ಕುಖ್ಯಾತ ಓಜಿಕುಪ್ಪಂ ತಂಡದ ಐವರ ಸೆರೆ
Team Udayavani, Dec 17, 2018, 12:16 PM IST
ಬೆಂಗಳೂರು: ರಸ್ತೆಯಲ್ಲಿ ನಿಮ್ಮ ಹಣ ಬಿದ್ದಿದ್ದೆ, ನಿಮ್ಮ ವಾಹನದ ಮೇಲೆ ಗಲೀಜು ಬಿದ್ದಿದ್ದೆ ಎಂಬುದಾಗಿ ಹೇಳಿ ಗಮನ ಬೇರೆಡೆಗೆ ಸೆಳೆಯುವುದು. ಮೈ ಮೇಲೆ ತುರಿಕೆಪುಡಿ ಎರಚುಸುವುದು ಸೇರಿದಂತೆ ಇತರೆ ವಿಧಾನದಲ್ಲಿ ನಗರದ ವಿವಿಧೆಡೆ ಬ್ಯಾಂಕ್‌ಗಳಿಂದ ಹಣ ಡ್ರಾ ಮಾಡುವ ಗ್ರಾಹಕರ ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂ. ಹಣ ಲಪಾಟಿಸುತ್ತಿದ್ದ ಆಂಧ್ರಪ್ರದೇಶದ ಕುಖ್ಯಾತ ಓಜಿಕುಪ್ಪಂ ತಂಡದ ಐವರು ಸದಸ್ಯರನ್ನು ಬಂಧಿಸುವಲ್ಲಿ ಕೋಣನಕುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ಓಜಿಕುಪ್ಪಂ ತಂಡದ ಪ್ರವೀಣ್ (27), ರಮೇಶ ಮೋಜನ್ ಗೋಗುಲ್ ಅಲಿಯಾಸ್ ರಮೇಶ್ (34), ರಾಜು ಅಲಿಯಾಸ್ ಜೀವನ್ (21), ಕಾರ್ತಿಕ್ ಅಲಿಯಾಸ್ ಕಾಂತಿ (29) ಮತ್ತು ಅಂಕಯ್ಯ (19) ಬಂಧಿತರು. ತಲೆಮರೆಸಿಕೊಂಡಿರುವ ಇತರೆ ನಾಲ್ವರು ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ಇವರಿಂದ ಎರಡು ದ್ವಿಚಕ್ರ ವಾಹನಗಳು, ಕೃತ್ಯಕ್ಕೆ ಬಳಸುತ್ತಿದ್ದ ಸೂðಡೈವರ್, ವಾಹನಗಳ ಚಕ್ರವನ್ನು ಪಂಚರ್ ಮಾಡಲು ಬಳಸುವ ಮೊಳೆ ಮತ್ತು ಕೆಲ ಚೆಕ್ ಬುಕ್‌ಗಳ ಜತೆಗೆ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ 5 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಬಂಧನದಿಂದ ಕೋಣನಕುಂಟೆ ಠಾಣೆಯ 4, ಪುಟ್ಟೇನಹಳ್ಳಿ ಠಾಣೆಯ 2, ತಲಘಟ್ಟಪುರ ಠಾಣೆಯ 2, ಕುಮಾರಸ್ವಾಮಿ ಲೇಔಟ್ ಠಾಣೆಯ 4, ಸುಬ್ರಹ್ಮಣ್ಯಪುರ, ಬಸವನಗುಡಿ, ಸಂಪಿಗೆಹಳ್ಳಿ, ಬನಶಂಕರಿ ಮತ್ತು ಯಲಹಂಕ ಠಾಣೆಗಳ ತಲಾ ಒಂದೊಂದು ಪ್ರಕರಣ ಸೇರಿದಂತೆ 19 ಪ್ರಕರಣಗಳು ಪತ್ತೆಯಾಗಿವೆ.
