ಮೆಟ್ರೋ ಸೇವೆಯಲ್ಲಿ ಬೇಕು ಬದಲಾವಣೆ

ಜನರನ್ನು ಆಕರ್ಷಿಸಲು ಹೊಸ ಮಾದರಿ ಅಳವಡಿಕೆ ಅಗತ್ಯ | ಉಚಿತ ಪಾರ್ಕಿಂಗ್‌, ಸ್ವಯಂಚಾಲಿತ ಟಿಕೆಟ್‌ಗೆ ಸಲಹೆ

Team Udayavani, Oct 11, 2020, 11:45 AM IST

bng-tdy-1

ಬೆಂಗಳೂರು: ಕೋವಿಡ್ ವೈರಸ್‌ ಹಾವಳಿ ನಂತರ “ನಮ್ಮ ಮೆಟ್ರೋ’ ವ್ಯವಸ್ಥೆಯಲ್ಲಿ ಸಾಕಷ್ಟು ಮಾರ್ಪಾಡು ಆಗಿವೆ. ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್, ನಗದುರಹಿತ ವ್ಯವಸ್ಥೆ ಬಂದಿದೆ. ಆದರೆ,ಪ್ರಯಾಣಿಕರ ಸ್ನೇಹಿ ಆಗಿದೆಯೇ?

ಇದಕ್ಕೆ ಉತ್ತರ- “ಇಲ್ಲ’. ಬೆಂಗಳೂರು ಮೆಟ್ರೋ ರೈಲು ನಿಗಮ ಅನುಸರಿಸುತ್ತಿರುವ ಕ್ರಮಗಳು ಕೋವಿಡ್‌-19 ವೈರಸ್‌ ಸೋಂಕು ನಿಯಂತ್ರಣವನ್ನು ಮಾತ್ರ ಕೇಂದ್ರೀಕರಿಸಿದಂತಿವೆ. ಪ್ರಯಾಣಿಕರಿಗೆ ಪೂರಕವಾದ ಅಥವಾ ಸರಳೀಕರಿಸುವ ವ್ಯವಸ್ಥೆ ಬಗ್ಗೆ ಯೋಚನೆ ಮಾಡಿಲ್ಲ. ಇದರ ಪರಿಣಾಮ ಪ್ರಯಾಣಿಕರ ಮೇಲೆ ಆಗುತ್ತಿದ್ದು, ನಿರಾಸಕ್ತಿಗೆ ಎಡೆಮಾಡಿಕೊಡುತ್ತಿದೆ ಎನ್ನುತ್ತಾರೆ ತಜ್ಞರು.

