ಕಲಾಕ್ಷೇತ್ರದಲ್ಲೀಗ ಹೊಸ ಬೆಳಕಿನ ಕಳೆ
Team Udayavani, Apr 1, 2018, 12:55 PM IST
ಬೆಂಗಳೂರು: ಪುರಭವನ ನವೀಕರಣ ಪೂರ್ಣಗೊಂಡ ಬೆನ್ನಲ್ಲೇ ರವೀಂದ್ರ ಕಲಾಕ್ಷೇತ್ರ ಕೂಡ ಆಧುನೀಕರಣಗೊಂಡಿದೆ. ರಾಜಧಾನಿಯ ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ತಾಣವಾಗಿರುವ ರವೀಂದ್ರ ಕಲಾಕ್ಷೇತ್ರವನ್ನು ಆಧುನಿಕತೆಗೆ ತಕ್ಕಂತೆ ನವೀಕರಿಸಲಾಗಿದೆ. ಪುರಭವನದ ಬಳಿಕ ರವೀಂದ್ರ ಕಲಾಕ್ಷೇತ್ರಕ್ಕೂ ಹೈಟೆಕ್ ಸ್ಪರ್ಶ ದೊರಕಿದ್ದು, ರಂಗ ತಂಡಗಳನ್ನೂ ಜತೆಗೆ ರಂಗಾಸಕ್ತರನ್ನು “ಬನ್ನಿ, ಮರಳಿ ಕಲಾಕ್ಷೇತ್ರಕ್ಕೆ’ ಎನ್ನುತ್ತಿದೆ.
ನೋಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಟ್ಯಾಗೋರರ ಜನ್ಮಶತಾಬ್ದಿ ನೆನಪಿಗಾಗಿ ನಿರ್ಮಿಸಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬೆಳಕು ಮತ್ತು ಧ್ವನಿ ವ್ಯವಸ್ಥೆ ಇಲ್ಲದೆ, ಪ್ರದರ್ಶನಗೊಳ್ಳುವ ನಾಟಕಗಳ ಸಂಖ್ಯೆ ಕಡಿಮೆಯಾಗಿದೆ ಎಂಬ ದೂರು ವ್ಯಾಪಕವಾಗಿತ್ತು. ಕಲಾಕ್ಷೇತ್ರ, ಒಬಿರಾಯನ ಕಾಲದ ವೈರಿಂಗ್, ಬೆಳಕು ಮತ್ತು ಧ್ವನಿ ವ್ಯವಸ್ಥೆಯಲ್ಲೇ ಮುಂದುವರಿಯುತ್ತಿರುವ ಬಗ್ಗೆ ಅಸಮಾಧಾನವೂ ವ್ಯಕ್ತವಾಗಿತ್ತು.
ಇದರ ನಡುವೆ ಇತ್ತೀಚಿನ ವರ್ಷಗಳಲ್ಲಿ ದುರಸ್ತಿಗಾಗಿ ಹಲವು ಬಾರಿ ಕಲಾಕ್ಷೇತ್ರದ ಬಾಗಿಲು ಮುಚ್ಚಲಾಗಿತ್ತು. ಆದರೂ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ. ಅಲ್ಲದೆ, ಸೂಕ್ತ ಧ್ವನಿ-ಬೆಳಕಿನ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕೆ ಸಾಕಷ್ಟು ನಾಟಕ ಪ್ರದರ್ಶನಗಳು ಬೇರೆಡೆ ಸ್ಥಳಾಂತರಗೊಂಡಿದ್ದವು. ಇದು ರಂಗ ತಂಡಗಳು, ರಂಗಾಸಕ್ತರ ಕೋಪಕ್ಕೆ ಕಾರಣವಾಗಿತ್ತು. ಕಲಾಕ್ಷೇತ್ರಕ್ಕೆ ಐವತ್ತು ವರ್ಷ ತುಂಬಿದ ಬೆನ್ನಲ್ಲೇ ರಂಗ ಪ್ರಯೋಗಕ್ಕೆ ಬೇಕಾಗುವ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಆಧುನೀಕರಿಸಬೇಕು ಎಂಬ ಬಲವಾದ ಕೂಗು ರಂಗಭೂಮಿ ಕಲಾವಿದರದ್ದಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಲೋಕಪಯೋಗಿ ಇಲಾಖೆಯ ಸಹಾಯದೊಂದಿಗೆ ಸುಮಾರು 2.24 ಕೋಟಿ ರೂ. ವೆಚ್ಚದಲ್ಲಿ ರವೀಂದ್ರ ಕಲಾಕ್ಷೇತ್ರಕ್ಕೆ ಆಧುನಿಕ ತಂತ್ರಜ್ಞಾನದ ಲುಕ್ ನೀಡಿದೆ. ಇದರಿಂದಾಗಿ ಕಲಾಕ್ಷೇತ್ರ ಮತ್ತೆ ತನ್ನ ಗತವೈಭವವನ್ನು ಕಾಣುವ ದಿನ ಹತ್ತಿರಾಗಿದೆ.
