ಬಿಡಿಎಗೆ ಬೇಡವಾದ ಪರವಾನಗಿ ಶುಲ್ಕ
Team Udayavani, Feb 8, 2020, 10:28 AM IST
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆದಾಯ ಮೂಲಗಳಲ್ಲಿ ವಾಣಿಜ್ಯ ಸಂಕೀರ್ಣಗಳು ಮತ್ತು ಮಳಿಗೆಗಳ ವಾರ್ಷಿಕ ಪರವಾನಗಿ ಶುಲ್ಕವೂ ಸೇರಿದೆ. ಆದರೆ, 2 ವರ್ಷಗಳಿಂದ ನಿಗದಿತ ಗುರಿಯ ಶೇ.20ರಷ್ಟು ಶುಲ್ಕವನ್ನೂ ಬಿಡಿಎ ಸಂಗ್ರಹಿಸಿಲ್ಲ ಎಂಬುದು ವಿಪರ್ಯಾಸ!
ಬಿಡಿಎ ಅಧೀನದಲ್ಲಿ ಇಂದಿರಾನಗರ, ಎಚ್‌ಎಸ್ ಆರ್ ಲೇಔಟ್, ಆರ್.ಟಿ.ನಗರ, ಆಸ್ಟಿನ್ ಟೌನ್, ಕೋರಮಂಗಲ, ವಿಜಯನಗರ, ಸದಾಶಿವನಗರ ಸೇರಿ ವಿವಿಧೆಡೆ ಹಲವು ವಾಣಿಜ್ಯ ಸಂಕೀರ್ಣಗಳು, 797 ಮಳಿಗೆಗಳಿವೆ. 2019ರಲ್ಲಿ ವಾರ್ಷಿಕ ಪರವಾನಗಿ ಶುಲ್ಕ 36.02 ಕೋಟಿ ರೂ. ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದ ಪ್ರಾಧಿಕಾರದ ಅಧಿಕಾರಿಗಳು ಇದುವರೆಗೆ ಸಂಗ್ರಹಿಸಿರುವುದು 5 ಕೋಟಿ ರೂ. ಮಾತ್ರ!
ಪ್ರಾಧಿಕಾರದಲ್ಲಿನ ಎಸ್ಟೇಟ್ ವಿಭಾಗವು ವಾಣಿಜ್ಯ ಸಂಕೀರ್ಣಗಳಲ್ಲಿನ ಅಂಗಡಿ ಮತ್ತು ಮಳಿಗೆಗಳ ಹರಾಜು ಮಾರಾಟದ ಮೇಲುಸ್ತುವಾರಿ ಹಾಗೂ ಪರವಾನಗಿ ಶುಲ್ಕ ವಸೂಲಾತಿ ಮಾಡುತ್ತದೆ. 2018ರಲ್ಲಿ 31.58 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, 5.61 ಕೋಟಿಸಂಗ್ರಹಿಸಿದೆ. 25.97 ಕೋಟಿ ರೂ. ಶುಲ್ಕ ಬಾಕಿ ಇದೆ. 2019ರಲ್ಲಿ 36.02 ಕೋಟಿ ರೂ. ಗುರಿ ಇದ್ದು, 5.80 ಕೋಟಿ ರೂ. ಸಂಗ್ರಹಿಸಿದ್ದು, 30.21 ಕೋಟಿ ರೂ. ಬಾಕಿ ಉಳಿದಿದೆ.
