ಜನಗಣತಿ ಜತೆಗೇ ಎನ್‌ಪಿಆರ್‌


Team Udayavani, Dec 27, 2019, 10:48 AM IST

bng-tdy-2

ಸಾಂಧರ್ಬಿಕ ಚಿತ್ರ

ಬೆಂಗಳೂರು: ನಗರದಲ್ಲಿ ಎರಡು ಹಂತದಲ್ಲಿ (ಭಾರತೀಯ ಜನಗಣತಿ-2021 ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ- ಎನ್‌ಪಿಆರ್‌) ಜನಗಣತಿ ನಡೆಯಲಿದೆ ಎಂದು ರಾಜ್ಯ ಜನಗಣತಿ ನಿರ್ದೇಶಕ ಹಾಗೂ ಮುಖ್ಯ ಅಧಿಕಾರಿ ಎಸ್‌.ಬಿ.ವಿಜಯ್‌ ಕುಮಾರ್‌ ಹೇಳಿದರು.

ನಗರದಲ್ಲಿ ನಡೆಯಲಿರುವ ಜನಗಣತಿ ಹಾಗೂ ಎನ್‌ಪಿಆರ್‌ಗೆ ಸಂಬಂಧಿಸಿದಂತೆ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಗುರುವಾರ ಬಿಬಿಎಂಪಿಯ ಆಯುಕ್ತ ಬಿ. ಎಚ್‌.ಅನಿಲ್‌ಕುಮಾರ್‌ ಹಾಗೂ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು. ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಎಸ್.ಬಿ.ವಿಜಯ್ ಕುಮಾರ್, ಎರಡು ಹಂತಗಳಲ್ಲಿ ಜನಗಣತಿ ನಡೆಯಲಿದ್ದು, ಮೊದಲನೇ ಹಂತ 2020ರ ಏಪ್ರಿಲ್‌ ಮತ್ತು ಸೆಪ್ಟೆಂಬರ್‌ ಮಧ್ಯೆ 45 ದಿನ ನಡೆಯಲಿದೆ. ಇದರಂತೆ ಮನೆಗಳ ಪಟ್ಟಿ ಹಾಗೂ ಮನೆಗಣತಿ ಹಾಗೂ ಎರಡನೇ ಹಂತದ ಜನಗಣತಿ ಏಪ್ರಿಲ್‌ 15ರಿಂದ 2020ರ ಮೇ 29ರವರೆಗೆ ನಡೆಯಲಿದೆ. 2021ರ ಫೆಬ್ರವರಿ 9ರಿಂದ ಫೆ.28ರವರೆಗೆ ಜನಗಣತಿ ನಡೆಯಲಿದ್ದು, ಹೆಸರು ಸೇರಿಸಲು ಮಾ.1ರಿಂದ 5ರ ವರೆಗೆ ಅವಕಾಶವಿದೆ. ಇದರೊಂದಿಗೆ ಎನ್‌ಪಿಆರ್‌ ಸಹ ನಡೆಯಲಿದೆ. ಒಟ್ಟಾ ರೆ 2023ರ ಒಳಗಾಗಿ ವರದಿ ನೀಡುವ ಗುರಿ ಹೊಂದಲಾಗಿದೆ ಎಂದರು. ಜನಗಣತಿಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿಕೊಳ್ಳಲಾಗಿದೆ. ಲಿಂಗ, ಸಾಮಾಜಿಕ ಮತ್ತು ಸಾಂಸ್ಕೃತಿಕ, ಆರ್ಥಿಕ ಹಾಗೂ ವಲಸೆ ವಿವರಗಳನ್ನು ಪಡೆದುಕೊಳ್ಳಲಾಗುತ್ತದೆ.

