ಲೋಪ ಬಂದರೆ ದಂಡ ವಿಧಿಸಲು ಸೂಚನೆ

ಬೀದಿ ದೀಪಗಳ ನಿರ್ವಹಣೆಯಲ್ಲಿ ಗುತ್ತಿಗೆದಾರರಿಂದ ಲೋಪ: ಗೌರವ್‌ಗುಪ್ತ ಎಚ್ಚರಿಕೆ

Team Udayavani, Oct 21, 2020, 12:37 PM IST

bng-tdy-4

ಬೆಂಗಳೂರು: ನಗರದಲ್ಲಿ ಬೀದಿ ದೀಪಗಳ ನಿರ್ವಹಣೆಯಲ್ಲಿ ಲೋಪವೆಸಗುತ್ತಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ದಂಡ ವಿಧಿಸುವಂತೆ ಪಾಲಿಕೆ ಆಡಳಿತಾಧಿಕಾರಿ ಗೌರವ್‌ ಗುಪ್ತ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಾಲಿಕೆ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಬೀದಿ ದೀಪ ನಿರ್ವಹಣೆ ಸಂಬಂಧ ಪಾಲಿಕೆಕೇಂದ್ರಕಚೇರಿ ಯಲ್ಲಿ ಆಡಳಿತಾಧಿಕಾರಿ ಗೌರವ್‌ಗುಪ್ತ ಅವರುಬಿಬಿಎಂಪಿಆಯುಕ್ತಎನ್‌.ಮಂಜುನಾಥ್‌ಪ್ರಸಾದ್‌, ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಆಡಳಿತಾಧಿಕಾರಿ ಗೌರವ್ ‌ಗುಪ್ತ, ನಗರದಲ್ಲಿ ಬೀದಿ ದೀಪಗಳ ನಿರ್ವ ಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಕಳೆದ 3-4 ವರ್ಷಗಳ ಕಾಲ ಒಬ್ಬರೇ ಗುತ್ತಿಗೆದಾರರಿಗೆ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ, ಸಮಸ್ಯೆ ಆಗುತ್ತಿದೆ. ಈ ರೀತಿ ನಿರ್ಲಕ್ಷ್ಯ ವಹಿಸುವ ಗುತ್ತಿಗೆದಾರರಿಗೆ ದಂಡ ವಿಧಿಸುವಂತೆ ನಿರ್ದೇಶನ ನೀಡಿದರು. ಅಲ್ಲದೆ, ಬೀದಿ ದೀಪಗಳ ನಿರ್ವಹಣೆ ಮೇಲ್ವಿಚಾರಣೆ ಮಾಡಬೇಕಾದ ವಲಯ ಮಟ್ಟದ ಅಧಿಕಾರಿಗಳು, ಮೇಲ್ವಿಚಾರಣೆ ಮಾಡುವಲ್ಲಿ ಲೋಪವೆಸಗುತ್ತಿದ್ದಾರೆ. ನಿರ್ವಹಣೆಯೇ ಮಾಡದೆ ಪ್ರತಿ ತಿಂಗಳು ಬಿಲ್‌ ಪಾವತಿ ಮಾಡಲಾಗುತ್ತಿದೆ. ಇಂತಹಪ್ರಕರಣಗಳನ್ನು ಗಂಭೀರವಾಗಿಪರಿಗಣಿಸು ವಂತೆ ಸೂಚನೆ ನೀಡಿದರು.

