ಇನ್ನೂ ಆಗಿಲ್ಲ ಹಳೆ ಸರ್ಕಾರದ ಸಾಲ ಮನ್ನಾ
Team Udayavani, Jun 15, 2018, 6:00 AM IST
ಬೆಂಗಳೂರು: ರಾಷ್ಟ್ರೀಯ ಬ್ಯಾಂಕ್‌ಗಳು ಸೇರಿದಂತೆ ರೈತರ ಎಲ್ಲ ಕೃಷಿ ಸಾಲಮನ್ನಾ ಮಾಡಬೇಕು ಎಂದು ರೈತ ಸಂಘಟನೆಗಳು ನೂತನ ಸರ್ಕಾರದ ಮೇಲೆ ಒತ್ತಡ ಹಾಕುತ್ತಿವೆ.
ಆದರೆ, ಹಿಂದಿನ ಸರ್ಕಾರ ಘೋಷಿಸಿದ ಕೃಷಿ ಸಾಲವೇ ಇನ್ನೂ ಮನ್ನಾ ಆಗಿಲ್ಲ! ಹಿಂದಿನ ಸರ್ಕಾರವು ಸಹಕಾರಿ ಸಂಘಗಳಲ್ಲಿನ 22 ಲಕ್ಷ ರೈತರ 8,165 ಕೋಟಿ ರೂ. ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿತ್ತು. ಇದುವರೆಗೆ ಮನ್ನಾ ಆಗಿದ್ದು 14 ಲಕ್ಷ ರೈತರ 4,967 ಕೋಟಿ ರೂ. ಮಾತ್ರ. ಸಾಲಮನ್ನಾಕ್ಕೆ ಜೂನ್ 20 ಕೊನೆಯ ದಿನವಾಗಿದ್ದು, ಇನ್ನೂ ಸುಮಾರು 6ರಿಂದ 8 ಲಕ್ಷ ರೈತರು ಅವಕಾಶ ವಂಚಿತರಾಗುವ ಸಾಧ್ಯತೆ ಇದೆ.
2017ರ ಜೂನ್ 21ರಿಂದ 2018ರ ಜೂನ್ 20ರ ಒಳಗೆ ಸಹಕಾರಿ ಸಂಘಗಳಲ್ಲಿನ 50 ಸಾವಿರ ರೂ.ವರೆಗೂ ಸಾಲಮನ್ನಾ ಮಾಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಇನ್ನೂ ಲಕ್ಷಾಂತರ ರೈತರು ಬಾಕಿ ಮೊತ್ತ (50 ಸಾವಿರಕ್ಕಿಂತ ಮೇಲ್ಪಟ್ಟ ಹಣ) ಪಾವತಿಸಿಲ್ಲ. ಹಾಗೂ ಇನ್ನು ಕೆಲವರು ಸಾಲಮನ್ನಾಕ್ಕೆ ಅರ್ಜಿಯನ್ನೂ ಸಲ್ಲಿಸಿಲ್ಲ. ಬಹುತೇಕರು ನೂತನ ಸರ್ಕಾರದ ಸಂಪೂರ್ಣ ಸಾಲಮನ್ನಾ ಘೋಷಣೆಯನ್ನು ಎದುರುನೋಡುತ್ತಿದ್ದಾರೆ.