ಲಿಂಗ: ಜನ್ಮದಿನಾಂಕ, ವಯಸ್ಸು, ವೈವಾಹಿಕ ವಿವರ, ಮಕ್ಕಳ ವಿವರ ಪಡೆದುಕೊಳ್ಳಲಾಗುತ್ತದೆ. ಸಾಮಾಜಿಕ ಮತ್ತು ಸಾಂಸತಿಕ: ಕುಟುಂಬ ಸದಸ್ಯರು-ಮುಖ್ಯಸ್ಥರ ಸಂಬಂಧ, ರಾಷ್ಟ್ರೀಯತೆ, ಎಸ್‌ಸಿ, ಎಸ್ಟಿ, ದಿವ್ಯಾಂಗರೇ?, ಮಾತೃಭಾಷೆ, ಇತರ ಭಾಷೆ ವಿವರ, ವಿದ್ಯಾಭ್ಯಾಸದ ವಿವರ ಪಡೆಯಲಾಗುತ್ತದೆ.

ಆರ್ಥಿಕತೆ: ಉದ್ಯೋಗ (ಸಂಘಟಿತ ಅಥವಾ ಅಸಂಘಟಿತ ವಲಯ), ಹುದ್ದೆ, ಕ್ಷೇತ್ರ ಅಥವಾ ಇನ್ನೂ ಉದ್ಯೋಗದ ನಿರೀಕ್ಷೆಯಲ್ಲಿದ್ದೀರಾ, ಉದ್ಯೋಗ ಮಾಡುತ್ತಿರುವುದಕ್ಕೂ ವಾಸಸ್ಥಳಕ್ಕೂ ಇರುವ ದೂರ, ಸ್ವಂತ ವಾಹನಗಳ ವಿವರ.

ವಲಸೆ: ವಲಸೆ ಬಂದವರೇ, ಈ ಹಿಂದೆ ಇದ್ದ ಸ್ಥಳ ಯಾವುದು, ವಲಸೆ ಬರಲು ಕಾರಣ? ಸ್ಥಳ ಬದಲಾವಣೆಯ ಅವಧಿ. ಮನೆಗಣತಿಯಲ್ಲಿ ಪರಿಶೀಲಿಸುವ

ಅಂಶಗಳು: ಮನೆಗಣತಿಯಲ್ಲಿ ಮನೆ ಯಾವ ರೀತಿ ನಿರ್ಮಾಣವಾಗಿದೆ, ಎಷ್ಟು ಮಹಡಿ ಇವೆ. ಮಾಲೀಕರ ವಿವರ, ಒಂದು ಕಟ್ಟಡದಲ್ಲಿ ಎಷ್ಟು ಮನೆಗಳಿವೆ, ಅವುಗಳಲ್ಲಿ ಎಷ್ಟು ಕೋಣೆಗಳಿವೆ, ಎಷ್ಟು ಸದಸ್ಯರು ವಾಸವಿದ್ದಾರೆ, ಶೌಚಾಲಯ, ಶುದ್ಧ ನೀರಿನ ವ್ಯವಸ್ಥೆ ಪರಿಶೀಲನೆ ಹಾಗೂ ಅಡುಗೆ ಕೋಣೆ, ಫ್ರಿಡ್ಜ್, ಟಿ.ವಿ, ವಾಹನ, ಮೊಬೈಲ್‌, ಲ್ಯಾಪ್‌ಟಾಪ್‌, ರೇಡಿಯೋ ಹಾಗೂ ಇಂಟರ್‌ನೆಟ್‌ ಸೌಕರ್ಯವಿದೆಯೇ ಎಂಬ ಮಾಹಿತಿ ಪಡೆದು ಕೊಳ್ಳಲಾಗುತ್ತದೆ. ಅದೇ ರೀತಿ ಆಹಾರ ಕ್ರಮದ ವಿವರವನ್ನೂ ಪಡೆಯ ಲಾಗುತ್ತದೆ ಮನೆಗಣತಿಯಲ್ಲಿ 34 ಪ್ರಶ್ನೆಗಳಿವೆ. ಸೂಚನೆಗಳನ್ನು ಲಿಖೀತ ರೂಪದಲ್ಲಿ ದಾಖಲಿಸಿಕೊಳ್ಳುವುದಕ್ಕಿಂತ ಗುರುತು ಹಾಕಿಕೊಳ್ಳುವ ಪ್ರಶ್ನೆಗಳ ಪಟ್ಟಿ ತಯಾರಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮಾಹಿತಿ ಸಂಗ್ರಹ:  ಹೆಸರು, ಲಿಂಗ, ಕುಟುಂಬ ಸದಸ್ಯರು-ಮುಖ್ಯಸ್ಥರ ಸಂಬಂಧ, ವಾಸ ಸ್ಥಳದ ವಿವರ, ತಾತ್ಕಾಲಿಕ ಮತ್ತು ಕಾಯಂ ವಿಳಾಸ, ಶೈಕ್ಷಣಿಕ ಪ್ರಗತಿ, ತಂದೆ, ತಾಯಿ ಹೆಸರು ಮತ್ತು ಜನ್ಮ ದಿನಾಂಕ, ಅವರು ಜನಿಸಿದ ಸ್ಥಳ, ಪತಿ ಅಥವಾ ಪತ್ನಿ ಹೆಸರು, ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಮೊಬೈಲ್‌ ಸಂಖ್ಯೆ, ಪಾನ್‌ಕಾರ್ಡ್‌, ವಾಹನ ಚಾಲನಾ ಪರವಾನಗಿ ಮಾಹಿತಿ ಕೇಳಲಾಗುತ್ತದೆ. ಆದರೆ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವುದು ಕಡ್ಡಾಯವಲ್ಲ ಎಂದು ಎಸ್‌.ಬಿ.ವಿಜಯ್‌ಕುಮಾರ್‌ ಸ್ಪಷ್ಟಪಡಿಸಿದರು.

