ಹೊರವರ್ತುಲ: ರಾಜ್ಯದಿಂದಲೇ ಅನುಮತಿ?
ವಿಳಂಬದ ಹಿನ್ನೆಲೆಯಲ್ಲಿಪ್ಲಾನ್,ಮುಖ್ಯಮಂತ್ರಿ ದೆಹಲಿ ಭೇಟಿ; ಮೆಟ್ರೋ ವಿಚಾರ ಪ್ರಸ್ತಾಪ
Team Udayavani, Sep 19, 2020, 11:26 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಬಹುನಿರೀಕ್ಷಿತ “ನಮ್ಮ ಮೆಟ್ರೋ’ ಹೊರವರ್ತುಲ ರಸ್ತೆ ಮಾರ್ಗಕ್ಕೆ ಕೇಂದ್ರದ ಅನುಮತಿಗಾಗಿ ಕಾಯದೆ, ರಾಜ್ಯ ಸರ್ಕಾರದಿಂದಲೇ ಅನುಮೋದನೆ ಪಡೆದು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ಸಿದ್ಧತೆ ನಡೆದಿದೆ.
ಈ ಮೊದಲೇಯೋಜನೆ ಸಾಕಷ್ಟು ವಿಳಂಬವಾಗಿದೆ. ಕೋವಿಡ್‌ನಿಂದ ಮತ್ತಷ್ಟು ತಡವಾಗುತ್ತಿದೆ. ಹಾಗಾಗಿ, 18.36 ಕಿ.ಮೀ. ಉದ್ದದ ಮಾರ್ಗಕ್ಕೆ ಈಗಾಗಲೇ ಟೆಂಡರ್ ತೆರೆಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೌಖೀಕ ಸೂಚನೆ ನೀಡಿದ್ದಾರೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ರಾಜ್ಯಸರ್ಕಾರದಿಂದಲೇ ಅನುಮೋದನೆ ಪಡೆದು, ಟೆಂಡರ್ ಅವಾರ್ಡ್ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಲು ಉದ್ದೇಶಿಸಲಾಗಿದೆ.
ಮುಖ್ಯಮಂತ್ರಿಗಳ ದೆಹಲಿ ಪ್ರವಾಸದಲ್ಲಿರುವ ಕಾರ್ಯಸೂಚಿ ಪಟ್ಟಿಯಲ್ಲಿ “ನಮ್ಮ ಮೆಟ್ರೋ’ 2ಎ ಕೂಡ ಒಂದಾಗಿದೆ. ಈ ಬಗ್ಗೆ ಕೇಂದ್ರದ ಗಮನಸೆಳೆದು, ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡಲಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಕೇಂದ್ರದ ಅನುಮತಿಗಾಗಿ ಕಾಯುವ ಪ್ರಮೇಯ ಬರುವುದಿಲ್ಲ. ಆಗ, ಯೋಜನೆಯೂ ಚುರುಕುಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಮೆಟ್ರೋ ಯೋಜನೆಗೆ ಕೇಂದ್ರದ ಅನುಮೋದನೆ ಕಡ್ಡಾಯ. ಆದರೆ ರಾಜ್ಯ ಸರ್ಕಾರ ಸೂಚನೆ ನೀಡುವ ಅಧಿಕಾರ ಹೊಂದಿದೆ. ಅಷ್ಟಕ್ಕೂ ವಿದೇಶಿ ಬ್ಯಾಂಕ್‌ಗಳಿಂದ ಸಾಲವನ್ನು ಪಡೆಯುವಾಗ, ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಂಡು ಮುಂದುವರಿಯಲಾಗಿರುತ್ತದೆ. ಇನ್ನು ಮತ್ತೂಂದೆಡೆ ಕೇಂದ್ರದ ಅನುಮತಿಗಾಗಿ ಕಾಯದೆ, ಟೆಂಡರ್‌ಗೆ ಸಂಬಂಧಿಸಿದ ಕೆಲವು ಪ್ರಕ್ರಿಯೆ ಗಳನ್ನು ಹಂತ-ಹಂತವಾಗಿ ಪೂರ್ಣಗೊಳಿಸಲಾಗುತ್ತಿದೆ. ಈಗಾಗಲೇ ಟೆಂಡರ್ ತೆರೆಯಲು ಮುಖ್ಯಮಂತ್ರಿಗಳು ಮೌಖೀಕ ಆದೇಶ ನೀಡಿದ್ದಾರೆ. ಇದರಿಂದ ಸಮಯ ಉಳಿತಾಯ ಆಗಲಿದೆ ಎಂದು ನಿಗಮದ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಹೊರಗಿನಿಂದ ಕನ್ಸಲ್ಟೆಂಟ್ ನೇಮಕ: ಹೊರವರ್ತುಲ ರಸ್ತೆ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗಕ್ಕೆ ಬಿಎಂಆರ್ ಸಿಎಲ್ ಪ್ರತ್ಯೇಕ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ನೇಮಿಸಲು ಉದ್ದೇಶಿಸಿದ್ದು, ಈ ಸಂಬಂಧ ಆಸಕ್ತರಿಂದ ಈಚೆಗೆ ಟೆಂಡರ್ ಆಹ್ವಾನಿಸಿದೆ. ನಿಗಮದಲ್ಲೇ ಯೋಜನಾ ನಿರ್ವಹಣೆ ಸಮಾಲೋಚಕರ ದೊಡ್ಡ ತಂಡ ಇದೆ. ಆದಾಗ್ಯೂ ಹೊರವರ್ತುಲ ರಸ್ತೆ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಡುವಿನ ಮಾರ್ಗಕ್ಕೆ ಹೊರಗಡೆಯಿಂದಕನ್ಸಲ್ಟೆಂಟ್ ತಂಡವನ್ನುನೇಮಿಸಲು ನಿರ್ಧರಿಸಲಾಗಿದೆ. ಯಾಕೆಂದರೆ, ಮಾರ್ಗ ನಿರ್ಮಾಣಕ್ಕೆ ಅಗತ್ಯ ಆರ್ಥಿಕ ನೆರವು ನೀಡಲಿರುವ ಅಂತಾರಾಷ್ಟ್ರೀಯ ಬ್ಯಾಂಕ್ ಇಂತಹದ್ದೊಂದು ಷರತ್ತು ವಿಧಿಸಿತ್ತು.