ಮೆಟ್ರೋ ಸೇವೆಯನ್ನು ಈಗ ಕೋವಿಡ್‌-19 ಪೂರ್ವ ಮತ್ತು ನಂತರ ಎಂದು ನೋಡಬೇಕಾಗುತ್ತದೆ. ಯಾಕೆಂದರೆ, ಲಾಕ್‌ಡೌನ್‌ ನಂತರ ಜೀವನಶೈಲಿ ಬದಲಾಗಿದೆ. ರಸ್ತೆಗಳು ಬಹುತೇಕ ಅವಧಿ ಖಾಲಿಯಾಗಿರುತ್ತವೆ. ಆ್ಯಪ್‌ ಆಧಾರಿತ ಟ್ಯಾಕ್ಸಿಗಳು, ಬೈಕ್‌ಗಳುಕಡಿಮೆದರದಲ್ಲಿ ಲಭ್ಯವಾಗುತ್ತಿವೆ. ರಿಸ್ಕ್ ಕೂಡ ಕಡಿಮೆ ಇರುತ್ತದೆ. ಆದರೆ, ಮೆಟ್ರೋ ಇದಕ್ಕೆ ತದ್ವಿರುದ್ಧವಾಗಿದೆ. ಪ್ರಯಾಣ ದರ ಉಳಿದ ಮಾದರಿಗಳಿಗೆ ಹೋಲಿಸಿದರೆ ಹೆಚ್ಚು.ಅಷ್ಟೇ ಅಲ್ಲ, ಈಗಲೂ ಒಬ್ಬ ಪ್ರಯಾಣಿಕ ಪ್ಲಾಟ್‌ಫಾರಂಗೆ ಹೋಗಿ ಮೆಟ್ರೋ ಏರಲು ಕನಿಷ್ಠ ಹತ್ತು ನಿಮಿಷ ಆಗುತ್ತದೆ. ಅಂದರೆ, ಸಮಯ ಕೂಡ ಅಧಿಕ ವ್ಯಯ. ಸಾಕಷ್ಟು ಕ್ರಮ ಕೈಗೊಂಡಿದ್ದರೂ ಸೋಂಕಿನ ಸಾಧ್ಯತೆ ಹೆಚ್ಚಿದೆ(ಪೈಲಟ್‌ಗಳಿಗೇ ಸೋಂಕು ಬರುತ್ತಿರುವುದು ಇದಕ್ಕೆ ಪೂರಕ).ವಾಸ್ತವ ಹೀಗಿರುವಾಗ, ಬರೀ ಸೇವೆ ನೀಡಿದರೆ ಸಾಲದು; ಜನರ ಆಕರ್ಷಣೆಗೆ ಹಲವು ಮಾರ್ಪಾಡು ಮಾಡಿಕೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ತಜ್ಞರು “ಉದಯವಾಣಿ’ ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  • ಸದ್ಯದ ವ್ಯವಸ್ಥೆಯಲ್ಲಿ ಹಣ ಮತ್ತು ಸಮಯ ಎರಡೂ ಉಳಿತಾಯ ಆಗುತ್ತಿಲ್ಲ. ಇವೆರಡೂಸಾಧ್ಯವಾಗುತ್ತಿರುವುದು ಖಾಸಗಿ ವಾಹನಗಳಲ್ಲಿ. ಈ ಹಿನ್ನೆಲೆಯಲ್ಲಿ ಆರು ತಿಂಗಳ ಮಟ್ಟಿಗೆ ಪ್ರಯಾಣ ದರ ತಗ್ಗಿಸುವ ಅವಶ್ಯಕತೆ ಇದೆ
  • ಐಟಿ ರಾಜಧಾನಿಯಲ್ಲಿದ್ದೂ ನಾವು ಮೆಟ್ರೋದಂತಹ ಸಮೂಹ ಸಾರಿಗೆಯಲ್ಲಿ ಸಮರ್ಪಕ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ವ್ಯಕ್ತಿ ಸುಲಭವಾಗಿ ಕಡಿಮೆ ಅವಧಿಯಲ್ಲಿ ರಿಚಾರ್ಜ್‌ ಮಾಡಿಕೊಂಡು ಓಡಾಡುವಂತಾಗಬೇಕು.
  • ಅಟೋಮೆಟಿಕ್‌ ಟಿಕೆಟಿಂಗ್‌ ಯಂತ್ರಗಳನ್ನು ಸರಿಪಡಿಸಿ ಮರುಚಾಲನೆ ನೀಡಬೇಕು. ಯೋಗೇಶ್‌ ರಂಗನಾಥ್‌, ಕ್ಲೀನ್‌ಏರ್‌ ಪ್ಲಾಟ್‌ಫಾರಂ ಸಿಇಒ
