ಸಂಯಮ, ವಿವೇಕ ಇಂದಿನ ಅಗತ್ಯ ಮೌಲ್ಯಗಳು

Team Udayavani, Oct 26, 2017, 11:47 AM IST

bng-4.jpg

ಬೆಂಗಳೂರು: ಸಂಯಮ ಮತ್ತು ವಿವೇಕ ಈ ಕಾಲಘಟ್ಟದ ಅತ್ಯಂತ ಅಗತ್ಯವಾಗಿರುವ ಮೌಲ್ಯ ಮತ್ತು ಆಶಯಗಳು ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಬರಗೂರು ಆತ್ಮೀಯರ ಬಳಗ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ “ನಮ್ಮೊಳಗಿನ ಬರಗೂರು-ಒಂದು ಚಿಂತನೆ’ ರಾಜ್ಯಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರೊ.ಚಂದ್ರಶೇಖರ ಪಾಟೀಲರು 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನನಗೂ ಹಾಗೂ ಪ್ರಗತಿಪರ ಚಿಂತನೆಯುಳ್ಳವರಿಗೆ ಸಂತಸ ಮತ್ತು ಸಂಭ್ರಮದ ವಿಚಾರ. ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗಿರುವ ಚಂಪಾ ಅವರೇ ಹೇಳಿದಂತೆ ಈ ಬಾರಿ ಸಂಯಮ ಮತ್ತು ವಿವೇಕದಿಂದ ಮಾತನಾಡಬೇಕೆಂದಿದ್ದೇನೆ ಎಂಬ ಹೇಳಿಕೆ ಪ್ರಸ್ತುತವಾಗಿದೆ. ಇಂದು ಯಾರನ್ನು ನಾವು ಎದುರಾಳಿಗಳು ಎಂದು ಭಾವಿಸಿಕೊಂಡಿರುತ್ತೇವೋ ಅವರಲ್ಲಿ ಇಲ್ಲದ್ದನ್ನು ನಾವು ಪ್ರಕಟಿಸುವ ಮುಖಾಂತರವಾಗಿ ಉತ್ತರ ಕೊಡುವುದು ಸರಿಯಾದ ದಾರಿ. ಯಾರಿಗೆ ಸಂಯಮ ಇಲ್ಲವೋ ಅವರಿಗೆ ಸಂಯಮದಿಂದಲೇ ಉತ್ತರಿಸುವುದು ಒಳ್ಳೆಯದು. ಯಾರು ವಿವೇಕವಿಲ್ಲದೆ ಅವಿವೇಕಿಗಳಾಗಿರುತ್ತಾರೋ ಅವರೊಂದಿಗೆ ವಿವೇಕದಿಂದ ಮಾತನಾಡಬೇಕಿದೆ ಎಂದರು. 

