ಓಹೋ ಶಿವಾಲಯ!


Team Udayavani, Feb 12, 2018, 1:14 PM IST

shivalaya.jpg

ಶಿವರಾತ್ರಿಗೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ಹಲವು ಮನೆಗಳಲ್ಲಿ ಆಚರಣೆಯ ಸಿದ್ಧತೆ ಈಗಿನಿಂದಲೇ ಶುರುವಾಗಿದೆ. ಈ ಕಾರಣಕ್ಕೇ ಭಕ್ತರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಬಹುದಾದ ನಗರದ 5 ಪ್ರಮುಖ ಶಿವಾಲಯಗಳ ಪಟ್ಟಿ ಇಲ್ಲಿ ನೀಡಿದ್ದೇವೆ. ಇವುಗಳಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಪುರಾತನ ಶಿವಾಲಯವೂ ಇದೆ, ಇತ್ತೀಚಿಗೆ ಕಟ್ಟಲ್ಪಟ್ಟು ಹೆಸರು ಮಾಡಿರುವ ಶಿವಾಲಯವೂ ಇದೆ. 

ಗವಿಗಂಗಾಧರೇಶ್ವರ: ಬಸವನಗುಡಿಯ ಗವಿಪುರಂನಲ್ಲಿರುವ ಈ ಪುರಾತನ ಶಿವಾಲಯವನ್ನು ಕಟ್ಟಿಸಿದ್ದು ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ. ಇಲ್ಲಿ ನೈಸರ್ಗಿಕ ಗುಹೆಯನ್ನೇ ಕಡೆದು ದೇವಸ್ಥಾನವನ್ನಾಗಿ ಮಾಡಿರುವುದು ವಿಶೇಷ. ಮಕರ ಸಂಕ್ರಾತಿಯ ದಿನದಂದು ಸೂರ್ಯನ ಕಿರಣಗಳು ನಂದಿ ವಿಗ್ರಹದ ಕೊಂಬುಗಳ ನಡುವಿಂದ ಹಾದು ಶಿವಲಿಂಗದ ಮೇಲೆ ಬೀಳುವಂತೆ ದೇವಸ್ಥಾನವನ್ನು ಕಟ್ಟಿರುವುದು ಇನ್ನೊಂದು ಅದ್ಭುತ.

ಕಾಡುಮಲ್ಲೇಶ್ವರ: ಮಲ್ಲೇಶ್ವರದಲ್ಲಿರುವುದರಿಂದಾಗಿಯೇ ಈ ಶಿವಾಲಯಕ್ಕೆ ಕಾಡು ಮಲ್ಲೇಶ್ವರ ಎಂಬ ಹೆಸರು ಬಂದಿದೆ. ಇಂದು ಮಲ್ಲೇಶ್ವರಂ ಜನಸಂದಣಿ, ಟ್ರಾಫಿಕ್‌ ಮತ್ತು ಶಾಪಿಂಗ್‌ ತಾಣವಾಗಿ ಹೆಸರು ಮಾಡಿರಬಹುದು, ಆದರೆ ಸುಮಾರು 17ನೇ ಶತಮಾನದಲ್ಲಿ ಈ ಪ್ರದೇಶ ದಟ್ಟವಾದ ಕಾಡಾಗಿತ್ತು ಎನ್ನುವುದಕ್ಕೆ “ಕಾಡು’ ಮಲ್ಲೇಶ್ವರ ದೇವಸ್ಥಾನ ಸಾಕ್ಷಿ. ಇಂದು ಕಾಡಿಲ್ಲ ಆದರೆ ದೇವಸ್ಥಾನ ಹೊಸ ಹೊಸ ಭಕ್ತರನ್ನು ತನ್ನತ್ತ ಸೆಳೆಯುತ್ತಾ ದೈವಿಕತೆಯನ್ನು ಪಸರಿಸುತ್ತಿದೆ. ಈ ದೇವಸ್ಥಾನವನ್ನು ಛತ್ರಪತಿ ಶಿವಾಜಿಯ ಸಹೋದರ ವೆಂಕೋಜಿ ರಾವ್‌ ಕಟ್ಟಿಸಿದನೆಂದು ಪ್ರತೀತಿ. ಮಲ್ಲೇಶ್ವರಂ 18ನೇ ಕ್ರಾಸ್‌ನಲ್ಲಿದೆ ಈ ಶಿವಾಲಯ.