  • ಮೆಟ್ರೋದಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಬದಲಿಗೆ ತಾತ್ಕಾಲಿಕವಾಗಿ ಫ್ಯಾನ್‌ಗಳನ್ನೇಕೆ ಅಳವಡಿಸಬಾರದು?
  • ನಿಲ್ದಾಣಗಳ ಎರಡು-ಮೂರು ಕಿ.ಮೀ. ಸುತ್ತಲಿನ ವ್ಯಾಪ್ತಿಯಲ್ಲಿ ಬಸ್‌ ಸಂಪರ್ಕ ಸೇವೆಗಳು ಪರಿಣಾಮಕಾರಿಯಾಗಿ ಆಗಬೇಕು. ಕಬ್ಬನ್‌ ಉದ್ಯಾನ ಮತ್ತು ವಿಧಾನಸೌಧದಿಂದ ವಸಂತನಗರ ನಡುವೆ ಫೀಡರ್‌ ಸೇವೆಗೆ ಕಳೆದ ಐದು ವರ್ಷಗಳಿಂದ ಬೇಡಿಕೆ ಇಡಲಾಗುತ್ತಿದೆ. ಇನ್ನೂ ಆಗಿಲ್ಲ
  • ಮುಖಗವಸು, ಸ್ಯಾನಿಟೈಸರ್‌ ಸೇರಿದಂತೆ ಮಾರ್ಗ ಸೂಚಿ ಪಾಲಿಸದವರ ವಿರುದ್ಧ ಕಟ್ಟು ನಿಟ್ಟಾಗಿ ಕಾರ್ಯಾಚರಣೆ ಮಾಡಬೇಕು. ಹೆಚ್ಚು ದಂಡ ವಿಧಿಸಬೇಕು. ಈ ಕ್ರಮಗಳು ಪ್ರಯಾಣಿಕರಲ್ಲಿ ಸುರಕ್ಷತೆ ಬಗ್ಗೆ ವಿಶ್ವಾಸ ಹೆಚ್ಚಿಸುತ್ತವೆ. ರಾಜಕುಮಾರ್‌ ದುಗರ್‌, ಸಂಚಾಲಕರು, ಸಿಟಿಜನ್‌ ಫಾರ್‌ ಸಿಟಿಜನ್‌
  • ಮೆಟ್ರೋ ಮತ್ತು ರೈಲು ಒಂದಕ್ಕೊಂದು ಪೂರಕವಾಗಿವೆ. ನಿತ್ಯ ಬೈಯಪ್ಪನಹಳ್ಳಿಯಿಂದಲೇ ಸಾವಿರಾರು ಪ್ರಯಾಣಿಕರು ಮೆಟ್ರೋ ಏರುತ್ತಿದ್ದರು. ಅವರೆಲ್ಲಾ ವೈಟ್‌ಫೀಲ್ಡ್‌ ಸೇರಿದಂತೆ ಉಪನಗರಗಳಿಂದ ಬರುತ್ತಿದ್ದರು.
  • ಈಗ ರೈಲು ಸೇವೆ ಇಲ್ಲದ್ದರಿಂದ ಖಾಸಗಿ ವಾಹನ ಅಥವಾ ಬಸ್‌ಗಳಲ್ಲಿ ಬರುತ್ತಿದ್ದಾರೆ. ಆದ್ದರಿಂದ ಕೊನೆಪಕ್ಷ ಆಯ್ದ ಮಾರ್ಗಗಳಲ್ಲಿ ರೈಲು ಸೇವೆ ಶುರು ಮಾಡಲು ರಾಜ್ಯ ಸರ್ಕಾರ ರೈಲ್ವೆ ಇಲಾಖೆಗೆ ಮನವಿ ಮಾಡಬೇಕು. ಮುಂಬೈನಲ್ಲಿ ಸಬ್‌ಅರ್ಬನ್‌ ಸೇವೆ ಸಾಧ್ಯವಾಗಿದ್ದು, ಇಲ್ಲಿ ಯಾಕೆ ನಿರ್ಬಂಧ?
  • ಮೆಟ್ರೋ ನಿಲ್ದಾಣಗಳಲ್ಲಿರುವ ವಾಹನ ನಿಲುಗಡೆ ಪ್ರದೇಶ ಈಗ ಉಪಯೋಗ ಆಗುತ್ತಿಲ್ಲ. ಯಾಕೆಂದರೆ, ಜನ ಅಲ್ಲಿಗೆ ಬರುತ್ತಿಲ್ಲ. ತಾತ್ಕಾಲಿಕವಾಗಿ ಪಾರ್ಕಿಂಗ್‌ ಉಚಿತ ಆಗಬೇಕು.
  • ಸ್ಮಾರ್ಟ್‌ ಕಾರ್ಡ್‌ನಲ್ಲಿ ಕನಿಷ್ಠ ನೂರು ರೂ.ಇರಲೇಬೇಕೆಂಬ ನಿಯಮ ತಾತ್ಕಾಲಿಕವಾಗಿಸಡಿಲಗೊಳಿಸಬೇಕು. ಎಷ್ಟೋ ಜನ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಪ್ರಯಾಣಿಸುವವರೂ ಇದ್ದಾರೆ. ದಿನಗೂಲಿ ನೌಕರರು, ಕಾರ್ಮಿಕ ವರ್ಗಕ್ಕೆ ಆ ನೂರು ರೂ. ಯಾವತ್ತಿದ್ದರೂ ಹೊರೆಯೇ.
