ಭಯ ಬಿಟ್ಹಾಕಿ, ಮೆಟ್ರೋ ಹತ್ತಿ ಮೆಟ್ರೋ

ಸೆ. 7ರಿಂದ ಪುನಾರಂಭಗೊಂಡ ಸೇವೆ | ಪರ್ಯಾಯ ಮಾರ್ಗಗಳೆಡೆಗೆ ಪ್ರಯಾಣಿಕರು

Team Udayavani, Oct 10, 2020, 12:02 PM IST

ಭಯ ಬಿಟ್ಹಾಕಿ, ಮೆಟ್ರೋ ಹತ್ತಿ  ಮೆಟ್ರೋ

ಮೆಟ್ರೋ ಸೇವೆ ಪುನಾರಂಭಗೊಂಡು ತಿಂಗಳು ಕಳೆದಿದೆ. ಎರಡೂಮಾರ್ಗಗಳಲ್ಲಿ ಪೂರ್ಣಾವಧಿ ಕಾರ್ಯಾಚರಣೆ ಮಾಡುತ್ತಿದ್ದರೂ, ಪ್ರಯಾಣಿಕರ ಸಂಖ್ಯೆ ಆರಕ್ಕೇರುತ್ತಿಲ್ಲ; ಮೂರಕ್ಕಿಳಿಯುತ್ತಿಲ್ಲ. ಇದಕ್ಕೆ ಕಾರಣಕೊರೊನಾಭಯವೇ? ಕಿರಿಕಿರಿ ಉಂಟುಮಾಡುವ ನಿಯಮಗಳೇ? ಅಥವಾ ಜನ ಈಗಾಗಲೇ ಪರ್ಯಾಯ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆಯೇ? ಇವುಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಈಉದಯವಾಣಿ ಸರಣಿ.

ಬೆಂಗಳೂರು: ಲಾಕ್‌ಡೌನ್‌ ತೆರವಾಗಿ ಹಲವು ತಿಂಗಳುಗಳು ಕಳೆದಿವೆ. ನಿರ್ಬಂಧಗಳು ಸಡಿಲಿಕೆ ಗೊಂಡಾಗಿದೆ.ಎಂದಿನಂತೆ ಜನ ರಸ್ತೆಗಿಳಿಯುತ್ತಿದ್ದಾರೆ. ನಗರದ ಜೀವನ ಸಹಜಸ್ಥಿತಿಗೆ ಮರಳಿದೆ. ಆದರೆ, “ನಮ್ಮಮೆಟ್ರೋ’ ಮಾತ್ರಇನ್ನೂ “ಅಸಹಜಸ್ಥಿತಿ’ ಅನುಭವಿಸುತ್ತಿದೆ.

ಮೆಟ್ರೋ ಸೇವೆ ಪುನಾರಂಭಗೊಂಡು ತಿಂಗಳು ಕಳೆದಿದೆ. ಎರಡೂ ಮಾರ್ಗಗಳಲ್ಲಿ ಪೂರ್ಣಾವಧಿ ಕಾರ್ಯಾಚರಣೆ ಮಾಡುತ್ತಿದ್ದರೂ, ಪ್ರಯಾಣಿಕರ ಸಂಖ್ಯೆ ಆರಕ್ಕೇರುತ್ತಿಲ್ಲ; ಮೂರಕ್ಕಿಳಿಯುತ್ತಿಲ್ಲ. ಹೇಗೆ ಲೆಕ್ಕ ಹಾಕಿದರೂ ಕೋವಿಡ್‌-19 ಪೂರ್ವದ ಪ್ರಯಾಣಿಕರ ಪೈಕಿ ಸುಮಾರು ಶೇ. 10ರಿಂದ15ರ ಗಡಿ ದಾಟುತ್ತಿಲ್ಲ. ಪರಿಣಾಮ ಲಾಭ ಇರಲಿ, ದಿನದ ವೆಚ್ಚ ಕೂಡ ಗಿಟ್ಟುತ್ತಿಲ್ಲ. ಜನ ಬಸ್‌ ಗಳಿಗೆ ಬರುತ್ತಾರೆ; ಮೆಟ್ರೋ ಅಂದರೆ ಮುಖ ತಿರುಗಿಸುತ್ತಾರೆ.ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ, ಪ್ರಯಾಣಿಕರನ್ನು ಸೆಳೆಯುವಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ ಸಿಎಲ್‌)ದ ವೈಫ‌ಲ್ಯ ಹಾಗೂ ಈಗಲೂ ಮುಂದು ವರಿದ ಹಲವು ನಿರ್ಬಂಧಗಳಿಗೆ ಬಂದು ನಿಲ್ಲುತ್ತದೆ.

