ಬೆಳೆಯುತ್ತಿರುವ ರಸ್ತೆ… ಕುಗ್ಗುತ್ತಿರುವ ಅಂತರ…
ಭವಿಷ್ಯದಲ್ಲಿ ಸರಕು ವಾಹನಗಳಿಗೆ ಮೆಟ್ರೋ ಮಾರ್ಗದಲ್ಲಿ ಸಮಸ್ಯೆ | ಪದೇ ಪದೆ ದುರಸ್ತಿಯಿಂದ ಎತ್ತರ ಹೆಚ್ಚಳ
Team Udayavani, Feb 20, 2021, 10:56 AM IST
ಬೆಂಗಳೂರು: ನಗರದಲ್ಲಿ ಪ್ರತಿ ವರ್ಷ ನಡೆಯುವ ಪ್ರಮುಖ ರಸ್ತೆಗಳ ಅಭಿವೃದ್ಧಿ ಭವಿಷ್ಯದಲ್ಲಿ “ನಮ್ಮ ಮೆಟ್ರೋ’ಗೆ ತೊಡಕಾಗಲಿದೆಯೇ? – “ಹೌದು’ ಎನ್ನುತ್ತವೆ ಎಂಜಿನಿಯರಿಂಗ್ ಮೂಲಗಳು!
ನಗರದ ಬಹುತೇಕ ರಸ್ತೆಗಳು ಅದರಲ್ಲೂ ಮೆಟ್ರೋ ಹಾದುಹೋಗುವ ಮಾರ್ಗಗಳು ಯಾವಾಗಲೂ ಹೊಳೆಯುತ್ತಿರುತ್ತವೆ. ಇದಕ್ಕೆ ಕಾರಣ ನಿಯಮಿತವಾಗಿ ಅವುಗಳ ದುರಸ್ತಿ ಕಾರ್ಯಕೈಗೆತ್ತಿಕೊಳ್ಳುವುದು. ಇದರಿಂದ ಪ್ರತಿ ವರ್ಷ ರಸ್ತೆಗಳು ಬೆಳೆವಣಿಗೆ (ಎತ್ತರದಲ್ಲಿ) ಹೊಂದುತ್ತಿವೆ. ಈ ಬೆಳವಣಿಗೆ ಇದೇ ರೀತಿ ಮುಂದುವರಿದರೆ, ಭವಿಷ್ಯದಲ್ಲಿ ಸರಕು ಹೊತ್ತ ವಾಹನಗಳು ಮೆಟ್ರೋ ನಿಲ್ದಾಣಗಳನ್ನು ದಾಟಲು ಸಮಸ್ಯೆ ಆಗಲಿದೆ.
ಹಾಗಂತ, ರಸ್ತೆಗಳಿಗೆ ಟಾರು ಹಾಕುವುದು ತಪ್ಪಲ್ಲ; ಆದರೆ, ಸಾಮಾನ್ಯವಾಗಿ ಗುತ್ತಿಗೆದಾರರು ಈ ಮೊದಲೇ ಇದ್ದ ಟಾರು ರಸ್ತೆಯ ಮೇಲೆಯೇ ಪದೇ ಪದೆ ರಸ್ತೆ ದುರಸ್ತಿ ಹೆಸರಿನಲ್ಲಿ ಬಿಟುಮಿನ್ ಸುರಿಯುತ್ತಾರೆ. ಎಂಜಿನಿಯರ್‌ಗಳ ಪ್ರಕಾರ ಕನಿಷ್ಠ3-4 ಸೆಂ.ಮೀ. ಟಾರು ಹಾಕಲಾಗುತ್ತದೆ. ಆಗ,ಸಹಜವಾಗಿ ರಸ್ತೆಗಳ ಎತ್ತರ ಪ್ರತಿ ವರ್ಷ ಹೆಚ್ಚುತ್ತದೆ.ಇದು ನಮಗೆ ಅರಿವಿಲ್ಲದೆ, ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಹಿರಿಯ ಎಂಜಿನಿಯರೊಬ್ಬರು ತಿಳಿಸುತ್ತಾರೆ.
ಟ್ರಿನಿಟಿ ನಿಲ್ದಾಣ; 4.9 ಮೀ. ಎತ್ತರ?:
ಸಾಮಾನ್ಯವಾಗಿ ಮೆಟ್ರೋ ನಿಲ್ದಾಣಗಳನ್ನು ನಗರದ ಒಳಗಾದರೆ ನೆಲದಿಂದ 5 ಮೀ. ಹಾಗೂ ಹೊರವಲಯದಲ್ಲಿ 5.5 ಮೀ. ಎತ್ತರದಲ್ಲಿ ನಿರ್ಮಿಸಲಾಗಿರುತ್ತದೆ. ಟ್ರಿನಿಟಿ ವೃತ್ತದ ನಿಲ್ದಾಣವು ನೆಲದಿಂದ 4.9 ಮೀ. ಎತ್ತರದಲ್ಲಿ ನಿರ್ಮಾಣಗೊಂಡಿದೆಎನ್ನಲಾಗಿದೆ. ಈ ಮಧ್ಯೆ 2010-11ರಲ್ಲಿ ನಿರ್ಮಿಸಲಾದ ಉದ್ದೇಶಿತ ಈ ನಿಲ್ದಾಣ ಬಂದ ನಂತರಆ ರಸ್ತೆಯು ಹಲವು ಬಾರಿ ದುರಸ್ತಿ ಕಂಡಿದೆ. ಆ ಜಾಗದಲ್ಲಿ ವಾಹನ ಸಿಲುಕಿಕೊಂಡಿದ್ದು, ಕಾಕತಾಳೀಯ ಇರಬಹುದು ಹೊರತು, ಇದೇ ಕಾರಣ ಎಂದೂ ನಿರ್ಧರಿಸಲಾಗದು.
