ಪ್ರಯಾಣಿಕರ ಸೆಳೆಯಲು ನಮ್ಮ ಮೆಟ್ರೋ ಪ್ಲಾನ್ : ಪೇಟಿಎಂ, ಗೂಗಲ್‌ಪೇ ನಲ್ಲೇ ರಿಚಾರ್ಜ್
ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು?
Team Udayavani, Oct 12, 2020, 12:57 PM IST
ಬೆಂಗಳೂರು: “ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಸಿಹಿಸುದ್ದಿಯೊಂದು ಕಾದಿದೆ. ವೆಬ್‌ಸೈಟ್ ಮೂಲಕ ಆ್ಯಪ್‌ಡೌನ್‌ಲೋಡ್ ಮಾಡಿ, ರಿಚಾರ್ಜ್ ಮಾಡಿಸಿಕೊಂಡುನಂತರ ಒಂದು ಗಂಟೆ ಕಾದು ಪ್ರಯಾಣ ಬೆಳೆಸುವ ಜಂಜಾಟ ಇನ್ಮುಂದೆ ಇರುವುದಿಲ್ಲ. ತಮ್ಮ ಮೊಬೈಲ್‌ನಲ್ಲಿರುವ ಪೇಟಿಎಂ ಅಥವಾ ಗೂಗಲ್ ಪೇ ಮೂಲಕವೇ ಕ್ಷಣಾರ್ಧದಲ್ಲಿ ಸ್ಮಾರ್ಟ್‌ಕಾರ್ಡ್‌ಗೆ ಹಣ ಪಾವತಿಸಿ,ಮೆಟ್ರೋ ಏರುವ ಸೌಲಭ್ಯ ಶೀಘ್ರವಾಗಿ ಬರಲಿದೆ. – ಸ್ವತಃ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಈ ವಿಷಯ ತಿಳಿಸಿದ್ದಾರೆ.
ಮೆಟ್ರೋ ಪ್ರಯಾಣಿಕ ಸ್ನೇಹಿಯಾಗಿ ಬದಲಾಗಬೇಕುಎಂಬ ಪ್ರಯಾಣಿಕರು ಮತ್ತು ತಜ್ಞರ ಅಭಿಪ್ರಾಯಕ್ಕೆ ಸ್ಪಂದಿಸಿದ ಅವರು, ಈ ನಿಟ್ಟಿನಲ್ಲಿ ಈಗಾಗಲೇ ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ರಿಚಾರ್ಜ್‌ಗೆ ಈಗಿರುವಪೇಮೆಂಟ್ (ಪಾವತಿಗಳು) ಆಯ್ಕೆಗಳನ್ನು ಹೆಚ್ಚಿಸಿ,ಸರಳೀಕೃತ ವ್ಯವಸ್ಥೆಯನ್ನು ಪರಿಚಯಿಸಲಾಗುವುದು.ಇದರಿಂದ ಸೋಂಕಿನ ಹಾವಳಿ ಮಧ್ಯೆಯೂಪ್ರಯಾಣಿಕರ ಸಂಖ್ಯೆ ಬರುವ ತಿಂಗಳಲ್ಲಿ ದುಪ್ಪಟ್ಟಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೆಟ್ರೋ ಪುನಾರಂಭಕ್ಕೆ ಒಂದು ತಿಂಗಳುಪೂರ್ಣಗೊಂಡ ಹಿನ್ನೆಲೆಯಲ್ಲಿ “ಉದಯವಾಣಿ’ಗೆಚುಟುಕು ಸಂದರ್ಶನ ನೀಡಿದ ಅವರು, ಪ್ರಸ್ತುತಮೆಟ್ರೋ ಸೇವೆ, ದೆಹಲಿ ಸೇರಿದಂತೆ ಉಳಿದ ಮೆಟ್ರೋರೈಲು ಸೇವೆಗೂ ನಮ್ಮ ಮೆಟ್ರೋಗೂ ಇರುವ ವ್ಯತ್ಯಾಸ, ಪ್ರಯಾಣಿಕರನ್ನು ಆಕರ್ಷಿಸಲು ಇರುವ ಆಯ್ಕೆಗಳುಮತ್ತಿತರ ಅಂಶಗಳಕುರಿತು ಮಾತನಾಡಿದ್ದಾರೆ.
ಮೆಟ್ರೋ ಪುನಾರಂಭಗೊಂಡು ತಿಂಗಳುಕಳೆದಿದೆ. ಈ ಅವಧಿಯಲ್ಲಿನ ಸೇವೆ ತೃಪ್ತಿಕರವಾಗಿದೆಯೇ ?
