ದಟ್ಟಣೆ ಇರುವೆಡೆ ಮೆಟ್ರೋ ಕಾಣೆ 

Team Udayavani, Jun 14, 2017, 12:43 PM IST

metro.jpg

ಬೆಂಗಳೂರು: ನಗರದ ನಾಲ್ಕು ದಿಕ್ಕುಗಳಿಗೆ “ನಮ್ಮ ಮೆಟ್ರೋ’ ಸಂಪರ್ಕ ಕಲ್ಪಿಸಿದರೂ, ವಾಹನದಟ್ಟಣೆ ಇರುವ ಕೆಲವು ಪ್ರಮುಖ ರಸ್ತೆಗಳು ಮೆಟ್ರೋ ಮಾರ್ಗದಿಂದ “ಮಿಸ್ಡ್ ಲಿಂಕ್‌’ ಆಗಿಯೇ ಉಳಿದಿವೆ.

ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಸಿದ್ಧಪಡಿಸಿದ ಮೆಟ್ರೋ ಮೊದಲ ಮತ್ತು ಎರಡನೇ ಹಂತಗಳ ನಕ್ಷೆಯಲ್ಲೇ ಈ “ಮಿಸ್ಡ್ ಲಿಂಕ್‌’ ಅನ್ನು ಕಾಣಬಹುದು. ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಕಾರಿಡಾರ್‌ಗಳ ಪೈಕಿ ಪೂರ್ವಕ್ಕೆ ಬೈಯಪ್ಪನಹಳ್ಳಿ ಮಾರ್ಗ ಹೊರತುಪಡಿಸಿದರೆ, ಉಳಿದೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಪಶ್ಚಿಮದ ಕಡೆಗೇ ಮುಖ ಮಾಡುತ್ತವೆ. 

ಒಂದೇ ಕಡೆ ಸಾಗುತ್ತವೆ ಮಾರ್ಗಗಳು: ಮೆಟ್ರೋ ಎರಡನೇ ಹಂತದಲ್ಲಿ ನಾಲ್ಕು ವಿಸ್ತರಿಸಿದ ಮಾರ್ಗಗಳಾಗಿವೆ. ಅವುಗಳ ಪೈಕಿ ಕೆಂಗೇರಿ, ತುಮಕೂರು ರಸ್ತೆಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ ಮತ್ತು ಕನಕಪುರ ರಸ್ತೆಯ ಅಂಜನಾಪುರಕ್ಕೆ ಅಂತ್ಯಗೊಳ್ಳುತ್ತವೆ. ಇವೆಲ್ಲವೂ ಪಶ್ಚಿಮದ ಕಡೆ ಮುಖಮಾಡಿದರೆ, ಗೊಟ್ಟಿಗೆರೆ-ನಾಗವಾರ ನಗರದ ಎಂ.ಜಿ. ರಸ್ತೆಯಲ್ಲಿ ಹಾದುಹೋಗುತ್ತದೆ. ಆದರೆ, ಪೂರ್ವದಲ್ಲಿ ಬರುವ ಬೈಯಪ್ಪನಹಳ್ಳಿ-ಐಟಿಪಿಎಲ್‌ ಮಾತ್ರ ಇದೆ ಎಂಬ ಅಪಸ್ವರ ನಗರ ಸಾರಿಗೆ ತಜ್ಞರಿಂದ ಕೇಳಿಬಂದಿದೆ. 