ಕೋವಿಡ್ ಹಾವಳಿಗೂ ಮುನ್ನ ಮೆಟ್ರೋದಲ್ಲಿ ನಿತ್ಯ ಒಟ್ಟಾರೆ ನಾಲ್ಕು ಲಕ್ಷ ಜನ ಪ್ರಯಾಣಿಸುತ್ತಿದ್ದರು. ಇದರಲ್ಲಿ ಶೇ. 35-40 ನೇರವಾಗಿ ಹಣ ನೀಡಿ, ಟೋಕನ್‌ ಪಡೆಯುವವರಾಗಿದ್ದರು. ಆ ವರ್ಗವನ್ನು ನಿರ್ದಾಕ್ಷಿಣ್ಯವಾಗಿ ದೂರ ಇಡಲಾಗಿದೆ. ಅಲ್ಲಿಗೆ ಒಂದೂವರೆ ಲಕ್ಷ ಜನ ಹೊರಗುಳಿದಂತಾಯಿತು. ಉಳಿದವರಲ್ಲಿ ಶೇ. 50 ಐಟಿ-ಬಿಟಿ ಉದ್ಯೋಗಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರುಇದ್ದಾರೆ.ಇದರಲ್ಲಿ ಕೆಲವು ಮನೆಯಿಂದಲೇ ಕೆಲಸ ಹಾಗೂ ಹಲವು ಇನ್ನೂ ಶುರು ಆಗಿಲ್ಲ. ಸೋಂಕು ಮತ್ತು ಸಂಪರ್ಕದ ಹಿನ್ನೆಲೆಯಲ್ಲಿ ಹಾಗೂ ಸೋಂಕಿನ ಭೀತಿಯಿಂದ ರಜೆಯಲ್ಲಿದ್ದಾರೆ. ಅಗತ್ಯ ಮತ್ತು ಅನಿವಾರ್ಯ ಇದ್ದವರು ಮಾತ್ರ ಸಂಚರಿಸುತ್ತಿದ್ದಾರೆ.

ಆಯ್ಕೆಗಳು ಹಲವು: ಕೆಲವರಿಗೆ ಮೆಟ್ರೋದಲ್ಲಿ ಪ್ರಯಾಣಿಸಲು ಆಸಕ್ತಿ ಇದೆ. ಆದರೆ, ಬಿಎಂಆರ್‌ ಸಿಎಲ್‌ ಅಸಮರ್ಪಕ ಸೌಲಭ್ಯಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ. ಸ್ಮಾರ್ಟ್‌ ಕಾರ್ಡ್‌ ರಿಚಾರ್ಜ್‌ ಮಾಡಿಸಿಕೊಳ್ಳಲು ನಾಲ್ಕಾರು ಆಯ್ಕೆಗಳನ್ನು ನೀಡಿದೆ. ಅದರಲ್ಲಿ ಆ್ಯಪ್‌ ಕೂಡ ಒಂದು. ಅದನ್ನು ಡೌನ್‌ ಲೋಡ್‌ ಮಾಡಿಕೊಂಡು, ರಿಚಾರ್ಜ್‌ ಮಾಡಿಕೊಂಡಾಗ ಹಣ ಕಡಿತಗೊಂಡಿರುತ್ತದೆ. ಹಾಗಂತ, ಪ್ರಯಾಣಿಕ ಎಎಫ್ಸಿ ಗೇಟ್‌ ಮುಂದೆಹೋಗಿ ನಿಂತರೆ ತಬ್ಬಿಬ್ಬು ಗ್ಯಾರಂಟಿ. ಯಾಕೆಂದರೆ, ಕಾರ್ಡ್‌ ಆ್ಯಕ್ಟಿವೇಟ್‌ ಆಗಿರುವುದಿಲ್ಲ.

