ನಲಪಾಡ್‌ಗೆ ಪರಪ್ಪನೇ ಗತಿ: ಜಾಮೀನು ನಿರಾಕರಿಸಿದ ಕೋರ್ಟ್‌


Team Udayavani, Mar 3, 2018, 6:00 AM IST

Ban03031803Medn-R3.jpg

ಬೆಂಗಳೂರು: ಉದ್ಯಮಿ ಲೋಕನಾಥ್‌ ಪುತ್ರ ವಿದ್ವತ್‌ ಮೇಲೆ ಹಲ್ಲೆ ನಡೆಸಿ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಾಸಕ ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಹಾಗೂ ಆತನ ಸಹಚರರಿಗೆ ಸದ್ಯ ಕ್ಕಂತೂ ಜೈಲೇ ಗತಿ.

ಮೊಹಮ್ಮದ್‌ ನಲಪಾಡ್‌ ಸೇರಿ 8 ಮಂದಿ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು 63ನೇ ಸಿಸಿಎಚ್‌ ನ್ಯಾಯಾಲಯ ವಜಾಗೊಳಿಸಿ ತೀರ್ಪು ನೀಡಿದೆ. ಜಾಮೀನು ಅರ್ಜಿಯ ಕುರಿತು ಸಾಕಷ್ಟು ವಾದ- ಪ್ರತಿವಾದಗಳ ಬಳಿಕೆ ತೀರ್ಪು ಕಾಯ್ದಿಟ್ಟಿದ್ದ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಶುಕ್ರವಾರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿ ಆದೇಶ ಪ್ರಕಟಿಸಿದರು. ಜಾಮೀನು ಮಂಜೂರು ಮಾಡದಿರುವ ಅಧೀನ ನ್ಯಾಯಾಲಯದ ಆದೇಶದ ವಿರುದ್ಧ  ಆರೋಪಿಗಳ ಪರ ವಕೀಲರಾದ ಟಾಮಿ ಸೆಬಾಸ್ಟಿನ್‌ ಹಾಗೂ ಬಾಲನ್‌ ಶನಿವಾರ ಅಥವಾ ಸೋಮವಾರ ಹೈಕೋರ್ಟ್‌ನಲ್ಲಿ ಜಾಮೀನಿಗಾಗಿ ಮೇಲ್ಮನವಿ ಸಲ್ಲಿಸಲಿದ್ದಾರೆ.

ಜಾಮೀನು ವಜಾಕ್ಕೆ ಕಾರಣಗಳು: ಮೊಹಮ್ಮದ್‌ ನಲಪಾಡ್‌ ಹಾಗೂ ಇತರೆ ಆರೋಪಿಗಳಿಗೆ ಜಾಮೀನು ನೀಡದಿರಲು ನ್ಯಾಯಾಧೀಶರು ಆದೇಶದಲ್ಲಿ ಕೆಲ ಕಾರಣಗಳನ್ನು ನೀಡಿದ್ದಾರೆ. ವಿದ್ವತ್‌ ಮೇಲೆ ಹಲ್ಲೆ ನಡೆಸಿರುವುದು ಗಂಭೀರ ಪ್ರಕರಣವಾಗಿದೆ. ಹಲ್ಲೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಗಾಯಾಳು ವಿದ್ವತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ತನಿಖಾಧಿಕಾರಿಗಳು ವಿದ್ವತ್‌ ಹೇಳಿಕೆ ಇದುವರೆಗೆ ದಾಖಲಿಸಿಲ್ಲ.

ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆಯಿದೆ, ಘಟನೆ ವೇಳೆ ಮೊಹಮ್ಮದ್‌ ನಲಪಾಡ್‌ ವರ್ತನೆ ಹಾಗೂ ಆಸ್ಪತ್ರೆಗೆ ನುಗ್ಗಿ ಹಲ್ಲೆಗೆ ಮುಂದಾಗಿರುವ ಆರೋಪವಿದೆ. ಈ ಸಂದರ್ಭದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದರೆ ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ಬೆದರಿಕೆಯೊಡ್ಡುವ ಅಥವಾ ತಲೆಮರೆಸಿಕೊಂಡು ಮತ್ತಷ್ಟು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ.

