ಮೆಟ್ರೋ ಬೋಗಿಗಳ ಪೂರೈಕೆಗೆ ಚೀನಾ ವಿಘ್ನ

Team Udayavani, Apr 7, 2020, 1:16 PM IST

ಮೆಟ್ರೋ ಬೋಗಿಗಳ ಪೂರೈಕೆಗೆ ಚೀನಾ ವಿಘ್ನ

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಮಾರ್ಗಗಳಿಗೆ ಅಗತ್ಯವಿರುವ ಬೋಗಿಗಳು ಮತ್ತು ಟನಲ್‌ ಬೋರಿಂಗ್‌ ಮಷಿನ್‌ (ಟಿಬಿಎಂ)ಗೆ ಬೇಕಾದ ಬಿಡಿಭಾಗಗಳು ಇವೆರಡೂ “ಕೋವಿಡ್ 19 ವೈರಸ್‌’ನ ಮೂಲ ಚೀನಾದಿಂದ ಬರಬೇಕಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ಪೂರೈಕೆಯಲ್ಲಿ ಕನಿಷ್ಠ ಮೂರ್‍ನಾಲ್ಕು ತಿಂಗಳು ವಿಳಂಬವಾಗಲಿದ್ದು, ಯೋಜನಾ ಪ್ರಗತಿ ಮೇಲೆ ಇದು ಪರಿಣಾಮ ಬೀರಲಿದೆ.

ಮೆಟ್ರೋ ಎರಡನೇ ಹಂತದ ವಿಸ್ತರಿಸಿದ ಮಾರ್ಗಗಳು ಮತ್ತು ಒಂದು ಹೊಸ ಮಾರ್ಗಕ್ಕೆ ಒಟ್ಟಾರೆ 36 ರೈಲು (216 ಬೋಗಿಗಳು)ಗಳನ್ನು ಪೂರೈಸುವ ಗುತ್ತಿಗೆಯನ್ನು ಚೀನಾ ಮೂಲದ ಕಂಪನಿಗೆ ನೀಡಲಾಗಿದೆ. ಈ ರೈಲುಗಳು ಮುಂದಿನ ವರ್ಷ ಅಕ್ಟೋಬರ್‌ -ನವೆಂಬರ್‌ನಿಂದ ಪೂರೈಕೆ ಆರಂಭವಾಗಲಿದೆ. ಆದರೆ, ಇದರ ತಯಾರಿಕೆ ಘಟಕ ಆಂಧ್ರ ಪ್ರದೇಶದ ಶ್ರೀಸಿಟಿಯಲ್ಲೇ ನಿರ್ಮಾಣ ಆಗಬೇಕು. ಹಾಗೂ ತಯಾರಿಕೆಗಾಗಿ ಉಪಯೋಗಿಸುವ ಬಿಡಿಭಾಗಗಳಲ್ಲಿ ಶೇ. 75ರಷ್ಟು “ಮೇಕ್‌ ಇನ್‌ ಇಂಡಿಯಾ’ ಆಗಿರಬೇಕು ಎಂಬ ಷರತ್ತು ಕೂಡ ಇದೆ. 36 ರೈಲುಗಳಲ್ಲಿ ಮೊದಲ ಹಂತದಲ್ಲಿ ನಾಲ್ಕು ರೈಲುಗಳು ಹಾಗೂ ಅನಿವಾರ್ಯ ಕಾರಣಗಳ ಹಿನ್ನೆಲೆಯಲ್ಲಿ ಅಬ್ಬಬ್ಟಾ ಎಂದರೆ ಒಂಬತ್ತು ರೈಲುಗಳನ್ನು ಚೀನಾದಿಂದಲೇ ಆಮದು ಮಾಡಿಕೊಳ್ಳಲು ಅವಕಾಶ ಇದೆ. ಉಳಿದ 27 ರೈಲುಗಳನ್ನು ಕಡ್ಡಾಯವಾಗಿ ಸ್ಥಳೀಯವಾಗಿಯೇ ತಯಾರಾಗಬೇಕು. ಇದಕ್ಕಾಗಿ 70 ಎಕರೆ ಭೂಮಿಯನ್ನು ಚೀನಾದ ಸಿಆರ್‌ಆರ್‌ಸಿ ನಂಜಿಂಗ್‌ ಪುಝೆನ್‌ ಕೊ-ಲಿ., ಕಂಪನಿಗೆ ನೀಡಲಾಗುತ್ತಿದೆ. ಘಟಕಕ್ಕಾಗಿ ನುರಿತ ತಜ್ಞರ ತಂಡ ಸಿದ್ಧಪಡಿಸಲಾಗುತ್ತಿದೆ. ಆ ತಂಡವು ಇಲ್ಲಿಗೆ ಬರಲು ವೀಸಾ ಸಿಗಬೇಕು. ಅಲ್ಲದೆ, ಶೇ. 75ರಷ್ಟು ಬಿಡಿ ಭಾಗಗಳ ಪೂರೈಕೆಗೆ ಇಲ್ಲಿನ ಕಂಪನಿಗಳು ಕೂಡ ಸಜ್ಜಾಗಿರಬೇಕಾಗುತ್ತದೆ. ಕೋವಿಡ್ 19 ವೈರಸ್‌ ಹಾವಳಿ ನಂತರ ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು, ಕಾರ್ಯಾರಂಭವಾಗಲು ಸಮಯ ಹಿಡಿಯುತ್ತದೆ.

