ಉಪಚುನಾವಣೆ ಪಂಚಾಂಗದಲ್ಲಿ ಪಂಚ ನಾಯಕರ ಭವಿಷ್ಯ!
Team Udayavani, Apr 8, 2017, 3:45 AM IST
ಮೊದಲೇ ಕಾವೇರಿದ ರಾಜ್ಯಕ್ಕೆ ರಾಜಕೀಯ ಬಿಸಿ ಹೆಚ್ಚಿಸಿದ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗೆ ಬಹಿರಂಗ ಪ್ರಚಾರ ಶುಕ್ರವಾರ ಅಂತ್ಯವಾ ಗಿದೆ. ಈಗ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿವೆ. ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿಗೆ ಅಗತ್ಯಕ್ಕಿಂತ ಹೆಚ್ಚೇ ಪ್ರತಿಷ್ಠೆಯಾಗಿಬಿಟ್ಟಿರುವ ಈ ಚುನಾವಣೆಯಲ್ಲಿ ಗೆಲ್ಲುವವರು ಮತ್ತು ಸೋಲುವವರು ಬರಿ ಅಭ್ಯರ್ಥಿಗಳಲ್ಲ. ಈ ಚುನಾವಣೆಯಲ್ಲಿ ತಮ್ಮನ್ನೇ ತಾವು ಮುಡಿಪಾಗಿಟ್ಟುಕೊಂಡು ಪ್ರತಿಷ್ಠೆಯನ್ನೇ ಅಡವಿಟ್ಟಿರುವ ಐವರು ರಾಜಕೀಯ ನಾಯಕರ ಗೆಲುವು ಸೋಲಿನ ಲೆಕ್ಕಾಚಾರವೂ ಇಲ್ಲಿದೆ. ಈ ಫಲಿತಾಂಶದ ಹಿಂದೆ ಯಾರ್ಯಾರ ರಾಜಕೀಯ ಭವಿಷ್ಯ ಅಡಗಿದೆ ಎಂಬ ವಿಶ್ಲೇಷಣೆ ಇಲ್ಲಿದೆ.
ಸಿದ್ದರಾಮಯ್ಯ
ಗೆದ್ದರೆ:
-ಪಕ್ಷದಲ್ಲಿ ಪ್ರಶ್ನಾತೀತ ನಾಯಕ
-ಮುಂದಿನ ಚುನಾ ವಣೆ ಯಲ್ಲಿ ಖಚಿತ ನಾಯಕತ್ವ
-ಅಭ್ಯರ್ಥಿಗಳ ಆಯ್ಕೆ ಯಲ್ಲಿ ಪ್ರಾಮುಖ್ಯತೆ
-ಸರ್ಕಾರಕ್ಕೆ ಜನಮನ್ನಣೆ ಇದೆ ಎನ್ನಲು ಸಾಧ್ಯ
-ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಅಧಿಕಾರ
ಸೋತರೆ:
-ಆಡಳಿತ ವಿರೋಧಿ ಅಲೆ ಸಾಬೀತು
-ಪಕ್ಷದೊಳಗೆ ಬಲ ಕುಸಿತ
-ಮುಂದಿನ ಚುನಾವಣೆ ಮೇಲೆ ಪರಿಣಾಮ
-ಅಹಿಂದ ವರ್ಗ ಪಕ್ಷದಿಂದ ದೂರವಾಗುತ್ತಿರುವ ಮುನ್ಸೂಚನೆ
ಯಡಿಯೂರಪ್ಪ
ಗೆದ್ದರೆ:
-ರಾಜ್ಯ ಬಿಜೆಪಿಯಲ್ಲಿ ಮತ್ತಷ್ಟು ಬಲವರ್ಧನೆ
-ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಇವರ ತೀರ್ಮಾನವೇ ಅಂತಿಮ
-ಚುನಾವಣೆ ಸಾರಥ್ಯಅಬಾಧಿತ
-ವಿರೋಧಿ ಬಣಕ್ಕೆ ತಿರುಗೇಟು
ಸೋತರೆ:
-ಪಕ್ಷದಲ್ಲಿ ಪ್ರಾಮುಖ್ಯತೆ ಕ್ಷೀಣಿಸಬಹುದು
-ವಿರೋಧಿ ಬಣಗಳ ಕೈ ಮೇಲಾಗಬಹುದು
-ಪ್ರತಿ ನಿರ್ಧಾರಕ್ಕೂ ಹೈಕಮಾಂಡ್ ಸಮ್ಮತಿ ಬೇಕಾಗಬಹುದು
-ಆರೆಸ್ಸೆಸ್, ಪಕ್ಷದ ಹಿಡಿತ ಇವರ ಮೇಲೆ ಹೆಚ್ಚಾಗಬಹುದು.