50 ಸಾವಿರ ರೂ.ಗಿಂತ ಕಡಿಮೆ ಇರುವ ಸಾಲವು ತಾನಾಗಿಯೇ ಮನ್ನಾ ಆಗಲಿದೆ. ಇದಕ್ಕಿಂತ ಮೇಲ್ಪಟ್ಟಿದ್ದರೆ, ಫಲಾನುಭವಿಗಳು ಉಳಿದ ಮೊತ್ತವನ್ನು ಆಯಾ ಸೊಸೈಟಿಗೆ ಪಾವತಿಸಬೇಕಾಗುತ್ತದೆ. ಅಂತಹವರ ಸಂಖ್ಯೆಯೇ ಸಾಕಷ್ಟಿದೆ. ಬಾಕಿ ಉಳಿಸಿಕೊಂಡ ಬಹುತೇಕ ರೈತರು ಸರ್ಕಾರ ಸಾಲ ಮನ್ನಾ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ಹೊಸ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಎಲ್ಲ ಕೃಷಿ ಸಾಲಮನ್ನಾ ಮಾಡುವುದಾಗಿ ಘೋಷಿಸಿದರೆ, ಬಾಕಿ ಹಣ ಪಾವತಿಸುವ ಪ್ರಮೇಯ ಉದ್ಭವಿಸುವುದೇ ಇಲ್ಲ.
22 ಲಕ್ಷ ರೈತರಲ್ಲಿ 50 ಸಾವಿರಕ್ಕಿಂತ ಕಡಿಮೆ ಸಾಲ ಹೊಂದಿರುವವರ ಸಂಖ್ಯೆ 16 ಲಕ್ಷ. ಸೊಸೈಟಿಗಳಲ್ಲಿ 3 ಲಕ್ಷ ರೂ.ವರೆಗೆ ಶೂನ್ಯಬಡ್ಡಿದರದಲ್ಲಿ ಸಾಲ ದೊರೆಯುತ್ತದೆ. ಇದಕ್ಕಿಂತ ಹೆಚ್ಚು ಮೊತ್ತದ ಸಾಲಕ್ಕೆ ಶೇ. 7ಕ್ಕಿಂತ ಹೆಚ್ಚು ಬಡ್ಡಿದರ ಅನ್ವಯ ಆಗುತ್ತದೆ.
50 ಸಾವಿರ ಯಾರು ಕಳೆದುಕೊಳ್ತಾರೆ?
“8,165 ಕೋಟಿಯಲ್ಲಿ ಈಗಾಗಲೇ 6,200 ಕೋಟಿ ರೂ.ಗಳಷ್ಟು ಬಿಲ್ ಅನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರಲ್ಲಿ 4,967 ಕೋಟಿ ರೂ. ಹಣ ಬಿಡುಗಡೆ ಆಗಿದ್ದು, 14 ಲಕ್ಷ ರೈತರು ಇದರ ಫಲಾನುಭವಿಗಳಾಗಿದ್ದಾರೆ. ಇನ್ನೂ ಐದು ದಿನ ಬಾಕಿ ಇರುವುದರಿಂದ ಬಹುತೇಕ ಎಲ್ಲರೂ ಕೊನೆಕ್ಷಣದಲ್ಲಿ ಬಂದು ಪಾವತಿಸುತ್ತಾರೆ. ಸಾಮಾನ್ಯವಾಗಿ ಯಾರೊಬ್ಬರೂ 50 ಸಾವಿರ ರೂ. ಕಳೆದುಕೊಳ್ಳಲು ಇಚ್ಛಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ (ಆಡಳಿತ ಮತ್ತು ಅಭಿವೃದ್ಧಿ) ಜಂಗಮಪ್ಪ ಹೇಳುತ್ತಾರೆ.
