ದಾಹ ತಣಿಸಿದ ತೆರೆದ ಬಾವಿಗಳು
Team Udayavani, Jun 5, 2021, 1:59 PM IST
ಮಾನವನ ದೈನಂದಿನ ಬದುಕಿಗೆ ಅವಶ್ಯಕವಾಗಿ ಬೇಕಾಗುವಸೌಲಭ್ಯಗಳನ್ನು ಒದಗಿಸುವಲ್ಲಿ ಮಹತ್ವದ ಭೂಮಿಕೆ ಉದ್ಯೋಗಖಾತರಿ ಯೋಜನೆಯದು. ಮಾನವನಿಗೆ ಗಾಳಿ, ನೀರು, ಆಹಾರಇವೆಲ್ಲವೂ ಅತ್ಯಾವಶ್ಯಕವಾಗಿ ಬೇಕಾಗುವ ವಸ್ತುಗಳು. ಅದರಲ್ಲೂನೀರು ಎಂದಾಕ್ಷಣ ಗ್ರಾಮೀಣ ಜನರಲ್ಲಿ ಕಣ್ಣಮುಂದೆ ಬರುವುದುತೆರೆದ ಬಾವಿ.
ಇದು ಪ್ರತಿಯೊಂದು ಮನೆಗೂ ಕೂಡಅನಿವಾರ್ಯವಾಗಿವೆ. ಭೂಮಿಯ ಮೇಲಿನ ಜಲ ಮೂಲಗಳಲ್ಲಿತೆರೆದ ಬಾವಿಯು ಒಂದಾಗಿದೆ. ನರೇಗಾ ಯೋಜನೆಯಲ್ಲಿ ಅದೆಷ್ಟೊರೈತರು ತಮ್ಮ ಹೊಲ ಗಳಗಳಲ್ಲಿ ಅಲ್ಪ ಆಳದ ತೆರೆದ ಬಾವಿಗಳನ್ನುತೆಗೆದುಕೊಂಡು ಕೃಷಿ ಚಟುವಟಿಕೆಯನ್ನು ಮಾಡುತ್ತಿರುವಉದಾಹರಣೆಗಳು ಸಾಕಷ್ಟಿವೆ.
ಬಾವಿಗಳು ಎಂದಾಕ್ಷಣ ನೆನಪಾಗುತ್ತದೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ಜಿ.ಪಿ.ರಾಜರತ್ನಂ ಅವರ ಜೊತೆಗೂಡಿಕಾರಿನಲ್ಲಿ ಚಾರ್ಮುಡಿ ಘಾಟ್ ಮಾರ್ಗದ ಮೂಲಕ ಧರ್ಮಸ್ಥಳದಲಕ್ಷ ದೀಪೋತ್ಸವದ ಸರ್ವಧರ್ಮ ಸಮ್ಮೇಳನ ಅಧ್ಯಕ್ಷತೆ ವಹಿಸಲುಸಾಗುತ್ತಿರುವಾಗ ಮಾರ್ಗ ಮಧ್ಯೆ ಅವರಿಗೆ ಬಾಯಾರಿಕೆಯಾಗುತ್ತದೆ.ರಸ್ತೆಯ ಸಮೀಪದಲ್ಲಿ ಒಬ್ಬ ಬಾವಿಯಿಂದ ನೀರು ಸೇದುತ್ತಿದ್ದವನಲ್ಲಿಗೆತೆರಳಿ ಕುಡಿಯಲು ನೀರು ಕೇಳಿದರು.