ಈ ಮೊದಲು ಅಂದರೆ ಕೋವಿಡ್ ಹಾವಳಿ ಪೂರ್ವದಲ್ಲಿ ನಿತ್ಯ ಪ್ರಯಾಣಿಕರ ಸಂಖ್ಯೆ4ಲಕ್ಷದಆಸುಪಾಸು ಇತ್ತು. ಈಗ ನಿತ್ಯ 50ಸಾವಿರ ಜನ ಪ್ರಯಾಣಿಸುತ್ತಿದ್ದಾರೆ. ಹಿಂದಿನಸ್ಥಿತಿಗೆ ಹೋಲಿಸಿದರೆ, ಇದು ತುಂಬಾ ಕಡಿಮೆಯೇ. ಆದರೆ, ಈ ಸ್ಥಿತಿ ಕೇವಲ “ನಮ್ಮ ಮೆಟ್ರೋ’ಗೆ ಸೀಮಿತವಾಗಿಲ್ಲ. ಎಲ್ಲರೂ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಮೊದಲ ವಾರಕ್ಕೆ ಹೋಲಿಸಿದರೆ, ಈಗಿನ ಸ್ಥಿತಿ ಸಾಕಷ್ಟು ಉತ್ತಮ. ಬರುವ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಲಕ್ಷಕ್ಕೆ ಏರಿಕೆಯಾಗಲಿದೆ.
ಕೋವಿಡ್ ಹಾವಳಿ ತೀವ್ರವಾಗುತ್ತಿರುವ ಸಂದರ್ಭ ದಲ್ಲಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟುಗೊಳಿಸುವು ದಾಗಿ ಹೇಳುತ್ತಿದ್ದೀರಾ. ಇದು ಹೇಗೆ ಸಾಧ್ಯ? ಸಾಮಾ ಜಿಕ ಅಂತರ ಹೇಗೆ ನಿರ್ವಹಣೆ ಮಾಡುತ್ತೀರಾ?
ಪೇಮೆಂಟ್ ಸೌಲಭ್ಯ ಸುಲಭಗೊಳಿಸಿ, ಆಯ್ಕೆಗಳನ್ನುಹೆಚ್ಚಿಸಲಾಗುವುದು. ಸದ್ಯ ಮೆಟ್ರೋ ಆ್ಯಪ್ ಮತ್ತುಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್‌ಮೂಲಕ ರಿಚಾರ್ಜ್ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ ಗೂಗಲ್ ಪೇ, ಪೇಟಿಎಂ ಸೇರಿದಂತೆ ಮತ್ತಿತರ ಪೇಮೆಂಟ್ ಆ್ಯಪ್‌ಗ್ಳನ್ನೂ ಸೇರಿಸಲಾಗುವುದು. ಇದರಿಂದ ಹೆಚ್ಚು ಜನರಿಗೆ ಅನುಕೂಲವಾಗಿ ಮೆಟ್ರೋಕಡೆ ಮುಖಮಾಡಲಿದ್ದಾರೆ. ಇನ್ನುಕೊರೊನಾ ವೈರಸ್ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಿತ್ಯ ಒಂದು ಲಕ್ಷದವರೆಗೆ ಪ್ರಯಾಣಿಸಿದರೂ ಸಾಮಾಜಿಕ ಅಂತರಕ್ಕೆ ಯಾವುದೇ ಸಮಸ್ಯೆ ಆಗುವುದಿಲ.
ಟೋಕನ್ ವ್ಯವಸ್ಥೆಯನ್ನೂ ಪರಿಚಯಿಸುವ ಚಿಂತನೆ ಇದೆಯೇ?
ಸದ್ಯಕ್ಕಂತೂ ಈ ಆಲೋಚನೆ ಇಲ್ಲ. ಸೋಂಕಿನ ಹಾವಳಿ ತಗ್ಗಿದ ನಂತರಈ ಬಗ್ಗೆಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು.
ದೆಹಲಿ, ಹೈದರಾಬಾದ್, ಚೆನ್ನೈ ಮೆಟ್ರೋಗಳಿಗೆ ಹೋಲಿಸಿದರೆ, “ನಮ್ಮ ಮೆಟ್ರೋ’ ಪ್ರದರ್ಶನ ಉತ್ತಮವೇ?