ಜಯನಗರ ವ್ಯಾಪ್ತಿಯಲ್ಲೇ ಮೂರು ಮೆಟ್ರೋ ಮಾರ್ಗಗಳು ಹಾದುಹೋಗುತ್ತವೆ! ಹೇಗೆ ಅಂದರೆ, ನಾಗಸಂದ್ರದಿಂದ ಬರುವ ಮಾರ್ಗ ಜಯನಗರದ ಮೂಲಕ ಯಲಚೇನಹಳ್ಳಿಗೆ ಹೋಗುತ್ತದೆ. ಹೊಸದಾಗಿ ಕೈಗೆತ್ತಿಕೊಳ್ಳಲಿರುವ ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರವೂ ಜಯನಗರದ ಭಾಗವೇ ಆಗಿದೆ. ಇನ್ನೊಂದು ಹೊಸ ಮಾರ್ಗ ಗೊಟ್ಟಿಗೆರೆ-ನಾಗವಾರ ನಡುವೆ ಜಯದೇವ ಆಸ್ಪತ್ರೆ ಬಳಿ ಇಂಟರ್‌ಚೇಂಜ್‌ ಬರಲಿದೆ. ಇಲ್ಲಿಂದ ಜಯನಗರ ಕೇವಲ 3 ಕಿ.ಮೀ. ಆಗುತ್ತದೆ. 

ಆದರೆ, ಅತಿ ಹೆಚ್ಚು ವಾಹನದಟ್ಟಣೆ ಇರುವ ಹೆಬ್ಟಾಳಕ್ಕೆ ಮೆಟ್ರೋ ಸಂಪರ್ಕವೇ ಇಲ್ಲ. ಮಾರತ್‌ಹಳ್ಳಿ, ಕೋರಮಂಗಲ, ರಿಚ್‌ಮಂಡ್‌ ವೃತ್ತ, ಟೌನ್‌ಹಾಲ್‌ ಆಸುಪಾಸು ಕೂಡ ಮೆಟ್ರೋ ಭಾಗ್ಯ ಇಲ್ಲ. ಇಂತಹ ಹತ್ತಾರು ರಸ್ತೆಗಳು “ನಮ್ಮ ಮೆಟ್ರೋ’ ಯೋಜನೆಯಿಂದ ದೂರ ಉಳಿದಿವೆ ಎನ್ನುತ್ತಾರೆ “ಪ್ರಜಾ’ ಸಂಸ್ಥೆಯ ಸಂಜೀವ ದ್ಯಾಮಣ್ಣವರ.

ರಿಂಗ್‌ ರಸ್ತೆಯಲ್ಲಿ ಬರಲಿ ಮೆಟ್ರೋ: ಇನ್ನು ಇಡೀ ಮೆಟ್ರೋ 1 ಮತ್ತು 2ನೇ ಹಂತಗಳಲ್ಲಿ ಇರುವುದು ಕೇವಲ ಎರಡು ಇಂಟರ್‌ಚೇಂಜ್‌ಗಳು. ಪ್ರಸ್ತುತ ಮೊದಲ ಹಂತದಲ್ಲಿ ಪ್ರಯಾಣಿಕರು ಒಂದು ಮೂಲೆಯಿಂದ ಮತ್ತೂಂದು ಮೂಲೆಗೆ ಮೆಟ್ರೋದಲ್ಲಿ ಹೋಗಬೇಕಾದರೆ, ಮೆಜೆಸ್ಟಿಕ್‌ ಬರುವುದು ಕಡ್ಡಾಯ! ಉದಾಹರಣೆಗೆ ಮೈಸೂರು ರಸ್ತೆಯಿಂದ ಬರುವವರು ಪೀಣ್ಯಕ್ಕೆ ಹೋಗಲು ಮೆಜೆಸ್ಟಿಕ್‌ಗೆ ಬರಬೇಕಾಗಿದೆ. ಆದರೆ, ಹೊಸಹಳ್ಳಿಯಿಂದ ರಾಜಾಜಿನಗರ ನಿಲ್ದಾಣದ ನಡುವೆ ಕೇವಲ 1.6 ಕಿ.ಮೀ. ಅಂತರ ಇದೆ. ಇದಕ್ಕೆ ಸಂಪರ್ಕ ಕಲ್ಪಿಸಿದ್ದರೆ, ನೇರವಾಗಿ ಪೀಣ್ಯಕ್ಕೆ ತೆರಳಬಹುದಿತ್ತು ಎನ್ನುತ್ತಾರೆ ನಗರ ಮೂಲಸೌಕರ್ಯಗಳ ತಜ್ಞ ಪ್ರೊ.ಎಂ.ಎನ್‌. ಶ್ರೀಹರಿ. 