ಆ ರೈತ ಮತ್ತೂಂದು ಕೊಡಪಾನನೀರು ಸೇದಿ ಬನ್ನಿ ಸ್ವಾಮಿ ನೀರು ಕುಡಿಯಿರಿ ಎಂದ. ಮಾಸ್ತಿಯವರುಬೊಗಸೆಯಲ್ಲಿ ನೀರು ಕುಡಿದರು. ಉಳಿದ ನೀರನ್ನು ಪಕ್ಕದಲ್ಲಿರುವ ತೊಟ್ಟಿಗೆಹಾಕಿದ ರೈತ. ಮಾಸ್ತಿಯವರು ಅವನಿಗೆ ಹಣ ಕೊಡಲು ಮುಂದಾದರು.ಆತ ಅದನ್ನು ನಿರಾಕರಿಸಿ, ಅಲ್ಲ ಸ್ವಾಮಿ, ನಾವು ಕುಡಿಯೋ ನೀರಿಗೆದುಡ್ಡಿಸ್ಕಂಡ್ರೆ ಆದೇವ್ರಂತ ವ್ಯಕ್ತಿಗೆ ಅನ್ಯಾಯ ಮಾಡಿದ ಹಾಗೆ ಎಂದ ಅದಕ್ಕೆ ಮಾಸ್ತಿಅವರು ಯಾರಪ್ಪ ಆ ದೇವ್ರಂಥ ವ್ಯಕ್ತಿ ಎಂದು ಕೇಳಿದರು. ಆಗ ಹಿಂದೆಬರಗಾಲ ಬಂದಿತ್ತು ಆಗ ಕುಡಿಯಲು ನೀರಿರಲಿಲ್ಲ. ನಮ್ಮಚಿಕ್ಕಮಂಗಳೂರಲ್ಲಿ ಒಬ್ರು ಡಿಸಿ ಇದ್ರು. ಊರ್ಗೆ ಬರ್ಗಾಲ ಬಂದೈತೆ ಅಂತಬಾವಿ ಬೇಕು ಅಂತ ಕೇಳಿದ್ವಿ ಅವರು ಅದಕ್ಕೆ ನೀವು ಮನುಷ್ಯರು ಏನುಬೇಕಾದರೂ ಕೇಳಬಹುದು ಬಾಯೈತೆ.
ಬಾವಿ ತೆಗೆಸಿ ಕೊಡ್ತೆನೆ. ಆದ್ರೆಪಕ್ಕದಲ್ಲಿ ಒಂದು ತೊಟ್ಟಿ ಮಾಡಿ ನೀವು ಒಂದು ಕೊಡಪಾನ ನೀರು ತೆಗೆದುಕೊಂಡರೆ ಅದಕ್ಕೆ ಒಂದು ಕೊಡಪಾನ ನೀರು ಹಾಕಿ. ಯಾಕೆಂದರೆ, ದನಕರು,ಪ್ರಾಣಿ ಪಕ್ಷಿಗಳಿಗೂ ನೀರು ಬೇಕಲ್ವ ಎಂದು ಕಂಡೀಷನ್ ಹಾಕಿ ಬಾವಿ ತೆಗೆಸಿಕೊಟ್ಟವ್ರೇ ಸ್ವಾಮಿ, ಅವರು ನಾಮ ಹಾಕ್ಕೊಳ್ಳೋರು ವಯಸ್ಸಾಗಿತ್ತು, ಮೂಡ್ಲದಿಕ್ಕಿನವ್ರು ಎಂದ ರೈತ. ಈ ರೈತ ನುಡಿಯುತ್ತಿರುವುದು ತನ್ನನ್ನೇ ಎಂದುಅವರಿಗೆ ಅರ್ಥ ಆಗಿತ್ತು.
ಆ ಸಮಯದಲ್ಲಿ ಚಿಕ್ಕಮಗಳೂರಿನ ಡಿಸಿ ಆಗಿನಿವೃತ್ತಿ ಹೊಂದಿದ್ದರು. ಮಾಸ್ತಿಯವರಿಗೆ ಆ ರೈತನ ಮುಗ್ಧತೆ, ಪ್ರಾಮಾಣಿಕತೆತುಂಬಾ ಸಂತೋಷವಾಯಿತು.ಇಂದಿಗೂ ಸಹ ರೈತರು ಯಾರಿಂದಲೂ ಪಡೆದಸಹಾಯ ಅಥವಾ ಅನುಕೂಲವನ್ನು ಎಂದಿಗೂ ಮರೆಯಲಾರರು ಈವಾಡಿಕೆ ಎಂದೂ ನಶಿಸಲಾರದು. ಇಲ್ಲಿ ಡಿಸಿ ರವರ ಪಾತ್ರದಲ್ಲಿಯೋಜನೆಯು ಇದ್ದು ಫಲಾನುಭವಿಗಳಾಗಿ ವಾಡಿಕೆಯಂತೆ ರೈತರೇಇರುವುದು ಪೂರಕವಾಗಿದೆ.
ಇಂತಹ ಎಷ್ಟೋ ರೈತರು ತಮ್ಮ ಜಮೀನುಗಳಲ್ಲಿವೈಯಕ್ತಿಕ ಬಾವಿಗಳನ್ನು ಯೋಜನೆಯಿಂದ ಪಡೆದುಕೊಂಡು ನೆಮ್ಮದಿಯ ಜೀವನವನ್ನು ನಡೆಸುತ್ತಿರುವುದು ಖುಷಿಯ ವಿಚಾರವಾಗಿದೆ.
