Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Team Udayavani, Apr 29, 2024, 11:30 AM IST
ಬೆಂಗಳೂರು: ಒಂದೆಡೆ ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಗಳನ್ನು ದಾಟಲು ಕೋಟ್ಯಂತರ ರೂ.ನಲ್ಲಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸುತ್ತಿವೆ. ಮತ್ತೂಂದೆಡೆ ಇದ್ದ ಮಾರ್ಗಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಹಲವು ವರ್ಷಗಳಿಂದ ಬೀಗ ಹಾಕಿದೆ!
“ನಮ್ಮ ಮೆಟ್ರೋ’ ರೈಲಿನಲ್ಲಿ ಇಳಿಯುವ, ಹತ್ತುವ ಪ್ರಯಾಣಿಕರಿಗೆ ರಸ್ತೆ ದಾಟುವ ಜಂಜಾಟ ಇರದಿರಲಿ ಎಂಬ ಕಾರಣಕ್ಕೆ ನಿರ್ಮಾ ಣ ಸಂದರ್ಭದಲ್ಲೇ ಹಲವು ಮೆಟ್ರೋ ನಿಲ್ದಾಣ ಗಳಲ್ಲಿ ಎರಡಕ್ಕಿಂತ ಹೆಚ್ಚು ಪ್ರವೇಶ ದ್ವಾರಗಳನ್ನು ರೂಪಿಸಲಾಗಿದೆ. ವಿಶೇಷವಾಗಿ ನಗರದ ಹೃದಯಭಾಗದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಆದರೆ, ಅವುಗಳ ಬಳಕೆಗೆ ಮಾತ್ರ ಅವಕಾಶ ಕಲ್ಪಿಸಿಲ್ಲ. ಉದ್ಘಾಟನೆಗೊಂಡ ಮರುದಿನದಿಂದಲೂ ಈ ಆಗಮನ – ನಿರ್ಗ ಮನ ದ್ವಾರಗಳು ತೆರೆದೇ ಇಲ್ಲ. ಹಾಗಾಗಿ, ಲೆಕಕ್ಕುಂಟು ಉಪಯೋಗಕ್ಕಿಲ್ಲ ಎನ್ನುವಂತಾಗಿದೆ.
ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದಲ್ಲಿ ಶಾಂತಲಾ ಸಿಲ್ಕ್ ಬಳಿ, ಸರ್ ಎಂ.ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣದಲ್ಲಿ, ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ಪಕ್ಕ, ಕಬ್ಬನ್ ಉದ್ಯಾನ ನಿಲ್ದಾಣ ದಲ್ಲಿ, ಎಚ್‌ಎಎಲ್ ಕಚೇರಿ ಮುಂಭಾಗ ಮತ್ತು ಪಕ್ಕದಲ್ಲಿ, ಕೆ.ಆರ್. ಮಾರು ಕಟ್ಟೆ ಹೀಗೆ ಹಲವು ರಸ್ತೆ ಕೆಳಗೆ ಅಂದರೆ ಸುರಂಗ ಮಾರ್ಗ ನಿರ್ಮಿಸಿ, ಪ್ರಯಾಣಿಕರು ರಸ್ತೆಗಳನ್ನು ದಾಟಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಕಾಲ ಕಾಲಕ್ಕೆ ಅವು ಗಳನ್ನು ಲೋಕಾರ್ಪಣೆ ಕೂಡ ಮಾಡಲಾಗಿದೆ. ಆದರೆ, ದಶಕ ಕಳೆದರೂ ಪ್ರಯಾಣಿಕರ ಬಳಕೆಗೆ ಮುಕ್ತಗೊಳಿಸಿಲ್ಲ.
