ಶೇ.60 ಭಾರತೀಯರಿಗೆ ಸಾಂದರ್ಭಿಕ ನಿದ್ರಾಹೀನತೆ


Team Udayavani, Mar 26, 2023, 2:02 PM IST

tdy-10

ಬೆಂಗಳೂರು: ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ನಿದ್ರೆ ಅತ್ಯಗತ್ಯವಾದರೂ, ದೇಶದಲ್ಲಿ ಲಕ್ಷಾಂತರ ಜನ ಉತ್ತಮ ನಿದ್ದೆಯಿಂದ ವಂಚಿತರಾಗಿದ್ದಾರೆ.

ಒಬ್ಬ ವ್ಯಕ್ತಿ ತನ್ನ ಜೀವನದ ಸರಾಸರಿ ಅವಧಿಯಲ್ಲಿ 26 ವರ್ಷ(ಮೂರನೇ ಒಂದು ಭಾಗ)ಗಳನ್ನು ನಿದ್ರೆ ಯಲ್ಲಿ ಕಳೆಯುತ್ತಾನೆ. ನಿದ್ರೆಯಿಂದ ವಿಶ್ರಾಂತಿ ಪಡೆ ಯುವುದರೊಂದಿಗೆ ದೇಹವು ಸಮತೋಲನ ಹೊಂದುತ್ತದೆ. ಆದರೆ, ಬಹುತೇಕರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವುದನ್ನು ಕಂಡು ವೈಜ್ಞಾನಿಕವಾಗಿ ನಿದ್ರೆ ಮತ್ತು ನಿದ್ರಾಹೀನತೆಯ ಪ್ರಾಮುಖ್ಯಯನ್ನು ಸಾರ್ವಜನಿಕರಲ್ಲಿ ಅರಿವು ಮೂಡಿ ಸುವ ಉದ್ದೇಶದಿಂದ ವಿಶ್ವ ನಿದ್ರಾ ಸೊಸೈಟಿಯ ವಿಶ್ವ ನಿದ್ರಾ ದಿನ ಸಮಿತಿಯು 2008 ರಿಂದ ಮಾ.17ರಂದು “ವಿಶ್ವ ನಿದ್ರಾ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

ಪಿ ಮತ್ತು ಜಿ ಸಹಯೋಗದಲ್ಲಿ ಕಾಂತರ್‌ ನಡೆಸಿದ “ಝ್ಕ್ವಿಟ್‌ ಇಂಡಿಯಾ ನ್ಯಾಷನಲ್‌ ಸ್ಲಿàಪ್‌ ಸಮೀಕ್ಷೆ’ ಪ್ರಕಾರ ಶೇ.60ರಷ್ಟು ಭಾರತೀಯರು ಸಾಂದರ್ಭಿಕ ನಿದ್ರಾಹೀನತೆಯನ್ನು ಎದುರಿಸುತ್ತಿದ್ದಾರೆ ಎಂದು ಬಹಿರಂಗವಾಗಿದೆ. ವಿಶ್ವ ನಿದ್ರಾ ದಿನವು ನಿದ್ರೆ, ನಿದ್ರೆ ಔಷಧ, ನಿದ್ರೆಯ ಬಗ್ಗೆ ಶಿಕ್ಷಣ ಮತ್ತು ದೈನಂದಿನ ಜೀವನದಲ್ಲಿ ನಿದ್ರೆಯ ಅಭಾವವು ಉಂಟುಮಾಡುವ ಸಾಮಾಜಿಕ ಪರಿಣಾಮಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಮೇಲೆ ಕೇಂದ್ರೀಕರಿಸಲಾಗಿದ್ದು, ನಿದ್ರೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ ಎಂದು ವೈದ್ಯಕೀಯ ಮತ್ತು ತಾಂತ್ರಿಕತೆಗಳ ಸಮೂಹ ವಿಜ್ಞಾನಿ ಡಾ. ಯಾಂಗ್‌ ಚಿಯಾತ್‌ ವಾಂಗ್‌ ತಿಳಿಸುತ್ತಾರೆ.

