ಕುಮಾರ್, ಕು. ದಾಮಿನಿ ಕೆ. ಗೌಡ, ಮಾ.ಸುಜನ್ ಆರ್. ಭಾರದ್ವಾಜ್.
ಯೋಗ ಕ್ಷೇತ್ರ: ಬಿ.ಜಿ. ವಿಜಯ್ ರಘನಾಥ್, ಲಕ್ಷ್ಮೀಕಾಂತಮ್ಮ, ಯೋಗ ಶ್ರೀ ವರ್ಧಮಾನ ಕಳಸೂರು, ಯೋಗಾಚಾರ್ಯ ಶಿವಬಸವಯ್ಯ.
ಸಮಾಜಸೇವಾ ಕ್ಷೇತ್ರ: ರಾಜಯೋಗಿನಿ ಬಿ.ಕೆ.ಪದ್ಮಾ, ಬೈರಪ್ಪ, ಲಲಿತಾ ಮೇರಿ, ಸಮರ್ಥನಂ ಮಹಾಂತೇಶ್, ಹರ್ಷದ್ ಕುಮಾರ್ ಷಾ, ಶಂಕರಪ್ಪ, ಎಸ್.ಪಿ.ರಾಜಗೋಪಾಲರೆಡ್ಡಿ, ಮೊಹಮ್ಮದ್ ಹನೀಫ್ ಹಜರತ್, ವಿಷ್ಣುಭರತ್, ವೆಂಕಟರಮಣಪ್ಪ, ಡಾ.ಎಚ್.ಸಿ.ಸತ್ಯನ್, ಎಸ್.ಎಸ್.ಇಂದಿರಾ, ಬಿ.ಚೂಡಾಮಣಿ, ಎಂ.ನಾಗರಾಜಯ್ಯ, ಎ.ಪದ್ಮನಾಭ, ಬಿ.ನಂಜುಂಡಪ್ಪ, ಜಯರಾಮಯ್ಯ, ಎಸ್.ಪಿ.ಶ್ರೀಧರ್, ಸಿ.ನಾರಾಯಣಗೌಡ, ವೈ.ರಾಜಾರೆಡ್ಡಿ, ಶಿವರಾಮೇಗೌಡ, ಬಿ.ಎನ್.ಜಗದೀಶ್, ಆರ್.ಚೇತನ್, ಪಿ.ಅಹಮದ್, ಮುನಿರಾಜಗೌಡ, ಕೃಷ್ಣೇಗೌಡ, ದ್ವಾರಕಾನಾಥ್, ಕೇಶವಲು ನಾಯ್ಡು, ರೇವಣ್ಣ, ಹೊ.ಬೊ.ಪುಟ್ಟೇಗೌಡ, ಎ.ನರಸಿಂಹನ್, ಅರ್ಷದ್, ಸಲ್ಮಾ ತಾಜ್, ಸಿ.ರಾಮು, ಎಂ.ಶ್ರೀನಿವಾಸ್, ವನಿತಾ ಅಶೋಕ್, ಹೆಚ್.ಎಂ.ಕೃಷ್ಣಮೂರ್ತಿ, ಗಣೇಶ್ ಆಚಾರ್, ರೀತಾ ರಾಣಿ.
ಸರ್ಕಾರಿ ಸೇವಾ ಕ್ಷೇತ್ರ: ಕಲ್ಲಪ್ಪ ಖರಾತ (ಪೊಲೀಸ್ ಇನ್ಸ್‌ಪೆಕ್ಟರ್), ಎಚ್.ಎ.ಮಂಜು (ಪಿಎಸ್‌ಐ), ಎಚ್.ಮೀನಾಕ್ಷಿ (ಪೊಲೀಸ್ ಇನ್ಸ್‌ಪೆಕ್ಟರ್), ಶಾರದ ಸಿದ್ದಿ (ಎಸ್‌ಐ).
ಸಾಂಸ್ಕೃತಿಕ ಕ್ಷೇತ್ರ: ಬ್ರಹ್ಮತೇಜ ವೆಂಕಟರಾಮಯ್ಯ, ಕೆ.ಜಯರಾಮ್, ಜಿ.ಶೋಭಾನಾಯ್ಡು, ಎಂ.ರಾಮಾಂಜನೆಯಲು, ಲಲಿತಮ್ಮ.
ಮಾಧ್ಯಮ ಕ್ಷೇತ್ರ: ರವಿ ಹೆಗಡೆ, ಎಂ.ಆರ್.ಸುರೇಶ್, ಸುಧೀಂದ್ರ ಕುಮಾರ್, ಮುನೀರ್ ಅಹಮದ್ ಆಜಾದ್, ಎನ್.ಜಾಹಿರ್ ಅನ್ಸರ್, ಎ.ಪಿ.ಸಿದ್ದರಾಜು, ಎಸ್.ಶ್ಯಾಮ್, ಇ.ಜಿ. ವಿಜಯಕುಮಾರ್, ರಾ.ಸೋಮನಾಥ್, ಗಂಗಾಧರ ಕುಷ್ಟಗಿ, ತ್ಯಾಗರಾಜ, ಎಂ.ವಜ್ರಮೂರ್ತಿ, ಆರ್.ಶ್ರೀನಾಥ್, ಕೆ.ಎಸ್. ನಾಗರಾಜ್, ಶಿವಣ್ಣ, ಎಚ್.ಮೋಹನ್ ಕುಮಾರ್, ಹಮೀದ್ ಪಾಳ್ಯ, ಅಬ್ಬೂರು ರಾಜಶೇಖರ್, ರಕ್ಷಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.