ಹೊಸ ವರ್ಷದ ಸಂಭ್ರಮ:ಮದಿರೆಯ ಮತ್ತಲ್ಲಿ ಕುಣಿದು ಕುಪ್ಪಳಿಸಿದ ಯುವಜನತೆ

Team Udayavani, Jan 1, 2017, 2:35 PM IST

4.jpg

ಬೆಂಗಳೂರು: ಬ್ರಿಗೇಡ್‌ ರಸ್ತೆ, ಎಂ.ಜಿ. ರಸ್ತೆ, ಕೋರಮಂಗಲ ಸೇರಿದಂತೆ ಇಲ್ಲಿನ “ಹಾಟ್‌ ಸ್ಪಾಟ್‌’ಗಳಲ್ಲಿ ಶನಿವಾರ ಮಧ್ಯರಾತ್ರಿ “ಆಧುನಿಕ ಜಾತ್ರೆ’ ನೆರೆದಿತ್ತು. ಈ ಜಾತ್ರೆಗೆ ನಗರ ವಿದ್ಯುದ್ದೀಪಾಲಂಕಾರಗಳಿಂದ ಝಗಮಗಿಸುತ್ತಿತ್ತು. ಹಿಂದಿನ ವರ್ಷದ ಕೊನೆಯ ಮತ್ತು ಹೊಸ ವರ್ಷದ ಮೊದಲ ಕ್ಷಣಗಳು ಸಂಧಿಸುತ್ತಿದ್ದಂತೆ ಉತ್ಸಾಹದ ಕಟ್ಟೆಒಡೆಯಿತು. ಇಡೀ ಸಿಲಿಕಾನ್‌ ಸಿಟಿ ಅಕ್ಷರಶಃ ಕುಣಿದುಕುಪ್ಪಳಿಸಿತು.

ಕನಸುಗಳ ಕನವರಿಕೆಗಳನ್ನು ನನಸು ಮಾಡಲಿರುವ “ಭರವಸೆ’ ಎಂಬ ಹೊಸ ವರ್ಷವನ್ನು ಅತ್ಯಂತ ಸಡಗರದಿಂದ ಬರಮಾಡಿಕೊಂಡಿತು. ಉತ್ಸಾಹದ ಕಿಚ್ಚು ಹಚ್ಚುವ ಯುವಸಮುದಾಯದ ಸಂಗೀತ, ನೃತ್ಯಗಳು ನಗರವನ್ನು ಮನರಂಜನೆಯ ಅಲೆಯಲ್ಲಿ ತೇಲುವಂತೆ ಮಾಡಿದವು. ಅದರಲ್ಲೂ ವಿಶಿಷ್ಟವಾಗಿ ಬ್ರಿಗೇಡ್‌ ರಸ್ತೆ ನವವಧುವಿನಂತೆ ಸಿಂಗಾರಗೊಂಡಿತ್ತು. ಈ ಸಂಭ್ರಮಕ್ಕಾಗಿ ಹೊಸ ವರ್ಷದ ಭರ್ಜರಿ ಸ್ವಾಗತಕ್ಕೆ ಕಳೆದೆರಡು ದಿನಗಳಿಂದಲೇ ಬ್ರಿಗೇಡ್‌ ರಸ್ತೆ ಮತ್ತು ಎಂ.ಜಿ. ರಸ್ತೆಯಲ್ಲಿ ವೇದಿಕೆ ಸಿದ್ಧಗೊಂಡಿತ್ತು. ಝಗಮಗಿಸುವ ದೀಪಾಲಂಕಾರ, ಎದೆ ನಡುಗಿಸುವ ಸಂಗೀತದ ಅಲೆಗಳಿಂದಾಗಿ ಈ ಎರಡೂ ರಸ್ತೆಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದವು. ಅತ್ತ ಸೂರ್ಯ ಅಸ್ತಂಗತವಾಗುತ್ತಿದ್ದಂತೆ “ಹೊಸ ವರ್ಷದ ವೇದಿಕೆ’ಯತ್ತ ಯುವಸಮೂಹ ಉತ್ಸಾಹದಿಂದ ತಂಡೋಪತಂಡವಾಗಿ ಹೆಜ್ಜೆಹಾಕಿತು. ರಾತ್ರಿ 10ರಿಂದಲೇ ನಗರದ ಮೂಲೆ, ಮೂಲೆಯಲ್ಲಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಅಲ್ಲಿ ಜಮಾವಣೆಗೊಳ್ಳುತ್ತಿದ್ದರು. ಗಡಿಯಾರದ ಮುಳ್ಳುಗಳು 12ರ ಕಡೆಗೆ ಮುಖಮಾಡುತ್ತಿದ್ದಂತೆ ನೆರೆದವರೆಲ್ಲಾ ಹುಚ್ಚೆದ್ದು ಕುಣಿದರು. ಪರಸ್ಪರ ಕೈ-ಕುಲುಕಿ ಅಪ್ಪುಗೆ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಇದಕ್ಕೆ ಅಪರಿಚಿತರೂ ಹೊರತಾಗಿರಲಿಲ್ಲ. ಎದುರಾದವರನ್ನೆಲ್ಲಾ ಅಪ್ಪಿಕೊಂಡು “ಹ್ಯಾಪಿ ನ್ಯೂ ಇಯರ್‌’ ಎಂದು ಶುಭ ಕೋರುವುದು ಸಾಮಾನ್ಯವಾಗಿತ್ತು. ನಗರದ ವಿವಿಧೆಡೆ ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಯುವಮನಸ್ಸುಗಳು ರಸ್ತೆಗಿಳಿದು ಪಟಾಕಿ ಸಿಡಿಸಿ, ಹಳೆಯ ವರ್ಷಕ್ಕೆ ವಿದಾಯ ಹೇಳಿದರು. “ಹಾಟ್‌ಸ್ಪಾಟ್‌’ನಲ್ಲಿಯ ಈ ಪರಿಯ ಭರ್ಜರಿ ಸ್ವಾಗತಕ್ಕೆ ಚಳಿ ಕೂಡ ಕೆಲಹೊತ್ತು ನಡುಗಿ ಹಿಂದೆಸರಿಯಿತು.

