ಟ್ಯಾಬ್ ಇಲ್ಲಾಂದ್ರೆ ಮಾಹಿತಿಯೂ ಇಲ್ಲ!
Team Udayavani, Dec 21, 2018, 1:18 PM IST
ಬೆಂಗಳೂರು: ಬಿಬಿಎಂಪಿ ಪಾಲಿಕೆ ಸದಸ್ಯರೇ, ನಿಮಗೆ ಕೊಟ್ಟಿರುವ 44 ಸಾವಿರ ರೂ. ಮೌಲ್ಯದ ಆ್ಯಪಲ್ ಟ್ಯಾಬ್ ಬಳಸಿದ್ದರೆ, ಪಾಲಿಕೆಯ ಕೌನ್ಸಿಲ್ ವಿಭಾಗದಿಂದ ಯಾವುದೇ ಮಾಹಿತಿ ನಿಮಗೆ ಲಭ್ಯವಾಗುವುದಿಲ್ಲ.
ಪಾಲಿಕೆಯ ಕೌನ್ಸಿಲ್ ವಿಭಾಗವನ್ನು ಕಾಗದ ರಹಿತಗೊಳಿಸುವ ಉದ್ದೇಶದಿಂದ ಕಳೆದ ವರ್ಷ ಪಾಲಿಕೆ ಸದಸ್ಯರಿಗೆ ಟ್ಯಾಬ್ ನೀಡಲಾಗಿದ್ದು, ಪಾಲಿಕೆಯ ಮಾಹಿತಿ ನೀಡುವ ಇ-ಕೌನ್ಸಿಲ್ ಆ್ಯಪ್ ನ್ನು ಅಳಡಿಸಲಾಗಿದೆ. ಆ ಹಿನ್ನೆಲೆಯಲ್ಲಿ ಮುಂದಿನ
ಸಭೆಯ ಎಲ್ಲ ಮಾಹಿತಿ ಇ-ಕೌನ್ಸಿಲ್ ಆ್ಯಪ್‌ನಲ್ಲಿ ಲಭ್ಯವಾಗಲಿದ್ದು, ಕೌನ್ಸಿಲ್ ಹಾಗೂ ಪಾಲಿಕೆ ಸದಸ್ಯರ ನಡುವಿನ ಕಾಗದ ವ್ಯವಹಾರ ಅಂತ್ಯವಾಗಲಿದೆ.
ಪಾಲಿಕೆ ಮಾಸಿಕ ಸಭೆ ನಡೆಯುವ ದಿನಾಂಕ, ವಿಷಯ ಸೂಚಿ, ಸಭೆಯ ನಿರ್ಣಯಗಳು, ನಡಾವಳಿಗಳು, ಸುತ್ತೋಲೆ ಹಾಗೂ ಕಚೇರಿ ಸಂಬಂಧಿತ ಮಾಹಿತಿಯನ್ನು ಇನ್ನು ಮುಂದೆ ಆ್ಯಪ್ ಮೂಲಕ ಕಳುಹಿಸಲಾಗುತ್ತದೆ. ಇದರಿಂದಾಗಿ ಕಾಗದ ಬಳಕೆ ಕಡಿಮೆಯಾಗಲಿದ್ದು, ಸಮಯವೂ ಉಳಿತಾಯವಾಗಲಿದೆ ಎಂಬುದು ಕೌನ್ಸಿಲ್ ವಿಭಾಗದ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಪಾಲಿಕೆ ಸದಸ್ಯರ ಅಸಡ್ಡೆ: ಬಾಯಿ ಮಾತಿಗೆ ಕಾಗದ ರಹಿತ ಆಡಳಿತ ನಡೆಸಿ ಎಂದು ಹೇಳುವ ಪಾಲಿಕೆಯ ಹಿರಿಯ ಸದಸ್ಯರು, ಇದೀಗ ಪಾಲಿಕೆಯ ಕೌನ್ಸಿಲ್ ವಿಭಾಗದ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 27
ರಂದು ವಿಷಯ ಸೂಚಿ ಸಭೆ ನಡೆಯಲಿದ್ದು, ಸೂಚನಾ ಪತ್ರವನ್ನು ಮೇಯರ್, ಆಯುಕ್ತರು, ಆಡಳಿತ ಪಕ್ಷ ನಾಯಕರು, ವಿರೋಧಪಕ್ಷ ನಾಯಕರು ಹಾಗೂ ಜೆಡಿಎಸ್ ನಾಯಕರಿಗೆ ಕಳುಹಿಸಲಾಗಿದೆ. ಆದರೆ, ಹಿರಿಯ ಸದಸ್ಯರೊಬ್ಬರು ಟ್ಯಾಬ್‌ನಲ್ಲಿ ಹಾಕಿದರೆ ನೋಡಲು ಸಾಧ್ಯವಿಲ್ಲ. ವಿಷಯಸೂಚಿ ಕಳುಹಿಸಿ ಎಂದು ಕೌನ್ಸಿಲ್ ಕಾರ್ಯದರ್ಶಿಗಳಿಗೆ ಕರೆ ಮಾಡಿದ್ದಾರೆ.