ಗಂಭೀರ ಪ್ರಕರಣವಾದ ಜೀವಾವಧಿ ಶಿಕ್ಷೆಗೆ ಅರ್ಹವಾಗಿರುವ (ಸೆ.307) ಪ್ರಕರಣದಲ್ಲಿ ಆರೋಪಿಗಳಿಗೆ ಈ ಹಂತದಲ್ಲಿ ಜಾಮೀನು ನೀಡುವುದು ಸಾಧ್ಯವಿಲ್ಲ. ಪ್ರಕರಣದ ಎರಡನೇ ಆರೋಪಿ ಅರುಣ್‌ಬಾಬು ನೀಡುವ ದೂರಿನಲ್ಲಿ ಹಲ್ಲೆ ನಡೆದ ಸಮಯವನ್ನು ತಿರುಚಿದ್ದು, ದೂರಿನ ಪ್ರತಿಯಲ್ಲಿ ದಾಖಲಿಸಿರುವ ಘಟನಾ ಸಮಯದಲ್ಲಿ ವಿದ್ವತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಮೂಲಕ ನೇರವಾಗಿ ತನಿಖೆ ಮೇಲೆ ಪ್ರಭಾವ ಬೀರಲು ಯತ್ನಿಸಿರುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜದ ಹಿತದೃಷ್ಟಿಯಿಂದ ಜಾಮೀನು ನೀಡುವುದು ಸರಿಯಲ್ಲ ಎಂದು ನ್ಯಾಯಾಧೀಶರು ಜಾಮೀನು ಅರ್ಜಿ ತಿರಸ್ಕರಿಸಿದ್ದಾರೆ.

ಫೆ.17ರಂದು ರಾತ್ರಿ ಯುಬಿ ಸಿಟಿಯ ಫ‌ರ್ಜಿ ಕೆಫೆಯಲ್ಲಿ ವಿದ್ವತ್‌ ಮೇಲೆ ಮೊಹಮ್ಮದ್‌ ನಲಪಾಡ್‌ ಹಾಗೂ ಇತರರು ಹಲ್ಲೆ ನಡೆಸಿದ್ದರು. ಬಳಿಕ ಕೆಫೆಯ ಕಾರು ಪಾರ್ಕಿಂಗ್‌ನಲ್ಲಿ ಹಲ್ಲೆಗೈದಿದ್ದು, ಆಸ್ಪತ್ರೆಗೆ ಹೋಗಿ ಧಮ್ಕಿ ಹಾಕಿದ್ದರು. ಅನಂತರ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಮೊಹಮ್ಮದ್‌ ನಲಪಾಡ್‌  ಫೆ.19ರಂದು ಠಾಣೆಗೆ ಶರಣಾಗಿದ್ದು, ಇತರೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಜಾಮೀನು ನೀಡುವ ಕೇಸು ಇದಲ್ಲ
ಜಾಮೀನು ಅರ್ಜಿ ತಿರಸ್ಕೃತ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸರ್ಕಾರಿ ವಿಶೇಷ ಅಭಿಯೋಜಕ ಶ್ಯಾಮ್‌ಸುಂದರ್‌, ವಿದ್ವತ್‌ ಮೇಲೆ ಗಂಭೀರ ಗಾಯಗಳಾಗಿವೆ. ವೈದ್ಯಕೀಯ ಪರೀûಾ ವರದಿ ಕೂಡ ಸಲ್ಲಿಸಿದ್ದೇವೆ. ಹೀಗಾಗಿ ಜಾಮೀನು ಕೊಡುವ ಕೇಸ್‌ ಇದಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟು ತೀರ್ಪು ನೀಡಿದ್ದಾರೆ. ಈ ತೀರ್ಪು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತದೆ. ನನಗೂ ಸಂತೋಷವಾಗಿದೆ ಎಂದರು.

ಪ್ರಕರಣದಲ್ಲಿ ಸಾರಾಂಶ ಇಲ್ಲದಿದ್ದರೂ ಮಾಧ್ಯಮಗಳು ಪ್ರಕರಣವನ್ನು ದೊಡ್ಡದು ಮಾಡಿದ್ದವು. ಇದು ತೀರ್ಪಿನ ಮೇಲೆ ಪ್ರಭಾವ ಬೀರಿರಬಹುದು. ಇನ್ನು ಫೆ.28ರಂದು ಆಸ್ಪತ್ರೆ ವೈದ್ಯರು ವಿದ್ವತ್‌ನನ್ನು ಡಿಸಾcರ್ಜ್‌ ಮಾಡುತ್ತೇವೆ ಎಂದರೂ ರೋಗಿ ಕಡೆಯವರು ಹೋಗಲ್ಲ ಎಂದಿದ್ದಾರೆ. ಅನಗತ್ಯವಾಗಿ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದಾರೆ. ಇದನ್ನೆ ಎಸ್‌ಪಿಪಿ ವಾದ ಮಂಡಿಸಿ ಜಾಮೀನು ನೀಡಬಾರದು ಎಂದು ವಾದಿಸಿದ್ದರು. ಹೀಗಾಗಿ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲಿದ್ದೇವೆ ಎಂದು ಮೊಹಮ್ಮದ್‌ ಪರ ವಕೀಲ ಟಾಮಿ ಸೆಬಾಸ್ಟಿನ್‌ ಪ್ರತಿಕ್ರಿಯಿಸಿದರು.

