ಮೂರು ಲಕ್ಷ ಮೀರಿದ ಪ್ರಯಾಣಿಕರ ಸಂಖ್ಯೆ!


Team Udayavani, Jun 20, 2017, 12:34 PM IST

metro-3-lakh.jpg

ಬೆಂಗಳೂರು: ನಗರದಲ್ಲಿ ಸೋಮವಾರದಿಂದ ಸಂಪೂರ್ಣವಾಗಿ ಮೆಟ್ರೋ ಸಾರ್ವಜನಿಕ ಸೇವೆ ಆರಂಭಗೊಂಡಿದ್ದು, ಒಂದೇ ದಿನದಲ್ಲಿ 3,07,543 ಜನ ಪ್ರಯಾಣಿಸಿದ್ದಾರೆ. ಎರಡನೇ ದಿನವೇ ಪ್ರಯಾಣಿಕರ ಸಂಖ್ಯೆಯಲ್ಲಿ ಒಂದು ಲಕ್ಷ ಏರಿಕೆಯಾಗಿದೆ.

ಸಾಮಾನ್ಯ ದಿನಗಳಲ್ಲಿ ಈ ಮೊದಲು ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಕಾರಿಡಾರ್‌ಗಳಲ್ಲಿ 1.80ರಿಂದ 2 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. 42.3 ಕಿ.ಮೀ. ಪೂರ್ಣಗೊಂಡು ಸೇವೆ ಆರಂಭಗೊಂಡ ಎರಡನೇ ದಿನವೇ ಪ್ರಯಾಣಿಕರ ಸಂಖ್ಯೆ ಮೂರು ಲಕ್ಷ ತಲುಪಿದೆ. 

ಬೆಳಗ್ಗೆ 5.30ರಿಂದ ಸಂಜೆ 6ರವರೆಗೆ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವೆ 1.88,502 ಹಾಗೂ ನಾಗಸಂದ್ರ-ಯಲಚೇನಹಳ್ಳಿ ಮಧ್ಯೆ 1,19,041 ಜನ ಸೇರಿದಂತೆ ಒಟ್ಟಾರೆ 3,07,543 ಲಕ್ಷ ಜನ ಪ್ರಯಾಣ ಮಾಡಿದ್ದರು. ರಾತ್ರಿ 8ರ ವೇಳೆಗೆ 2.40 ಲಕ್ಷ ಜನ ಸಂಚರಿಸಿದ್ದರು. ಮುಂದಿನ ಒಂದೆರಡು ವಾರಗಳಲ್ಲಿ ಪ್ರಯಾಣಿಕರ ಸಂಖ್ಯೆ 4 ಲಕ್ಷ ತಲುಪುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮೆಟ್ರೋದಲ್ಲಿ ಸಂಚರಿಸಿದವರಲ್ಲಿ ಬಹುತೇಕರು ಸರ್ಕಾರಿ ಮತ್ತು ಖಾಸಗಿ ನೌಕರರ ವರ್ಗ ಆಗಿತ್ತು. ಜಯನಗರ, ಸೌತ್‌ಎಂಡ್‌ ಸರ್ಕಲ್‌, ಚಾಮರಾಜಪೇಟೆ, ವಿಜಯನಗರ, ಹೊಸಹಳ್ಳಿ, ಯಶವಂತಪುರ, ರಾಜಾಜಿನಗರ ಸೇರಿದಂತೆ ನಗರದ ನಾನಾ ಭಾಗಗಳಿಂದ ಕೆಲಸಕ್ಕೆ ತೆರಳುವ ಸಾವಿರಾರು ಜನ ಬಸ್‌ಗಳ ಬದಲಿಗೆ ಮೆಟ್ರೋ ಏರಿದರು. ನೂಕುನುಗ್ಗಲಿನ ನಡುವೆಯೇ ತುದಿಗಾಲಲ್ಲಿ ನಿಂತು ಜನ ಪ್ರಯಾಣ ಬೆಳೆಸಿದರು. 

ಯಲಚೇನಹಳ್ಳಿ, ನಾಗಸಂದ್ರ ಸೇರಿದಂತೆ ನಾಲ್ಕೂ ಟರ್ಮಿನಲ್‌ಗ‌ಳಿಂದ ಪ್ರಯಾಣ ಬೆಳೆಸುವವರು ಮಾತ್ರ ಸೀಟು ಗಿಟ್ಟಿಸಿಕೊಂಡರು. ಮಾರ್ಗ ಮಧ್ಯೆ ಬರುವ ಬಹುತೇಕ ಪ್ರಯಾಣಿಕರು ರೈಲಿನ ಒಳಗೆ ಪ್ರವೇಶಿಸಲಿಕ್ಕೂ ಹರಸಾಹಸ ಮಾಡುತ್ತಿರುವುದು ಕಂಡುಬಂತು. ಹಿರಿಯರು, ಕಿರಿಯರು, ಮಹಿಳೆಯರೆಲ್ಲರೂ ನಿಂತುಕೊಂಡೇ ಪ್ರಯಾಣಿಸಿದರು. 
ಸಂಚಾರದಟ್ಟಣೆಯಿಂದ ಮುಕ್ತಿ