ನಗರದ ಪ್ರಮುಖ ರಸ್ತೆಗಳಲ್ಲೇ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಟೆಂಡರ್‌ ಶ್ಯೂರ್‌ ಮತ್ತು ವೈಟ್‌ ಟಾಪಿಂಗ್‌ ಯೋಜನೆಯಡಿ ಬೀದಿ ದೀಪಗಳನ್ನು ಅಳವಡಿಸುತ್ತಿದ್ದು, ಈ ಕಾಮಗಾರಿಯ ಡಿಎಲ್‌ಪಿ ಅವಧಿ ಮುಕ್ತಾಯಗೊಂಡ ಬಳಿಕ ವಿದ್ಯುತ್‌ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದು, ಆ ರಸ್ತೆಗಳಲ್ಲಿ ಬರುವ ಬೀದಿ ದೀಪಗಳನಿರ್ವಹಣೆ ಮಾಡುವಂತೆ ವಿದ್ಯುತ್‌ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಿದ್ಯುತ್‌ ಉಳಿ ತಾಯ ಯೋಜನೆಯ ಗ್ಲೋಬಲ್‌ ಟೆಂಡರ್‌ ಕರೆದು ಅನುಷ್ಠಾನಗೊಳಿಸಲು ಸಮಯ ಇರುವುದ ರಿಂದ, ಅಲ್ಲಿಯವರೆಗೆಹೊಸದಾಗಿ ಕರೆದಿರುವಟೆಂಡರ್‌ನಲ್ಲಿ ಅಂತಿಮವಾಗಿರುವ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಕ್ರಮ ವಹಿಸಿ ಎಂದರು.

ಬಿಬಿಎಂಪಿಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌, ವಿದ್ಯುತ್‌ ಉಳಿತಾಯ ಮಾಡುವ ಉದ್ದೇಶದಿಂದ ಗ್ಲೊಬಲ್‌ ಟೆಂಡರ್‌ ಯೋಜನೆ ರೂಪಿಸಲಾಗಿತ್ತು. ಗ್ಲೋಬಲ್‌ ಟೆಂಡರ್‌ ಯೋಜನೆ ಮೂಲಕ ಒಟ್ಟು 4.85 ಲಕ್ಷಗಳ ಬೀದಿ ದೀಪಗಳನ್ನು ಬದಲಾಯಿಸಲು ಉದ್ದೇಶಿಸಲಾಗಿದೆ. 30 ತಿಂಗಳಲ್ಲಿ ಒಟ್ಟು 5 ಹಂತಗಳಲ್ಲಿ ಈ ಯೋಜನೆ ಪೂರ್ಣಗೊ ಳಿಸಲು ಗಡುವು ನೀಡಲಾಗಿದೆ. ಈಗಾಗಲೇ ಮೊದಲನೇ ಹಂತದಲ್ಲಿ ಸುಮಾರು 1 ಲಕ್ಷ ಬೀದಿ ದೀಪ ಅಳವಡಿಸಲು ಸರ್ವೇ ಕಾರ್ಯ ನಡೆಯುತ್ತಿದ್ದು,2021ರ ಏಪ್ರಿಲ್‌ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಪಾಲಿಕೆ ವಿದ್ಯುತ್‌ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಇದ್ದು, 198 ವಾರ್ಡ್‌ ಗಳಲ್ಲಿ ಮೇಲ್ವಿಚಾರಣೆಗೆ ವಾರ್ಡ್‌ ಮಟ್ಟದ ಸಹಾಯಕ ಎಂಜಿನಿಯರ್‌ ಒಳಗೊಂಡ ತಂಡ ರಚಿಸಲಾಗುವುದು ಎಂದರು. ಹೊಸ ಗ್ಲೋಬಲ್‌ ಟೆಂಡರ್‌ ಹಂತ-ಹಂತವಾಗಿ ಗುತ್ತಿಗೆದಾರರೇ ವಿದ್ಯುತ್‌ ದೀಪ ಅಳವಡಿಸುವುದ ರಿಂದ ಪಾಲಿಕೆಯಿಂದ ಈಗಾಗಲೇ ಅಳವಡಿಸಿರುವ ಬೀದಿ ದೀಪಗಳನ್ನು ಹೊರ ಪ್ರದೇಶಗಳಲ್ಲಿ ಬರುವ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಂಚಿಕೆ ಮಾಡ ಲಾಗುವು ದು ಎಂದು ಆಯುಕ್ತರು ಮಾಹಿತಿ ನೀಡಿದರು.