ವರ್ತುಲ ರಸ್ತೆಗೆ ಮೆಟ್ರೋ ಸಂಪರ್ಕ ಕಲ್ಪಿಸಿಲ್ಲ. ಸದ್ಯ ಸಿಲ್ಕ್ಬೋರ್ಡ್‌ ಜಂಕ್ಷನ್‌-ಕೆ.ಆರ್‌. ಪುರ ನಡುವೆ ಮೆಟ್ರೋ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮುಂದುವರಿದು ಕೆ.ಆರ್‌. ಪುರ-ಹೆಬ್ಟಾಳ-ಯಶವಂತಪುರ-ಮಾಗಡಿ ರಸ್ತೆ-ನಾಯಂಡಹಳ್ಳಿ ನಡುವೆ ಸಂಪರ್ಕ ಕಲ್ಪಿಸಬಹುದು. ಇದು ಸಾಧ್ಯವಾಗದಿದ್ದರೆ, ಮಿಸ್ಡ್ ಲಿಂಕ್‌ ಇರುವ ಕಡೆಗಳಲ್ಲಿ ಮಾನೊ ರೈಲಿನಂತಹ ಸಂಪರ್ಕ ಸೇವೆಗಳನ್ನಾದರೂ ಮಾಡಬೇಕು. ಅಂದಾಗ ಸಂಚಾರದಟ್ಟಣೆ ತಗ್ಗಲಿದೆ. ಜನರೂ ನಿಟ್ಟುಸಿರು ಬಿಡುತ್ತಾರೆ ಎಂದು ಶ್ರೀಹರಿ ಅಭಿಪ್ರಾಯಪಡುತ್ತಾರೆ. 

ನಗರದ ಬಹುತೇಕ ಕಡೆಗಳಲ್ಲಿ ನೈರುತ್ಯ ರೈಲ್ವೆ ಮಾರ್ಗಕ್ಕೆ ಪರ್ಯಾಯವಾಗಿಯೇ ಮೆಟ್ರೋ ರೈಲು ಹಾದುಹೋಗುತ್ತದೆ. ತುಮಕೂರು ರಸ್ತೆಯಲ್ಲಿ ಇದನ್ನು ಕಾಣಬಹುದು. ನಾಗರಬಾವಿ, ರಾಜಾಜಿನಗರ, ಬಸವೇಶ್ವರನಗರ, ಮಾಗಡಿ ರಸ್ತೆಯಿಂದ ಸುಮನಹಳ್ಳಿ ಕಡೆಗೆ ತೆರಳುವ ರಸ್ತೆ ಸೇರಿದಂತೆ ಸುತ್ತಲಿನ ವಸತಿ ಪ್ರದೇಶಗಳಲ್ಲಿ ಮೆಟ್ರೋ ಸೇವೆ ಲಭ್ಯವಿಲ್ಲ. ಹಾಗಂತಾ ಬಸ್‌ ಸೇವೆಗಳಂತೆಯೇ ಎಲ್ಲ ಕಡೆಗೂ ಮೆಟ್ರೋ ಹೋಗಬೇಕು ಎಂದಲ್ಲ. ಆದರೆ, ಸಾಧ್ಯತೆ ಇರುವ ಕಡೆಗಳಲ್ಲಿ ಮೆಟ್ರೋ ತೆಗೆದುಕೊಂಡು ಹೋಗಬಹುದಿತ್ತು ಎಂದು ಸಂಜೀವ ದ್ಯಾಮಣ್ಣವರ ತಿಳಿಸುತ್ತಾರೆ. 

