ಅವನಿ ವೇಗಕ್ಕೆ ಸರಿಸಾಟಿ ಯಾರು?
Team Udayavani, Mar 7, 2022, 1:46 PM IST
ಬೆಂಗಳೂರು: “ನಮ್ಮ ಮೆಟ್ರೋ’ ಯೋಜನೆಯಲ್ಲೇಟನೆಲ್ ಬೋರಿಂಗ್ ಯಂತ್ರ (ಟಿಬಿಎಂ) “ಅವನಿ’ ಅತ್ಯಂತ ವೇಗದ ಯಂತ್ರ! ಮೊದಲ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿದ ಅಲ್ಪಾವಧಿ ಅಂದರೆ ಕೇವಲ 40ರಿಂದ 45 ದಿನಗಳಲ್ಲಿಈ ಯಂತ್ರವು 2ನೇ ಸುರಂಗ ಪಯಣಕ್ಕೆಅಣಿಯಾಗಿದೆ. ಇಷ್ಟು ಕಡಿಮೆ ಅವಧಿಯ ಅಂತರದಲ್ಲಿರಿ-ಲಾಂಚ್ ಆಗುತ್ತಿರುವುದು ಇದೇ ಮೊದಲು ಎಂದು ವಿಶ್ಲೇಷಿಸಲಾಗುತ್ತಿದೆ.
ಸಾಮಾನ್ಯವಾಗಿ ಪ್ರತಿ ಟಿಬಿಎಂ ಯಾವೊಂದುಸುರಂಗ ಕಾಮಗಾರಿ ಪೂರ್ಣಗೊಳಿಸಿದ ನಂತರ ಕನಿಷ್ಠಎರಡರಿಂದ ಎರಡೂವರೆ ತಿಂಗಳು ರಿಲ್ಯಾಕ್ಸ್ ಮೂಡ್‌ನಲ್ಲಿರುತ್ತವೆ. ಅವುಗಳ ದುರಸ್ತಿ ಸೇರಿದಂತೆ ನಿರ್ವಹಣಾಕಾರ್ಯ ನಡೆಯುತ್ತದೆ. ಬಿಡಿಭಾಗಗಳನ್ನು ಬಿಚ್ಚಿ,ಮರುಜೋಡಿಸುವ ಕೆಲಸ ಸುದೀರ್ಘಾವಧಿ ನಡೆಯುತ್ತದೆ. ಶಿವಾಜಿನಗರದಿಂದ ಎಂ.ಜಿ. ರಸ್ತೆ ತಲುಪಿದ”ಅವನಿ’ ನಿರ್ವಹಣೆಯೂ ನಡೆಯಲಿದೆ. ಆದರೆ,ಇದಕ್ಕಾಗಿ ಅಷ್ಟೊಂದು ಸಮಯ ತೆಗೆದುಕೊಳ್ಳುತ್ತಿಲ್ಲ.ಎರಡನೇ ಸುತ್ತಿನ ಸುರಂಗ ಕೊರೆಯುವ ಕಾರ್ಯಾಚರಣೆಗೆ ಈಗಾಗಲೇ ಸಜ್ಜಾಗಿದೆ.
ಸಾಮಾನ್ಯವಾಗಿ ಈ ದೈತ್ಯಯಂತ್ರವು ಸುರಂಗದಿಂದ ಹೊರಬಂದಾಗ, ನಿಲ್ದಾಣದ ಮತ್ತೂಂದು ತುದಿಗೆಅದರ ಬ್ಯಾಕ್‌ಅಪ್ ಕಾರುಗಳನ್ನು ಬಿಚ್ಚಿ ಮೇಲೆತ್ತಿ,ದುರಸ್ತಿಗೊಳಿಸಿ ಸ್ಥಳಾಂತರ ಮಾಡಲಾಗುತ್ತದೆ. ಆಗ, ಸುರಂಗ ಕೊರೆಯುವ ಕಾರ್ಯ ಆರಂಭಗೊಳ್ಳುತ್ತದೆ.ಇದಕ್ಕೆ ಸಾಕಷ್ಟು ಸಮಯ ಬೇಕು. ಆದರೆ, ವಿವಿಧವಿಭಾಗಗಳ ಎಂಜಿನಿಯರ್‌ಗಳ ಅನುಭವ ಮತ್ತು ಸಮನ್ವಯತೆ ಈ ಕಿರಿಕಿರಿಯನ್ನು ತಪ್ಪಿಸಿದೆ.
