ಅಡ್ಡ ಹೆಸರಿನ ವಿಚಾರಕ್ಕೆ ಪೊಲೀಸ್ ಆಯುಕ್ತರಿಗೇ ನಾಗರಾಜ ನೋಟಿಸ್
Team Udayavani, Apr 29, 2017, 11:27 AM IST
ಬೆಂಗಳೂರು: ಹೈಕೋರ್ಟ್ ಆದೇಶದ ನಡುವೆಯೂ ತನ್ನನ್ನು ಪೊಲೀಸರು “ಬಾಂಬ್ ನಾಗ’, “ಪಾಲ್ ನಾಗ’ ಎಂದು ಸಂಬೋಧಿಸುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ರೌಡಿಶೀಟರ್ ನಾಗರಾಜ್ ತನ್ನ ಪರ ವಕೀಲ ಶ್ರೀರಾಮರೆಡ್ಡಿ ಮೂಲಕ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ಗೆ ನೋಟಿಸ್ ನೀಡಿದ್ದಾರೆ.
ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ನಾಗರಾಜ್ನನ್ನು “ಬಾಂಬ್ ನಾಗ’, “ಪಾಲ್ ನಾಗ’ ಮತ್ತು “ನಾಗ’ ಎಂಬ ಹೆಸರಿನಿಂದ ಸಂಬೋಧಿಸುತ್ತಿದ್ದರು. ಇದನ್ನು ಪ್ರಶ್ನಿಸಿ ನಾಗರಾಜ್ ಹೈಕೋರ್ಟ್ ಮೇಟ್ಟಿಲೇರಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯ 2015 ಜೂನ್ 15ರಂದು “ಬಾಂಬ್ ನಾಗ’ ಹಾಗೂ ಇತರೆ ಅಲಿಯಾಸ್ ಹೆಸರಿನಲ್ಲಿ ನಾಗರಾಜನ ಹೆಸರು ಕರೆಯಬಾರದು, ಇಲಾಖೆಯ ದಾಖಲೆಗಳಲ್ಲಿಯೂ ಈ ಹೆಸರನ್ನು ನಮೂದಿಸಬಾರದು ಎಂದು ಆದೇಶಿಸಿತ್ತು.
ಆದರೆ, ಅಕ್ರಮವಾಗಿ ಹಳೆ ನೋಟುಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿ ಏ.14ರಂದು ಶ್ರೀರಾಂಪುರದ ನಾಗರಾಜ್ ಮನೆ ಮೇಲೆ ಹೆಣ್ಣೂರು ಪೊಲೀಸರು
ದಾಳಿ ನಡೆಸಿದ ಬಳಿಕ, ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ನಾಗರಾಜ್ನನ್ನು “ಬಾಂಬ್ ನಾಗ’ ಎಂದು ಸಂಬೋಧಿಸಿದ್ದರು. ಈ ಬಗ್ಗೆ ನಿಮ್ಮ ಕ್ರಮ ಏನು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಅಲ್ಲದೇ ಇನ್ಮುಂದೆ “ಬಾಂಬ್ ನಾಗ’, “ಪಾಲ್ ನಾಗ’ ಅಥವಾ “ನಾಗ’ ಎಂದು ಪೊಲೀಸರು ಕರೆದರೆ ನ್ಯಾಯಾಲಯದಲ್ಲಿ ದೂರು ದಾಖಲಿಸಬೇಕಾಗುತ್ತದೆ ಎಂದು ನೋಟಿಸ್ನಲ್ಲಿ ವಕೀಲ ಶ್ರೀರಾಮರೆಡ್ಡಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.