ಮೆಜೆಸ್ಟಿಕ್‌ನಲ್ಲಿ ಹೆಚ್ಚಲಿದೆ ದಟ್ಟಣೆ: 42.3 ಕಿ.ಮೀ. ಉದ್ದದ ಮೆಟ್ರೋಗೆ ಏಕೈಕ ಇಂಟರ್‌ಚೇಂಜ್‌ ಮೆಜೆಸ್ಟಿಕ್‌. ಹಾಗಾಗಿ, ಮೆಟ್ರೋ ಪ್ರಯಾಣಿಕರು ಒಂದು ದಿಕ್ಕಿನಿಂದ ಮತ್ತೂಂದು ದಿಕ್ಕಿಗೆ ಹೋಗಬೇಕಾದರೆ ಮೆಜೆಸ್ಟಿಕ್‌ ನಿಲ್ದಾಣಕ್ಕೆ ಬರಲೇಬೇಕು. ಇದರಿಂದ ಹಿಂದೆಂದಿಗಿಂತ ಹೆಚ್ಚು ದಟ್ಟಣೆ ಉಂಟಾಗಲಿದೆ ಎನ್ನುತ್ತಾರೆ ನಗರ ಸಾರಿಗೆ ತಜ್ಞರು.  
ಮೆಜೆಸ್ಟಿಕ್‌ ನಿಲ್ದಾಣವು ದೇಶದಲ್ಲೇ ಅತಿದೊಡ್ಡ ಇಂಟರ್‌ಚೇಂಜ್‌ ಆಗಿದೆ. 20 ಸಾವಿರ ಪ್ರಯಾಣಿಕರ ಸಾಮರ್ಥ್ಯವನ್ನು ಇದು ಹೊಂದಿದೆ.

ಆದರೆ, ಮೂರು ಬೋಗಿಯ ಒಂದು ರೈಲಿನಲ್ಲಿ ಪ್ರಯಾಣಿಸುವ ಸಾಮರ್ಥ್ಯ ಇರುವುದು 970 ಜನ ಮಾತ್ರ. ಆದ್ದರಿಂದ ರೈಲುಗಳ ಸಂಖ್ಯೆ ಇಲ್ಲಿ ಹೆಚ್ಚಿಸಬೇಕಿರುವುದು ಅನಿವಾರ್ಯ. ಪ್ರಯಾಣಿಕರ ದಟ್ಟಣೆ ಉಂಟಾಗಲಿರುವ ಬೆನ್ನಲ್ಲೇ ಮೆಜೆಸ್ಟಿಕ್‌ ಒಂದೇ ಇಂಟರ್‌ಚೇಂಜ್‌ ಸಾಕಾಗುತ್ತದೆಯೇ ಎಂಬ ಪ್ರಶ್ನೆಗೆ ಸ್ವತಃ ಬಿಎಂಆರ್‌ಸಿ ಅಧಿಕಾರಿಗಳಿಂದ ಬರುವ ಉತ್ತರ- ಇಲ್ಲ. 

ಟೋಕಿಯೊದಲ್ಲಿ 80ಕ್ಕೂ ಹೆಚ್ಚು ಇಂಟರ್‌ಚೇಂಜ್‌ಗಳಿವೆ. ಸಿಂಗಪುರದಲ್ಲಿ 500 ಮೀಟರ್‌ಗೊಂದು ಮೆಟ್ರೋ ಮಾರ್ಗ ಎದುರಾಗುತ್ತದೆ. ಅವುಗಳಿಗೆ ಹೋಲಿಸಿದರೆ, “ನಮ್ಮ ಮೆಟ್ರೋ’ದಲ್ಲಿ ಇನ್ನಷ್ಟು ಇಂಟರ್‌ಚೇಂಜ್‌ಗಳ ಅವಶ್ಯಕತೆ ಇದೆ. ಜಯದೇವ ಹೃದ್ರೋಗ ಆಸ್ಪತ್ರೆ ಬಳಿ, ಸಿಲ್ಕ್ಬೋರ್ಡ್‌ ಜಂಕ್ಷನ್‌ ಬಳಿ ತಲಾ ಒಂದು ಇಂಟರ್‌ಚೇಂಜ್‌ಗೆ ಉದ್ದೇಶಿಸಲಾಗಿದೆ. ಅದೂ ಸಾಲದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸುತ್ತಾರೆ. 

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.