ಹೊಸ ಧ್ವನಿ-ಬೆಳಕು: ಅತ್ಯಾಧುನಿಕ ಧ್ವನಿ-ಬೆಳಕಿನ ವ್ಯವಸ್ಥೆಯ ಜತೆಗೆ ಇಡೀ ಕಲಾಕ್ಷೇತ್ರಕ್ಕೆ ಎಲ್‌ಇಡಿ ದೀಪದ ವ್ಯವಸ್ಥೆ ಮಾಡಿ ಹೊಸ ಕಳೆ ನೀಡಲಾಗಿದೆ. ವಿಶೇಷವೆಂದರೆ, ಈ ಧ್ವನಿ-ಬೆಳಕಿನ ವ್ಯವಸ್ಥೆಯನ್ನು ಡಿಜಿಟಲ್ ತಂತ್ರಜ್ಞಾನವೇ ನಿರ್ವಹಿಸಲಿದೆ. ಉತ್ತಮ ಧ್ವನಿ ಸೌಲಭ್ಯಕಾಕಾಗಿ ಒಟ್ಟು 10 ಅತ್ಯಾಧುನಿಕ ಡಿಜಿಟಲ್ ಸೌಂಡ್ ಬಾಕ್ಸ್‌ಗಳನ್ನು ಅಳವಡಿಸಲಾಗಿದೆ.
8 ಎಲ್‌ಇಡಿ ಸೈಕ್ಲೋರಾಮ ಲೈಟ್ಸ್, 30 ಪಾರ್‌ಲೈಟ್ಸ್, 1 ಕೆ.ವಿಯ 16 ಫ್ರೆನ್ಸೆಲ್ ಲೈಟ್ಸ್, 750 ವ್ಯಾಟ್‌ನ 14 ಎಲ್‌ಇಡಿ ಪ್ರೊಫೈಲ್, 1 ಕೆ.ವಿಯ 30 ಪ್ಲೇನ್ ಮತ್ತು ಕಾನ್ವೆಕ್ಸ್ ಸ್ಪಾಟ್‌ಲೆçಟ್ ಮತ್ತು 2 ಕೆ.ವಿಯ 8 ಸೋಲಾರ್ ಲೈಟ್‌ಗಳನ್ನು ಕಲಾಕ್ಷೇತ್ರದೊಳಗೆ ಅಳವಡಿಸಿದ್ದು, ರಂಗ ತಂಡಗಳು ತಮ್ಮ ಪ್ರದರ್ಶನಕ್ಕೆ ತಕ್ಕಂತೆ ಲೈಟ್‌ಗಳನ್ನು ಬಳಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಶುಕುಮಾರ್ ತಿಳಿಸಿದ್ದಾರೆ.
ಲೈಟಿಂಗ್‌ಗೆಂದೇ 128 ಪಾಯಿಂಟ್‌ಗಳನ್ನು ನೀಡಲಾಗಿದೆ. ಈಗಗಾಲೇ 104 ಲೈಟ್‌ಗಳ ಅಳವಡಿಕೆ ಪೂರ್ಣಗೊಂಡಿದ್ದು, ಎಲ್ಲ 104 ಲೈಟ್‌ಗಳನ್ನು ಪ್ರದರ್ಶನದ ವೇಳೆ ನೀಡಲಾಗುತ್ತಿದೆ. ನಾಡಿನ ರಂಗ ತಂಡಗಳು ಉತ್ತಮ ರಂಗ ಪ್ರಯೋಗ ನೀಡಲು ಈಗ ಕಲಾಕ್ಷೇತ್ರದಲ್ಲಿ ಸಾಕಷ್ಟು ಅವಕಾಶವಿದೆ ಅನ್ನುತ್ತಾರೆ ಹಿರಿಯ ರಂಗ ನಿರ್ದೇಶಕ ಬಿ.ವಿ.ರಾಜಾರಾಂ.
