ರಾತ್ರಿ ಕರ್ಫ್ಯೂ: ಊರು ಸೇರಲು ತವಕಿಸಿದ ಜನ
Team Udayavani, Apr 11, 2021, 1:25 PM IST
ಬೆಂಗಳೂರು: ಸಾರಿಗೆ ಸಂಸ್ಥೆಯ ನೌಕರರು ನಡೆಸುತ್ತಿರುವ ಮುಷ್ಕರ ಐದನೇ ದಿನಕ್ಕೆ ಕಾಲಿರಿಸಿದೆ. ಹೀಗಾಗಿ ಜನರು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿಶನಿವಾರ ಬೆಳಗ್ಗೆಯೆ ತಮ್ಮ ಲಗೇಜ್‌ಗಳನ್ನು ಹಿಡಿದುಖಾಸಗಿ ಬಸ್‌ಗಳಲ್ಲೇ ಪ್ರಯಾಣಿಸಿದರು. ನೈಟ್‌ಕರ್ಫ್ಯೂ ಜಾರಿ ಮೊದಲೆ ಊರು ಸೇರಬೇಕು ಎಂಬ ಧಾವಂತ ಅವರಲ್ಲಿತ್ತು.
ಸರ್ಕಾರ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ ರಾತ್ರಿ ಬಸ್ ಇಲ್ಲದೆ ಹೋದರೆ ಊರುಸೇರಲು ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯೇ ತಮ್ಮ ಊರುಗಳತ್ತ ಮುಖಮಾಡುತ್ತಿದ್ದ ದೃಶ್ಯ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕಂಡು ಬಂತು.
ಕಲಬುರಗಿ, ಬಳ್ಳಾರಿ, ಬೀದರ್,ಕೊಪ್ಪಳ, ವಿಜಯಪುರ, ಕೋಲಾರ,ಹೊಸದುರ್ಗ, ಶಿವಮೊಗ್ಗ,ಅರಸಿಕೆರೆ, ತುಮಕೂರು, ಧಾರವಾಡ, ಹಾವೇರಿ, ದಾವಣಗೆರೆ, ಮೈಸೂರು, ಕೊಡುಗು , ಹಾಸನ ಮತ್ತುಚಿಕ್ಕಮಗಳೂರು ಭಾಗದ ಜನರು ಪುಟಾಣಿ ಮಕ್ಕಳೊಂದಿಗೆ ಖಾಸಗಿ ಬಸ್ ಏರಿ ತಮ್ಮ ಸ್ವಗ್ರಾಮಗಳತ್ತಮುಖ ಮಾಡಿದರು. ಈ ವೇಳೆ ಮಾತನಾಡಿ ಬಳ್ಳಾರಿ ಮೂಲದ ಕಾರ್ಮಿಕ ಸಂಗಪ್ಪ ಬಿರಾದಾರ್, ಹೊಟ್ಟೆತುಂಬಿಸಿಕೊಳ್ಳಲು ಬೆಂಗಳೂರಿಗೆ ಸಂಸಾರ ಸಮೇತ ಬಂದಿದ್ದೆ.ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ಹೋಗುತ್ತಿದ್ದೇನೆ. ಸರ್ಕಾರ ಈಗಾಗಲೇ ಕೆಲವು ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ ಹೊತ್ತಿನ ಮುಂಚೆ ಊರು ಸೇರೋಣ ಎಂದು ತೀರ್ಮಾನಿಸಿ ಬೆಳಗ್ಗೆಯೇ ಬಸ್ ಏರುತ್ತಿರುವುದಾಗಿ ಹೇಳಿದರು.