ಆರ್‌.ವಿ. ರಸ್ತೆಯಿಂದ ಮೆಟ್ರೋದಲ್ಲಿ ಹೊರಟ ಪ್ರಯಾಣಿಕ ಸುರೇಶ್‌ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ನಿತ್ಯ ಜಾಲಹಳ್ಳಿಗೆ ನಾನು ಬಸ್‌ನಲ್ಲಿ ಹೋಗುತ್ತಿದ್ದೆ. ಕೆಲವೊಮ್ಮೆ ಬೈಕ್‌ನಲ್ಲೂ ಹೋಗುತ್ತೇನೆ. ಆದರೂ ಪೀಕ್‌ ಅವರ್‌ನಲ್ಲಿ ಒಂದೂವರೆಯಿಂದ ಎರಡು ತಾಸು ಹಿಡಿಯುತ್ತದೆ. ಆ ಸಂಚಾರದಟ್ಟಣೆ, ಹೊಗೆ ನೋಡಿದರೆ ಮೆಟ್ರೋದಲ್ಲಿ ನಿಂತು ಹೋಗುವುದು ಎಷ್ಟೋ ಉತ್ತಮ,’ ಎಂದರು.

ಮೆಜೆಸ್ಟಿಕ್‌ನಿಂದ ಸೀಟೇ ಇಲ್ಲ!: “ಪ್ರಯಾಣ ದರ ದುಬಾರಿ ಎನ್ನುವುದು ಹೊರತುಪಡಿಸಿದರೆ, ಉಳಿದೆಲ್ಲವೂ ಉತ್ತಮವಾಗಿದೆ. ಆದಷ್ಟು ಬೇಗ ಇನ್ನಷ್ಟು ಬೋಗಿಗಳನ್ನೂ ಅಳವಡಿಸಬೇಕು. ಯಾಕೆಂದರೆ, ಮೆಜೆಸ್ಟಿಕ್‌ನಲ್ಲಿ ಮೆಟ್ರೋ ಏರುವವರಿಗೆ ಸೀಟುಗಳೇ ಇರುವುದಿಲ್ಲ. ಇದರಿಂದ ಮಹಿಳೆಯರು, ವೃದ್ಧರು ಪರದಾಡಬೇಕಗಿದೆ,’ ಎಂದು ಚಿಕ್ಕಪೇಟೆಯಿಂದ ಮೆಟ್ರೋ ಏರಿದ ಭಾಗ್ಯಮ್ಮ ಅಭಿಪ್ರಾಯಪಟ್ಟರು. 

ಸೆಕ್ಯೂರಿಟಿ ಗಾರ್ಡ್‌ಗಳ ಹರಸಾಹಸ: ಮೆಟ್ರೋ ವಾಣಿಜ್ಯ ಸಂಚಾರ ಸೇವೆ ಆರಂಭಗೊಂಡ ನಂತರ ಹೆಚ್ಚು ಸುಸ್ತಾದವರು ನಿಲ್ದಾಣಗಳಲ್ಲಿರುವ ಸೆಕ್ಯುರಿಟಿ ಗಾರ್ಡ್‌ಗಳು. ಭಾನುವಾರ ಸಂಜೆಯಿಂದ ಸೋಮವಾರ ರಾತ್ರಿವರೆಗೂ ಮೆಟ್ರೋ ನಿಲ್ದಾಣಗಳತ್ತ ಬರುವವರ ಸಂಖ್ಯೆ ಹೆಚ್ಚಿದ್ದು, ಅವರನ್ನು ನಿಯಂತ್ರಿಸಿ, ಸುರಕ್ಷಿತ ಪ್ರಯಾಣಕ್ಕೆ ಮಾರ್ಗದರ್ಶನ ಮಾಡಲು ಪ್ರತಿ ನಿಲ್ದಾಣಗಳಲ್ಲಿ ಸರಿಸುಮಾರು 30 ಸೆಕ್ಯೂರಿಟಿ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಮೆಜೆಸ್ಟಿಕ್‌ ಇಂಟರ್‌ಚೇಂಜ್‌ನಲ್ಲಿ ಈ ಸಂಖ್ಯೆ ದುಪ್ಪಟ್ಟಿದೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರೇ ಇದ್ದಾರೆ.