ಇದರ ಜತೆಗೆ ರಸ್ತೆ ಸಾಂದ್ರತೆ ಹೆಚ್ಚುವುದರಿಂದ ಅಕ್ಕ-ಪಕ್ಕ ಇಳಿಜಾರು ಆಗುತ್ತದೆ. ಆಗ, ಅಲ್ಲಿದ್ದ ಮನೆ ಅಥವಾ ಮಳಿಗೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಜತೆಗೆ ಅನಗತ್ಯವಾಗಿ ರಸ್ತೆಗೆ ಅನುಗುಣವಾಗಿ ಫುಟ್‌ಪಾತ್‌ಗಳ ಮರುನಿರ್ಮಾಣ ಮಾಡುವ ಕಸರತ್ತೂ ತಪ್ಪುತ್ತದೆ.
ಸಮಸ್ಯೆ ಪ್ರಶ್ನೆ ಉದ್ಭವಿಸದು; ಬಿಬಿಎಂಪಿ: “ರಸ್ತೆಗಳ ಅಭಿವೃದ್ಧಿಯಿಂದ ಭವಿಷ್ಯದಲ್ಲಿ ಮೆಟ್ರೋಗೆ ಯಾವುದೇ ರೀತಿ ಸಮಸ್ಯೆ ಆಗದು. ಯಾಕೆಂದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಮ್ಮೆ 25 ಮಿ.ಮೀ. ರಸ್ತೆಗಳ ಡಾಂಬರೀಕರಣ ಮಾಡಿದರೆ, 3 ವರ್ಷಗಳು ಅದಕ್ಕೆ ಮತ್ತೆ ಟಾರು ಹಾಕುವುದಿಲ್ಲ. ಅದೇ ರೀತಿ, 70 ಮಿ.ಮೀ. ನಷ್ಟು ಡಾಂಬರೀಕರಣ ಮಾಡಿದರೆ, 5 ವರ್ಷ ಅದರ ಅವಧಿ ಇರುತ್ತದೆ. ಹಾಗಾಗಿ, ಅರ್ಧ ಮೀ.ಎತ್ತರ ಆಗಬೇಕಾದರೂ ದಶಕಗಳೇ ಹಿಡಿಯುತ್ತದೆ. ಈಗ ನಗರದಲ್ಲಿರುವ ರಸ್ತೆಗಳನ್ನೇ ತೆಗೆದುಕೊಂಡರೆ 70-80ರ ದಶಕದಲ್ಲಿ ನಿರ್ಮಿಸಲ್ಪಟ್ಟಿವೆ. ಇನ್ನು ಮುಂದಿನ ದಿನಗಳಲ್ಲಂತೂ ಡಾಂಬರೀಕರಣ ಹೋಗಿ, ವೈಟ್‌ಟಾಪಿಂಗ್ ಎಂಬ ಶಾಶ್ವತ ವ್ಯವಸ್ಥೆ ಬರುತ್ತಿದೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ತಿಳಿಸುತ್ತಾರೆ.
2017ರಲ್ಲೇ ಟಾರು ಕಂಡಿತ್ತು :
ಈಚೆಗೆ ಟ್ರಿನಿಟಿ ವೃತ್ತದ ಮೆಟ್ರೋ ನಿಲ್ದಾಣದಲ್ಲಿ ಸರಕು ಸಾಗಿಸುತ್ತಿದ್ದ ಲಾರಿಯೊಂದು ಸಿಲುಕಿಕೊಂಡಿತ್ತು. ಆದರೆ, ಆ ರಸ್ತೆ ಡಾಂಬರೀಕರಣಗೊಂಡಿದ್ದು 2017ರಲ್ಲಿ. ಹಾಗಾಗಿ, ಇದಕ್ಕೆ ರಸ್ತೆಗಳ ಸಾಂದ್ರತೆ ಕಾರಣವಲ್ಲ ಎಂದು ಅಧಿಕಾರಿಗಳು ಸ್ಪಷ್ಪಡಿಸುತ್ತಾರೆ.
ಮರುಬಳಕೆಗೆ ಬೇಕಿದೆ ತಂತ್ರಜ್ಞಾನ : ನಗರದಲ್ಲಿ ನಿತ್ಯ ನೂರಾರು ಕಟ್ಟಡಗಳ ನೆಲಸಮ ಹಾಗೂ ನಿರ್ಮಾಣ ಕಾರ್ಯ ನಡೆಯುತ್ತದೆ. ಕಟ್ಟಡಗಳಿಗೆ ಬಳಕೆಯಾಗುವ ಕಚ್ಚಾವಸ್ತುಗಳಲ್ಲಿ ಶೇ. 50ರಷ್ಟಾದರೂ ಮರುಬಳಕೆ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನ ಪರಿಚಯಿಸಬೇಕಿದೆ. ಇದು ಸಾಧ್ಯವಾದರೆ, ತಕ್ಕಮಟ್ಟಿಗಾದರೂ ಕ್ವಾರಿ ಸೇರಿದಂತೆ ಪರಿಸರದ ಮೇಲೆ ಹೊರೆ ಕಡಿಮೆ ಆಗಲಿದೆ.
–ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.