ಈಗ “ಉಕ್ಕಿನ ಸೇತುವೆ ಬೇಕು’ ಹೋರಾಟ
Team Udayavani, Mar 6, 2017, 11:55 AM IST
ಉಕ್ಕಿನ ಮೇಲ್ಸೇತುವೆ ಯೋಜನೆ ಕೈಬಿಟ್ಟ ಸರ್ಕಾರದ ನಿರ್ಧಾರ ಬೆಂಗಳೂರಿನ ಉತ್ತರ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಟೀಲ್ ಬ್ರಿಡ್ಜ್ ವಿರೋಧಿಸುತ್ತಿರುವವರೆಲ್ಲರೂ ಪೊಳ್ಳು ಪರಿಸರ ವಾದಿಗಳು, ಅವರಿಗೆ ಸಮಸ್ಯೆಯ ಅರಿವಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ನಡುವೆ ಏರ್‌ಪೋರ್ಟ್ ರಸ್ತೆಯ ಟ್ರಾಫಿಕ್ ಸಮಸ್ಯೆ ತಗ್ಗಿಸುವ ಕುರಿತು ನಗರ ವಿನ್ಯಾಸಕ ನರೇಶ್ ನರಸಿಂಹನ್ ತಮ್ಮದೇ ವಾದ ಮುಂದಿಟ್ಟಿದ್ದಾರೆ. ಹೆಬ್ಟಾಳ ಮೇಲ್ಸೇತುವೆ ಪಥ ವಿಸ್ತರಣೆ, ಬಳ್ಳಾರಿ ರಸ್ತೆ ಅಗಲೀಕರಣ, ಏರ್‌ಪೋರ್ಟ್‌ಗೆ ಬದಲಿ ಮಾರ್ಗ, ರೈಲು ಸಂಚಾರ ಬಲವರ್ಧನೆ ಅವರ ವಾದದ ಪ್ರಮುಖ ಅಂಶಗಳು..
ಬೆಂಗಳೂರು: ನಗರದ ಬಸವೇಶ್ವರ ವೃತ್ತದಿಂದ ಹೆಬ್ಟಾಳದವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆಯನ್ನು ಸರ್ಕಾರ ಏಕಾಏಕಿ ಕೈಬಿಟ್ಟಿರುವುದನ್ನು ವಿರೋಧಿಸಿ ಬೆಂಗಳೂರು ಉತ್ತರ ಭಾಗದ ನಿವಾಸಿಗಳು ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಸಹಕಾರನಗರ, ಕಾಫಿಬೋರ್ಡ್ ಲೇಔಟ್, ಜಕ್ಕೂರು, ಅಮೃತಹಳ್ಳಿ, ಶಿವರಾಮ್ ಕಾರಂತ್ ನಗರ ಸೇರಿದಂತೆ ದೇವನಹಳ್ಳಿವರೆಗಿನ 50ಕ್ಕೂ ಹೆಚ್ಚು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರು ಹಾಗೂ ನಾಗರಿಕರು ಎಸ್ಟೀಮ್ ಮಾಲ್ ಎದುರು ಜಮಾವಣೆಗೊಂಡು “ಉತ್ತಮ ಬೆಂಗಳೂರಿಗಾಗಿ ಉಕ್ಕಿನ ಸೇತುವೆ ಬೇಕು’ ಎಂದುಸರ್ಕಾರವನ್ನು ಆಗ್ರಹಿಸಿದರು.
ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ಆರಂಭಿಸಬೇಕು. ಅಥವಾ ಈ ಮಾರ್ಗದಲ್ಲಿ ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, “ನಾವು ಅಭಿವೃದ್ಧಿ ಪರ, ನೀವು?’, “ಬ್ರಿಡ್ಜ್ ನಿರ್ಮಾಣ ಮಾಡಿ’, “ದಿನನಿತ್ಯದ ಗೋಳಿಗೆ ಮುಕ್ತಿ ಕೊಡಿ’, “ಜಾಗೃತರಾಗಿ ಇಲ್ಲವೇ ತೊಂದರೆ ಅನುಭವಿಸಿ’, “ನಾಗರಿಕರೇ ಒಂದಾಗಿ’, “ಸಂಚಾರ ಒತ್ತಡದಿಂದ ಪಾರಾಗಿ’ ಎಂಬ ಫಲಕಗಳನ್ನು ಹಿಡಿದು ಗಮನಸೆಳೆದರು.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓಡಾಡುವ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇದರಿಂದ ವಾಹನ ಸವಾರರು ಹಾಗೂ ಉತ್ತರ ಭಾಗದ ನಾಗರಿಕರಿಗೆ ಸಾಕಷ್ಟುತೊಂದರೆಯಾಗುತ್ತಿದೆ. ಈ ಕಿರಿಕಿರಿಯಿಂದ ಮುಕ್ತಿ ನೀಡಲು ಉಕ್ಕಿನ ಸೇತುವೆ ಅನಿವಾರ್ಯ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು.