ಬಿಕೋ ಎನುತ್ತಿದ್ದ ಬಿಎಂಟಿಸಿ ಬಸ್ ನಿಲ್ದಾಣಗಳು: ಸಾರಿಗೆ ಸಂಸ್ಥೆಯ ನೌಕರರ ಮುಷ್ಕರದ ಹಿನ್ನೆಲೆಯಲ್ಲಿಶಾಂತಿನಗರ, ಬನಶಂಕರಿ, ಶಿವಾಜಿ ನಗರ, ಮೆಜೆಸ್ಟಿಕ್,ಯಶವಂತಪುರ ಸೇರಿದಂತೆ ಹಲವು ಬಸ್ ನಿಲ್ದಾಣಗಳಲ್ಲಿ ಜನರಿಲ್ಲದೆ ಬಿಕೋ ಅನ್ನುತ್ತಿದ್ದವು.ಬಿಎಂಟಿಸಿಯ ಹಿರಿಯ ಅಧಿಕಾರಿಗಳನ್ನು ಹೊರತುಪಡಿಸಿದರೆ ಇಡೀ ಬಸ್ ನಿಲ್ದಾಣಗಳು ಖಾಲಿ ಖಾಲಿಯಾಗಿದ್ದವು. ಮೆಜೆಸ್ಟಿಕ್‌ನಲ್ಲಿ ಜಿಗಣಿ, ತಾವರೆಕೆರೆ, ಮಾಗಡಿ ರಸ್ತೆ, ಯಶವಂತಪುರ, ವಿದ್ಯಾರಣ್ಯಪುರ,ಯಲಹಂಕ, ವಿಜಯನಗರ, ಬನಶಂಕರಿ, ಹೆಸರುಘಟ್ಟಸೇರಿದಂತೆ ಇನ್ನಿತರ ಕಡೆಗಳಲ್ಲಿ ಖಾಸಗಿ ಬಸ್‌ಗಳುಪ್ರಯಾಣಿಸಿದವು. ಆದರೆ ಎಲ್ಲಾ ಬಸ್‌ಗಳಲ್ಲಿಆಸನಗಳು ಭರ್ತಿಯಾಗಿರಲಿಲ್ಲ. ಆ ಹಿನ್ನೆಲೆಯಲ್ಲಿತಾಸು ಗಟ್ಟಲೆ ಪ್ರಯಾಣಿಕರು ಕಾಯುವ ಪರಿಸ್ಥಿತಿ ಉಂಟಾಗಿತ್ತು.
ಬಿಎಂಟಿಸಿ ಬಸ್‌ಗಳ ಸಂಚಾರ: ಪೋಲಿಸರ ಭದ್ರತೆಯಲ್ಲಿ ಶನಿವಾರ ಬೆರಳಣಿಕೆ ಸಂಖ್ಯೆಯಲ್ಲಿಬಿಎಂಟಿಸಿ ಬಸ್‌ಗಳು ನಗರದ ವಿವಿಧ ಕಡೆಗಳಪ್ರಯಾಣಿಕರನ್ನು ಹೊತ್ತು ಸಂಚರಿಸಿದವು.ವಿಜಯನಗರ, ಕಾಮಾಕ್ಷಿ ಪಾಳ್ಯ, ಚಂದ್ರಾಲೇಔಟ್, ಯೂನಿವರ್ಸಿಟಿ ಕ್ವಾಟ್ರಸ್, ಮಾಲತ್ತಹಳ್ಳಿ, ಸುಜಾತಸೇರಿದಂತೆ ಹಲವು ಕಡೆಗಳತ್ತ ಬಿಎಂಟಿಸಿ ಬಸ್‌ಗಳುಪಯಣಿಸಿದವು. ಹಾಗೆಯೇ ಯಲಹಂಕ, ಚಿಕ್ಕಜಾಲ, ಸಾದೇನಹಳ್ಳಿಯತ್ತ ಮೆಜೆಸ್ಟಿಕ್ ನಿಂದ ಸಾಗಿದವು. ಜತೆಗೆಅಂತಾರಾಷ್ಟ್ರೀಯ ವಿಮಾನದತ್ತ ಪ್ರಯಾಣಿಸುವ ವೋಲ್ವೊ ಬಸ್‌ಗಳ ಸಂಖ್ಯೆ ಕೂಡ ಅಧಿಕ ವಿತ್ತು. ವಿಮಾನದ ಮೂಲಕ ವಿವಿಧ ರಾಜ್ಯಗಳಿಗೆ ತೆರಳುವಜನರಿಗೆ ತೊಂದರೆ ಆಗಬಾರದು ಎಂಬ ಉದ್ದೇಶ ವೋಲ್ವೊ ಬಸ್ ಸಂಚಾರವನ್ನು ಮಾಡಲಾಗಿದೆ ಎಂದುಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದರು.
ಕೆಂಪೇಗೌಡ ಬಸ್ ನಿಲ್ದಾಣದ “ಟರ್ಮಿನಲ್ 2ಎ’ ದಿಂದ ಹಾಸನ ಮಾರ್ಗವಾಗಿ ಕೆಲವು ಸಂಖ್ಯೆಯಲ್ಲಿ ಐರಾವತ ಮತ್ತು ಸಾಮಾನ್ಯ ಬಸ್‌ಗಳು ಮಂಗಳೂರಿನತ್ತಸಾಗಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.