ಜೂ. 6ಕ್ಕೆ ಶಿವಾಜಿನಗರದಿಂದ ಸುರಂಗ ಪಯಣ ಆರಂಭಿಸಿದ್ದ “ಅವನಿ’ ಯಂತ್ರವು ಎಂ.ಜಿ. ರಸ್ತೆತಲುಪುತ್ತಿದ್ದಂತೆ ಅಲ್ಲಿರುವ ನೆಲದಡಿ ನಿಲ್ದಾಣದಲ್ಲಿಬೇಸ್ ಸ್ಲ್ಯಾಬ್ ಹಾಕುವ ಕಾರ್ಯವನ್ನು ಎಂಜಿನಿಯರ್‌ಗಳು ಮಾಡಿಮುಗಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಟರ್‌ಹೆಡ್ ದುರಸ್ತಿ, ಬ್ಯಾಕ್‌ಅಪ್‌ಕಾರುಗಳಲ್ಲಿರುವ ಹೈಡ್ರಾಲಿಕ್ ಸಿಸ್ಟ್‌ಂ, ಎಲೆಕ್ಟ್ರಿಕ್‌ಟ್ರಾನ್ಸ್‌ಫಾರ್ಮರ್, ನಿಯಂತ್ರಣ ಕೊಠಡಿಗಳನಿರ್ವಹಣೆ ಒಟ್ಟೊಟ್ಟಿಗೆ ನಡೆಯುತ್ತಿದೆ. ಇದರಿಂದ15 ದಿನಗಳಿಂದ ಒಂದು ತಿಂಗಳು ಉಳಿತಾಯವಾಗಿದೆ. ಇದರಿಂದ ಹಣದ ಉಳಿತಾಯವೂ ಆಗಿದೆ. ಹೇಗೆಂದರೆ, ಯಂತ್ರ ಮತ್ತು ಸುರಂಗದಒಟ್ಟು ಕಾಮಗಾರಿಯ ಒಂದೊಂದು ದಿನದವೆಚ್ಚವೇ ಕೋಟಿ ಆಗುತ್ತದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಎಂಜಿನಿಯರೊಬ್ಬರು “ಉದಯವಾಣಿ’ಗೆ ತಿಳಿಸಿದರು.
ಎಲ್ಲ ಕಡೆ ಏಕೆ ಆಗಲ್ಲ?: ಇದೇ ಸಮನ್ವಯತೆ ಮತ್ತು ವ್ಯವಸ್ಥಿತ ಯೋಜನೆಯ ಮಾದರಿಯನ್ನು ಉಳಿದೆಡೆಯೂ ಅನುಸರಿಸಬಹುದಲ್ಲ ಎಂದರೆ, “ಖಂಡಿತ ಅನುರಿಸಬಹುದು. ಆದರೆ, ಅದಕ್ಕೆ ಹಲವಾರುಅಡತಡೆಗಳಿರುತ್ತವೆ. ಉದಾಹರಣೆಗೆ ಸಕಾಲದಲ್ಲಿಭೂಮಿ ಲಭ್ಯವಾಗದಿರಬಹುದು, ನೆಲದಡಿ ನಿಲ್ದಾಣಕ್ಕೆ ಭೂಮಿಯನ್ನು ಅಗೆಯುವಾಗ ಬಂಡೆಗಳುಸಿಗಬಹುದು. ಅದು ನಿಗದಿತ ಅವಧಿಯಲ್ಲಿ ಮಾಡಿಮುಗಿಸಲು ಅಡ್ಡಿಯಾಗಬಹುದು ಎಂದು ತಜ್ಞರು ಸ್ಪಷ್ಟಪಡಿಸುತ್ತಾರೆ.