ದಕ್ಷಿಣ ವಲಯದಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಓಜಿಕುಪ್ಪಂ ತಂಡದ ಸದಸ್ಯರ ಹಾವಳಿ ಹೆಚ್ಚಾಗಿತ್ತು. ಆ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯಪುರ ಉಪ ವಿಭಾಗದ ಎಸಿಪಿ ಟಿ. ಮಹಾದೇವ, ಕೋಣನಕುಂಟೆ ಇನ್‌ಸ್ಪೆಕ್ಟರ್ ಟಿ.ಎಂ. ಧರ್ಮೇಂದ್ರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕೃತ್ಯ ಹೇಗೆ?: ರೈಲು ಹಾಗೂ ಇತರೆ ಮಾರ್ಗಗಳ ಮೂಲಕ ನಗರ ಪ್ರವೇಶಿಸುತ್ತಿದ್ದ ನಾಲ್ಕೈದು ಮಂದಿಯ ತಂಡ, ದ್ವಿಚಕ್ರ ವಾಹನಗಳಲ್ಲಿ ನಗರದ ಹೊರವಲಯಕ್ಕೆ ಹತ್ತಿರುವ ಪ್ರದೇಶಗಳಲ್ಲಿ ಸುತ್ತಾಡಿ, ಅಲ್ಲಿರುವ ಬ್ಯಾಂಕ್‌ಗಳನ್ನು ಗುರುತಿಸುತ್ತಿದ್ದರು. ಬಳಿಕ ಆರೋಪಿಗಳ ಪೈಕಿ ಒಬ್ಬ ಬ್ಯಾಂಕ್‌ನ ಒಳಗೆ ನಿಂತು 50 ಸಾವಿರಕ್ಕಿಂತ ಹೆಚ್ಚು ಹಣ ಡ್ರಾ ಮಾಡುವ ಗ್ರಾಹಕರನ್ನು ಗಮನಿಸಿ, ಬ್ಯಾಂಕ್ ಹೊರಗಡೆ ದ್ವಿಚಕ್ರ ವಾಹನದಲ್ಲಿ ಕಾಯುತ್ತಿದ್ದ ಮತ್ತೂಬ್ಬ ಆರೋಪಿಗೆ ಮಾಹಿತಿ ರವಾನಿಸುತ್ತಿದ್ದ.
ಹಣದ ಬ್ಯಾಗ್ ಸಮೇತ ಗ್ರಾಹಕ ಹೊರ ಹೋಗುತ್ತಿದ್ದಂತೆ ಆತನ ಕಾರು ಅಥವಾ ದ್ವಿಚಕ್ರ ವಾಹನವನ್ನು ಪತ್ತೆ ಹಚ್ಚಿ, ಅದರ ಚಕ್ರಗಳ ಗಾಳಿ ಬಿಡುತ್ತಾರೆ. ಇಲ್ಲವೇ ನಿಮ್ಮ ವಾಹನದ ಮೇಲೆ ಗಲೀಜು ಬಿದ್ದಿದ್ದೆ, ನಿಮ್ಮ ವಾಹನದ ಪೆಟ್ರೋಲ್ ಸೋರುತ್ತಿದೆ ಎಂದು ಚಾಲಕನ ಗಮನ ಬೇರೆಡೆ ಸೆಳೆದು ಹಣದ ಬ್ಯಾಗ್ ಲಪಾಟಿಸುತ್ತಿದ್ದರು.
ಇಲ್ಲವೇ, ಬ್ಯಾಂಕ್ ಸಮೀಪವೇ 10 ಅಥವಾ 50 ರೂ. ನೋಟುಗಳನ್ನು ಬಿಸಾಡಿ, ನಿಮ್ಮ ಹಣ ರಸ್ತೆಯಲ್ಲಿ ಬಿದ್ದಿದ್ದೆ ಎಂದು ಗ್ರಾಹಕನ ಗಮನ ಬೇರೆಡೆ ಸೆಳೆಯುತ್ತಾರೆ. ಆತ ಹಣ ತೆಗೆದುಕೊಳ್ಳಲು ಮುಂದಗುತ್ತಿದ್ದಂತೆ ಹಣವಿದ್ದ ಬ್ಯಾಗ್ ಕಸಿದುಕೊಂಡು ಕ್ಷರ್ಣಾರ್ಧದಲ್ಲಿ ಬೈಕ್‌ನಲ್ಲಿ ಪರಾರಿಯಾಗುತ್ತಾರೆ.