ನಿಲ್ದಾಣಗಳಿಗೆ ಬರುವ ಸಾವಿರಾರು ಪ್ರಯಾಣಿಕರನ್ನು ನಿರ್ವಹಿಸುತ್ತಿರುವ ಈ ಸೆಕ್ಯುರಿಟಿ ಗಾರ್ಡ್‌ಗಳು, ಸತತ ನಾಲ್ಕು ತಾಸು ನಿಂತುಕೊಂಡೇ ಇರುತ್ತಾರೆ.  ಬಂದವರಿಗೆಲ್ಲಾ ದಾರಿ ತೋರಿಸುವುದು, ವಿದ್ಯುತ್‌ ಪ್ರವಹಿಸುವ ಹಳಿಯತ್ತ ಮಕ್ಕಳು ಹೋಗದಂತೆ ಎಚ್ಚರಿಸುವುದು, ಕೇವಲ 30 ಸೆಕೆಂಡುಗಳಲ್ಲಿ ಸಾಧ್ಯವಾದಷ್ಟು ಜನರನ್ನು ರೈಲಿನಲ್ಲಿ ಹತ್ತಿಸುವುದು, ವೃದ್ಧರು, ಮಹಿಳೆಯರನ್ನು ಎಸ್ಕಲೇಟರ್‌ನಲ್ಲಿ ಸುರಕ್ಷಿತವಾಗಿ ಕಳಿಸುವುದು,

ಯಾವುದೇ ಅವಘಡ ಸಂಭವಿಸದಂತೆ ಎಚ್ಚರ ವಹಿಸುವುದು ಸೇರಿದಂತೆ ಬಹುತೇಕ ಕೆಲಸಗಳನ್ನು ಸೆಕ್ಯುರಿಟಿ ಗಾರ್ಡ್‌ಗಳು ನಿರ್ವಹಿಸುತ್ತಾರೆ. “ಈ ಕೆಲಸದಲ್ಲಿ ಏನೋ ಖುಷಿ ಇದೆ. ಕಳೆದೆರಡು ದಿನಗಳಿಂದ ರೆಸ್ಟ್‌ ಇಲ್ಲ. ನಾಲ್ಕು ತಾಸುಗಟ್ಟಲೆ ನಿಲ್ಲಬೇಕಾಗುತ್ತದೆ. ಹೀಗೆ ಸತತವಾಗಿ ನಿಲ್ಲುವುದರಿಂದ ಕಾಲು ನೋವು ಬರುತ್ತವೆ. ಆದರೆ, ಜನ ನಮ್ಮ ಬಳಿ ಸಹಾಯ ಕೇಳಿಬಂದಾಗ ಆ ನೋವೆಲ್ಲಾ ಮರೆತುಹೋಗುತ್ತದೆ,’ ಎಂದವರು ಮೆಜೆಸ್ಟಿಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೃಹರಕ್ಷಕ ಸಿಬ್ಬಂದಿ ಕೆ.ವಿಮಲಾ.

ಟಾಪ್ ನ್ಯೂಸ್

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

Leopard: ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ.. ಸೆರೆ ಹಿಡಿಯಲು ಆಗ್ರಹ

Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ

Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ

Mine Tragedy: ಇಂದು ಮತ್ತೆ ಮೂರೂ ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ

Mine Tragedy: ಇಂದು ಮತ್ತೆ ಮೂರೂ ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-bng

Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

16-bng

Bengaluru: 4 ಕೋಟಿ ಪ್ರಯಾಣಿಕರು: ಏರ್‌ ಪೋರ್ಟ್ ದಾಖಲೆ

15-metro

Bengaluru: ಪ್ರತಿ ಸೋಮವಾರ ಮುಂಜಾನೆ 4.15ರಿಂದಲೇ ಮೆಟ್ರೋ ಸೇವೆ

14-bng

Bengaluru: ತಾಯಿಗೆ ನಿಂದಿಸುತ್ತಿದ್ದ ತಮ್ಮನ ಕೊಂದ ಸಹೋದರನ ಬಂಧನ

13-bng

Bengaluru: ಕೆಂಗೇರಿಯ ಮಧು ಪೆಟ್ರೋಲ್‌ ಬಂಕ್‌ ಜಂಕ್ಷನ್‌ ಮೃತ್ಯುಕೂಪ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

22-uv-fusion

TEENAGE: ಹುಚ್ಚುಕೋಡಿ ಮನಸ್ಸಿಗೂ ಕಡಿವಾಣ ಬೇಕಿದೆ

21-uv-fusion

Ashram: ಹಿರಿಯ ಜೀವಗಳ ಶುಭಾಶೀರ್ವಾದ -ಸಾರ್ಥಕ ಭಾವ

Leopard: ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ.. ಸೆರೆ ಹಿಡಿಯಲು ಆಗ್ರಹ

Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.