ನರೇಗಾ ಕೂಲಿಗಿಂತ ಕಡಿಮೆ ವೇತನ: ಸರ್ಕಾರಿ ಶಾಲೆ ಅತಿಥಿ ಶಿಕ್ಷಕರು


Team Udayavani, Dec 14, 2021, 11:14 AM IST

school teaching

Representative Image used

ಬೆಂಗಳೂರು: ರಾಜ್ಯದಲ್ಲಿ ನರೇಗಾ ಕೂಲಿಗಿಂತಲೂ ಕಡಿಮೆ ವೇತನಕ್ಕೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿ ಅತಿಥಿ ಶಿಕ್ಷಕರದ್ದಾಗಿದೆ. ಒಂದು ಲೆಕ್ಕದಲ್ಲಿ ಪದವಿ, ಬಿ.ಇಡಿ ಪದವಿ ಪಡೆದು ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವುದಕ್ಕಿಂತ ಯಾವುದೇ ಖರ್ಚು ವೆಚ್ಚವಿಲ್ಲದೆ, ಕೂಲಿ ಮಾಡಿ ಜೀವನ ಮಾಡುವ ನರೇಗಾದಲ್ಲಿ ಕೆಲಸ ಮಾಡು ವವರ ಜೀವನವೇ ಲೇಸು ಎಂಬಂತಾಗಿದೆ ಅತಿಥಿ ಶಿಕ್ಷಕರ ಜೀವನ.

ಶಿಕ್ಷಕರಾಗಿ ಬೋಧನೆ ಮಾಡಲು ಪ್ರತಿ ದಿನ ಸಿದ್ಧತೆ ನಡೆಸ ಬೇಕು. ಆದರೆ, ನರೇಗಾ ಕೂಲಿಗೆ ಯಾವುದೇ ಸಿದ್ಧತೆ ಇಲ್ಲದೆ, ಕೆಲಸ ಮಾಡುವುದಕ್ಕೂ ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ಸರ್ಕಾರ ತೂಗು ವಂತಾಗಿದೆ ಎಂದು ಅತಿಥಿ ಶಿಕ್ಷಕರ ಅಳಲಾಗಿದೆ. ರಾಜ್ಯದಲ್ಲಿ ಪ್ರಸ್ತುತ ನರೇಗಾ ಕೂಲಿ ದಿನವೊಂದಕ್ಕೆ 289 ರೂ.ಗಳನ್ನು ನೀಡಲಾಗುತ್ತಿದೆ. ಅದೇ ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಮಾಸಿಕ 7,500 ರೂ. ನಿಗದಿ ಮಾಡಿದ್ದಾರೆ.

ಅಂದರೆ, ದಿನವೊಂ ದಕ್ಕೆ 250 ರೂ. ಲೆಕ್ಕದಲ್ಲಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿ ಶಿಕ್ಷಕ ಆಕಾಂಕ್ಷಿಗಳಿಗೆ ಎದುರಾಗಿದೆ. ಇದು ಕನಿಷ್ಠ ವೇತ ನದ ಅರ್ಧದಷ್ಟು ಕೂಡ ಇಲ್ಲದಂತಾ ಗಿದೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರೂ ಸರ್ಕಾರ ಮಾತ್ರ ಅತಿಥಿ ಶಿಕ್ಷಕರನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ. ಕೇವಲ 7,500 ರೂ.ಗಳಿಗೆ ಕಾರ್ಯ ನಿರ್ವಹಿಸಿದರೆ, ಜೀವನ ನಿರ್ವಹಣೆ ಹೇಗೆ ಎಂಬುದೇ ಶಿಕ್ಷಕರಿಗೆ ಎದುರಾಗುವ ಬಹುದೊಡ್ಡ ಆತಂಕವಾಗಿದೆ ಎನ್ನುತ್ತಾರೆ ಅತಿಥಿ ಶಿಕ್ಷಕ ಕಾಂತರಾಜ್‌.

ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆ: ನಗರ ಪ್ರದೇಶದಲ್ಲಿರುವ ಶಿಕ್ಷಕರು ಅತಿಥಿ ಬೋಧನೆ ಜೊತೆಗೆ ಕನಿಷ್ಠಪಕ್ಷ ಮನೆಪಾಠ ಮಾಡಿಕೊಂಡು ಜೀವನ ನಿರ್ವಹಣೆ ಮಾಡಬಹುದು. ಆದರೆ, ಗ್ರಾಮೀಣ ಪ್ರದೇಶದ ಶಿಕ್ಷಕರನ್ನು ಶಿಕ್ಷಕ ವೃತ್ತಿಯನ್ನೇ ನಂಬಿಕೊಂಡು ಜೀವನ ಮಾಡುವುದು ಸಾಧ್ಯವಾಗುತ್ತಿಲ್ಲ.

ನನಗೆ ಇಬ್ಬರು ಮಕ್ಕಳು, ಹೆಂಡತಿ ಸೇರಿ ನಾಲ್ಕು ಜನ ಕುಟುಂಬದಲ್ಲಿದ್ದೇವೆ. ಕಳೆದ ಐದು ವರ್ಷಗಳಿಂದ ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. 2017-18ರಲ್ಲಿ ಐದು ಸಾವಿರ ಶಿಕ್ಷಕ ಹುದ್ದೆ ನೇಮಕಾತಿ ನಡೆದಿದ್ದ ವೇಳೆ ಕಡಿಮೆ ಅಂತರದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಯಲ್ಲಿ ಕೈತಪ್ಪಿತ್ತು.

ಇದೀಗ ಟಿಇಟಿ ಪಾಸ್‌ ಮಾಡಿಕೊಂಡಿದ್ದೇನೆ. ಆದರೆ, ಶಿಕ್ಷಕ ಹುದ್ದೆ ನೇಮಕಾತಿ ಪ್ರಕ್ರಿಯೆ ನಡೆಯದಿರುವುದರಿಂದ ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಜೀವನ ನಿರ್ವಹಣೆ ಕಷ್ಟವಾಗಿದೆ. ಇತ್ತ ವೃತ್ತಿ ಬಿಟ್ಟು ಬೇರೆ ಹುದ್ದೆಗೂ ಹೋಗುವಂತಿಲ್ಲ. ಇದೀಗ 15 ಸಾವಿರ ಶಿಕ್ಷಕ ಹುದ್ದೆ ನೇಮಕಾತಿ ಮಾಡುವುದಾಗಿ ಸರ್ಕಾರ ಹೇಳಿದೆ. ಈ ಅವಕಾಶದಲ್ಲಿ ಶಿಕ್ಷಕ ಹುದ್ದೆ ಸಿಗದಿದ್ದರೆ, ಬೇರೆ ಆಲೋಚನೆ ಮಾಡುತ್ತೇನೆ ಎನ್ನುತ್ತಾರೆ ತುಮಕೂರಿನ ಅತಿಥಿ ಶಿಕ್ಷಕ ಸುನೀಲ್‌.

ಅತಿಥಿ ಉಪನ್ಯಾಸಕರ ಬೇಡಿಕೆಗಳ ಅಧ್ಯಯನಕೆ ಸಮಿತಿ ರಚನೆ

ಬೆಂಗಳೂರು: ರಾಜ್ಯದಲ್ಲಿರುವ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಅಧ್ಯಯನ ನಡೆಸಿ, ವಿಸ್ತೃತ ವರದಿ ಸಲ್ಲಿಸಲು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಂಬಂಧ ಸೋಮವಾರ ಆದೇಶ ಹೊರಡಿಸಿದ್ದು,

ಇದರಲ್ಲಿ ಆರ್ಥಿಕ ಮತ್ತು ಕಾನೂನು ಇಲಾಖೆಯ ಕಾರ್ಯದರ್ಶಿಗಳು ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಸದಸ್ಯರಾಗಿರಲಿದ್ದಾರೆ. ಸಮಿತಿಯು ನಿಗದಿತ ಕಾಲಮಿತಿಯೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ.