ರಾತ್ರಿ 12ರ ಸುಮಾರಿಗೆ ನಗರದ ಚಿತ್ರಣವೇ ಬದಲಾಯಿತು. ಕುಡಿತ-ಕುಣಿತದೊಂದಿಗೆ ಹೊಸ ವರ್ಷದ ಸಂಭ್ರಮದಲ್ಲಿ ಯುವಮನಸ್ಸುಗಳು ಮಿಂದೆದ್ದವು. ಇನ್ನು ನಗರದ ಇತರ ಬಾರ್‌, ಕ್ಲಬ್‌, ಪಬ್‌ಗಳು, ಡಿಸ್ಕೋಥೆಕ್‌ಗಳಲ್ಲಿ 12ಕ್ಕೆ ಹೊರಳಿದ ಕಾಲಚಕ್ರವನ್ನು ಮದಿರೆಯ ಮತ್ತಿನಲ್ಲೇ ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಮುನ್ನ ದಿನವೇ ಪೀಠಿಕೆ ಹಾಕಿಕೊಂಡಿದ್ದ ಜನ, ಶಾಪಿಂಗ್‌ ಮಾಲ್‌ಗ‌ಳಿಗೆ, ಬಾರ್‌-ರೆಸ್ಟೋರೆಂಟ್‌, ಪಬ್‌ ಗಳಲ್ಲಿ ಸೀಟುಗಳನ್ನು ಕಾಯ್ದಿರಿಸಿದ್ದರು. ಅಲ್ಲದೇ, ಅವರವರ ಮನೆಗಳಿಂದಲೇ ಗ್ರಾಹಕರನ್ನು ಕರೆತರುವ ವ್ಯವಸ್ಥೆಯನ್ನೂ ಆಯಾ ಪಬ್‌-ಕ್ಲಬ್‌ಗಳ ಮಾಲೀಕರು ವ್ಯವಸ್ಥೆ ಮಾಡಿದ್ದರು. ಪ್ರೇಮಿಗಳು ಹೆಚ್ಚಾಗಿ ಜಮಾಯಿಸಿದ್ದ ಬ್ರಿಗೇಡ್‌ ರಸ್ತೆ, ಮೋಜಿನ ತಾಣವಾಗಿ ಮಾರ್ಪಟ್ಟಿತ್ತು.