ಗಂಗೆಯ ರೂಪವೆಂದು ಪೂರ್ಜಿಸಲ್ಪಡುವ ಬಾವಿಗಳು: ಜಿಲ್ಲೆಯಲ್ಲಿಕುಡಿಯುವ ನೀರಿಗೆ ರೈತರಿಗೆ ಯೋಜನೆಯಿಂದ ವರವಾಗಿದೊರೆತಿರುವುದು ಈ ವೈಯಕ್ತಿಕ ಬಾವಿಗಳು. ಇಲ್ಲಿ ಮಲೆನಾಡು, ಕಡಲತೀರ, ಬಯಲು ಸೀಮೆಗಳನ್ನು ಕಾಣುತ್ತೇವೆ. ಈ ಬಾವಿಗಳು ತಮ್ಮದೇ ಆದಸಂಬಂಧವನ್ನು ಗ್ರಾಮೀಣ ಜನರ ಬದುಕಿನಲ್ಲಿ ಇಟ್ಟುಕೊಂಡಿದೆ. ಇಲ್ಲಿಯಜನರು ಬಾವಿಯನ್ನು ಗಂಗೆಯೆಂದು ಪೂಜಿಸುವುದು ದೀಪಾವಳಿಯಹಬ್ಬದ ಸಂದರ್ಭದಲ್ಲಿ ಕಾಣುತ್ತೇವೆ.
ಯೋಜನೆಯ ಸಫಲತೆಗೆ ಪರಿಪೂರ್ಣವಾದ ಅನುಷ್ಠಾನ: ಜಿಲ್ಲೆಯಲ್ಲಿಪ್ರಮುಖವಾಗಿ ತೆರೆದ ಬಾವಿಗಳ ಅನುಷ್ಠಾನ ಅತ್ಯಂತ ಸಮರ್ಪಕವಾಗಿಸಾಗುತ್ತಿದೆ. ನೀರಿನ ಸೆಲೆಗಳು ದೊರೆತ ಬಾವಿಗಳೇ ಹೆಚ್ಚಾಗಿರುವುದರಿದರೈತನಿಗೆ ತನ್ನ ಬದುಕಿಗೆ ಅತ್ಯಾವಶ್ಯಕವಾಗಿರುವ ಸೌಕರ್ಯಗಳುಯೋಜನೆಯಿಂದ ಸುಲಭವಾಗಿ ದೊರೆತಿರುವುದು ಯೋಜನೆಯುಪಡೆದ ಫಲಶೃತಿಯಾಗಿದೆ.ಅಂಕೋಲಾ ತಾಲೂಕಿನಲ್ಲಿ ಹಿಂದಿನ ಸಾಲಿನಲ್ಲಿ 32 ತೆರೆದಬಾವಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ಎಲ್ಲವೂ ಅಂತಿಮಹಂತದಲ್ಲಿರುತ್ತವೆ.
ಪ್ರಸಕ್ತ ಸಾಲಿನಲ್ಲಿ 12 ತೆರೆದ ಬಾವಿಗಳುಪ್ರಗತಿಯಲ್ಲಿದ್ದು ಒಟ್ಟು 44 ಬಾವಿಗಳು ಗ್ರಾಮೀಣ ಜನರನೀರಡಿಕೆಯನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.ಸುಮಾರು 4400 ಮಾನವ ದಿನಗಳನ್ನು ತೆರೆದ ಬಾವಿಗಳನ್ನುನಿರ್ಮಿಸುವಲ್ಲಿ ಸೃಜಿಸಲಾಗಿದೆ. ತಾಲೂಕಿನಲ್ಲಿ ಸಾಮಾನ್ಯವಾಗಿಚಿರೆ ಕಲ್ಲುಗಳು ದೊರೆಯುವುದರಿಂದ ಅದನ್ನೆ ಬಳಸಿಕೊಂಡುಬಾವಿಗಳು ಕುಸಿಯದಂತೆ ನಿರ್ಮಾಣ ಮಾಡುವುದು ಸ್ಥಳೀಯರವಾಡಿಕೆಯಾಗಿರುತ್ತದೆ.