ಈ ವೇಳೆ ವಿಶೇಷ ಆಯುಕ್ತ(ಯೋಜನೆ) ಮನೋಜ್‌ ಜೈನ್‌, ಪ್ರಧಾನ ಎಂಜಿನಿಯರ್‌ ಎಂ. ಆರ್‌.ವೆಂಕ ಟೇಶ್‌, ಮುಖ್ಯ ಎಂಜಿನಿಯರ್‌(ಪೂರ್ವ) ಪ್ರಭಾಕರ್‌,8 ವಲಯದ ವಿದ್ಯುತ್‌ ವಿಭಾಗದ ಕಾರ್ಯ ಪಾಲಕ ಎಂಜಿನಿಯರ್‌, ಅಧಿಕಾರಿಗಳು ಇದ್ದರು.

ಸ್ವಯಂ ಸೇವಕರನ್ನುನೇಮಿಸಿ :  ಪಾಲಿಕೆ ವ್ಯಾಪ್ತಿಯ ಬೂತ್‌ ಮಟ್ಟದಲ್ಲಿ ಸ್ವಯಂ ಸೇವಕರನ್ನು ನೇಮಿಸಿ, ಅವರಿಂದ  ಪ್ರತಿ ದಿನ ಮೂಲಭೂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬರುವ ದೂರುಗಳಾದ ರಸ್ತೆ ಗುಂಡಿ,ಕಸ ತೆಗೆಯದಿರುವುದು, ಬೀದಿ ದೀಪ ಉರಿಯದೆ ಇರುವ ದೂರುಗಳಿಗೆ ಸಂಬಂಧಿಸಿದ ಮಾಹಿತಿ ಪಡೆದು ಅಂದೇ ಸಮಸ್ಯೆ ಬಗೆಹರಿಸುವ ಕ್ರಮ ವಹಿಸುವಂತೆ ಪಾಲಿಕೆ ಆಡಳಿತಾಧಿಕಾರಿ ಗೌರವ್‌ ಗುಪ್ತ ತಿಳಿಸಿದರು

ಟಾಪ್ ನ್ಯೂಸ್

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation; ಸಾವಿನ ನಂತರವೂ ನೆರವಾದ ಜೀವ: 5 ಜೀವ ಉಳಿಸಿದ ಅಂಗಾಂಗ ದಾನ

Organ Donation; ಸಾವಿನ ನಂತರವೂ ನೆರವಾದ ಜೀವ: 5 ಜೀವ ಉಳಿಸಿದ ಅಂಗಾಂಗ ದಾನ

Cancer: ಎಳೆಯ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್‌ ಸಮಸ್ಯೆ

Cancer: ಎಳೆಯ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್‌ ಸಮಸ್ಯೆ

Bengaluru: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಯುವಕನಿಂದ ಲೈಂಗಿಕ ಕಿರುಕುಳ; ದೂರು

Bengaluru: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಯುವಕನಿಂದ ಲೈಂಗಿಕ ಕಿರುಕುಳ; ದೂರು

Theft: ವಿದ್ಯಾಗಣಪತಿ, ಸುಬ್ರಹ್ಮಣ್ಯ ದೇಗುಲಗಳ ಹುಂಡಿ ಹಣ, 5 ಚಿನ್ನದ ತಾಳಿ ಬೊಟ್ಟು ಕಳವು

Theft: ವಿದ್ಯಾಗಣಪತಿ, ಸುಬ್ರಹ್ಮಣ್ಯ ದೇಗುಲಗಳ ಹುಂಡಿ ಹಣ, 5 ಚಿನ್ನದ ತಾಳಿ ಬೊಟ್ಟು ಕಳವು

Underpass: ಅಪಾಯ ಆಹ್ವಾನಿಸುತ್ತಿದೆ ಅಂಡರ್‌ಪಾಸ್‌ ಫಾಲ್ಸ್‌ ಸೀಲಿಂಗ್‌

Underpass: ಅಪಾಯ ಆಹ್ವಾನಿಸುತ್ತಿದೆ ಅಂಡರ್‌ಪಾಸ್‌ ಫಾಲ್ಸ್‌ ಸೀಲಿಂಗ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.