“ನಮ್ಮ ಮೆಟ್ರೋ’ ಮೊದಲ ಹಂತದಲ್ಲಿ ವಿಧಾನಸೌಧ ಬಳಿ ನಿಲ್ದಾಣದಲ್ಲೂ ಈ ಪ್ರಯತ್ನ ನಡೆದಿತ್ತು. ಆದರೆ, ಅಲ್ಲಿ ಬೇಸ್ ಸ್ಲ್ಯಾಬ್ ಮತ್ತು ಅದರ ಮೇಲಿನ ಸ್ಲ್ಯಾಬ್‌ಗಳ ನಡುವಿನ ಅಂತರ ಕಡಿಮೆಯಾಯಿತು. ಇದರಿಂದ ಸುಮಾರು 6.7 ಮೀಟರ್ ಎತ್ತರದ ದೈತ್ಯಯಂತ್ರವುಆ ಎರಡೂ ಸ್ಲಾéಬ್‌ಗಳ ಮೂಲಕ ಹಾದುಹೋಗಲುಕಷ್ಟವಾಯಿತು. ಇದರಿಂದ ಎಂದಿನಂತೆ ಅದರಭಾಗಗಳನ್ನು ಬಿಚ್ಚಿ, ಮತ್ತೂಂದು ತುದಿಗೆ ಸ್ಥಳಾಂತರಿಸಿ ಕಾರ್ಯಾರಂಭ ಮಾಡಬೇಕಾಯಿತು’ ಎಂದೂ ಅವರು ಮೆಲುಕುಹಾಕಿದರು
ದಿನಕ್ಕೆ 8ರಿಂದ 10 ಮೀಟರ್ ಚಲನೆ! :
ಸುಮಾರು 250 ಟನ್ ತೂಕದ ಈ ಯಂತ್ರವು ದಿನಕ್ಕೆ 8-10 ಮೀಟರ್ ಮಾತ್ರಚಲಿಸುತ್ತದೆ. ಇದಕ್ಕೆ ಯಂತ್ರದ ತಳಭಾಗದಲ್ಲಿಪ್ಲೇಟ್‌ಗಳನ್ನು ಅಳವಡಿಸಿ, ಗ್ರೀಸ್ ಹಾಕಲಾಗಿರುತ್ತದೆ. ದುರಸ್ತಿ ಮತ್ತು ಸ್ಥಳಾಂತರ ಕಾರ್ಯ ಒಟ್ಟೊಟ್ಟಿಗೆ ನಡೆಯುವುದರಿಂದ ನಿಧಾನವಾಗಿ ಚಲಿಸಬೇಕಾಗುತ್ತದೆ. ಎಲ್ಲವೂ ಯಾಂತ್ರಿಕವಾಗಿಯೇ ಸಾಗುತ್ತದೆ.
ಒಟ್ಟು 12 ಯಂತ್ರಗಳು :
ಮೊದಲ ಹಂತದಲ್ಲಿ ನೇರಳೆ ಮತ್ತು ಹಸಿರು ಎರಡೂ ಕಾರಿಡಾರ್‌ಗಳು ಸೇರಿ ಒಟ್ಟಾರೆ ಆರುಟಿಬಿಎಂಗಳನ್ನು ಬಳಸಲಾಗಿತ್ತು. ಅದೇ ರೀತಿ, ಎರಡನೇ ಹಂತದಲ್ಲಿ ಒಂಬತ್ತು ಟಿಬಿಎಂಗಳು ಕಾರ್ಯಾಚರಣೆ ನಡೆಸುತ್ತಿದ್ದು, ಆರು ಯಂತ್ರಗಳು ಈಗಾಗಲೇ ಒಂದು ಟ್ರಿಪ್ ಸುರಂಗ ಕೊರೆಯುವ ಕಾಮಗಾರಿ ಪೂರ್ಣಗೊಳಿಸಿವೆ. ಇವ್ಯಾವುವೂ ಇಷ್ಟು ಕಡಿಮೆ ಅವಧಿಯಲ್ಲಿ ರಿ-ಲಾಂಚ್ ಆಗಿಲ್ಲ.
ಉತ್ತಮ ಸಮನ್ವಯತೆ, ಸಾಕಷ್ಟು ಜಾಗದ ಲಭ್ಯತೆ ಹಾಗೂ ಪೂರ್ವ ಯೋಜನೆಯಿಂದ 40-45 ದಿನಗಳಲ್ಲೇಅವನಿ ಟಿಬಿಎಂ ರಿ-ಲಾಂಚ್ ಆಗುತ್ತಿದೆ. ಇದು ನಮ್ಮ ಮೆಟ್ರೋಯೋಜನೆಯಲ್ಲೇ ಫಾಸ್ಟೆಸ್ಟ್ ಕಾರ್ಯಾಚರಣೆ ಎನ್ನಬಹುದು. – ಅಂಜುಂ ಪರ್ವೇಜ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.