ಹಲಸೂರು ಸೋಮೇಶ್ವರ: ಚೋಳರ ಕಾಲದಲ್ಲಿ ಕಟ್ಟಲಾದ ಈ ಶಿವಾಲಯ ನಗರದ ಅತ್ಯಂತ ಪುರಾತನ ಶಿವಾಲಯ ಎಂದೇ ಖ್ಯಾತಿ ಪಡೆದಿದೆ. ಈ ದೇಗುಲ ವಿಜಯನಗರ ವಾಸ್ತುಶೈಲಿಯನ್ನು ಹೋಲುತ್ತದೆ. ಹಲಸೂರು ಪೊಲೀಸ್‌ ಸ್ಟೇಷನ್‌ ಬಳಿ ಈ ಶಿವಾಲಯವಿದೆ.  

ಕೋಟೆ ಜಲಕಂಠೇಶ್ವರ: ಈ ದೇವಸ್ಥಾನದ ನಿರ್ಮಾಣವೂ ಚೋಳರ ಕಾಲದಲ್ಲಾಯಿತು ಎಂಬ ಪ್ರತೀತಿಯಿದೆ. ಇದರ ಜೀರ್ಣೋದ್ದಾರವನ್ನು ಮಾಡಿದ್ದು ನಾಡಪ್ರಭು ಕೆಂಪೇಗೌಡ. ಕಲಾಸಿಪಾಳ್ಯ ಬಸ್‌ ನಿಲ್ದಾಣದ ಸಮೀಪದಲ್ಲೇ ಇರುವ ಶಿವಾಲಯದಲ್ಲಿ  ಶಿವ, ಪಾರ್ವತಿ ಮತ್ತು ಗಣಪತಿ ಮೂವರು ದೇವರ ವಿಗ್ರಹಗಳೂ ಇರುವುದು ವಿಶೇಷ. ಪಾರ್ವತಿಯ ವಿಗ್ರಹವನ್ನು ಬಾಗಿಲಿನ ಬಳಿಯಿಂದ ನೋಡಿದರೆ ಕೇವಲ ಅರ್ಧ ಭಾಗ ಮಾತ್ರ ಕಾಣಿಸುತ್ತದೆ. ಪಾರ್ವತಿಯನ್ನು ಅರ್ಧನಾರೀಶ್ವರಿ ಎಂದು ಪ್ರತಿಬಿಂಬಿಸುವ ಸಲುವಾಗಿ ತಂತ್ರಿಕವಾಗಿ ಈ ರೀತಿ ನಿರ್ಮಿಸಲಾಗಿದೆ.

ಏರ್‌ಫೋರ್ಟ್‌ ಶಿವ: ಏರ್‌ಪೋರ್ಟ್‌ ಶಿವ ಎಂದೇ ಹೆಸರಾಗಿರುವ ಈ ದೇವಸ್ಥಾನದಲ್ಲಿರುವ ಶಿವನ ಮೂರ್ತಿ ಸುಮಾರು 65 ಅಡಿ ಎತ್ತರವಿದೆ. ಅಮೃತಶಿಲೆಯಲ್ಲಿ ರೂಪಿಸಲಾದ ಶಿವ ಮತ್ತು ನೀರಿನ ಕೊಳ ಭಕ್ತರನ್ನು ಮಾತ್ರವೇ ಅಲ್ಲ ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ. ಹಿಮಾಲಯ ಮತ್ತು ಕೈಲಾಸವನ್ನು ನೆನಪಿಸುವ ಮಾದರಿಯಲ್ಲಿ ವಿಗ್ರಹವನ್ನು ರಚಿಸಲಾಗಿದೆ. ಭಜನೆ, ಪ್ರವಚನ ಹೀಗೆ ಧಾರ್ಮಿಕ ಚಟುವಟಿಕೆಗಳು ಆಗಿಂದಾಗ್ಗೆ ಜರುಗುತ್ತಿರುತ್ತದೆ. ಹಳೆ ಏರ್‌ಪೋರ್ಟ್‌ ರಸ್ತೆಯಲ್ಲಿ  ಕೆಂಪ್‌ ಫೋರ್ಟ್‌ ಮಾಲ್‌ ಹಿಂಭಾಗ ಇದೆ ಈ ಶಿವಾಲಯ.