ಕಡಲ ತೀರದ ಗ್ರಾಮಗಳಲ್ಲಿಅಲ್ಪ ಆಳದ ಬಾವಿಗಳು ರೂಡಿಯಲ್ಲಿವೆ. ಕಾರಣ ಆಳಹೆಚ್ಚಾದಂತೆ ಉಪ್ಪು ನೀರಿನ ಪ್ರಭಾವ ಇರುವುದರಿಂದಆಳದ ಬಾವಿಗಳು ಕಾಣ ಸಿಗುವುದಿಲ್ಲ. ನರೇಗಾಯೋಜನೆಯಡಿ ತೆರೆದ ಬಾವಿಗಳಿಗೆ ಅವಕಾಶವಿರುವುದರಿಂದ ಯೋಜನೆಯ ಲಾಭ ರೈತರಿಗೆ ಸರಿಯಾಗಿದೊರೆಯುತ್ತಿದೆ.ಅಂಕೋಲಾ ತಾಲೂಕಿನ ಮೊರಳ್ಳಿ ಮಾರುತಿ ದಾಮೋದರ ನಾಯಕಇವರ ಜಮೀನಿನಲ್ಲಿ ಅಲ್ಪ ಆಳದ ಬಾವಿ ನಿರ್ಮಾಣ ಕಾಮಗಾರಿ.
ದ್ವೀ ಬೇಸಾಯ ಪದ್ಧತಿ ರೂಢಿ: ಅಂಕೋಲಾ ತಾಲೂಕಿನಲ್ಲಿ ಸಾಮಾನ್ಯವಾಗಿಭತ್ತ ಬೆಳೆಯುತ್ತಾರೆ. ನೀರಿನ ಬಾವಿಗಳು ಹೊಂದಿದ ರೈತರು ಭತ್ತ ಕೊಯ್ಲುಆದ ನಂತರ ಕಲ್ಲಂಗಡಿ, ನಾಟಿ ಈರುಳ್ಳಿ, ಶೇಂಗಾ, ವಿವಿಧ ತರಕಾರಿಗಳುಬೆಳೆಯಲು ಪ್ರಾರಂಭಿಸಿರುವುದು ಸಹ ಯೋಜನೆಯಿಂದ ಸಾಧ್ಯವಾಗಿದೆ.ನೀರಿನ ಕೊರತೆ ನೀಗಿಸಿದ ಮತ್ತು ಆದಾಯ ಹೆಚ್ಚಿಸಿದ ಕೀರ್ತಿಗೆಪಾತ್ರವಾಗಿದೆ ನರೇಗಾ ಯೋಜನೆ. ಅದೆಷ್ಟೋ ಕುಟುಂಬಗಳಿಗೆಬೆನ್ನೆಲುಬಾಗಿ ನಿಂತಿದೆ.
ಅಡಿಕೆಯತ್ತ ರೈತರ ಚಿತ್ತ: ತೆರೆದ ಬಾವಿಗಳಿಂದ ಸಮರ್ಪಕ ಮಟ್ಟದಲ್ಲಿನೀರು ದೊರೆತರೇ ಅಡಿಕೆ ತೋಟಗಳನ್ನು ಬೆಳೆಸುವಲ್ಲಿ ರೈತರುಮುಂದಾಗುತ್ತಿರುವುದು ಹಲವು ಉದಾಹರಣೆಗಳಿವೆ. ಅಡಿಕೆಯಲ್ಲಿಆದಾಯ ಹೆಚ್ಚಿರುವುದನ್ನು ಮನಗಂಡ ಗ್ರಾಮೀಣ ಜನರು ವಾಣಿಜ್ಯಬೆಳೆಗಳನ್ನು ಬೆಳೆಯುವಲ್ಲಿ ಗಮನ ಹರಿಸಿರುವುದು ಸಹ ಕಾಣುತ್ತಿದ್ದೇವೆ.ರೈತರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ದೇಶದ ಬೆನ್ನೆಲುಬು ಎಂದೆನಿಸಿಕೊಂಡವನ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ ಈ ಯೋಜನೆ.ಬಾಳೆ, ಗೇರು, ತೆಂಗು, ಮುರುಗಲ, ವೀಳ್ಯದ ಎಲೆ ಮುಂತಾದ ಬೆಳೆಗಳನ್ನುಬೆಳೆಯುವಲ್ಲಿ ಸಹಾಯವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್, 38 ಪ್ರಶ್ನೆ!
Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.