ರೈತಸಂಘದ ಹೆಸರು,ಹಸಿರು ಶಾಲು ಶೀಘ್ರವೇ ಬದಲು!
Team Udayavani, Nov 27, 2017, 6:05 AM IST
ನಾಡೋಜ ಡಾ.ದೇ.ಜವರೇಗೌಡ ವೇದಿಕೆ ಮೈಸೂರು: ಪೊ. ಎಂ. ಡಿ. ನಂಜುಂಡಸ್ವಾಮಿ ಅವರ ನಾಯಕತ್ವದಲ್ಲಿ 80ರ ದಶಕದಲ್ಲಿ ನಾಡಿನಲ್ಲಿ ಪ್ರಬಲವಾಗಿದ್ದ ರೈತ ಸಂಘಟನೆಯ ಹೆಸರು ಮತ್ತು ಹಸಿರು ಶಾಲು ಸದ್ಯದಲ್ಲೇ ಬದಲಾಗಲಿದೆ.
ರೈತರ ಸಮಸ್ಯೆಗಳನ್ನು ಆಳುವ ಸರ್ಕಾರಗಳಿಗೆ ಮನವರಿಕೆ ಮಾಡಿಕೊಡಲು ಸಾವಿರಾರು ರೈತರನ್ನು ಸೇರಿಸಿ ಹೆಗಲ ಮೇಲಿನ ಹಸಿರು ಶಾಲನ್ನು ಮೇಲೆತ್ತಿ ತಿರುಗಿಸಿದರೆ ಅದಕ್ಕೊಂದು ತಾಕತ್ತು ಇತ್ತು. ಸರ್ಕಾರ ರೈತರ ಮುಂದೆ ಮಂಡಿಯೂರಿ ಕುಳಿತುಕೊಳ್ಳಬೇಕಾದ ಸ್ಥಿತಿ ಇತ್ತು. ದಶಕಗಳ ಕಾಲ ರೈತಸಂಘಟನೆಯನ್ನು ಮುನ್ನಡೆಸಿದ ಪೊ›.ಎಂಡಿಎನ್, ತಮ್ಮ ವಿಚಾರಪೂರಿತ ಮೊನಚು ಮಾತುಗಳ ಮೂಲಕ ಹಳ್ಳಿ ಹಳ್ಳಿ ತಿರುಗಿ ಸಂಘಟನೆಗೊಂದು ಹೊಸ ದಿಕ್ಕು ತೋರಿಸಿದ್ದರು. ಆ ಶಾಲು ಆಳುವ ಸರ್ಕಾರಗಳನ್ನೇ ನಡುಗುವಂತೆ ಮಾಡಿತ್ತು. ಆದರೆ, ಆ ಶಾಲು ಈಗ ಇತಿಹಾಸದ ಪುಟ ಸೇರಲಿದೆ. ಈ ಸುಳಿವನ್ನು ಕೊಟ್ಟಿದ್ದು ಸಾಹಿತ್ಯ ಸಮ್ಮೇಳನದಲ್ಲಿನ ಜನಪರ ಚಳವಳಿಗಳು ವಿಚಾರಗೋಷ್ಠಿ.
ಅಲ್ಲಿ ಮಾತನಾಡಿದ ರೈತಸಂಘದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ, ಕೆಲವರ ಅಧಿಕಾರ ದಾಹದಿಂದ ಹರಿದು ಹಂಚಿಹೋಗಿರುವ ರೈತ ಸಂಘಟನೆಗಳನ್ನು ಒಗ್ಗೂಡಿಸುವ ಕಾರ್ಯವನ್ನು ಆಗಾಗ ಮಾಡಿದರೂ ಮತ್ತೆ ಮತ್ತೆ ವಿಘಟನೆಯಾಗುತ್ತಿರುವ ಜತೆಗೆ ರೈತಸಂಘದ ಹೆಸರು ಮತ್ತು ಹಸಿರು ಶಾಲು ದುರುಪಯೋಗ ಆಗುತ್ತಿದೆ. ಇದನ್ನು ತಡೆಯಲು ರೈತಸಂಘ-ಹಸಿರು ಸೇನೆ ಹೆಸರು ಮಾರ್ಪಾಡಿಗೆ ಚಿಂತನೆ ನಡೆದಿದ್ದು, ಡಿ.21ರಂದು ನಡೆಯುವ ರೈತಸಂಘದ ರಾಜ್ಯಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ರೈತ ಚಳುವಳಿ ಹುಟ್ಟಿಕೊಂಡ ಬಗೆಯನ್ನು ವಿವರಿಸಿದ್ದಲ್ಲದೇ, ನವಲುಗುಂದ-ನರಗುಂದ ಹೋರಾಟ, ಗುಂಡೂರಾವ್ ಸರ್ಕಾರದ ರೈತ ವಿರೋಧಿ ನಡೆ ವಿರೋಧಿಸಿ ನಡೆದ ಹೋರಾಟಗಳನ್ನೂ ಪಾಟೀಲ ಅವರು ನೆನಪಿಸಿಕೊಂಡರು.
ಸಂಘಟನೆಯ ಹೆಸರು ಹಾಗೂ ಶಾಲು ದುರುಪಯೋಗ ಆಗುತ್ತಿರುವುದನ್ನು ತಡೆಗಟ್ಟಲು ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಹೆಸರು ಮಾರ್ಪಾಡಿಗೆ ಚಿಂತನೆ ನಡೆದಿದೆ. ಡಿ.21ರಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
– ಚಾಮರಸ ಮಾಲಿ ಪಾಟೀಲ, ರಾಜ್ಯ ರೈತಸಂಘ ಅಧ್ಯಕ್ಷರು
– ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
ನಿಮ್ಮ ಖೊಟ್ಟಿ ಗ್ಯಾರಂಟಿ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಎಚ್‌ಡಿಕೆ
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.