 ಸಾರ್ವಜನಿಕರು ಖುದ್ದಾಗಿ ವಿವರ ದಾಖಲಿಸಲು ಅವಕಾಶ: ಜನಗಣತಿಯನ್ನು ಕಾಲಮಿಯೊಳಗೆ ಮುಗಿಸಲು ಹಾಗೂ  ಸಾರ್ವಜನಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಬಾರಿ ಜನಗಣತಿ, ಮನೆಗಣತಿ ಹಾಗೂ ಎನ್‌ಪಿಆರ್‌ಗೆ ಪ್ರತ್ಯೇಕ ಆ್ಯಪ್‌ಗ್ಳನ್ನು ಬಿಡುಗಡೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದರು. ಕಾಗದ, ಆ್ಯಪ್‌ ಹಾಗೂ ವೈಯಕ್ತಿಕವಾಗಿ ಸಾರ್ವಜನಿಕರು ತಮ್ಮ ಮಾಹಿತಿ ದಾಖಲಿಸಲು ಅವಕಾಶವಿದ್ದು, ಇದರಿಂದ ಜನಗಣತಿ ಸುಲಭವಾಗಲಿದೆ. ಜನಗಣಿತಿ ಆಧರಿಸಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆ ರೂಪಿಸಿಕೊಳ್ಳುತ್ತವೆ. ಕಾಗದದ ಮೂಲಕ ಮಾಹಿತಿ ಸಂಗ್ರಹಿಸಿದರೆ ಜನಗಣತಿ ವರದಿ ಸಿದ್ಧಪಡಿಸಲು ವರ್ಷಗಳೇ ಬೇಕು. ಹೀಗಾಗಿ, ಈ ಬಾರಿ ಮೂರು ಪ್ರತ್ಯೇಕ ಆ್ಯಪ್‌ಗ್ಳನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಟಾಪ್ ನ್ಯೂಸ್

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

Bengaluru: ಸೆಂಟ್ರಿಂಗ್‌ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

Bengaluru: ಸೆಂಟ್ರಿಂಗ್‌ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6

Manipal: ಅಪಾಯಕಾರಿ ರೀತಿಯಲ್ಲಿ ಬೈಕ್‌ ಚಾಲನೆ; ಪ್ರಕರಣ ದಾಖಲು

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

de

Kundapura: ಗುಲ್ವಾಡಿ; ಗಾಯಾಳು ಸಾವು

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.