ಆಶಾ ಕಾರ್ಯಕರ್ತೆಯರಿಗಿಲ್ಲ ಸುರಕ್ಷತಾ ಸಾಮಗ್ರಿ
Team Udayavani, May 7, 2021, 2:47 PM IST
ಬೆಂಗಳೂರು: ಕೋವಿಡ್ ಕಾರ್ಯದಲ್ಲಿ ತೊಡಗಿಕೊಂಡಿರುವ ಆಶಾ ಕಾರ್ಯಕರ್ತೆಯರು ಅಗತ್ಯ ಸುರಕ್ಷತಾ ಸಾಮಗ್ರಿಗಳು ಇಲ್ಲದೆ ಭಯದಲ್ಲಿ ಬದುಕು ಕಳೆಯುವಂತಾಗಿದೆ.
ಕೋವಿಡ್ ಸಂಬಂಧಿಸಿದ ಹಲವು ಕಾರ್ಯಗಳಲ್ಲಿಆಶಾಕಾರ್ಯ ಕರ್ತೆಯರು ಈಗಾಗಲೇ ತೊಡಗಿಕೊಂಡಿ ದ್ದಾರೆ ಆದರೆ ನಮ್ಮ ಜೀವನವನ್ನು ಕಾಪಾಡಿಕೊಳ್ಳುವ ಸುರಕ್ಷಾ ಸಾಧನಗಳನ್ನು ಸರ್ಕಾರ ನೀಡುತ್ತಿಲ್ಲ ಎಂಬ ಆಳಲು ಅವರದು. ಈ ಹಿಂದೆ ಕೋವಿಡ್ ಸೋಂಕು ಅಪ್ಪಳಿಸಿದಾಗವಿವಿಧ ದೇಶಗಳಿಂದ ಹಾಗೂ ವಿವಿಧ ರಾಜ್ಯಗಳಿಂದ ಬಂದ ಜನರ ಸರ್ವೆ, ನಂತರ ಕೊರೊನಾ ಲಕ್ಷಣವಿರುವ, ಪಾಸಿಟಿವ್ ಬಂದಿರುವ, ಹಾಗೆಯೇ ಪ್ರಥಮ, ದ್ವಿತೀಯ ಸಂಪರ್ಕಿತರನ್ನು ಗುರುತಿಸುವುದು, ಕ್ವಾರಂ ಟೈನ್ ಮನೆಗಳಿಗೆ ಗುರುತಿನ ಚೀಟಿ ಅಂಟಿಸುವುದು, ಅವರ ಮನೆಗಳಿಗೆ ಹೋಗಿ ದಿನನಿತ್ಯ ಅವರ ಆರೋಗ್ಯದ ಮಾಹಿತಿಯನ್ನು ಇಲಾಖೆಗೆ ಒದಗಿಸುವುದು ಸೇರಿದಂತೆ ಹಲವು ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.
ಈಗ ಮತ್ತೆ ಕೋವಿಡ್ ಸೋಂಕಿನ ಎರಡನೇ ಅಲೆಶುರುವಾಗಿದೆ. ಆ ಹಿನ್ನೆಲೆಯಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳುವರ ಪಟ್ಟಿ ತಯಾರಿಸಿ ಕೊಡುವುದು, ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರನ್ನು ಮನವೊಲಿಸು ವುದು ಮತ್ತು ಕಳುಹಿಸುವ ಕಾರ್ಯವನ್ನು ಸರ್ಕಾರ ಆಶಾಕಾರ್ಯಕರ್ತೆಯರಿಗೆ ವಹಿಸಿದೆ.ಆಶಾ ಕಾರ್ಯಕರ್ತೆ ಕೋವಿಡ್ ಹಿನ್ನೆಲೆಯಲ್ಲಿಸೋಂಕಿ ತರ ಮನೆ ಮನೆ ಸರ್ವೆ ಕಾರ್ಯವನ್ನು ಸರ್ಕಾರ ವಹಿಸಿದೆ. ಅಲ್ಲದೆ ಸೋಂಕಿತರ ಆರೈಕೆ ಬಗ್ಗೆಮಾಹಿತಿ ಕೂಡ ಕಲೆ ಹಾಕಲಾಗುವ ಕಾರ್ಯ ನೀಡಲಾಗಿದೆ. ಆದರೆ ಸುರಕ್ಷತಾ ಸಾಧನಗಳು ಇಲ್ಲದೆ ನಾವು ಕಾರ್ಯ ನಿರ್ವಹಿಸುವುದು ಹೇಗೆ ಎಂದು ಪ್ರಶ್ನಿಸುತ್ತಾರೆ.
ಸರ್ಕಾರ ಗೌರವ ಧನ ನೀಡಿಲ್ಲ: ಆಶಾಕಾರ್ಯಕರ್ತೆಯರು ಸರ್ಕಾರ ವಹಿಸುವ ಎಲ್ಲಾ ಕೆಲಸಗಳನ್ನುನಿಷ್ಠೆಯಿಂದ ಮಾಡುತ್ತಾರೆ. ಆದರೆ ಸರ್ಕಾರ ಇವರರಕ್ಷಣೆ ಬಗ್ಗೆ ಗಮನ ಹರಿಸುತ್ತಿಲ್ಲ. ಕಳೆದೆರಡು ತಿಂಗಳಿಂದ ಆಶಾಕಾರ್ಯಕರ್ತರಿಗೆ ನೀಡಬೇಕಾಗಿರುವ ಗೌರವ ಧನ ಕೂಡ ನೀಡಿಲ್ಲ ಎಂದು ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಆರೋಪಿಸಿದ್ದಾರೆ.
ಬಾಕಿ ವೇತನದ ಜೊತೆಗೆ ಆಶಾ ಕಾರ್ಯಕರ್ತೆಯರಿಗೆ ಗ್ಲೌಸ್ ಸೇರಿದಂತೆ ಅಗತ್ಯ ಸುರಕ್ಷಾ ಪರಿಕರಗಳನ್ನು ಸರ್ಕಾರ ನೀಡಬೇಕು. ಹಾಗೆಯೇ ಕೋವಿಡ್ ಕಾರ್ಯಕ್ಕಾಗಿ 500 ರೂ.ಗಳ ವಿಶೇಷ ಗೌರವ ಧನ ನೀಡಬೇಕು ಎಂದು ಒತ್ತಾಯಿಸುತ್ತಾರೆ.
ಉಚಿತ ಚಿಕಿತ್ಸೆ ನೀಡಿ
ಕೋವಿಡ್ ಕಾರ್ಯದಲ್ಲಿ ನಿರತರಾಗಿರುವ ಆಶಾಕಾರ್ಯಕರ್ತೆಯರ ಕುಟುಂಬದವರಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಆಶಾಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಸರ್ಕಾಕ್ಕೆ ಮನವಿ ಮಾಡಿದ್ದಾರೆ. ಕೊರೊನಾವಾರಿಯರ್ ಆಗಿ ಸೇವೆ ಸಲ್ಲಿಸಿ ಸಾವನ್ನಪ್ಪಿದ ಆಶಾಕಾರ್ಯಕರ್ತೆಯರಿಗೆ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ಆ ಬಗ್ಗೆಕೂಡ ಆಲೋಚನೆ ನಡೆಸಲಿ ಎಂದು ಹೇಳಿದ್ದಾರೆ.
ದೇವೇಶ್ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.