ಬೇಗೂರು ನಾಗೇಶ್ವರ: ನಗರದ ಪುರಾತನ ದೇಗುಲಗಳಲ್ಲಿ ಇದೂ ಒಂದು. ಜಿಲ್ಲೆಯೊಳಗಿರುವ ಬೇಗೂರಿನಲ್ಲಿರುವ ಈ ದೇಗುಲವು ಗಂಗ ವಂಶಸ್ಥರಾದ ನೀತಿಮಾರ್ಗ ಹಾಗೂ ನೀತಿ ಮಾರ್ಗ 2 ಅರಸರ ಕಾಲದಲ್ಲಿ ನಿರ್ಮಾಣವಾಗಿದೆ. ಈ ಶಿವ ಮಂದಿರವು ಗರ್ಭಗುಡಿ, ನವರಂಗ, ಮಹಾಮಂಟಪ  ಎಂಬ ಮೂರು ಪ್ರಾಕಾರಗಳಿವೆ. ಗರ್ಭಗುಡಿಯಲ್ಲಿರುವ ಲಿಂಗವಿದೆ. ನವರಂಗವು ಎಂಟು ಸ್ತಂಭಗಳುಳ್ಳ, ಸುಂದರ ಕೆತ್ತನೆಗಳುಳ್ಳ  ಮಂಟಪವಾಗಿದ್ದು, ಇದರಲ್ಲಿ ಶಿವನ ಚತುರ್ಮುಖ ರೂಪವುಳ್ಳ ಉಮಾ ಮಹೇಶ್ವರ, ಗಣೇಶ ಹಾಗೂ ಕಾಲಭೈರವನ ಕೆತ್ತೆನೆಯಿದ್ದು, ಭಕ್ತಿ ಪರವಶಗೊಳಿಸುತ್ತದೆ. 

ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನ: ಬನಶಂಕರಿ 2ನೇ ಹಂತದಲ್ಲಿರುವ ಧರ್ಮಗಿರಿಯಲ್ಲಿ ಈ ಶಿವನ ದೇಗುಲವಿದೆ. ಇದು ಬೆಂಗಳೂರಿನಲ್ಲಿರುವ ಪ್ರಮುಖ ಶಿವನ ದೇವಾಲಯಗಳಲ್ಲೊಂದು. ಮಂಜುನಾಥ ಸ್ವಾಮಿಯೆಂದು ಕರೆಯಲ್ಪಡುವ ಇಲ್ಲಿನ ಶಿವ, ಲಕ್ಷಾಂತರ ಭಕ್ತಾದಿಗಳ  ಆರಾಧ್ಯ ದೈವ. ಇದೊಂದು ಹಳೆಯ ದೇಗುಲವಾದರೂ, ಆಧುನಿಕತೆಯ ಸ್ಪರ್ಶ ಗಳಿಸಿಕೊಂಡಿರುವ ಮಂದಿರ. ದೇಗುಲದ ಪಕ್ಕದಲ್ಲಿರುವ ಬೃಹತ್‌ ಶಿವಲಿಂಗ  ಹಾಗೂ ಶಿವನ ಮಹಿಮೆಗಳನ್ನು ಸಾರುವ ಪುತ್ಥಳಿ, ನಂದಿಯು ಇಲ್ಲಿನ ಪ್ರಧಾನ ಆಕರ್ಷಣೆ.  

ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ: ಉತ್ತರ ಹಳ್ಳಿ ಸಮೀಪದ ಶ್ರೀನಿವಾಸಪುರದಲ್ಲಿರುವ ಓಂಕಾರ ಹಿಲ್ಸ್‌ನಲ್ಲಿರುವ ದೇವಾಲಯ. ಈ ದೇಗುಲ ದಲ್ಲಿ 12  ಜ್ಯೋತಿರ್ಲಿಂಗಗಳನ್ನು ಆರಾಧಿಸಲಾಗುತ್ತದೆ. ಪ್ರತಿಯೊಂದು ಜ್ಯೋತಿರ್ಲಿಂಗಕ್ಕೂ ಪ್ರತ್ಯೇಕ ಗರ್ಭಗುಡಿ, ವಿಮಾನ ಗೋಪುರಗಳಿವೆ. ಈ ದೇಗುಲದಲ್ಲಿ  ಮತ್ಸé ನಾರಾಯ, ಶ್ರೀ ವನದುರ್ಗ ದೇಗುಲ, ಶ್ರೀ ನಾಗದೇವತೆ, ಶ್ರೀ ಮುನೇಶ್ವರ ದೇಗುಲಗಳಿವೆ. ಗೋಶಾಲೆ, ವಿಶ್ವಾಮಿತ್ರ ವೇದ ವಿದ್ಯಾಲಯ, ಪವಿತ್ರ  ಆಲದ ಮರ, ಟವರ್‌ ಕ್ಲಾಕ್‌ ಕ್ಷೇತ್ರದ ಮಹತ್ವ ಹೆಚ್ಚಿಸಿವೆ.

ಟಾಪ್ ನ್ಯೂಸ್

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

4-uv-fusion

Childhood Times: ಕಳೆದು ಹೋದ ಸಮಯ

Ekanath Shindhe

Maharashtra;ಏಕನಾಥ್ ಶಿಂಧೆ ಡಿಸಿಎಂ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಶಿವಸೇನೆ!

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

8

Keerthy Suresh: ಮದುವೆ ಸುದ್ದಿ ಬೆನ್ನಲ್ಲೇ ಆಂಟೋನಿ ಜತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

5

Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್‌

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

6-

Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ

4

Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.