ಪರಿಸರವಾದಿಗಳಿಗೆ ಪರಿಸ್ಥಿತಿ ಅರಿವಿಲ್ಲ: ಉತ್ತರ ಬೆಂಗಳೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಡಾ.ಎಚ್.ಸ್ಯಾಮ್ಯುಯಲ್ ಮಾತನಾಡಿ, ಈ ಭಾಗದ ಸಂಚಾರದಟ್ಟಣೆ ಬಗ್ಗೆ ಅರಿವಿಲ್ಲದ ಕೆಲವರು ಮಾತ್ರ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿ¨ªಾರೆ. ಡೋಂಗಿ ಪರಿಸರವಾದಿಗಳಿಗೆ ಪರಿಸ್ಥಿತಿಯ ಗಂಭೀರತೆ ಗೊತ್ತಿಲ್ಲ.
ಆದರೆ, ಸರ್ಕಾರ ಅವರ ಒತ್ತಡಕ್ಕೆ ಮಣಿದುವಾಸ್ತವವಾಗಿ ತೊಂದರೆ ಅನುಭವಿಸುತ್ತಿರುವ ಜನರನ್ನು ಕಡೆಗಣಿಸಿರುವುದು ಖಂಡನೀಯ ಎಂದರು. ಮರಗಳ ತೆರವು ನೆಪವಾಗಿಟ್ಟುಕೊಂಡು ಅಭಿವೃದ್ಧಿ ಯೋಜನೆಗೆ ಅಡ್ಡಗಾಲು ಹಾಕಲಾಗುತ್ತಿದೆ. ಅಷ್ಟಕ್ಕೂ ಈಗಾಗಲೇ ಇಲ್ಲಿ ಕಡಿಯಲು ಉದ್ದೇಶಿಸಿರುವ ಮರಗಳಿಗೆ ಪರ್ಯಾಯವಾಗಿ ಬೇರೆಡೆ ಹತ್ತು ಸಾವಿರ ಗಿಡಗಳನ್ನು ನೆಡಲಾಗುತ್ತಿದೆ.
ಯೋಜನೆಗಾಗಿ ಮರಗಳನ್ನು ಕಡಿಯುವುದರಿಂದ ಯಾವ ಪರಿಸರಕ್ಕೆ ಯಾವುದೇ ತೊಂದರೆಯೂ ಇಲ್ಲವೆಂದು ವಿಜ್ಞಾನಿಗಳ ಸ್ಪಷ್ಟಪಡಿಸಿದ್ದು, ಕೂಡಲೇ ಈ ಕಾಮಗಾರಿಯನ್ನುಆರಂಭಿಸಬೇಕು ಎಂದು ಆಗ್ರಹಿಸಿದರು. ಕರ್ನಾಟಕ ಅಭಿವೃದ್ಧಿ ಮತ್ತು ಅನುಷ್ಠಾನದ ಸಮಿತಿ ಅಧ್ಯಕ್ಷ ಡಿ.ಎಂ. ದೇವರಾಜಪ್ಪ, ಉಪಾಧ್ಯಕ್ಷ ಆರ್. ಬಾಲರಾಜ್, ಕಾವೇರಿ ಬಿಇಡಿ ಕಾಲೇಜು ಪ್ರಾಂಶುಪಾಲ ಡಾ.ರಾಜೇಶ್, ಶಿವರಾಮ್ ಕಾರಂತ್ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ರಾಜೇಶ್ ಮತ್ತಿತರರು ಭಾಗವಹಿಸಿದ್ದರು.
ಮಾತಿನ ಚಕಮಕಿ: ಉಕ್ಕಿನ ಸೇತುವೆ ಯೋಜನೆ ವಿಚಾರದಲ್ಲಿ ಮಾಧ್ಯಮಗಳು ದಿಕ್ಕುತಪ್ಪಿಸುತ್ತಿವೆ ಎಂದು ಹೇಳಿಕೆ ಪ್ರತಿಭಟನಾಕಾರರೊಬ್ಬರು ನೀಡಿದ ಹೇಳಿಕೆ ಮಾಧ್ಯಮ ಪ್ರತಿನಿಧಿಗಳು ಮತ್ತು ಪ್ರತಿಭಟನಾಕಾರರನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ನಂತರ ಪ್ರತಿಭಟನಾಕಾರರು ಕ್ಷಮೆಯಾಚಿಸಿದ್ದರಿಂದಾಗಿ ಪರಿಸ್ಥಿತಿ ತಿಳಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.