ಆರ್ಥಿಕ ಮಿತವ್ಯಯ ಕಾರಣ?: ಸುರಂಗ ಮಾರ್ಗ ಗಳಲ್ಲಿ ದೂರದೃಷ್ಟಿಯಿಂದ ಬಿಎಂ ಆರ್‌ಸಿಎಲ್ 4 ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಿಸಿದೆ. ಈ ಪೈಕಿ 2 ಮಾತ್ರ ಬಳಕ ೆಗೆ ಮುಕ್ತಗೊಳಿಸಲಾಗಿದೆ. ಉಳಿದ ಒಂದು ಅಥವಾ ಎರಡು ದ್ವಾರಗಳನ್ನು ಆರ್ಥಿಕ ಮಿತವ್ಯಯ ದೃಷ್ಟಿಯಿಂದ ಮುಚ್ಚಲಾಗಿದೆ. ತಲಾ ಒಂದೊಂದು ದ್ವಾರಗಳಲ್ಲಿ ದಿನಕ್ಕೆ ಕನಿಷ್ಠ 10-12 ಜನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕಾಗುತ್ತದೆ. ಎಸ್ಕಲೇಟರ್, ಮೆಟಲ್ ಡಿಟೆಕ್ಟರ್, ಸ್ವತ್ಛತೆ ಕಾಯ್ದುಕೊಳ್ಳುವುದು, ಹವಾನಿಯಂತ್ರಣ ವ್ಯವಸ್ಥೆ ಸೇರಿ ನಿರ್ವಹಣಾ ವೆಚ್ಚ ಕೂಡ ಇರುತ್ತದೆ. ತಿಂಗಳಿಗೆ ಕನಿಷ್ಠ 8-10 ಲಕ್ಷ ರೂ. ಖರ್ಚಾ ಗಲಿದೆ. ಏಳೆಂಟು ದ್ವಾರಗಳಿಗೆ ಲೆಕ್ಕ ಹಾಕಿದರೂ ಮಾಸಿಕ ಅಂದಾಜು 40 ಲಕ್ಷಕ್ಕೂ ಅಧಿಕ ಖರ್ಚಾಗುತ್ತದೆ. ಈ ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನಿಗಮವು ಈ ಪ್ರವೇಶ ದ್ವಾರಗಳಿಗೆ ಷಟರ್ಸ್ ಎಳೆದಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿ ಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
“ವಾಹನದಟ್ಟಣೆ ಸಂದರ್ಭದಲ್ಲಿ ಅಂದರೆ ಬೆಳಗ್ಗೆ, ಸಂಜೆ ಅಲೆಗಳಂತೆ ನುಗ್ಗಿಬರುವ ವಾಹನ ಗಳಿಂದ ತಪ್ಪಿಸಿಕೊಂಡು ರಸ್ತೆಗಳನ್ನು ದಾಟು ವುದೇ ಒಂದು ಸಾಹಸ. ಮಹಿಳೆಯರು, ಮಕ್ಕಳು, ವೃದ್ಧರಂತೂ ಕೈಯಲ್ಲಿ ಜೀವ ಹಿಡಿದುಕೊಂಡು ಹೋಗುವಂತಹ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಬಾಗಿಲು ಹಾಕಿರುವ ಪ್ರವೇಶ ದ್ವಾರಗಳನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಬೇಕು. ಕೊನೆಪಕ್ಷ ನಿರ್ದಿಷ್ಟ ಅವಧಿಗಾದರೂ ಈ ಸೇವೆಗಳನ್ನು ಕಲ್ಪಿಸಬೇಕು’ ಎಂದು ಪ್ರಯಾಣಿಕ, ವಿಜಯನಗರ ನಿವಾಸಿ ಎಚ್.ವಿನಯ್‌ಕುಮಾರ್ ಒತ್ತಾಯಿಸುತ್ತಾರೆ.
“ಬೆಂಗಳೂರಿನಂತ ನಗರದಲ್ಲಿ ಇಂಚು ಭೂಮಿಗೆ ಚಿನ್ನದ ಬೆಲೆ ಇದೆ. ಇಲ್ಲಿ ನೋಡಿದರೆ, ಕೋಟ್ಯಂತರ ರೂ. ಸುರಿದು ನಿರ್ಮಿ ಸಲಾದ ಸುರಂಗ ಮಾರ್ಗ, ದ್ವಾರ ಗಳನ್ನು 8-10 ವರ್ಷಗಳಿಂದ ಉಪ ಯೋಗಿ ಸು ತ್ತಿಲ್ಲ. ಹಾಗಿದ್ದರೆ, ನಿರ್ಮಿಸಿ ದ್ದಾ ದರೂ ಏಕೆ? ಭೂತ ಬಂಗಲೆಗಳಂತೆ ಅವುಗಳು ಈಗ ಗೋಚರಿಸುತ್ತಿವೆಂದು ಪ್ರಯಾಣಿಕ, ರಾಜಾಜಿ ನಗರ ನಿವಾಸಿ ನವೀನ್ ಹೇಳುತ್ತಾರೆ.