ಸೆಲ್ಫಿ ಧಾವಂತ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ “ನಮ್ಮ ಮೆಟ್ರೋ’ದ ಹೆಚ್ಚುವರಿ ವಾಣಿಜ್ಯ ಸಂಚಾರ ಸೇವೆಯನ್ನು ಕಲ್ಪಿಸಲಾಗಿತ್ತು. ಎಂ.ಜಿ. ರಸ್ತೆಯಲ್ಲಿ ಕುಣಿದು-ಕುಪ್ಪಳಿಸಿದ ಇಂದಿರಾನಗರ, ಟ್ರಿನಿಟಿ ಸರ್ಕಲ್‌, ಬೈಯಪ್ಪನಹಳ್ಳಿ ಸೇರಿದಂತೆ ಆ ಮಾರ್ಗದ ಜನ ಮೆಟ್ರೋ ರೈಲು ಏರಿದರು. ಅಲ್ಲಿಂದಲೇ ನಗರದ ಸೌಂದರ್ಯವನ್ನು ಮೊಬೈಲ್‌ಗ‌ಳಲ್ಲಿ ಕ್ಲಿಕ್ಕಿಸುತ್ತಿರುವುದು, ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು.

ಪೊಲೀಸರ ಹರಸಾಹಸ
ಹೊಸ ವರ್ಷಚಾರಣೆಗೆ ಒಮ್ಮೆಲೆ ಜನ ಎಂ.ಜಿ. ರಸ್ತೆಯತ್ತ ಧಾವಿಸಿದ್ದರಿಂದ ಸುತ್ತಮುತ್ತ ವಾಹನದಟ್ಟಣೆ ಹೆಚ್ಚಾಗಿತ್ತು. ನೂಕುನುಗ್ಗಲು ಉಂಟಾಗಿ, ಗುಂಪು ಚದುರಿಸಲು ಪೊಲೀಸರು ಲಾಠಿ ಚದುರಿಸಿದರು. ಸಾಮಾನ್ಯವಾಗಿ ಡಿ. 31ರ ರಾತ್ರಿ 8ಕ್ಕೇ ಎಂ.ಜಿ. ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗುತ್ತದೆ. ಆದರೆ, ಈ ಬಾರಿ 11ರವರೆಗೂ ವಾಹನ ಸಂಚಾರಕ್ಕೆ ಅವಕಾಶ ಇದ್ದುದರಿಂದ ಎಂದಿಗಿಂತ ವಿಪರೀತ ಸಂಚಾರದಟ್ಟಣೆ ಉಂಟಾಗಿತ್ತು. ಎಂ.ಜಿ. ರಸ್ತೆ, ಹಲಸೂರು ಮುಖ್ಯರಸ್ತೆ, ಡಿಕೆನ್ಸನ್‌, ಕಮರ್ಷಿಯಲ್‌ ಸ್ಟ್ರೀಟ್‌, ಶಿವಾಜಿನಗರ, ರಿಚ್‌ಮಂಡ್‌ ರಸ್ತೆ, ಕಸ್ತೂರಬಾ ರಸ್ತೆ, ಕಬ್ಬನ್‌ ಪಾರ್ಕ್‌ ರಸ್ತೆಗಳಲ್ಲೆಲ್ಲಾ ಜನ ಹೆಜ್ಜೆ-ಹೆಜ್ಜೆಗೂ ಪರದಾಡಿದರು. 