ತುರಿಕೆ ಪುಡಿ ಬಳಕೆ: ದ್ವಿಚಕ್ರ ವಾಹನದಲ್ಲಿ ಬಂದ ಗ್ರಾಹಕನನ್ನು ಸ್ವಲ್ಪ ದೂರ ಹಿಂಬಾಲಿಸುತ್ತಿದ್ದ ತಂಡದ ಸದಸ್ಯರು, ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತ ಬಳಿಕ ತುರಿಕೆ ಪುಡಿಯನ್ನು ಆ ವ್ಯಕ್ತಿಯ ಮೇಲೆ ಎರಚುತ್ತಿದ್ದರು. ಇದಕ್ಕಿದ್ದಂತೆ ಮೈಯಲ್ಲಿ ತುರಿಕೆ ಶುರುವಾಗಿ ವಾಹನವನ್ನು ರಸ್ತೆಬದಿಯಲ್ಲಿ ನಿಲುಗಡೆ ಮಾಡುತ್ತಿದ್ದಂತೆ ಆತನ ಗಮನ ಬೇರೆಡೆ ಸೆಳೆದು ಹಣ ಬ್ಯಾಗ್ ಕಳವು ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಪತ್ತೆ ಹೇಗೆ?: ಕೋಣನಕುಂಟೆ ಠಾಣೆಯ ಪ್ರಕರಣವೊಂದರಲ್ಲಿ ಆರೋಪಿಯೊಬ್ಬ ಪೆಟ್ರೋಲ್ ಬಂಕ್ ಬಳಿ ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ಹಣದ ಬ್ಯಾಗ್ ಕದಿಯುತ್ತಿದ್ದ. ಬಳಿಕ ತನ್ನ ಇತರೆ ಸಹಚರನಿಗೆ ಕರೆ ಮಾಡಿ ವಿಷಯ ತಿಳಿಸಿ ಪರಾರಿಯಾಗಿದ್ದ. ಈ ದೃಶ್ಯ ಪೆಟ್ರೋಲ್ ಬಂಕ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಈ ಸ್ಥಳದ ಮೊಬೈಲ್ ಸಿಡಿಆರ್‌ಗಳನ್ನು ಪರಿಶೀಲಿಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿತ್ತು ಎಂದು ಪೊಲೀಸರು ಹೇಳಿದರು.
ಹೊರವಲಯದಲ್ಲಿ ವಾಸ್ತವ್ಯ: ಆಂಧ್ರಪ್ರದೇಶದಿಂದ ಬರುತ್ತಿದ್ದ ಆರೋಪಿಗಳು, ನಗರದ ಹೊರವಲಯಗಳಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರು. ಕೂಲಿ ಕಾರ್ಮಿಕರು, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದೆಲ್ಲ ಹೇಳಿ ವೈಟ್‌ಫೀಲ್ಡ್, ಕೋಣನಕುಂಟೆ ಹಾಗೂ ಇತರೆ ಭಾಗಗಳಲ್ಲಿ ಬಾಡಿಗೆ ಪಡೆದು ವಾಸ ಮಾಡುತ್ತಿದ್ದರು. ಬಳಿಕ ನಿರ್ದಿಷ್ಟ ಬ್ಯಾಂಕ್‌ಗಳ ಬಳಿ ಹೋಗಿ ಕೃತ್ಯವೆಸಗಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ಹೇಳಿದರು.
ಹಣ ಕೊಂಡೊಯ್ಯುವುದಿಲ್ಲ: ಓಜಿಕುಪ್ಪಂ ತಂಡದ ಮತ್ತೂಂದು ವಿಶೇಷವೆಂದರೆ, ಹಣ ಲಪಾಟಿಸುತ್ತಿದ್ದ ತಂಡದ ಸದಸ್ಯರು ಎಂದಿಗೂ ಹಣವನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಿರಲಿಲ್ಲ. ಕೃತ್ಯವೆಸಗಿದ ಕೆಲವೇ ಹೊತ್ತಿನಲ್ಲಿ ತಂಡದ ಎಲ್ಲ ಸದಸ್ಯರು ಹಣ ಹಂಚಿಕೊಳ್ಳುತ್ತಾರೆ. ಬಳಿಕ ನಗರದ ವಿವಿಧ ಬ್ಯಾಂಕ್‌ಗಳಿಗೆ ಹೋಗಿ, ಆಂಧ್ರಪ್ರದೇಶದ ತಮ್ಮ ಸಂಬಂಧಿಕರು, ಸ್ನೇಹಿತರ ಖಾತೆಗಳಿಗೆ ಜಮೆ ಮಾಡುತ್ತಾರೆ. ಅನಂತರ ಆಂಧ್ರಪ್ರದೇಶಕ್ಕೆ ಹೋಗಿ ಹಣ ಡ್ರಾ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಾರೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ
Malpe ಬೀಚ್ ಸ್ವಚ್ಛತೆ: 3 ದಿನದಲ್ಲಿ 26 ಲೋಡ್ ಕಸ ಸಂಗ್ರಹ
Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.