“ನಮ್ಮ ಮೆಟ್ರೋ’2ಎ ಅಡಿ 18.36ಕಿ.ಮೀ. ಮತ್ತು 2ಬಿಅಡಿ36.51ಕಿ.ಮೀ. ನಿರ್ಮಾಣಕ್ಕಾಗಿ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಸುಮಾರು 3,760 ಕೋಟಿ ರೂ. ನೆರವು ನೀಡಲು ಮುಂದೆಬಂದಿದೆ. ಆದರೆ, ಇದಕ್ಕೆ ಒಂದು ಷರತ್ತನ್ನೂ ವಿಧಿಸಿದೆ. ಅದರಂತೆ ನಿಗಮದ ಹೊರಗಿನಿಂದ ಟೆಂಡರ್ ಮೂಲಕ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಅನ್ನು ನೇಮಿಸಬೇಕು ಎನ್ನುವುದಾಗಿತ್ತು. ಸಾಮಾನ್ಯವಾಗಿ ಈ ತಂಡದಲ್ಲಿ ಸುಮಾರು 30ರಿಂದ 40 ಜನ ತಜ್ಞ ಎಂಜಿನಿಯರ್ ಗಳಿರುತ್ತಾರೆ. ಇದು ನಿಗಮ ನಿರ್ಮಿಸುವ ಸಿವಿಲ್ ಕಾಮಗಾರಿಯ
ಗುಣಮಟ್ಟ ಪರಿಶೀಲನೆ ನಡೆಸಿ, ಅನುಮೋದನೆ ನೀಡುತ್ತದೆ. ಈ ಮಧ್ಯೆ ಬಿಎಂಆರ್‌ಸಿಎಲ್‌ನ 200-250 ಎಂಜಿನಿಯರ್‌ಗಳ ಕನ್ಸಲ್ಟೆನ್ಸಿ ತಂಡವೂ ಇದೆ. ಅದೂ ಆಗಾಗ್ಗೆ ಗುಣಮಟ್ಟ ಪರಿಶೀಲನೆ ನಡೆಸಿ, ನಿಗಮಕ್ಕೆ ಮಾರ್ಗದರ್ಶನ ನೀಡುತ್ತಿರುತ್ತದೆ. ಟೆಂಡರ್ ಸಲ್ಲಿಕೆಗೆ ಅಕ್ಟೋಬರ್ 10 ಕೊನೆಯ ದಿನವಾಗಿದ್ದು, ಅ. 20ರಂದು ಮಧ್ಯಾಹ್ನ 3.30ಕ್ಕೆ ಟೆಂಡರ್ ತೆರೆಯಲಾಗುವುದು. 48 ತಿಂಗಳ ಗುತ್ತಿಗೆ ಇದಾಗಿದೆ.
ಇನ್ನು ಈಗಾಗಲೇ ಬಿಎಂಆರ್‌ಸಿಎಲ್ ಯೋಜನೆಯ ಸಿಲ್ಕ್ ಬೋರ್ಡ್ ಜಂಕ್ಷನ್-ಎಚ್ ಬಿಆರ್ ಲೇಔಟ್ ಹಾಗೂ ಎಚ್‌ಬಿಆರ್ ಲೇಔಟ್ -ವಿಮಾನ ನಿಲ್ದಾಣ ಮಾರ್ಗಗಳಿಗೆ ಎರಡು ಕಂಪನಿಗಳನ್ನುಸಮಗ್ರವಿನ್ಯಾಸಸಮಾಲೋಚಕರನ್ನಾಗನಿಯೋಜಿಸಿದೆ.
ಸಂಪನ್ಮೂಲ ಕ್ರೋಡೀಕರಣ : ಒಂದು ವೇಳೆಕೇಂದ್ರ ನಂತರದಲ್ಲಿ ಅನುಮತಿ ನಿರಾಕರಿಸಿದರೆ, ಯೋಜನೆಯನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅನುಷ್ಠಾನಗೊಳಿಸಲೂ ಅವಕಾಶ ಇದೆ. ಇದಕ್ಕಾಗಿ ಈ ಹಿಂದೆ ಇದೇ ಮಾರ್ಗದಲ್ಲೇ ಪರಿಚಯಿಸಲು ಉದ್ದೇಶಿಸಲಾಗಿದ್ದ ವಿನೂತನ ಮಾದರಿಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ (ಇನ್ನೋವೇಟಿವ್ ಫಂಡ್) ಮಾಡಬಹುದು.
ಎರಡು ಪ್ಯಾಕೇಜ್‌ಗಳಾಗಿ ಟೆಂಡರ್ ಆಹ್ವಾನ : ಹೊರವರ್ತುಲ ರಸ್ತೆ (ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್-ಕೆ.ಆರ್. ಪುರ)ಯ ಮೆಟ್ರೋ ಮಾರ್ಗವನ್ನು ಎರಡು ಪ್ಯಾಕೇಜ್‌ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿದೆ. ಅವುಗಳ ವಿವರ ಹೀಗಿದೆ.
– ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.