ಮೊಹಮ್ಮದ್‌ ಹೊರತು ಪಡಿಸಿ ಇತರೆ ಆರೋಪಿಗಳ ಪರ ವಕೀಲ ಬಾಲನ್‌ ಮಾತನಾಡಿ, ಈ ಪ್ರಕರಣದಲ್ಲಿ ಜಾಮೀನು ನೀಡಿದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಎಸ್‌ಪಿಪಿ ವಾದಿಸುತ್ತಾರೆ. ಇದು ಸುಳ್ಳು. ಬೆಂಗಳೂರಿನಲ್ಲಿ ಏನೇನೋ ನಡೆಯುತ್ತೆ. ಎಷ್ಟು ಜನ ನೀರು, ಊಟ ಇಲ್ಲದೇ ಸಾಯುತ್ತಾರೆ. ಅದು ಸಮಾಜಕ್ಕೆ ಕೆಟ್ಟ ಸಂದೇಶ ಬೀರುವುದಿಲ್ಲವೇ?. ಹಣವಂತರು ಕಾರ್ಪೋರೇಟ್‌ ಆಸ್ಪತ್ರೆಯಲ್ಲಿ ದಾಖಲಾಗಿ, ಪ್ರಾಸಿಕ್ಯೂಷನ್‌ ಹಾಗೂ ಪೊಲೀಸರನ್ನು ಮ್ಯಾನೇಜ್‌ ಮಾಡಿದರೆ ಯಾರನ್ನು ಬೇಕಾದರೂ ಜೈಲಿಗೆ ಕಳುಹಿಸಬಹುದು ಎಂಬ ಸಂದೇಶ ಸಮಾಜಕ್ಕೆ ಸಿಕ್ಕಿದೆ. ವಿದ್ವತ್‌ ಕಾರ್ಪೋರೇಟ್‌ ಆಸ್ಪತ್ರೆ ಹೊರತು ಪಡಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಸತ್ಯಾಂಶ ಬೆಳಕಿಗೆ ಬರುತ್ತಿತ್ತು. ಕಾಲು ಮುರಿದು ಕೊಂಡಿರುವ ವಿದ್ವತ್‌ ಕೆಫೆಯ 8ನೇ ಮಹಡಿಗೆ ಹೋಗಿ ಮದ್ಯ ಏಕೆ ಸೇವಿಸಬೇಕು. ಯಾರು ಸ್ಕ್ರಿಪ್ಟ್ ಬರೆಯುತ್ತಾರೆ. ಅದ್ಕಕೆ ಸ್ಪಲ್ಪ ಲೇಪನ ಮಾಡಿ ಎಸ್‌ಪಿಪಿ ವಾದಿಸಿದ್ದಾರೆ. ಇದೊಂದು ಸಣ್ಣ ಪ್ರಕರಣ ಮಾಧ್ಯಮಗಳಿಂದ ದೊಡ್ಡದಾಗಿದೆ ಅಷ್ಟೇ. ಸೆ.307ರ ಪ್ರಕರಣದಲ್ಲಿ ಜಾಮೀನು ನೀಡಬಹುದು ಎಂದರು.

ಟಾಪ್ ನ್ಯೂಸ್

Bhopal: ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ… ಹೈ ಅಲರ್ಟ್

Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Champions Trophy: Rahul, Shami, Jadeja in doubt for place

Champions Trophy: ರಾಹುಲ್‌, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ

18ನೇ ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೆ ಚಾಲನೆ

Odisha: ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ

AUSvSL: ಲಂಕಾ ಸರಣಿಗೆ ಆಸೀಸ್‌ ತಂಡ ಪ್ರಕಟ: ಸ್ಟೀವ್‌ ಸ್ಮಿತ್‌ ಗೆ ನಾಯಕತ್ವ ಪಟ್ಟ

AUSvSL: ಲಂಕಾ ಸರಣಿಗೆ ಆಸೀಸ್‌ ತಂಡ ಪ್ರಕಟ: ಸ್ಟೀವ್‌ ಸ್ಮಿತ್‌ ಗೆ ನಾಯಕತ್ವ ಪಟ್ಟ

CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!

CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Bhopal: ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ… ಹೈ ಅಲರ್ಟ್

Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…

ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!

Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Champions Trophy: Rahul, Shami, Jadeja in doubt for place

Champions Trophy: ರಾಹುಲ್‌, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.