ಈ ಮಧ್ಯೆ, ಕಲಾಕ್ಷೇತ್ರದ ಧ್ವನಿ-ಬೆಳಕಿನ ನವೀಕರಣ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕನ್ನಡ ಮತು ಸಂಸ್ಕೃತಿ ಇಲಾಖೆ ಏ.2ರಿಂದ 10ರವರೆಗೆ ನಾಡಿನ ವಿವಿಧ ರಂಗ ತಂಡಗಳಿಂದ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳ ರಂಗೋತ್ಸವವನ್ನು ಹಮ್ಮಿಕೊಂಡಿದೆ. ಕಲಾಸಕ್ತರಿಗೆ ಉಚಿತ ಪ್ರವೇಶವಿದೆ.
ಸರ್ಕಾರ ಕೋಟ್ಯಂತರ ರೂ. ವೆಚ್ಚಮಾಡಿ ಆಧುನಿಕರಣ ಮಾಡುತ್ತದೆ. ಆದರೆ, ಅದರ ನಿರ್ವಹಣೆ ಸಮರ್ಪಕವಾಗಿರುತ್ತಿರಲಿಲ್ಲ. ಆಧುನಿಕ ಸಲಕರಣೆ ಅಳವಡಿಸಿದ ಮಾತ್ರಕ್ಕೆ ಆಧುನೀಕರಣವಾಗುವುದಿಲ್ಲ. ಅದರ ನಿರ್ವಹಣೆಯೂ ಸುಧಾರಣೆಯಾಗಬೇಕು. ಅದಕ್ಕಾಗಿ ತರಬೇತಿ ಅಗತ್ಯ.
-ಶ್ರೀನಿವಾಸ್ ಜಿ. ಕಪ್ಪಣ್ಣ, ಹಿರಿಯ ರಂಗತಜ್ಞ
ತಜ್ಞರ ಶಿಫಾರಸಿನ ಮೇರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬೆಳಕು ಮತ್ತು ಧ್ವನಿ ವ್ಯವಸ್ಥೆಯ ಡಿಜಿಟಲೀಕರಣ ಮಾಡಲಾಗಿದೆ. ಇಲ್ಲಿ ಎಲ್ಲವನ್ನೂ ಕಂಪ್ಯೂಟರ್ ನಿಯಂತ್ರಿಸಲಿದೆ. ನಾವೀಗ ಈ ಆಧುನಿಕ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕಾಗಿದೆ.
-ಜೆ.ಲೋಕೇಶ್, ನಾಟಕ ಅಕಾಡೆಮಿ ಅಧ್ಯಕ್ಷ
ಕಲಾಕ್ಷೇತ್ರದಲ್ಲಿ ಲೈಟಿಂಗ್ ವ್ಯವಸ್ಥೆ ಆಗಾಗ್ಗೆ ಕೈ ಕೊಡುತ್ತಿತ್ತು. ಈಗ ಡಿಜಿಟಲ್ ಟಚ್ ನೀಡಲಾಗಿದೆ. ರಂಗಭೂಮಿ ಬೆಳೆವಣಿಗೆಯ ದೃಷ್ಟಿಯಿಂದ ಇದೊಂದು ಒಳ್ಳೆಯ ಕೆಲಸ. ಲೈಟ್ಸ್, ಸೌಂಡ್ ನಿರ್ವಹಣೆ ಹೊಣೆಯನ್ನು ಅರ್ಹರಿಗೆ ವಹಿಸಬೇಕು. ಕೈಕೊಡುವ ಬಲ್ಬ್ಗಳನ್ನು ತಕ್ಷಣ ಬದಲಿಸಬೇಕು.
-ಮೈಕೋ ಶಿವಶಂಕರ್, ರಂಗಕರ್ಮಿ
ಈ ಮೊದಲು ಕಲಾಕ್ಷೇತ್ರದಲ್ಲಿ ಸೌಂಡ್ ಸಿಸ್ಟಂಮ್ ಹದಗೆಟ್ಟು, ಧ್ವನಿ ಸರಿಯಾಗಿ ಕೇಳುತ್ತಿರಲಿಲ್ಲ. ಈಗ ಅಂತಹ ತೊಂದರೆ ಇಲ್ಲ. ನಾಡಿನ ರಂಗಭೂಮಿ ತಂಡಗಳು ಕಲಾಕ್ಷೇತ್ರವನ್ನು ಹೆಚ್ಚು ಬಳಸಿಕೊಳ್ಳಲಿ.
-ಮಹಾಬಲೇಶ್ವರ ಸುಳ್ಳೂರು, ರಂಗ ನಿರ್ದೇಶಕ
* ದೇವೇಶ ಸೂರುಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.