ನೃತ್ಯದ ನಡುವೆ ಕುಸಿದು ಬಿದ್ದ  ಯುವಕ ಅಸ್ವಸ್ಥ

ಹೊಸ ವರ್ಷದ ಸಂಭ್ರಮದಲ್ಲಿ ನೃತ್ಯ ಮಾಡುತ್ತಿದ್ದಾಗ ಶಿವಮೊಗ್ಗ ಮೂಲದ ನಿಶಾಂತ್‌ (28) ಕುಸಿದುಬಿದ್ದು ಅಸ್ವಸ್ಥಗೊಂಡ ಘಟನೆ ಬ್ರಿಗೇಡ್‌ ರಸ್ತೆಯಲ್ಲಿ ನಡೆದಿದೆ. ಅಸ್ವಸ್ಥಗೊಂಡ ನಿಶಾಂತ್‌ನನ್ನು ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಆತನೇ ಏಕಾಏಕಿ ಕುಸಿದು ಬಿದ್ದಿದ್ದಾನೋ ಅಥವಾ ಯಾರಾದರೂ ಹಲ್ಲೆ ನಡೆಸಿದ್ದಾರೋ ಅನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಸಂದೀಪ ಪಾಟೀಲ್‌ ತಿಳಿಸಿದ್ದಾರೆ. 

ಸಂಭ್ರಮದ ನಡುವೆ ಕನ್ನಡ ಪಾಠ!

ಬ್ರಿಗೇಡ್‌ ರಸ್ತೆಯಲ್ಲಿ ಸೇರಿದ್ದ ಇಡೀ ಸಮುದಾಯ ಮನರಂಜನೆಯ ಅಮಲಿನಲ್ಲಿತ್ತು. ಆ ಭರಾಟೆಯ ನಡುವೆ ತಮಿಳು ಮೂಲದ ವ್ಯಕ್ತಿಯಿಂದ “ಕನ್ನಡ ಪಾಠ’ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಇಂಟೀರಿಯರ್‌ ಡಿಸೈನರ್‌ ಮತ್ತು ಸಿಸಿಟಿವಿ ಅಳವಡಿಕೆ ಕೆಲಸ ಮಾಡುವ ಶಕ್ತಿವೇಲು ಅವರು, ಬ್ರಿಗೇಡ್‌ ರಸ್ತೆಯಲ್ಲಿ ನೆರೆದ ಜನರಿಗೆ “ಹೊಸ ವರ್ಷಕ್ಕಾದ್ರೂ ಬದಲಾಗಿ, ಕನ್ನಡಿಗರು ಕನ್ನಡ ಮಾತಾಡಿ’ ಎಂದು ಕನ್ನಡಿಗರಿಗೆ ಅರಿವು ಮೂಡಿಸುವ ಕೆಲಸ ಮಾಡಿದರೆ, “ಕಲಿಯೋಕೆ ಕೋಟಿ ಭಾಷೆ, ಹಾಡೋಕೆ ಒಂದೇ ಭಾಷೆ ಕನ್ನಡ…’ ಎಂದು ಅಲ್ಲಿ ಬಂದಿದ್ದ ಉತ್ತರ ಭಾರತದ ಮೂಲನಿವಾಸಿಗಳು, ಟೆಕ್ಕಿಗಳಿಗೆ ತಿಳಿಹೇಳುವ ಕೆಲಸವನ್ನೂ ಮಾಡಿದರು.ಕನ್ನಡ ಧ್ವಜವನ್ನು ಹೋಲುವ ಫ‌ಲಕಗಳ ಮೇಲೆ ಕನ್ನಡ ಕಲಿಕೆಯ ಮಹತ್ವವನ್ನು ಸಾರುತ್ತಿರುವುದು ಕಂಡುಬಂತು. ಸಂಗೀತ-ಕುಣಿತದ ನಡುವೆ ಕೆಲವರು ಇದರ ಮೇಲೆ ಕಣ್ಣಾಡಿಸುವ ಪ್ರಯತ್ನವನ್ನೂ ಮಾಡಿದರು. 

ಟಾಪ್ ನ್ಯೂಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

Road mishap: ಗೂಡ್ಸ್‌ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್‌ ಕಾನ್‌ಸ್ಟೇಬಲ್ ಸಾವು

Road mishap: ಗೂಡ್ಸ್‌ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್‌ ಕಾನ್‌ಸ್ಟೇಬಲ್ ಸಾವು

Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್‌ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ

Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್‌ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ

Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ

Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.