ಇನ್ನು ಪಿಒಎಸ್‌ ಮೂಲಕ ಸ್ಥಳದಲ್ಲೇ ರಿಚಾರ್ಜ್‌ ಮಾಡಿಸಿಕೊಂಡರೂ “ಸಿಂಕ್ರನೈಜ್‌’ ಆಗಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ, ಗ್ರಾಹಕರಿಗೆ ಯುಪಿಎಯಿಂದ ರಿಚಾರ್ಜ್‌ ಮಾಡಿಸಿಕೊಳ್ಳಲು ಮನವಿ ಮಾಡಲಾಗುತ್ತದೆ. ಕೆಲವರುಆಸೌಲಭ್ಯ ಹೊಂದಿರುವುದಿಲ್ಲ. ಇತ್ತೀಚೆಗೆ ಪ್ರಯಾಣಿಕರಿಗಿಂತದೂರುಗಳೇ ಹೆಚ್ಚು ಬರುತ್ತಿವೆ. ಇದೆಲ್ಲದರ ನಡುವೆ ನಗರದಲ್ಲಿ ಹೆಚ್ಚುತ್ತಿರುವ ಸೋಂಕಿನಿಂದ ನಾಗರಿಕರು ಸ್ವಂತ ವಾಹನಗಳು, ಆಟೋ ಅಥವಾ ಬಸ್‌ ಮೊರೆ ಹೋಗುತ್ತಿದ್ದಾರೆ ಎಂದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದರು.

ಏರಿಕೆಕಂಡಿದೆ: ಬಿಎಂಆರ್‌ಸಿಎಲ್‌ : ಬೆಳಗ್ಗೆ 9ರಿಂದ 10.30 ಹಾಗೂ ಸಂಜೆ 5ರಿಂದ 6.30ರ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಕಳೆದ ಒಂದು ವಾರದಿಂದ ಪ್ರಯಾಣಿಕರ ಸಂಖ್ಯೆ 50 ಸಾವಿರ ದಾಟುತ್ತಿದ್ದು, 25-30 ಲಕ್ಷ ರೂ. ಆದಾಯ ಸಂಗ್ರಹ ಆಗುತ್ತಿರುವುದು ಸಮಾಧಾನಕರ ಸಂಗತಿ. “ನಾಲ್ಕೈದು ದಿನಗಳಿಂದಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದು, ಆರಂಭದದಿನಗಳಿಗೆ ಹೋಲಿಸಿದರೆ ಸಾಕಷ್ಟು ಏರಿಕೆ ಕಂಡು ಬಂದಿದೆ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವಾಣ್‌ ಹೇಳಿದರು.

ಒಂದೆಡೆ ಭಯ ಇದೆ.ಮತ್ತೂಂದೆಡೆ ನಿರ್ಬಂಧಗಳಿವೆ.ಈ ಸಂದರ್ಭದಲ್ಲಿ ಜನಹೆಚ್ಚು ಬರುವುದಿಲ್ಲ ಎನ್ನುವುದು ನಿರೀಕ್ಷಿತ.ಆದರೆ, ಪ್ರಯಾಣಿ ಕರಿಗೆ ಪೂರಕವಾದಕೆಲವುಕ್ರಮಗಳನ್ನುಕೈಗೊಳ್ಳಬೇಕು.ಸಂಜೆ 7ರ ನಂತರ ಫ್ರಿಕ್ವೆನ್ಸಿ ಹೆಚ್ಚಿಸುವ ಅಗತ್ಯವಿದೆ. ಅಭಿಷೇಕ್‌ ಆರ್‌., ವಿಜಯನಗರ ನಿವಾಸಿ

ಮೆಟ್ರೋದಲ್ಲಿ ಹವಾನಿಯಂತ್ರಿತ ವ್ಯವಸ್ಥೆಯಿದ್ದು, ಸೋಂಕು ಹರಡುವ ಸಾಧ್ಯತೆಹೆಚ್ಚು.ಜತೆಗೆ ಎಷ್ಟರ ಮಟ್ಟಿಗೆ ಸ್ಯಾನಿಟೈಸ್‌ ಆಗಿರುತ್ತದೆ ಸ್ಪಷ್ಟತೆಯಿಲ್ಲ. ಆರಂಭದಲ್ಲಿ ರೈಲ್ವೆ ಮತ್ತು ಬಸ್‌ಗಳಲ್ಲಿ ಇದನ್ನು ಪಾಲಿಸಲಾಯಿತು.ಈಗ ಎಲ್ಲಿಯೂ ಕಾಣುವುದಿಲ್ಲ. ಮಾಸ್ಕ್ ಅನ್ನುಬಹುತೇಕರು ಸರಿಯಾಗಿ ಬಳಸುತ್ತಿಲ್ಲ. ಮಹೇಶ್‌ ಮಹದೇವಯ್ಯ, ಮುಖ್ಯಸ್ಥ, ಎಚ್‌ಆರ್‌-ಅಡ್ಮಿನಿಸ್ಟ್ರೇಟರ್‌, ಮಕಿನೊ ಪ್ರೈ.ಲಿ.

