ತಂತ್ರಾಂಶ ಬದಲಿಸಲು 3 ತಿಂಗಳು ಬೇಕೇ?
Team Udayavani, Jan 11, 2018, 12:56 PM IST
ಯಲಹಂಕ: ಭೂಮಿಯ ದಾಖಲೆಗಳನ್ನು ತಿದ್ದು ಪಡಿ ಮಾಡುವುದೂ ಸೇರಿದಂತೆ ವಿವಿಧ ಕಾರಣ ಗಳಿಂದ ಸಲ್ಲಿಸಿದ ಅರ್ಜಿಗಳು ವಿಲೇವಾರಿ ಯಾಗದ ಕಾರಣ ಬೇಸತ್ತ ರೈತರು ಭೂದಾಖಲೆ ವಿಭಾಗದ ಕಚೇರಿ ಎದುರು ಬುಧವಾರ ದಿಢೀರ್ ಧರಣಿ ನಡೆಸಿದರು.
ಮಿನಿ ವಿಧಾನಸೌಧದಲ್ಲಿರುವ ಕಂದಾಯ ಇಲಾಖೆಯ ಭೂಮಿ ವಿಭಾಗದಲ್ಲಿ ಕಳೆದ ಮೂರು ತಿಂಗಳಿನಿಂದ ವಿವಿಧ ಉದ್ದೇಶಗಳಿಂದ ಸಲ್ಲಿಸಿದ್ದ ಅರ್ಜಿಗಳು ಈವರೆಗೂ ವಿಲೇವಾರಿಯಾಗಿಲ್ಲ. ಕಂಪ್ಯೂಟರ್ ತಂತ್ರಾಂಶ ಬದಲಾವಣೆ ಮಾಡ ಲಾಗುತ್ತಿದೆ ಎಂಬ ನೆಪ ಹೇಳಿ ಅಲೆಸುತ್ತಿದ್ದಾರೆ.
ತಂತ್ರಾಂಶ ಬದಲಿಸಲು ಮೂರು ತಿಂಗಳು ಬೇಕೇ? ಎಂದು ಪ್ರಶ್ನಿಸಿದ ಪ್ರತಿಭಟನಾನಿರತ ರೈತರು, ಅರ್ಜಿ ವಿಲೇವಾರಿಯಾಗದ ಕಾರಣ ಹಲವು ಕೆಲಸ ಕಾರ್ಯಗಳಿಗೆ ತೊಡಕಾಗಿದೆ. ಸಮಸ್ಯೆ ಪರಿಹರಿಸು ವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಕಚೇರಿ ಬಾಗಿಲಲ್ಲೇ ಕುಳಿತರು.
ಈ ವೇಳೆ ಮಾತನಾಡಿದ ರೈತ ವೀರಭದ್ರೇಗೌಡ, ತಾಲೂಕಿನಲ್ಲಿ ಜಮೀನು ಖರೀದಿ, ಮಾರಾಟ ಪಾಲು ವಿಭಾಗ, ಪವತಿ ವಿರಾಸತ್, ಪಹಣಿ ತಿದ್ದುಪಡಿ, ಸೇರಿ ವಿವಿಧ ಕಾರ್ಯಗಳಿಗಾಗಿ ಸಲ್ಲಿಸಿದ ಅರ್ಜಿಗಳ ವಿಲೇವಾರಿ ಕಾರ್ಯ ಕಳೆದ ಮೂರು ತಿಂಗಳಿನಿಂದ ವಿಳಂಬವಾಗುತ್ತಿದೆ. ಕೇಳಿದರೆ ಕಂಪ್ಯೂಟರ್ ತಂತ್ರಾಂಶ ಬದಲಾವಣೆ ಮಾಡುತ್ತಿದ್ದೇವೆ.
ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಅಲೆದಾಡಿಸುತ್ತಿದ್ದಾರೆ. ಹೀಗಾಗಿ ಕೋರ್ಟು, ಕಚೇರಿಗಳಿಗೆ ದಾಖಲೆ ನೀಡಲಾಗುತ್ತಿಲ್ಲ ಎಂದು ದೂರಿದರು.
“ಕಚೇರಿಗೆ ಬರುವ ಸಾರ್ವಜನಿಕರಿಗೆ ಇಲ್ಲಿನ ಸಿಬ್ಬಂದಿ, ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುವುದಿಲ್ಲ. ನಮ್ಮ ಸಮಸ್ಯೆಗಳ ಬಗ್ಗೆ ಯಾರ ಬಳಿ ಹೇಳಿಕೊಳ್ಳಬೇಕು ಎಂದೇ ತಿಳಿಯುವುದಿಲ್ಲ. ತಹಶೀಲ್ದಾರ್‌ಗೆ ಹೇಳ್ಳೋಣವೆಂದು ಹೋದರೆ ಅವರು ಕಚೇರಿಯಲ್ಲಿಲ್ಲ ಎಂದು ಹೇಳುತ್ತಾರೆ.
ರೆಕಾರ್ಡ್ ವಿಭಾಗಕ್ಕೆ ಅರ್ಜಿ ಸಲ್ಲಿಸಿ ತಿಂಗಳುಗಳು ಕಳೆದರೂ ದಾಖಲೆ ನೀಡುವುದಿಲ್ಲ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳ ಬೇಕು,’ ಎಂದು ಅರ್ಜಿದಾರ ನಾಗೇಂದ್ರಪ್ಪ ಎಂಬುವವರು ದೂರಿದರು.
ಸ್ಥಳಕ್ಕೆ ಬಂದ ವಿಶೇಷ ತಹಸೀಲ್ದಾರ್ ಅನಿಲ್, “17 ವರ್ಷಗಳ ನಂತರ ಕಂದಾಯ ಇಲಾಖೆಯಲ್ಲಿ ತಂತ್ರಾಂಶ ಬದಲಾವಣೆ ನಡೆಯುತ್ತಿದ್ದು, ಇದರಿಂದ ತೊಂದರೆಯಾಗಿದೆ. ಬಹುತೇಕ ಕಾರ್ಯಮುಗಿದಿದ್ದು, ಎರಡು ದಿನ ಕಾಲಾವಕಾಶ ನೀಡಿ,’ ಎಂದರು. ರೈತರು ಪ್ರತಿಭಟನೆ ಹಿಂಪಡೆದು ಕಚೇರಿ ಕೆಲಸಗಳಿಗೆ ಅನುವು ಮಾಡಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್
Fraud Case: ಟೆಕಿಗೆ ವಂಚನೆ ಕೇಸ್; ಆರೋಪಿ ಪತ್ತೆಗೆ ತಂಡ ರಚನೆ
New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ
Fraud case: ಚಿನ್ನಾಭರಣ ವಂಚನೆ ಕೇಸ್; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.