ಧರ್ಮದ ತಪ್ಪು ವ್ಯಾಖ್ಯಾನದ ಬಗ್ಗೆ ಎಚ್ಚರ ಅಗತ್ಯ

Team Udayavani, Jan 20, 2018, 11:33 AM IST

dharma-siddu.jpg

ಬೆಂಗಳೂರು: ಧರ್ಮವನ್ನು ತಪ್ಪು ವ್ಯಾಖ್ಯಾನ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿರುವವರ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಉದ್ಘಾಟಿಸಿದ ಮಾತನಾಡಿದರು. ಕೆಲವರು ಧರ್ಮವನ್ನು ತಮಗೆ ಬೇಕಾದಂತೆ ತಪ್ಪು ವ್ಯಾಖ್ಯಾನ ಮಾಡುತ್ತಾರೆ. ಆ ಮೂಲಕ ಜನರನ್ನು ದಾರಿ ತಪ್ಪಿಸುತ್ತಾರೆ ಇಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಬಿಜೆಪಿಯವರ ಹೆಸರು ಹೇಳದೆ ಜರಿದರು.

ನಮ್ಮ ಸರ್ಕಾರ ಟಿಪ್ಪು ಜಯಂತಿ ಆಚರಿಸಿದಾಗ ಟೀಕೆ ಮಾಡಿದರು. ಆದರೆ, ಅವರು ಅಧಿಕಾರದಲ್ಲಿದ್ದಾಗ ಟಿಪ್ಪುವನ್ನು ಹಾಡಿ ಹೊಗಳಿದ್ದರು. ಟಿಪ್ಪುವಿನ ಕಿರೀಟ, ವೇಷಭೂಷಣ ಹಾಕಿ ಮೆರೆದಾಡಿದರು. ಆತನನ್ನು ದೇಶಪ್ರೇಮಿ ಅಂದರು. ಆದರೆ, ತಮ್ಮ ಅನುಕೂಲಕ್ಕಾಗಿ ಈಗ ದೇಶದ್ರೋಹಿ ಎನ್ನುತ್ತಾರೆ. ಎರಡು ನಾಲಿಗೆಯ ಇಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದರು. 

ರಾಜಕೀಯ ಲಾಭಕ್ಕಾಗಿ ಜಯಂತಿ ಆಚರಿಸುತ್ತಿಲ್ಲ: ಸರ್ಕಾರ ಅನೇಕ ಪುರುಷರು ಮತ್ತು ಮಾತೆಯರ ಜಯಂತಿ ಆಚರಿಸುತ್ತಿದೆ. ಇದರಲ್ಲಿ ವೇಮನ ಜಯಂತಿ 27ನೆಯದ್ದು. ಆದರೆ, ಕೆಲವರು ಈ ಜಯಂತಿಗಳನ್ನು ಆಚರಿಸುತ್ತಿರುವುದಕ್ಕೆ ಟೀಕೆ ಮಾಡುತ್ತಾರೆ. ಮಹಾಪುರುಷರ ತತ್ವ, ವಿಚಾರಗಳನ್ನು ಸಮಾಜಕ್ಕೆ ಹರಡುವ ಕೆಲಸ ಮಾಡುವುದು ಸರ್ಕಾರದ ಕರ್ತವ್ಯ ಎಂದು ಭಾವಿಸಿ ಜಯಂತಿಗಳ ಆಚರಣೆ ಮೂಲಕ ಆ ಕೆಲಸ ಮಾಡಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ಜಯಂತಿ ಆಚರಿಸುವುದಿಲ್ಲ. ಹೀಗಾಗಿ ಅದಕ್ಕೆ ಸೊಪ್ಪು ಹಾಕುವುದಿಲ್ಲ ಎಂದರು.

ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೇಯರ್‌ ಸಂಪತ್‌ರಾಜ್‌, ವಿಧಾನಸಭೆ ಉಪಾಧ್ಯಕ್ಷ ಎನ್‌.ಎಚ್‌.ಶಿವಶಂಕರರೆಡ್ಡಿ, ಸಚಿವರಾದ ಎಚ್‌.ಕೆ.ಪಾಟೀಲ್‌, ರಾಮಲಿಂಗಾರೆಡ್ಡಿ, ರೋಷನ್‌ ಬೇಗ್‌, ಬಸವರಾಜ ರಾಯರಡ್ಡಿ,  ಉಮಾಶ್ರೀ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ್‌ ಮತ್ತಿತರರು ಇದ್ದರು.

ಟಾಪ್ ನ್ಯೂಸ್

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್‌, 38 ಪ್ರಶ್ನೆ!

Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್‌, 38 ಪ್ರಶ್ನೆ!

Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್

Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್

Fraud: ಡಿಕೆಸು ಹೆಸರಲ್ಲಿ 8 ಕೋಟಿ ಸಾಲ ಪಡೆದು ವಂಚನೆ

Fraud: ಡಿಕೆಸು ಹೆಸರಲ್ಲಿ 8 ಕೋಟಿ ಸಾಲ ಪಡೆದು ವಂಚನೆ

Bengaluru: ಸಾಲ ವಾಪಸ್‌ ಕೇಳಿದ್ದಕ್ಕೆ ಮಾಂಸ ಅಂಗಡಿಯಲ್ಲಿ ಭೀಕರ ಹತ್ಯೆ

Bengaluru: ಸಾಲ ವಾಪಸ್‌ ಕೇಳಿದ್ದಕ್ಕೆ ಮಾಂಸ ಅಂಗಡಿಯಲ್ಲಿ ಭೀಕರ ಹತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Kasaragod: ಅಂಗಡಿಗೆ ನುಗ್ಗಿದ ಕಾಡು ಹಂದಿ

5

Kadaba: ಮೇಯಲು ಬಿಟ್ಟ ದನದ ಕಾಲು ಕಡಿದ ವ್ಯಕ್ತಿ; ದೂರು

dw

Siddapura: ವಿದ್ಯುತ್‌ ಲೈನಿಗೆ ಕೊಕ್ಕೆ ತಾಗಿ ಕಾರ್ಮಿಕ ಸಾವು

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

byndoor

Siddapura: ಪಾದಚಾರಿಗೆ ಪಿಕಪ್‌ ವಾಹನ ಢಿಕ್ಕಿ; ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.