ಇಂದು ಸಭೆ: ಜತೆಗೆ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳಿಂದ ಆಯ್ಕೆಯಾಗಿರುವ ವಿಧಾನ ಪರಿಷತ್‌ ಸದಸ್ಯರ ಸಭೆಯನ್ನು ಮಂಗಳವಾರ ಬೆಳಗಾವಿಯಲ್ಲಿ ಕರೆಯಲಾಗಿದೆ ಕನಿಷ್ಠ 15 ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಬೇರೆ ದಾರಿ ಇಲ್ಲದೆ, ಅತಿಥಿ ಶಿಕ್ಷಕರಾಗಿ ಬೋಧನೆ

ಕೊರೊನಾಗಿಂತ ಮೊದಲು ಖಾಸಗಿ ಶಾಲೆಯೊಂದರಲ್ಲಿ ಬೋಧನೆ ಮಾಡುತ್ತಿದ್ದೆ. ವೈಯಕ್ತಿಕ ಕಾರಣದಿಂದ ಬೇರೊಂದು ಶಾಲೆಗೆ ಹೋಗಲು ನಿರ್ಧರಿಸಿ, ಹಿಂದೆ ಬೋಧನೆ ಮಾಡುತ್ತಿದ್ದ ಶಾಲೆಯನ್ನು ಬಿಟ್ಟೆ. ಅದೇ ಸಮಯಕ್ಕೆ ಕೊರೊನಾ ಸೋಂಕು ಬಂದಿದ್ದರಿಂದ ಶಾಲೆಗಳು ಮುಚ್ಚಿದವು. ಹೊಸದಾಗಿ ಸೇರ್ಪಡೆಯಾಗಬೇಕಿರುವ ಶಾಲಾ ಆಡಳಿತ ಮಂಡಳಿಯು ಮುಂದಿನ ವರ್ಷದಿಂದ ಸೇರ್ಪಡೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಕೆಲಸವಿಲ್ಲದ ಕಾರಣ ಅನಿವಾರ್ಯವಾಗಿ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಬೋಧನೆ ಮಾಡಲು ಸೇರಿದ್ದೇನೆ. ಸರ್ಕಾರ ನೀಡುತ್ತಿರುವ 7,500 ವೇತನ ಯಾವುದಕ್ಕೂ ಸಾಲುತ್ತಿಲ್ಲ. ಏನು ಮಾಡುವುದೆಂಬ ದಾರಿ ತೋಚುತ್ತಿಲ್ಲ. ಕನಿಷ್ಠ 15 ಸಾವಿರ ರೂ.ಗಳಾದರೂ ನೀಡಿದರೆ, ಶಿಕ್ಷಕರಾಗಿ ಬೋಧನೆ ಮಾಡುವುದಕ್ಕೂ ಗೌರವ ಸಿಗುತ್ತದೆ ಎನ್ನುತ್ತಾರೆ ಅತಿಥಿ ಶಿಕ್ಷಕಿ ಶಿಲಾ

ಕನಿಷ್ಠ ವೇತನ ನೀಡಲು ಆಗ್ರಹ

ಅತಿಥಿ ಶಿಕ್ಷಕರಾಗಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಕಡಿಮೆ ವೇತನ ನೀಡಿ ಶಿಕ್ಷಣ ಸಂಸ್ಥೆಗಳು ಕೈತೊಳೆದುಕೊಳ್ಳುತ್ತಿವೆ. ಆದರೆ, 7ನೇ ವೇತನ ಆಯೋಗದ ಪ್ರಕಾರ ಕನಿಷ್ಠ ವೇತನ ದಿನವೊಂದಕ್ಕೆ 600 ರೂ. ನೀಡಬೇಕು. ಅದರಂತೆ ಕನಿಷ್ಠ 18 ಸಾವಿರ ರೂ. ನೀಡಬೇಕು. ಕೊನೇ ಪಕ್ಷ 15 ಸಾವಿರ ರೂ.ಗಳಾದರೂ ನೀಡಬೇಕು ಎನ್ನುತ್ತಾರೆ ಕಾರ್ಮಿಕ ಸಂಘಟನೆ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌. ವರಲಕ್ಷ್ಮೀ.

  • – ಎನ್‌.ಎಲ್‌. ಶಿವಮಾದು

ಟಾಪ್ ನ್ಯೂಸ್

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.