“ಕೆಲವು ಪ್ರದೇಶಗಳಲ್ಲಿ ಬೆಳೆ ತಡವಾಗಿ ಕೈಗೆ ಬರುತ್ತದೆ. ಕೊಡಗು ಸೇರಿದಂತೆ ಹಲವೆಡೆ ಏಪ್ರಿಲ್-ಮೇನಲ್ಲಿ ಇಳುವರಿ ಬಂದಿದೆ. ಹಾಗಾಗಿ, ರೈತರು ಬಾಕಿ ಹಣ ಪಾವತಿಸುವುದು ತಡವಾಗಿರುತ್ತದೆ. ಸರ್ಕಾರದ ಹಣ ಬಿಡುಗಡೆಯಲ್ಲಿ ಯಾವುದೇ ರೀತಿ ವಿಳಂಬ ಆಗಿಲ್ಲ. ನಿಗದಿತ ಅವಧಿಯೊಳಗೆ ಹೆಚ್ಚು-ಕಡಿಮೆ ಎಲ್ಲರ ಸಾಲವೂ ಮನ್ನಾ ಆಗುತ್ತದೆ. ತೀರಾ ಎಂದರೆ 300 ಕೋಟಿ ಉಳಿಯಬಹುದಷ್ಟೇ’ ಎಂದು ಸಹಕಾರ ಸಂಘಗಳ ಅಪರ ನಿಬಂಧಕರಾದ ಕೆ.ಎಂ. ಆಶಾ ಅಭಿಪ್ರಾಯಪಡುತ್ತಾರೆ.
ಸಾಲದ ಬೇಡಿಕೆ; ಒತ್ತಡದಲ್ಲಿ ಸೊಸೈಟಿಗಳು
ಈ ಮಧ್ಯೆ ಕೆಲವು ಸೊಸೈಟಿಗಳಲ್ಲಿ ಸಾಲಮನ್ನಾ ಮಾಡಿದ್ದರೂ, ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ. ಇದರಿಂದ ಹೊಸದಾಗಿ ರೈತರಿಗೆ ಸಾಲ ನೀಡಲು ಪರದಾಡುವಂತಾಗಿದೆ. “ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾಡಿದ ಸಾಲಮನ್ನಾದ ಮೊತ್ತ ಬಿಡುಗಡೆ ಆಗಿಲ್ಲ. ಇತ್ತ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದ್ದು, ಸಾಲಮನ್ನಾ ಬೆನ್ನಲ್ಲೇ ಹೊಸ ಸಾಲಕ್ಕೆ ಬೇಡಿಕೆ ಬರುತ್ತಿದೆ. ಆದರೆ, ಸೊಸೈಟಿಯಲ್ಲಿ ಹಣ ಇಲ್ಲ. ಇದು ಇಕ್ಕಟ್ಟಿಗೆ ಸಿಲುಕಿಸಿದೆ’ ಎಂದು ಹೆಸರು ಹೇಳಲಿಚ್ಛಿಸದ ಧಾರವಾಡದ ಸೊಸೈಟಿಯೊಂದರ ಕಾರ್ಯದರ್ಶಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
* 8,165 ಕೋಟಿ ರೂ. ಸಹಕಾರಿ ಸಂಘಗಳ ಸಾಲಮನ್ನಾ ಮೊತ್ತ
* 22 ಲಕ್ಷ ಸಾಲಮನ್ನಾ ಫಲಾನುಭವಿಗಳು
* 16 ಲಕ್ಷ ರೈತರು 50 ಸಾವಿರಕ್ಕಿಂತ ಕಡಿಮೆ ಸಾಲ ಹೊಂದಿದವರು
* 6 ಲಕ್ಷ ರೈತರು 50 ಸಾವಿರಕ್ಕಿಂತ ಹೆಚ್ಚು ಸಾಲ ಪಡೆದವರು
* 6,200 ಕೋಟಿ ರೂ. ಸಾಲಮನ್ನಾ ಸಂಬಂಧದ ಬಿಲ್ ಸರ್ಕಾರಕ್ಕೆ ಸಲ್ಲಿಕೆ
* 4,967 ಕೋಟಿ ರೂ. ಬಿಡುಗಡೆಯಾದ ಮೊತ್ತ
* 14 ಲಕ್ಷ ರೈತರು ಇದುವರೆಗಿನ ಫಲಾನುಭವಿಗಳು
– ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KPS ಹೆಚ್ಚುವರಿ ಎಲ್‌ಕೆಜಿ, 1ನೇ ತರಗತಿ ತೆರೆಯಲು ಅವಕಾಶ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.