  • ಬಹುತೇಕ ಟಿಟಿಎಂಸಿ, ಬಸ್‌ ನಿಲ್ದಾಣಗಳಿಗೆಹಾಗೂ ಮೆಟ್ರೋ ನಿಲ್ದಾಣಗಳ ನಡುವೆ ಇಂಟಿಗ್ರೇಷನ್‌ ಇಲ್ಲ. ಉದಾಹರಣೆಗೆ ಬನಶಂಕರಿ ಟಿಟಿಎಂಸಿ, ತುಮಕೂರು ರಸ್ತೆಯ ಪೀಣ್ಯ,ದಾಸರಹಳ್ಳಿ, ಜಾಲಹಳ್ಳಿ ನಾಗಸಂದ್ರದಲ್ಲಿ ರಸ್ತೆ ದಾಟಲು ಸುತ್ತುವರಿದು ಬರಬೇಕಿದೆ.- ಸಂಜೀವ್‌ ದ್ಯಾಮಣ್ಣವರ, ರೈಲ್ವೆ ತಜ್ಞ
  • ಸ್ಪರ್ಶರಹಿತ ವ್ಯವಸ್ಥೆ ಜತೆಗೆ ಸರಳೀಕೃತ ಮತ್ತು ಅಡತಡೆರಹಿತ ಪ್ರಯಾಣ ಸೇವೆ ಅಗತ್ಯ. ಮೆಟ್ರೋ ಮಾರ್ಗದುದ್ದಕ್ಕೂ ಬರುವ ನಿಲ್ದಾಣಗಳಿಂದ ಸಂಪರ್ಕ ಸೇವೆಗಳನ್ನು ಕಲ್ಪಿಸಬೇಕು. ವೈಜ್ಞಾನಿಕವಾಗಿ ಫೀಡರ್‌ ಬಸ್‌ಗಳನ್ನೂ ಕಲ್ಪಿಸಬೇಕು
  • ಮೆಟ್ರೋ ನಿಲ್ದಾಣಗಳ ಕನಿಷ್ಠ 800 ಮೀ. ಸುತ್ತ ಉತ್ತಮ ಗುಣಮಟ್ಟ ಮತ್ತು ಸಾಮರ್ಥ್ಯದ ಫ‌ುಟ್‌ಪಾತ್‌ಗಳ ವ್ಯವಸ್ಥೆ ಇರಬೇಕು
  • ನಿಲ್ದಾಣಗಳ ಸುತ್ತಲಿನ ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಬೈಸಿಕಲ್‌ ಆದ್ಯತಾ ಪಥ, ನಿಲುಗಡೆ ತಾಣಗಳ ವ್ಯವಸ್ಥೆ ಕಲ್ಪಿಸಬೇಕು.
  • ನಗರದ ಹೊರವಲಯದಲ್ಲಿರುವ ನಿಲ್ದಾಣಗಳಲ್ಲಿ ವಾಹನ ಅಥವಾ ಬೈಸಿಕಲ್‌ ನಿಲುಗಡೆ ಮಾಡಿ, ಮೆಟ್ರೋದಲ್ಲಿ ಪ್ರಯಾಣಿಸುವ ವ್ಯವಸ್ಥೆ ಕಲ್ಪಿಸಬೇಕು.
  • ಕಾಯುವ ಅವಧಿ ಕಡಿಮೆ ಮಾಡಲು ಮೆಟ್ರೋ ಫ್ರಿಕ್ವೆನ್ಸಿ ಹೆಚ್ಚಿಸಬೇಕು. ಇದರಿಂದ ದಟ್ಟಣೆ ಕಡಿಮೆ ಆಗಲಿದ್ದು, ಸೋಂಕಿನ ಸಾಧ್ಯತೆ ಕಡಿಮೆ ಇರುತ್ತದೆ. ಪ್ರೊ.ಆಶಿಶ್‌ ವರ್ಮ, ಭಾರತೀಯ ವಿದ್ಯಾಸಂಸ್ಥೆ, ಸಹ ಪ್ರಾಧ್ಯಾಪಕ(ಐಐಎಸ್ಸಿ)

 

 

ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Ayurvedic Doctor: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದ ಆಯುರ್ವೇದಿಕ್‌ ವೈದ್ಯ…

Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್‌ ವೈದ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.