ಕೆಎಂಎಫ್‌ನಿಂದ “ನಂದಿನಿ ಸಿಹಿ ಉತ್ಸವ’
Team Udayavani, Dec 22, 2018, 6:00 AM IST
ಬೆಂಗಳೂರು: ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಪ್ರಯುಕ್ತ ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್) ಡಿ.21 ರಿಂದ ಜ.9 ರವರೆಗಿನ 20 ದಿನಗಳು ರಾಜ್ಯಾದ್ಯಂತ “ನಂದಿನಿ ಸಿಹಿ ಉತ್ಸವ”ವನ್ನು ಹಮ್ಮಿಕೊಂಡಿದೆ. ಸಿಹಿ ತಿನಿಸುಗಳ ವಿನಿಮಯ ಮಾಡಿಕೊಳ್ಳುವ ಮೂಲಕ ಕ್ರಿಸ್‌ಮಸ್ ಹಾಗೂ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಕೆಎಂಎಫ್ ಈ ಉತ್ಸವವನ್ನು ಆಯೋಜಿಸಿದೆ.
ಶುಕ್ರವಾರ ಬೆಂಗಳೂರಿನ ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್‌ನಲ್ಲಿರುವ ನಂದಿನಿ ಪಾರ್ಲರ್‌ನಲ್ಲಿ ಕೆಎಂಎಫ್ ಮಾರುಕಟ್ಟೆ ನಿರ್ದೇಶಕ ಎಂ.ಟಿ. ಕುಲಕರ್ಣಿ ಅವರು ನಂದಿನಿ ಸಿಹಿ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದರು. ಈ ಉತ್ಸವದಲ್ಲಿ ಮೈಸೂರು ಪಾಕ್, ನಂದಿನಿ ಪೇಡ, ಧಾರವಾಡ ಪೇಡ, ಕೇಸರ್ ಪೇಡ, ಏಲಕ್ಕಿ ಪೇಡ, ಬಾದಾಮ್ ಬರ್ಫಿ, ಕ್ಯಾಶು ಬರ್ಫಿ, ಡ್ರೈಪ್ರೂರ್ಟ್ಸ್ ಬರ್ಫಿ, ಕೊಕೋನಟ್ ಬರ್ಫಿ, ಚಾಕೋಲೆಟ್ ಬರ್ಫಿ, ಕುಂದಾ, ಜಾಮೂನ್, ರಸಗುಲ್ಲಾ ಇತ್ಯಾದಿ 20ಕ್ಕೂ ಹೆಚ್ಚು ಹಾಲಿನ ಸಿಹಿ ಉತ್ಪನ್ನಗಳು
ದೊರೆಯಲಿವೆ. ಬಹಳಷ್ಟು ಗ್ರಾಹಕರಲ್ಲಿ ನಂದಿನಿ ಎಂದರೆ ಕೇವಲ ಹಾಲು, ಮೊಸರು ಮಾತ್ರ ಎಂಬ ಭಾವನೆಯಿದೆ. ಅದನ್ನು ಈ ಉತ್ಸವ ಆಯೋಜಿಸುವ ಮೂಲಕ ಹೋಗಲಾಡಿಸುವ ಉದ್ದೇಶ ಹೊಂದಿದ್ದೇವೆ. ಅಲ್ಲದೆ, ಈ ಅವಧಿಯಲ್ಲಿ ಎಲ್ಲ ಸಿಹಿ ಉತ್ಪನ್ನಗಳ ಗರಿಷ್ಠ ಮಾರಾಟದ ಮೇಲೆ ಶೇ.10 ರಷ್ಟು ರಿಯಾಯಿತಿ ನೀಡಲಾಗುವುದು. ಈ ರಿಯಾಯಿತಿ ರಾಜ್ಯದ ಎಲ್ಲ ನಂದಿನಿ ಪಾರ್ಲರ್‌ಗಳು,
ಮಳಿಗೆಗಳು, ಕ್ಷೀರ ಕೇಂದ್ರಗಳು, ಸೂಪರ್ ಮಾರ್ಕೆಟ್ ಗಳಿಗೂ ಅನ್ವಯಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಆಡಳಿತ ವಿಭಾಗದ ನಿರ್ದೇಶಕ ಸುರೇಶ್‌ಕುಮಾರ್, ವಿತ್ತ ವಿಭಾಗದ ನಿರ್ದೇಶಕ ರಮೇಶ್ ಕನ್ನೂರು, ಮಾರುಕಟ್ಟೆ ಹೆಚ್ಚುವರಿ ನಿರ್ದೇಶಕ ರಘುನಂದನ್ ಹಾಗೂ ಕೆಎಂಎಫ್ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.