ಕೋವಿಡ್ ಮುಂಚೆ ನಿತ್ಯ ರಾಜಾಜಿನಗರ- ನಾಗ ಸಂದ್ರ ಮಧ್ಯೆ ಮೆಟ್ರೋದಲ್ಲೇ ಪ್ರಯಾಣಿಸುತ್ತಿದ್ದೆ.ಆದರೆ, 2-3ತಿಂಗಳಿಂದ ಸ್ವಂತ ವಾಹನ ದಲ್ಲೇಓಡಾಡುತ್ತಿ ದ್ದೇನೆ.ಪರ್ಯಾಯ ವ್ಯವಸ್ಥೆಗೆಹೊಂದಿಕೊಂಡಿದ್ದು, ಸಂಚಾರ ದಟ್ಟಣೆ ಕಡಿಮೆಯಿದ್ದು, ಮೆಟ್ರೋ ಅಗತ್ಯವಿಲ್ಲ. ರವಿ ಜಾಧವ್‌, ಸಿವಿಲ್‌ ಎಂಜಿನಿಯರ್‌, ಬಸವೇಶ್ವರನಗರ ನಿವಾಸಿ.

ವಾರದಲ್ಲಿ ಒಂದೆರಡು ಬಾರಿ ನಾನು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದೆ. ಈಗ ಸ್ಮಾರ್ಟ್‌ಕಾರ್ಡ್‌ ಇದ್ದವರಿಗೆ ಮಾತ್ರ ಪ್ರವೇಶ ಇದೆ.ಅದರ ರಿಚಾರ್ಜ್‌ ಸರಳವಾಗಿಲ್ಲ. ಗೃಹಿಣಿಯರಿಗೆ,ಹಿರಿಯ ನಾಗರಿಕರಿಗೆಇದೆಲ್ಲ ಕಿರಿಕಿರಿ.ಕೊನೆಪಕ್ಷಕೌಂಟರ್‌ನಲ್ಲೇಹಣ ಕೊಟ್ಟು, ರಿಚಾರ್ಜ್‌ಗೆಅವಕಾಶಕೊಡಬೇಕು. ನೇತ್ರಾ ಅನಿಲಕುಮಾರ್‌, ಬಾಪೂಜಿನಗರ ನಿವಾಸಿ

ಸೋಂಕು ವಿಪರೀತ ಆಗುತ್ತಿದೆ.ಈ ಮಧ್ಯೆ ಹವಾನಿಯಂತ್ರಿತ ವ್ಯವಸ್ಥೆ ಯಲ್ಲಿಪ್ರಯಾಣಿಸುವುದೇ ಬೇಡಅನಿಸುತ್ತಿದೆ. ಸದ್ಯಕ್ಕೆ ಬಸ್‌ ಅಥವಾ ಆಟೋ ಸೂಕ್ತ. ಸುಮಾ, ಜೆ.ಪಿ. ನಗರ ನಿವಾಸಿ

ಆ್ಯಪ್‌ನಲ್ಲಿ ರಿಚಾರ್ಜ್‌ ಮಾಡಿಸಿದ್ದೆ. ಹಣ ಕಡಿತಗೊಂಡಿತ್ತು. ಆದರೆ, ನಿಲ್ದಾಣಕ್ಕೆ ಹೋದಾಗ ಗೇಟ್‌ ತೆರೆಯಲಿಲ್ಲ. ಸರ್ವರ್‌ ಡೌನ್‌ ಇರಬಹುದು, ಸ್ವಲ್ಪಕಾಯಿರಿ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು. ಇಷ್ಟೊಂದು ಸಾಹಸ ಮಾಡಬೇಕಾ? ರಾಘವೇಂದ್ರ ರಾಜ್‌ ಗೋದಿ, ಐಟಿ ಉದ್ಯೋಗಿ

ಟಾಪ್ ನ್ಯೂಸ್

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.