ನಾಗ ಜುಲೈ 13ರವರೆಗೆ ನ್ಯಾಯಾಂಗ ಬಂಧನಕ್ಕೆ
Team Udayavani, Jun 16, 2017, 12:23 PM IST
ಬೆಂಗಳೂರು: ಬ್ಲ್ಯಾಕ್ ಅಂಡ್ ವೈಟ್ ದಂಧೆ ಹಾಗೂ ದರೋಡೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಮಾಜಿ ಕಾರ್ಪೋರೇಟರ್, ರೌಡಿಶೀಟರ್, ವಿ. ನಾಗರಾಜು ಸೇರಿದಂತೆ 6 ಮಂದಿ ಆರೋಪಿಗಳನ್ನು ಜುಲೈ 13ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೂವರು ಉದ್ಯಮಿಗಳಿಗೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ನಾಗರಾಜು, ಆತನ ಮಕ್ಕಳಾದ ಗಾಂಧೀ,ಶಾಸ್ತ್ರೀ, ಸಹಚರರಾದ ಜಯ ಕೃಷ್ಣ, ಸರವಣ್, ಸೌಂದರ್ಯರಾಜ್ರನ್ನು ಕೆಂಗೇರಿ ಪೊಲೀಸರು ಗುರುವಾರ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ , ನ್ಯಾಯಾಲಯ ಆರು ಮಂದಿ ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಧಿಸಿದೆ.
ಗನ್ ಕೊಟ್ಟು ಶೂಟ್ ಮಾಡಿಕೊಳ್ಳಲು ಹೇಳಿದರಂತೆ: ಬಂಧನವಾದ ದಿನದಿಂದಲೂ ಪೊಲೀಸರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದ ನಾಗರಾಜು, ಗುರುವಾರವೂ ತನ್ನ ಹೈಡ್ರಾಮ ಮುಂದುವರಿಸಿದ್ದ. ಪೊಲೀಸರು ಸುಖಾಸುಮ್ಮನೆ ದೈಹಿಕ ಹಿಂಸೆ ನೀಡುತ್ತಾರೆ. ನನ್ನ ಎಡಗೈನ ಮುಂಗೈ ಮುರಿದಿದ್ದಾರೆ.
ಆಸ್ಪತ್ರೆಗೂ ಸೇರಿಸದೇ ಚಿತ್ರಹಿಂಸೆ ನೀಡಿದ್ದಾರೆ. ವಿಷರೂಪದ ಆಹಾರ ನೀಡಿದ್ದಲ್ಲದೇ, ನನ್ನ ಮಗ ಶಾಸ್ತ್ರೀ ಹಾಗೂ ನನಗೆ ಗನ್ ಕೊಟ್ಟು ಪರಸ್ಪರ ಶೂಟ್ ಮಾಡಿಕೊಳ್ಳುವಂತೆ ಹೇಳಿ ನಗುತ್ತಿದ್ದರು ಎಂದು ಆರೋಪ ಮಾಡುತ್ತಿದ್ದ. ನ್ಯಾಯಾಲಯ ನಾಗನ ಆರೋಪಗಳನ್ನು ಒಪ್ಪಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
MUST WATCH
ಹೊಸ ಸೇರ್ಪಡೆ
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.