ಸದ್ಯಕ್ಕೆ ಸಮಸ್ಯೆ ಆಗದು: 36 ರೈಲುಗಳ ಪೈಕಿ 21 ರೈಲುಗಳು ವಿಸ್ತರಿಸಿದ ಮಾರ್ಗ ಅದರಲ್ಲೂ ವಿಶೇಷವಾಗಿ ಬೈಯಪ್ಪನಹಳ್ಳಿ-ವೈಟ್‌ ಫೀಲ್ಡ್‌ ಹಾಗೂ ನಾಗಸಂದ್ರ- ಬೆಂಗಳೂರು ಅಂತಾರಾಷ್ಟ್ರೀಯ ವಸ್ತು  ಪ್ರದರ್ಶನ ಕೇಂದ್ರ (ಬಿಐಇಸಿ) ಮಾರ್ಗಗಳ ನಡುವೆ ಕಾರ್ಯಾಚರಣೆ ಮಾಡಲಿವೆ. ಉಳಿದ 15 ರೈಲುಗಳು ಆರ್‌.ವಿ. ರಸ್ತೆ-ಎಲೆಕ್ಟ್ರಾನಿಕ್‌ ಸಿಟಿ-ಬೊಮ್ಮಸಂದ್ರ ನಡುವೆ ಬಳಕೆ ಆಗಲಿವೆ. ಹಾಗಾಗಿ, ವರ್ಷಾಂತ್ಯಕ್ಕೆ ಲೋಕಾರ್ಪಣೆ ಆಗಲಿರುವ ಕನಕಪುರ ರಸ್ತೆ ಮತ್ತು ಕೆಂಗೇರಿ ಮಾರ್ಗಗಳಲ್ಲಿ ಯಾವುದೇ ಸಮಸ್ಯೆ ಆಗದು ಎಂದು ನಿಗಮದ ಹೆಸರು ಹೇಳಲಿಚ್ಛಿಸದ ಎಂಜಿನಿಯರೊಬ್ಬರು ತಿಳಿಸಿದರು.  ಆದರೆ, ಈಗಿರುವ ರೈಲುಗಳೇ ವಿಸ್ತರಿಸಿದ ಮಾರ್ಗ ತಲುಪಿ ಬರಬೇಕಾದರೆ, ಹೆಚ್ಚು ಸಮಯ ಹಿಡಿಯುತ್ತದೆ. ಆಗ, ಫ್ರಿಕ್ವೆನ್ಸಿ (ರೈಲುಗಳ ನಡುವಿನ ಅಂತರದ ಸಮಯ) ಕಡಿಮೆ ಮಾಡಬೇಕಾಗುತ್ತದೆ. ಇದರಿಂದ ದಟ್ಟಣೆ ಹೆಚ್ಚಾಗಿ, ಪ್ರಯಾಣಿಕರು ಪರದಾಡುತ್ತಾರೆ.