ಪ್ರತಿಯೊಬ್ಬರೂ ದಿನ ರಾತ್ರಿ ಕಡ್ಡಾಯವಾಗಿ 7ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು, ರಕ್ತದೊತ್ತಡ, ತೂಕ ಹೆಚ್ಚಾಗುವುದು ಕಡಿಮೆಯಾಗುವುದರೊಂದಿಗೆ ನಾನಾ ರೀತಿಯ ಸಣ್ಣ ಕಾಯಿಲೆಗಳಿಗೆ ನಿದ್ರೆಯೇ ಉತ್ತಮ ಔಷಧಿ. ಕತ್ತಲಲ್ಲಿ ಪ್ರತಿಯೊಬ್ಬರ ಮೆದುಳಿನಲ್ಲಿ ಮೆಲೋಟನಿನ್‌ ಎಂಬ ರಸಾಯನಿಕ ಉತ್ಪತ್ತಿಯಿಂದ ನಿದ್ರೆಗೆ ಜರುಗುತ್ತಾರೆ. ಆದರೆ, ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್‌, ಟಿವಿಗಳಂತಹ ಉಪಕರಣಗಳಿಂದ ಹೊರಸೂಸುವ ಬ್ಲೂಲೈಟ್‌ನಿಂದಾಗಿ ಮೆಲೋಟನಿನ್‌ ಉತ್ಪತ್ತಿಯು ತಡವಾಗುತ್ತದೆ. ಆಗ ನಿದ್ರೆಗೆ ಪ್ರಚೋದನೆ ಬದಲಾಗುವುದರಿಂದ ಮಲಗುವುದು ತಡವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಭೌತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕ್ಷೀಣಿಸಿದ್ದು, ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ಆಡುವ ಆನ್‌ಲೈನ್‌ ಗೇಮಿಂಗ್‌, ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸುವುದರಿಂದ ಮಾನಸಿಕ ಚಂಚಲನ ಅಧಿಕವಾಗುತ್ತದೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ ನಿದ್ರೆಗೆ ಭಂಗವಾಗುತ್ತದೆ ಎಂದು ನಿಮ್ಹಾನ್ಸ್‌ ಹೆಚ್ಚುವರಿ ಉಪನ್ಯಾಸಕ ಡಾ.ರೂಪೇಶ್‌ ತಿಳಿಸುತ್ತಾರೆ.

ಉತ್ತಮ ನಿದ್ದೆ ಮಾಡಲು ಸಲಹೆಗಳು :

 ನಿಯಮಿತ ನಿದ್ರೆಯ ಸಮಯಚಕ್ರವನ್ನು ಇಟ್ಟುಕೊಂಡು, ವಾರಾಂತ್ಯ ಸೇರಿದಂತೆ ಎಲ್ಲಾ ದಿನಗಳಲ್ಲಿಯೂ ಅದನ್ನು ಅನುಸರಿಸಬೇಕು.

 ಮಲಗುವ ಮುನ್ನ ಎಲೆಕ್ಟ್ರಾನಿಕ್‌ ಸಾಧನಗಳ ಬಳಕೆ ನಿಲ್ಲಿಸಿ ಮತ್ತು ಮೊಬೈಲ್‌ ಸೈಲೆಂಟ್‌ ಮಾಡಬೇಕು.  ರಾತ್ರಿ ವೇಳೆ ಕೆಫಿನ್‌ ಸೇವನೆ ಮಿತಗೊಳಿಸಿ.

 ವಿಟಮಿನ್‌ ಬಿ 6 ಹೊಂದಿರುವ ಪೂರಕಗಳು ನಿಮ್ಮ ಮನಸ್ಸನ್ನು ವಿಶ್ರಾಂತಿ ಮಾಡುತ್ತದೆ ಮತ್ತು ನಿದ್ರಿಸಲು ಸಹಾಯ ಮಾಡುತ್ತದೆ.

 ನಿಗದಿತ ಸಮಯ, ನಿರಂತರತೆ ಮತ್ತು ಆಳವಾದ ನಿದ್ರೆ ಅಭ್ಯಾಸ ಮಾಡಿಕೊಳ್ಳಿ.

 ಮಲಗುವ ಮುನ್ನ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ.

ಶಾಲಾವಧಿ ಕಡಿತದಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕ : ಅಮೆರಿಕನ್‌ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ ನಡೆಸಿದ ಸಮೀಕ್ಷೆ ಪ್ರಕಾರ ಬೆಳಗ್ಗೆ ಒಂದು ಗಂಟೆ ತಡವಾಗಿ ಶಾಲಾ ತರಗತಿಗಳನ್ನು ಪ್ರಾರಂಭಿಸಿದ್ದರಿಂದ, ಮಕ್ಕಳು ಪರೀಕ್ಷೆಯಲ್ಲಿ ಶೇ.15ರಷ್ಟು ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಎಂದು ವರದಿಯಾಗಿದೆ.

ನಿದ್ರೆಯು ನಮ್ಮ ದೇಹ ಮತ್ತು ಆರೋಗ್ಯಕ್ಕೆ ಅತ್ಯಗತ್ಯವಾಗಿದ್ದು, ಬಹುತೇಕರು ಇಂದಿನ ಕಳಪೆ ಜೀವನ ಶೈಲಿ, ಮಾನಸಿಕ ಒತ್ತಡವೇ ನಿದ್ರಾಹೀನತೆಗೆ ಪ್ರಮುಖ ಕಾರಣಗಳು. ಆದ್ದರಿಂದ ಉತ್ತಮ ಆಹಾರ ಮತ್ತು ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಅನಗತ್ಯ ವಿಚಾರಗಳಿಂದ ದೂರವಿರಬೇಕು. – ಡಾ. ವಸುನೇತ್ರ ಕಾಸರಗೋಡು, ಮಣಿಪಾಲ್‌ ಆಸ್ಪತ್ರೆಯ ಪಲ್ಮನಾಲಜಿ ಸಮಾಲೋಚಕರು

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.