ಬಿಡಿಎ ವಾಣಿಜ್ಯ ಮಳಿಗೆಗಳನ್ನು ಹಂಚಿಕೆ ಮಾಡುವಾಗ ಯಾವುದೇ ಕಾರಣಕ್ಕೂ ಉಪಗುತ್ತಿಗೆ ನೀಡಬಾರದು, ಪರಭಾರೆ ಮಾಡಬಾರದು, ಬೇರೆಯವರಿಗೆ ಬಾಡಿಗೆ ನೀಡಬಾರದು ಎಂಬ ಷರತ್ತು ಗಳಿವೆ. ಒಂದು ವೇಳೆ ಷರತ್ತು ಉಲ್ಲಂ ಸಿದರೆ ಗುತ್ತಿಗೆ ರದ್ದು ಮಾಡಲು ಅವಕಾಶ ಇರುತ್ತದೆ. ಪ್ರಸ್ತುತ ಮೂಲ ಹಂಚಿಕೆದಾರರು ಮಳಿಗೆಗಳನ್ನು ಉಪಯೋಗಿಸದೇ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿದ್ದು, ಪರವಾನಗಿ ಶುಲ್ಕ ವಸೂಲಾತಿ ಆಗದಿರಲು ಇದು ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಅಧಿಕಾರಿಗಳ ಕೊರತೆ?: ಬಿಬಿಎಂಪಿಯಲ್ಲಿ ವಾಣಿಜ್ಯ ಸಂಕೀರ್ಣಗಳ ಬಾಡಿಗೆ ವಸೂಲಾತಿಗೆ ಕಂದಾಯ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗವಿದ್ದು, ಗುರಿಯಷ್ಟು ಬಾಡಿಗೆ ವಸೂಲಿ ಆಗುತ್ತಿದೆ. ಆದರೆ, ಬಿಡಿಎನಲ್ಲಿ ಎಸ್ಟೇಟ್ ವಿಭಾಗವು ವಾಣಿಜ್ಯ ಸಂಕೀರ್ಣಗಳಲ್ಲಿ ಬಾಡಿಗೆ ವಸೂಲಿ ಮಾತ್ರವಲ್ಲದೇ ಪ್ರಾಧಿಕಾರದ ಜಮೀನು ಒತ್ತುವರಿ ಗುರುತಿಸುವುದು, ಒತ್ತುವರಿ ತೆರವುಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆದು ಬೇಲಿ ಹಾಕುವುದು, ಸುಪರ್ದಿಗೆ ತೆಗೆದುಕೊಂಡ ಜಮೀನಿನಲ್ಲಿ ಬಡಾವಣೆ ರಚಿಸುವಲ್ಲಿ ಪ್ರಮುಖಪಾತ್ರ ವಹಿಸಲಿದೆ. ಹೀಗೆ ವಿವಿಧ ಕಾರ್ಯಗಳಿದ್ದು, ವಸೂಲಾತಿ ಕಡಿಮೆಯಾಗಿದೆ ಎಂಬ ಆರೋಪಗಳಿವೆ.”ವಾಣಿಜ್ಯ ಸಂಕೀರ್ಣ ಮತ್ತು ಮಳಿಗೆಗಳಿಂದ ಗುರಿಯಷ್ಟು ಪರವಾನಗಿ ಶುಲ್ಕ ಸಂಗ್ರಹವಾಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶುಲ್ಕ ನೀಡದವರಿಗೆ ಬಿಡಿಎಯಿಂದ ನೋಟಿಸ್ ನೀಡಲಾಗಿದೆ. ಶೀಘ್ರ ಪಾವತಿ ಮಾಡದಿದ್ದರೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರ್ಷಿಕ ಪರವಾನಗಿ ಶುಲ್ಕ ಪಾವತಿಸದವರ ಪಟ್ಟಿ ಸಿದ್ಧಪಡಿಸಿ ಅಂತವರಿಗೆ ನೋಟಿಸ್ ನೀಡಲಾಗಿದೆ. ಶುಲ್ಕ ಪಾವತಿಸಲು ಸಮಯಾವಕಾಶ ನೀಡಲಾಗಿದ್ದು, ಅಷ್ಟರಲ್ಲಿ ಕಟ್ಟದಿದ್ದರೆ ಮಳಿಗೆಯಿಂದ ತೆರವುಗೊಳಿಸಲಾಗುವುದು. –ಡಾ.ಜಿ.ಸಿ.ಪ್ರಕಾಶ್, ಬಿಡಿಎ ಆಯುಕ್ತ
-ಮಂಜುನಾಥ ಗಂಗಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.