ಜಿ.ಪರಮೇಶ್ವರ
ಗೆದ್ದರೆ:
-ನಂಜನಗೂಡಿನಲ್ಲಿ ಅಗ್ನಿ ಪರೀಕ್ಷೆ ಎದುರಿಸಿ ಗೆದ್ದರೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಮುಂದುವರೆಸಲು ಒತ್ತಡ ಹಾಕ ಬ ಹುದು
-ದಲಿತ ನಾಯಕನೆಂದು ಹೇಳಲು ಪುಷ್ಟಿ
-ಸಿಎಂ ರೇಸ್‌ನಲ್ಲಿ ಮುಂಚೂಣಿಗೆ ಬರಲು ಅವಕಾಶ
-ಮುಂದೆ ಟಿಕೆಟ್ ಹಂಚಿಕೆಯಲ್ಲಿ ಪ್ರಮುಖ ಪಾತ್ರ.
ಸೋತರೆ:
-ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾವಣೆ ಖಚಿತ
-ಪ್ರಭಾವಿ ದಲಿತ ನಾಯಕನಲ್ಲ ಎಂಬ ಸಂದೇಶ ರವಾನೆ
ಡಿ.ಕೆ.ಶಿವಕುಮಾರ
ಗೆದ್ದರೆ:
-ಗುಂಡ್ಲುಪೇಟೆ ಜವಾಬ್ದಾರಿ ಹೊತ್ತಿರುವ ಇವರು ಅಲ್ಲಿ ಗೆದ್ದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹಾದಿ ಸುಗಮ
-ಚುನಾವಣೆಯಲ್ಲಿ ಪಕ್ಷ ಮುನ್ನಡೆಸಲು ಅವಕಾಶ
-ಕೃಷ್ಣ ನಿರ್ಗಮನದ ನಂತರ ಕಾಂಗ್ರೆಸ್‌ನಲ್ಲಿ ಒಕ್ಕಲಿಗ ನಾಯಕನೆಂದು ಬಿಂಬಿಸಿಕೊಳ್ಳಲು ಅವಕಾಶ
ಸೋತರೆ:
-ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೈ ತಪ್ಪಬಹುದು
– ನಾಯಕತ್ವ ನೀಡಲು ಹೈಕಮಾಂಡ್ ಹಿಂದೇಟು ಸಾಧ್ಯತೆ
-ಒಕ್ಕಲಿಗರ ವಿಶ್ವಾಸಗಳಿಸಲು ವಿಫಲ ಎಂಬ ಸಂದೇಶ ರವಾನೆ
ಶ್ರೀನಿವಾಸ್ ಪ್ರಸಾದ್
ಗೆದ್ದರೆ:
-ಸಚಿವ ಪದವಿ ಕಿತ್ತುಕೊಂಡ ಸಿಎಂ ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಂಡು ಬಿಜೆಪಿಯಲ್ಲಿ ಭದ್ರ ಬೇರು
-ಪ್ರಭಾವಿ ದಲಿತ, ರಾಷ್ಟ್ರೀಯ ನಾಯಕ ನೆಂದು ಹೊರಹೊಮ್ಮಬಹುದು
ಸೋತರೆ:
-ರಾಜಕೀಯ ಭವಿಷ್ಯವೇ ಅಂತ್ಯವಾಗಬಹುದು
-ಪಕ್ಷಾಂತರ ನಿರ್ಧಾರ ತಪ್ಪು ಎಂದು ಸಾಬೀತು
-ಬಿಜೆಪಿಯಲ್ಲಿ ಮೂಲೆಗುಂಪು ಸಾಧ್ಯತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲು-HDK ಎ1
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.