ಇತ್ತೀಚಿನ ಮೂರು ವರ್ಷಗಳಲ್ಲಿ ನಮ್ಮ ದೇಶ ಬೇರೆ ತರಹ ಬದಲಾಗುತ್ತಿದೆ. ಆದರೆ ಸರಿಯಾಗಿ ಬದಲಾಗಬೇಕೆಂದು ಆಶಿಸಿದವರೇ ಈ ಮೂರು ವರ್ಷ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದೇವೆ. ದಲಿತ ಬಂಡಾಯ ಹಿನ್ನೆಲೆಯಿಂದ ಬಂದವರೇ ಈ ಮೂರು ವರ್ಷ ಅಧ್ಯಕ್ಷರಾಗಿದ್ದೇವೆ. ಒಂದು ರೀತಿಯಲ್ಲಿ ದೇಶ ಕಷ್ಟಕರವಾದ ಸವಾಲುಗಳು, ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನಮ್ಮ ಸಂವಿಧಾನದ ಆಶಯಗಳಿಗೆ ಸಮಸ್ಯೆ ಮತ್ತು ಸವಾಲುಗಳು ಎದುರಾಗುತ್ತಿವೆ. ಈ ವೇಳೆಯಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಲ್ಲ ಸವಾಲುಗಳಿಗೆ ಪರಿಹಾರ ಕೊಟ್ಟು ಬಿಡುತ್ತೇವೆ ಅಥವಾ ಕೊಟ್ಟು ಬಿಡಬೇಕು ಎನ್ನುವ ಅಪೇಕ್ಷೆ ಮನಸ್ಸಿನೊಳಗೆ ಇದೆ. ಆದರೂ ನಮ್ಮನ್ನು ನಾವು ಮತ್ತೂಮ್ಮೆ ದೃಢೀಕರಿಸಿಕೊಳ್ಳುವುದಕ್ಕೆ ನಮ್ಮ ದನಿಯನ್ನು ಮತ್ತೂಮ್ಮೆ ಗಟ್ಟಿಯಾಗಿ ಹೇಳುವುದಕ್ಕೆ ಸಾಹಿತ್ಯ ಕ್ಷೇತ್ರ ಮತ್ತು ಸಾಹಿತಿಗಳಿಗಿದ್ದಂತ 70-80ರ ದಶಕದ ಸಾಮಾಜಿಕ ಜವಾಬ್ದಾರಿಯನ್ನು ಪುನರ್‌ ನವೀಕರಣಗೊಳಿಸುವುದಕ್ಕೆ ಸಮ್ಮೇಳನ ವೇದಿಕೆ ಎಂದು ನಾನು ಭಾವಿಸಿದ್ದೇನೆ. ನಿಯೋಜಿತ ಅಧ್ಯಕ್ಷರಾಗಿರುವ ಚಂಪಾ ಅವರು ಭಾವಿಸಿದ್ದಾರೆ ಎಂದುಕೊಂಡಿದ್ದೇನೆ ಎಂದು ಹೇಳಿದರು.

83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಚಿತ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ್‌ ಮಾತನಾಡಿ, ಅಕ್ಷರ ಮತ್ತು ಕ್ರಿಯೆಗಳ ಮೂಲಕ ನಮ್ಮ ಮಾತು, ಬರಹದಿಂದ ನಮ್ಮ ಇಡೀ ಬದುಕನ್ನು ರೂಪಿಸಿಕೊಂಡಿದ್ದೇವೆ. ನಾವು ಕಾಮ್ರೇಡ್‌ ವೇಷ, ಸ್ಥಾನಮಾನ, ಜಾತಿ- ಧರ್ಮ ನಮ್ಮ ಲೆಕ್ಕಕ್ಕೇ ಇಲ್ಲ. ಒಟ್ಟಾರೆಯಾಗಿ ನಮ್ಮ ಮೌಲ್ಯಗಳ ಸಲುವಾಗಿ ಬುದ್ಧ, ಬಸವ, ಅಂಬೇಡ್ಕರ ತತ್ವ ಸಿದ್ಧಾಂತದ ನಮ್ಮ ಮಿತಿಯೊಳಗಿನ ಸಾಧ್ಯತೆಯೊಳಗೆ ವರ್ತಮಾನದ ವಿದ್ಯಮಾನಗಳಿಗೆ ಸದಾ ಸಂವೇದನಶೀಲ ವಾಗಿದ್ದೇವೆ. ಬದುಕಿನಲ್ಲಿ ಬದಲಾವಣೆ, ಚಲನಶೀಲತೆ ಬಯಸುವ ಪ್ರತಿಯೊಬ್ಬರೂ ಪ್ರಗತಿಪರರಾಗಿದ್ದು ಸಾಮಾಜಿಕ ಜವಾಬ್ದಾರಿ ಹೊರಬೇಕು ಎಂದರು. ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎ.ಮುರಿಗೆಪ್ಪ ಉಪಸ್ಥಿತರಿದ್ದರು.