ಬಹುತೇಕ ಟ್ಯಾಬ್‌ಗಳು ಬೆಂಬಲಿಗರ ಪಾಲು: ಕಾಗದ ರಹಿತ ಆಡಳಿತಕ್ಕಾಗಿ ಪಾಲಿಕೆಯಿಂದ ಪ್ರತಿಯೊಬ್ಬ ಪಾಲಿಕೆ ಸದಸ್ಯರಿಗೆ 44 ಸಾವಿರ ರೂ. ಮೌಲ್ಯದ ಟ್ಯಾಬ್ ನೀಡಲಾಗಿದೆ. ಆದರೆ, ಬಹುತೇಕ ಪಾಲಿಕೆ ಸದಸ್ಯರ ಬಳಿ ಸದ್ಯ ಟ್ಯಾಬ್‌ಗಳೇ ಇಲ್ಲ. ಪಾಲಿಕೆಯಿಂದ ಕಚೇರಿ ಉದ್ದೇಶಕ್ಕಾಗಿ ನೀಡಿದ ಟ್ಯಾಬ್‌ಗಳನ್ನು ಬೆಂಬಲಿಗರು, ಮೊಮ್ಮೊಕ್ಕಳಿಗೆ ನೀಡಲಾಗಿದೆ ಎನ್ನಲಾಗಿದೆ. ಇದರೊಂದಿಗೆ ಟ್ಯಾಬ್ ಪಡೆದಿರುವ ಬಹುತೇಕ ಪಾಲಿಕೆ ಸದಸ್ಯರು ಈವರೆಗೆ ಇ-ಕೌನ್ಸಿಲ್ ಆ್ಯಪ್‌ನ್ನು ಟ್ಯಾಬ್‌ಗಳಿಗೆ ಅಳವಡಿಸಿಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ಯಾಬ್ ವಿತರಣೆ ವಿವಾದ: ಪಾಲಿಕೆಯ 2017-18ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ ಎರಡೇ ದಿನಗಳಲ್ಲಿ ಪಾಲಿಕೆ ಸದಸ್ಯರಿಗೆ ಟ್ಯಾಬ್ ವಿತರಿಸಿದ ಪಾಲಿಕೆಯ ಕ್ರಮಕ್ಕೆ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿದ್ದವು. ಜನರಿಗೆ ಘೋಷಣೆಯಾಗುವ ಯೋಜನೆಗಳು ವರ್ಷ ಕಳೆದರೂ ಜಾರಿಯಾಗುವುದಿಲ್ಲ. ಆದರೆ, ಪಾಲಿಕೆ ಸದಸ್ಯರಿಗೆ ಘೋಷಿಸಿದ ಯೋಜನೆ ಬಜೆಟ್ ಅನುಮೋದನೆಗೆ ಮೊದಲೇ ಅನುಷ್ಠಾನವಾಗುತ್ತದೆ ಎಂಬ ಟೀಕೆ ಕೇಳಿಬಂದಿತ್ತು. ಕಾಗದ ರಹಿತ ಆಡಳಿತಕ್ಕೆ ಬೆಂಬಲ ಸೂಚಿಸಿ ಮೊದಲ ದಿನವೇ ಟ್ಯಾಬ್ ಪಡೆದ ಪಾಲಿಕೆ ಸದಸ್ಯರು ಇದೀಗ ಬಳಸಲು ಮುಂದಾಗಿರುವುದು ಮತ್ತೆ ಟೀಕೆಗಳಿಗೆ ಕಾರಣವಾಗಿದೆ.
99 ಲಕ್ಷ ರೂ. ಮೊತ್ತದ ಯೋಜನೆ: ಪಾಲಿಕೆ ಸದಸ್ಯರಿಗೆ ಆ್ಯಪಲ್ ಸಂಸ್ಥೆಯ 225 ಟ್ಯಾಬ್‌ಗಳನ್ನು ನೀಡಲು ಪ್ರತಿ ಟ್ಯಾಬ್‌ಗ 38,600 ರೂ. ವೆಚ್ಚ ಮಾಡಲಾಗಿತ್ತು. ಟ್ಯಾಬ್‌ನ್ನು ಜಾಗ್ರತೆಯಿಂದ ಇಡಲು 2 ಸಾವಿರ ಮೌಲ್ಯದ ಪೌಚ್, ತಂತ್ರಾಂಶ ಹಾಗೂ ಸದಸ್ಯರಿಗೆ ತರಬೇತಿ ನೀಡಲು ಪ್ರತಿ ಟ್ಯಾಬ್‌ಗ 3,400 ರೂ. ವೆಚ್ಚ ಮಾಡಲಾಗಿದೆ. ಆ ಮೂಲಕ ಒಂದು ಟ್ಯಾಬ್‌ಗ 44 ಸಾವಿರ ರೂ.ಗಳಂತೆ ಒಟ್ಟು ಯೋಜನೆಗೆ 99 ಲಕ್ಷ ರೂ. ಖರ್ಚು ಮಾಡಲಾಗಿ¨
ಪಾಲಿಕೆ ಸಭೆಯ ಮಾಹಿತಿ, ನಡಾವಳಿ, ವಿಷಯ ಸೂಚಿ ಹಾಗೂ ನಿರ್ಣಯಗಳನ್ನು ಇನ್ನು ಮುಂದೆ ಟ್ಯಾಬ್ ಮೂಲಕ ತಿಳಿಸಲಾಗುವುದು. ಅದೇ ಉದ್ದೇಶದಿಂದ ಈಗಾಗಲೇ ಪಾಲಿಕೆಯ ಪ್ರತಿಯೊಬ್ಬ ಸದಸ್ಯರಿಗೆ ಟ್ಯಾಬ್ ನೀಡಲಾಗಿದ್ದು, ಆ ಮೂಲಕ ಕಾಗದ ರಹಿತ ಆಡಳಿತಕ್ಕೆ ಒತ್ತು ನೀಡಲಾಗುತ್ತಿದೆ.
ಎಂ.ಶಿವರಾಜು, ಆಡಳಿತ ಪಕ್ಷ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.