ರಾಷ್ಟ್ರೀಯತೆಯನ್ನು ಪಕ್ಷಗಳು ಗುತ್ತಿಗೆ ಪಡೆದುಕೊಂಡಿಲ್ಲ
Team Udayavani, Jun 16, 2019, 3:05 AM IST
ಬೆಂಗಳೂರು: ರಾಷ್ಟ್ರೀಯತೆಯನ್ನು ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿ ಗುತ್ತಿಗೆ ಪಡೆದುಕೊಂಡಿಲ್ಲ. ಪ್ರತಿಯೊಬ್ಬರೂ ತಮಗೆ ಅನಿಸಿದ ರೀತಿಯಲ್ಲಿ ಅದನ್ನು ವ್ಯಕ್ತಪಡಿಸಬಹುದು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಧ್ವನಿ ಪ್ರಬುದ್ಧ ಭಾರತ ಸಂಘದಿಂದ ಶನಿವಾರ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯತೆ ಮತ್ತು ನಿರುದ್ಯೋಗ’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯತೆ ಎಂಬುದು ಯಾರೋ ಒಬ್ಬರು ಹೀಗೆ ಮಾಡಿ ಎಂದು ಹೇಳುವುದಲ್ಲ. ಪ್ರತಿಯೊಬ್ಬರೂ ತಮಗೆ ಅನಿಸಿದ ರೀತಿಯಲ್ಲಿ ವ್ಯಕ್ತಪಡಿಸುವುದು. ಅದನ್ನು ಯಾವುದೇ ಪಕ್ಷ ಗುತ್ತಿಗೆ ಪಡೆದುಕೊಂಡಿಲ್ಲ ಎಂದು ಹೇಳಿದರು.
ಉದ್ಯೋಗ ವಿಚಾರದಲ್ಲಿ ನಿರಂತರವಾಗಿ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವುದು ಸತ್ಯದ ಸಂಗತಿ. ಆಗಂತ ಇಲ್ಲಿರುವ ಬೇರೆ ರಾಜ್ಯವನ್ನು ಓಡಿಸಬೇಕು ಎಂದು ಸರಿಯಲ್ಲ. ಅಂತಹ ಹೋರಾಟಗಳಿಗೆ ನನ್ನ ಬೆಂಬಲವಿಲ್ಲ. ಆದರೆ, ಮುಂದೆ ನಡೆಯುವ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಅದ್ಯತೆ ನೀಡಬೇಕು ಹಾಗೂ ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಸಂಪೂರ್ಣವಾಗಿ ಕನ್ನಡಿಗರಿಗೆ ದೊರೆಯುವಂತೆ ಮಾಡಲು ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ ಎಂದು ಹೇಳಿದರು.
ಕನ್ನಡಿಗರಿಗೆ ಉದ್ಯೋಗ ದೊರೆಯಬೇಕೆಂಬ ಉದ್ದೇಶದಿಂದ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಲು ವಿಧಾನಮಂಡಲ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಅದನ್ನು ಅನುಷ್ಠಾನಗೊಳಿಸಲು ಯಾವುದೇ ರಾಜಕೀಯ ಪಕ್ಷಗಳಿಗೆ ಇಚ್ಛಾಶಕ್ತಿಯಿಲ್ಲ. ಆ ನಿಟ್ಟಿನಲ್ಲಿ ಆಯಾ ರಾಜ್ಯಗಳಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಆಯಾ ರಾಜ್ಯದವರಿಗೆ ನೀಡುವಂತೆ ಕಾನೂನನ್ನು ಸರ್ಕಾರದ ಜಾರಿಗೊಳಿಸಬೇಕಿದೆ.
ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಸದ್ಯ ದೇಶದಲ್ಲಿರುವ ರಾಷ್ಟ್ರೀಯತೆ ನಿರಂತರವಾಗಿ ಸೈನಿಕರ ಬಲಿಯನ್ನು ಕೋರುತ್ತಿದೆ. ಜತೆಗೆ ಅರಣ್ಯ ಪ್ರದೇಶಗಳಿÉರುವ ಆದಿವಾಸಿ ಸಮುದಾಯಗಳನ್ನು ಎತ್ತಂಗಡಿ ಮಾಡಿಸುತ್ತಿದ್ದು, ಗ್ರಾಮಸ್ವರಾಜ್ಯದ ಬದಲಿಗೆ, ಜಾಗತಿಕರಣದ ಹುಸಿ ಪೆಪ್ಪರಮೆಂಟ್‌ನ್ನು ಜನರಿಗೆ ತಿನ್ನಿಸುತ್ತಿದೆ. ಇವತ್ತಿನ ರಾಷ್ಟ್ರೀಯತೆ ರೈತರು, ಕಾರ್ಮಿಕರ ಕಷ್ಟಗಳನ್ನು ನೆನಪು ಮಾಡಲು ಬಿಡುತ್ತಿಲ್ಲ ಎಂದು ದೂರಿದರು.
ಎಸ್‌ಬಿಎಂ ಇದ್ದಾಗ ಸರ್ ಎಂ.ವಿಶ್ವೇಶ್ವರಯ್ಯ ಅವರ ಫೋಟೋ ತೆಗೆದರೆ ಅದು ಕನ್ನಡಕ್ಕೆ ದ್ರೋಹ, ಅದೇ ಎಸ್‌ಬಿಐ ಮಾಡಿದಾಗ ಅವರ ಫೋಟೋ ತೆಗೆದರೆ ರಾಷ್ಟ್ರೀಯತೆ ಎಂದು ಬಿಂಬಿಸಲಾಗುತ್ತಿದೆ ಎಂದ ಅವರು, ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಇರುವಂತೆ ಖಾಸಗಿ ಉದ್ಯಮಗಳಲ್ಲಿಯೂ ಮೀಸಲಾತಿ ನೀಡುವ ಮಹಷಿ ವರದಿಯನ್ನು ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಸಂವಾದದಲ್ಲಿ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ, ಚಿಂತಕಿ ರಾಜಲಕ್ಷ್ಮಿ, ರಣಧೀರ ಪಡೆಯ ಹರೀಶ್ ಕುಮಾರ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.