ಅಗತ್ಯ ಅನಿಸಿದರೆ ನಾಳೆಯೇ ಸೇವೆಗೆ: “ಜನ ರಿಗೆ ಅವಶ್ಯಕತೆ ಇದೆ ಎಂದು ಕಂಡು ಬಂದರೆ ತಕ್ಷಣ ಸೇವೆಗೆ ಮುಕ್ತಗೊಳಿಸಲಾ ಗುವುದು. ಆದರೆ, ಒತ್ತಡಕ್ಕೆ ಅನುಗುಣವಾಗಿ ಅವುಗಳನ್ನು ಬಳಕೆ ಮಾಡಬೇಕಾಗುತ್ತದೆ. ಇಲ್ಲ ದಿದ್ದರೆ, ಅನಗತ್ಯ ಖರ್ಚು-ವೆಚ್ಚ ಆಗುತ್ತದೆ. ಅಷ್ಟಕ್ಕೂ ಇವತ್ತಿಗೇ ಅಂತ ನಾವು ಆ ವ್ಯವಸ್ಥೆ ಮಾಡಿಕೊಂಡಿರುವುದಿಲ್ಲ. ಭವಿಷ್ಯದ ದೃಷ್ಟಿ ಯಿಂದ ರೂಪಿಸಲಾಗಿರುತ್ತದೆ. ಪ್ರಯಾಣಿಕರ ದಟ್ಟಣೆ ಹೆಚ್ಚಾದರೆ, ಹಂತವಾಗಿ ಈ ದ್ವಾರ ಗಳ ತೆರೆಯಲಾಗುವುದು. ನಿರ್ದಿಷ್ಟ ಅವಧಿಗಷ್ಟೇ ತೆರೆಯಲು ಅಭ್ಯಂತರವಿಲ್ಲ ಎಂದು ಬಿಎಂ ಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪ ರ್ಕಾಧಿಕಾರಿ ಯಶವಂತ್ ಸ್ಪಷ್ಟಪಡಿಸುತ್ತಾರೆ.
ಎಲ್ಲೆಲ್ಲಿ ಮುಕ್ತಗೊಳಿಸಿಲ್ಲ? :
ಕಬ್ಬನ್ ಉದ್ಯಾನ, ಸರ್ ಎಂ.ವಿಶ್ವೇಶ್ವ ರಯ್ಯ, ಮೆಜೆಸ್ಟಿಕ್, ಸಿಟಿ ರೈಲ್ವೆ ಸ್ಟೇಷನ್, ಕೆ.ಆರ್.ಮಾರುಕಟ್ಟೆ, ಟ್ರಿನಿಟಿ ಒಳ ಗೊಂಡಂತೆ ಹಲವು ಮೆಟ್ರೋ ನಿಲ್ದಾಣ ಗಳಲ್ಲಿ ನಿರ್ಮಿಸಲಾದ ಪ್ರವೇಶ ದ್ವಾರ ಗಳ ಉಪಯೋಗ ಆಗುತ್ತಿಲ್ಲ. ಸಿಟಿ ರೈಲು ನಿಲ್ದಾಣದ ಒಂದು ಭಾಗದ ದ್ವಾರವನ್ನು ಈಚೆಗಷ್ಟೇ ಸೇವೆಗೆ ಮುಕ್ತಗೊಳಿಸಲಾಗಿದೆ. ಮತ್ತೂಂದು ಭಾಗ ಇನ್ನೂ ಹಾಗೇ ಇದೆ.
– ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.