ಬರಗೂರು ಮೂಲ ಸಂಸ್ಕೃತಿಯ ಪ್ರತಿನಿಧಿ
ಬೆಂಗಳೂರು: ಭಾರತದ ಮೂಲ ಸಂಸ್ಕೃತಿಯಾಗಿರುವ ಬಹುತ್ವ ಮತ್ತು ಬಹುಸಂಸ್ಕೃತಿಯನ್ನು ಪುನರಾವಲೋಕನ
ಮಾಡ ಬೇಕಾಗಿದೆ ಎಂದು ಪ್ರತಿಪಾದಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ವೀರಪ್ಪ ಮೊಯ್ಲಿ, ಏಕಸಂಸ್ಕೃತಿ ಎನ್ನುವುದು ಕೃತಕವಾದದ್ದು ಎಂದು ಹೇಳಿದರು. 

ಬರಗೂರು ಆತ್ಮೀಯರ ಬಳಗ ಹಾಗೂ ಬೆಂಗಳೂರು ವಿವಿ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟದಿಂದ ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ “ನಮ್ಮೊಳಗಿನ ಬರಗೂರು-ಒಂದು ಚಿಂತನೆ’ ವಿಚಾರಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಬಂಡಾಯದ ಮರುಹುಟ್ಟು ಆಗಬೇಕೆಂಬ ವಾದವಿದೆ. ಆದರೆ, ಭಾರತದ ಮೂಲ ಸಂಸ್ಕೃತಿಯಾದ ಬಹುತ್ವ ಮತ್ತು ಬಹುಸಂಸ್ಕೃತಿಯ ಪುನರಾವಲೋಕನ ಆಗಬೇಕು. ಭಾರತೀಯ ಸಂಸ್ಕೃತಿಯ ಕ್ಷೀತಜದ ಅನಾವರಣವಾಗಬೇಕು. ಏಕ ಸಂಸ್ಕೃತಿ ಅನ್ನುವುದು ಯಾವತ್ತಿಗೂ ಕೃತಕವಾದದ್ದು. ಯಥಾಸ್ಥಿತಿಯನ್ನು ಮುರಿದು ಚಲನಶೀಲ ಜಗತ್ತಿಗೆ ಧುಮುಕಿದಾಗ ಮಾತ್ರವೇ ಭಾರತದ ಮೂಲ ಸಂಸ್ಕೃತಿಯ ಪುನರಾವಲೋಕನ ಸಾಧ್ಯ. ಬರಗೂರು ರಾಮಚಂದ್ರಪ್ಪ ಇಲ್ಲಿನ ಮೂಲ ಸಂಸ್ಕೃತಿಯ ಪ್ರತಿನಿಧಿಯಾಗಿದ್ದಾರೆ. ಹಾಗಾಗಿ, ಕೃತವಾಗಿರುವ ಏಕಸಂಸ್ಕೃತಿಯ ಬದಲು, ಬಹುಸಂಸಕೃತಿಯನ್ನು ಬರಗೂರು ತೋರಿಸಿದ್ದಾರೆ. ಹಾಗಾಗಿ ಈ ಪುನರಾವಲೋಕನ ಬರಗೂರು ಅವರಿಂದಲೇ ಸಾಧ್ಯ ಎಂದು ಮೊಯ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಬೈರಮಂಗಲ ರಾಮೇಗೌಡ ಅವರು ಬರೆದ “ಬೆವರು ಬರೆದ ಬರಹ’, ಡಾ. ಬಸವರಾಜ ಡೋಣೂರ ಅವರು ಆಂಗ್ಲ ಭಾಷೆಗೆ ಅನುವಾದಿಸಿರುವ “ಶಬರಿ’ ಹಾಗೂ ಡಾ| ಕರಿಯಪ್ಪ ಮಾಳಿಗೆ ಅವರ ರಚಿಸಿರುವ ” ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬರಗೂರು’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಟಾಪ್ ನ್ಯೂಸ್

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.