ಸುರಂಗ ಕಾರ್ಯವೂ ವಿಳಂಬ: ಚೀನಾದಿಂದ ಟಿಬಿಎಂಗಳು ಬಂದಿವೆ. ಆದರೆ, ಅದನ್ನು ನಿರ್ವಹಣೆ ಮಾಡುವ ಸಮರ್ಪಕ ತಂಡ ಚೀನಾದಿಂದ ಇನ್ನೂ ಬರಬೇಕಿದೆ. ಅಲ್ಲದೆ, ಹಲವು ಬಿಡಿಭಾಗಗಳು ಕೂಡ ಅದೇ ದೇಶದಿಂದ ಪೂರೈಕೆ ಆಗಬೇಕಾಗುತ್ತದೆ. ಈ ಮಧ್ಯೆ ಲಾಕ್‌ಡೌನ್‌ ಅವಧಿ ವಿಸ್ತರಣೆ ಮಾತುಗಳು ಕೇಳಿ ಬರುತ್ತಿವೆ. ಪರಿಣಾಮ ಸುರಂಗ ಕೊರೆಯುವ ಕಾರ್ಯವೂ ವಿಳಂಬವಾಗುವ ಸಾಧ್ಯತೆ ಇದೆ. ಈ ಹಿಂದೆ ನಿಗದಿಪಡಿಸಿದ್ದ ಗಡುವಿನ ಪ್ರಕಾರ ಕಳೆದ ಫೆಬ್ರವರಿಯಿಂದಲೇ ಕಾಮಗಾರಿ ಶುರು ಆಗಬೇಕಿತ್ತು.

ಮೂರು- ನಾಲ್ಕು ತಿಂಗಳು ವಿಳಂಬ :  ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲ ಬಂದರುಗಳು ಸ್ಥಗಿತಗೊಂಡಿದ್ದು, ಚೀನಾ ಸೇರಿದಂತೆ ಯಾವುದೇ ಹಡಗುಗಳಿಗೆ ಅವಕಾಶ ನೀಡುತ್ತಿಲ್ಲ. ಜತೆಗೆ ವಿದೇಶಗಳಿಂದ ಬರುವವರಿಗೆ ವೀಸಾ ಕೂಡ ನಿರ್ಬಂಧಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಯೋಜನೆಯಲ್ಲಿ ಕನಿಷ್ಠ ಮೂರ್‍ನಾಲ್ಕು ತಿಂಗಳು ವಿಳಂಬವಾಗುವ ಸಾಧ್ಯತೆ ಇದೆ. ಇದು ಎರಡನೇ ಹಂತದ ರೈಲು ಸೇವೆ ಮೇಲೆ ಪರಿಣಾಮ ಬೀರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಮೂಲಗಳು ತಿಳಿಸಿವೆ.

2021ರ ಜನವರಿ ಒಳಗೆ ಘಟಕ ನಿರ್ಮಾಣ ಗುರಿ ಚೀನಾ ಮೂಲದ ಕಂಪನಿ ಮುಂದಿದೆ. ಕೋವಿಡ್ 19 ವೈರಸ್‌ ಹಿನ್ನೆಲೆಯಲ್ಲಿ ಆ ಪ್ರಗತಿಗೆ ತುಸು ಹಿನ್ನಡೆ ಆಗಿರಬಹುದು. ಆದರೆ, ನಮ್ಮಲ್ಲಿಯೂ ಕೆಲಸ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಅಲ್ಲಿಗೆ ಸರಿಹೋಗುತ್ತದೆ. ಹಾಗೊಂದು ವೇಳೆ ಈಗಿರುವ ಸ್ಥಿತಿ ಒಂದು ವೇಳೆ ಇನ್ನಷ್ಟು ದಿನ ಮುಂದುವರಿದರೆ, ಅದು ವಿಳಂಬದ ರೂಪದಲ್ಲಿ ಅದು ಪರಿಣಮಿಸುವ ಸಾಧ್ಯತೆ ಇದೆ. – ಅಜಯ್‌ ಸೇಠ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್‌

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.