ದೆಹಲಿ 35-400 ಕಿ.ಮೀ. ಉದ್ದದ ಮಾರ್ಗ ಹೊಂದಿದ್ದು,11-12 ಲಕ್ಷ ಪ್ರಯಾಣಿಕರು ಅಲ್ಲಿ ನಿತ್ಯ ಸಂಚರಿಸುತ್ತಾರೆ. ಹೈದರಾಬಾದ್ 70 ಕಿ.ಮೀ. ಇದೆ. ಆದರೆ, ಅಲ್ಲಿ ಪ್ರಯಾಣಿಸುತ್ತಿರುವವರ ಸಂಖ್ಯೆ 75ರಿಂದ 80 ಸಾವಿರ. ನಮ್ಮ ಮೆಟ್ರೋ ಜಾಲ 42 ಕಿ.ಮೀ. ಇದ್ದು, ಇಲ್ಲಿ 50 ಸಾವಿರ ಜನ ಪ್ರಯಾಣಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನೋಡಿದಾಗ, ದೆಹಲಿಯಷ್ಟೇ ಉತ್ತಮ ಪ್ರದರ್ಶನ ನಮ್ಮದು ಎನ್ನಬಹುದು
ಹೈದರಾಬಾದ್‌ಮೆಟ್ರೋನಿಗಮವುಸಂಕಷ್ಟದಿಂದ ಹೊರಬರಲು ಸರ್ಕಾರದ ಹಣಕಾಸಿನ ನೆರವು ಕೇಳುತ್ತಿದೆ. ಬಿಎಂಆರ್‌ಸಿಎಲ್‌ಗೂ ಈ ಚಿಂತನೆ ನಡೆಸಿದೆಯೇ?
ಈ ಸಮಯದಲ್ಲಿ ಹೋಲಿಕೆ ಪ್ರಶ್ನೆ ಬರುವುದಿಲ್ಲ. ಸೋಂಕಿಲ್ಲದೆ ಸುರಕ್ಷಿತವಾಗಿ ಜನರಿಗೆ ಸೇವೆ ಸಲ್ಲಿಸುವುದು ಮುಖ್ಯ. ನಮ್ಮ ಗುರಿ ಮತ್ತು ಆದ್ಯತೆ ಕೂಡ ಅದೇ ಆಗಿದೆ. ಲಾಭ-ನಷ್ಟದ ಲೆಕ್ಕಾಚಾರ ನಂತರದ ವಿಚಾರ
ಪ್ರಯಾಣಿಕರನ್ನು ಆಕರ್ಷಿಸಲು ಪ್ರಯಾಣ ದರ ಇಳಿಕೆ ಮಾಡುವ ಉದ್ದೇಶ ಇದೆಯೇ? ಪೂರಕವಾಗಿ ಉಪನಗರ ರೈಲು ಸೇವೆಗೆ ಮನವಿ ಮಾಡಬಹುದಾ?
– ಪ್ರಯಾಣಿಕರ ಸಂಖ್ಯೆ ಹೆಚ್ಚುವ ಉದ್ದೇಶ ನಮ್ಮದಲ್ಲ. ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆಸುರಕ್ಷಿತ ಮತ್ತು ಸುಲಭ ಸಾರಿಗೆ ಸೇವೆ ಸಿಗಲಿ ಎಂಬುದಾಗಿದೆ.ಇನ್ನುರೈಲಿಗೂಮತ್ತುಮೆಟ್ರೋಗೂಇಲ್ಲಿ ಸಂಬಂಧ ಇಲ್ಲ. ಯಾಕೆಂದರೆ, ಹಲವಾರುಕಂಪನಿಗಳು ವರ್ಕ್ ಫ್ರಾಂ ಹೋಂ ವ್ಯವಸ್ಥೆಯನ್ನು ಮುಂದುವರಿಸಿವೆ
ಪ್ರಯಾಣಿಕರಿಗಿಂತ ಹೆಚ್ಚು ದೂರುಗಳೇ ಹೆಚ್ಚು ಬರುತ್ತಿವೆ
ನಿರ್ದಿಷ್ಟ ದೂರುಗಳಿದ್ದರೆ, ಆ ಬಗ್ಗೆ ಗಮನಕ್ಕೆ ತರಬಹುದು. ನಿಗಮದ ಸಿಬ್ಬಂದಿ ಅವುಗಳನ್ನು ಅಟೆಂಡ್ ಮಾಡಿ ಬಗೆಹರಿಸುತ್ತಾರೆ. ಬಹುತೇಕಪ್ರಯಾಣಿಕರು ರಿಚಾರ್ಜ್ ಮಾಡಿಸಿಕೊಂಡ ತಕ್ಷಣ ಪ್ರಯಾಣಕ್ಕೆ ಸಜ್ಜಾಗುತ್ತಾರೆ.ಅಲ್ಲಿಕೆಲವು ಸಮಸ್ಯೆಗಳು ಎದುರಾಗುತ್ತಿವೆ. ಇದೇ ಕಾರಣಕ್ಕೆ ನಿಗಮವು”ರಿಚಾರ್ಜ್ ವಿಧಾನ’, “ನಮ್ಮ ಮೆಟ್ರೋ ಮತ್ತೆ ನಿಮ್ಮ ಸೇವೆಗೆ’ ಎನ್ನುವುದು ಸೇರಿದಂತೆಕೆಲವು ವೀಡಿಯೋ ತುಣುಕುಗಳನ್ನು ಸಿದ್ಧಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಲಾಗುತ್ತಿದೆ.
-ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.