ಫೆ.8ರಿಂದ ರಾಷ್ಟ್ರೀಯ ತೋಟಗಾರಿಕಾ ಮೇಳ
Team Udayavani, Jan 10, 2021, 4:09 PM IST
ಟಿ.ದಾಸರಹಳ್ಳಿ: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಫೆ.8 ರಿಂದ 12ರವರೆಗೆ ನಡೆಯುವ ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ನೋಂದಾಯಿತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು ಎಂದು ಮೇಳದ ಅಧ್ಯಕ್ಷ ಹಾಗೂ ಐಐಎಚ್‌ಆರ್ ನಿರ್ದೇಶಕ ಎಂ.ಆರ್. ದಿನೇಶ್ ಹೇಳಿದರು.
ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ತೋಟ ಗಾರಿಕೆ ಮೇಳದ ಲೋಗೊ ಅನಾವರಣ ಗೊಳಿಸಿ ಜಾಲತಾಣಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ವರ್ಷ ದೇಶದ ಅತಿದೊಡ್ಡ ತೋಟಗಾರಿಕಾ ಮೇಳವಾಗಿದ್ದರೂ ಈ ಬಾರಿ ವಿಶಿಷ್ಟವಾಗಿರುತ್ತದೆ. ಕೋವಿಡ್ ಕಾರಣದಿಂದ ಮೇಳಕ್ಕೆ ಮುಕ್ತ ಪ್ರವೇಶವನ್ನು ನಿಬಂìಧಿಸಲಾಗುತ್ತಿದ್ದು, ಭೌತಿಕ ಮತ್ತು ವರ್ಚುವಲ್ ಸ್ವರೂಪಗಳಲ್ಲಿರುತ್ತದೆ. ಖುದ್ದಾಗಿ ಭೇಟಿ ನೀಡುವವರ ಸಂಖ್ಯೆಯನ್ನು 30 ಸಾವಿರಕ್ಕೆ ಮಿತಿಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಜನದಟ್ಟಣೆ ತಡೆಯಲು ನೋಂದಣಿ ಕಡ್ಡಾಯ ಮಾಡಲಾಗಿದೆ. ಮೇಳ ನಡೆಯುವ 5 ದಿನಗಳ ಕಾಲ ಪ್ರತಿನಿತ್ಯ ಕೇವಲ ಆರು ಸಾವಿರ ನೋಂದಾ ಯಿತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ತಂತ್ರಜ್ಞಾನ ಆಧಾರಿತ ವರ್ಚುವಲ್ ವಿಧಾನದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಸುಮಾರು 25 ಲಕ್ಷ ಮಂದಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ ಸಂಸ್ಥೆಯ ವೆಬ್‌ಸೈಟ್ http://nhf2021.iihr.res.in ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಇದನ್ನೂ ಓದಿ:ಅಂಜನಾದ್ರಿ ಕ್ಷೇತ್ರ ಅಯೋಧ್ಯೆಯಷ್ಟೇ ಖ್ಯಾತಿ ಪಡೆಯಬೇಕು: ರಾಜ್ಯಪಾಲ ವಜುಭಾಯಿ ವಾಲಾ
ನವೋದ್ಯಮ ಮತ್ತು ಸದೃಢ ಭಾರತಕ್ಕೆ ತೋಟಗಾರಿಕೆಯನ್ನು ಪ್ರಮುಖ ಸಾಧನವನ್ನಾಗಿಸುವುದು ಮೇಳದ ಮುಖ್ಯ ಧ್ಯೇಯವಾಗಿದೆ. ಒಟ್ಟಾರೆ ರೈತರ ಆದಾಯವನ್ನು ದ್ವಿಗುಣಗೊಳಿಸಿ ತೋಟಗಾರಿಕೆಯನ್ನು ವ್ಯಾಪಾರ, ಉದ್ಯಮವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮೇಳ ಪ್ರಮುಖ ಪಾತ್ರ ವಹಿಸಲಿದೆ. ಜತೆಗೆ ಕೋವಿಡ್ ನಿಂದ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಆಸಕ್ತರನ್ನು ತೋಟಗಾರಿಕೆಯತ್ತ ಆಕರ್ಷಿಸಲು ಇದು ಸಹಕಾರಿಯಾಗಲಿದೆ ಎಂದರು.
ಮೇಳದ ಸಂಘಟನಾ ಕಾರ್ಯದರ್ಶಿ ಮತ್ತು ಐಐಎಚ್‌ಆರ್ ಪ್ರಧಾನ ವಿಜ್ಞಾನಿ ಡಾ.ಎಂ.ವಿ. ಧನಂಜಯ, ಸಂಸ್ಥೆ ಅಭಿವೃದ್ಧಿಪಡಿಸಿದ ಸುಮಾರು 216 ತಂತ್ರಜ್ಞಾನ ಗಳನ್ನು ಮೇಳದಲ್ಲಿ ಪ್ರದರ್ಶಿಸ ಲಾಗುವುದು. ವಿಜ್ಞಾನಿ ಗಳೊಂದಿಗೆ ರೈತರು ಈ ಸಂಬಂಧ ಸಂವಾದ ನಡೆಸಬಹುದು. ಜತೆಗೆ ನೂರು ಮಳಿಗೆಗಳ ಮೂಲಕ ಮಾಹಿತಿ ಪಡೆಯಬ ಹುದು. ಪ್ರಗತಿಪರ ರೈತರ ಸಂದರ್ಶನಗಳ
ವೀಕ್ಷಿಸಬಹುದು ಎಂದು ಮಾಹಿತಿ ನೀಡಿದರು. ದೇಶದ 23 ರಾಜ್ಯಗಳ ರೈತರಿಗೆ ಈಗಾಗಲೇ ಬೀಜಗಳನ್ನು ಮಾರಾಟ ಮಾಡಲಾಗಿದೆ. ಕೇವಲ ನಾಲ್ಕು ತಿಂಗಳಲ್ಲಿ ಸಂಸ್ಥೆ 45 ಲಕ್ಷ ವ್ಯವಹಾರ ನಡೆಸಿದೆ. ಸುಮಾರು 60 ಬೆಳೆ ಪ್ರಭೇದಗಳ ಬೀಜಗಳು ಪೋರ್ಟಲ್ ಮೂಲಕ ಸಿಗುತ್ತವೆ. ಐಐಎಚ್‌ಆರ್ ಸದ್ಯ ಬೀಜ ಮಾರಾಟದ ಪ್ರಮಾಣವನ್ನು ವಾರ್ಷಿಕ 20 ಟನ್ ನಿಂದ 50 ಟನ್ ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಮಾಹಿತಿ ನೀಡಿದರು. ಐಐಎಚ್‌ಆರ್ ವಿಜ್ಞಾನಿಗಳಾದ ಡಾ.ಬಿ.ನಾರಾಯಣ ಸ್ವಾಮಿ, ಡಾ.ಕೆ.ಕೆ.ಉಪ್ರೇತಿ, ಡಾ.ಶ್ರೀಧರ್ ಗುಟ್ಟಮ್ ಹಾಗೂ ದೇಶಾದ್ಯಂತ ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್ ಕಸ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.