ಶೇ.50ರಷ್ಟು ಪಾರ್ಕ್‌ಗಳು ಒಣಗುಣ ಭೀತಿ!

Team Udayavani, Jan 23, 2017, 11:58 AM IST

park.jpg

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಉದ್ಯಾನಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ತೀವ್ರಗೊಳ್ಳಲಿದ್ದು, ಬಿಬಿಎಂಪಿ ನಿರ್ವಹಣೆಯಲ್ಲಿ ರುವ ಶೇ. 50ರಷ್ಟು ಉದ್ಯಾನಗಳು ಒಣಗುವ ಭೀತಿ ಶುರುವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆ ನಿರ್ವಹಣೆ ಯಡಿ ಒಟ್ಟು 1,326 ಉದ್ಯಾನಗಳಿವೆ. ಬಹು ತೇಕ ಕಡೆ ನೀರಿನ ಕೊರತೆ ಉಂಟಾದರೆ ತಡೆದು ಕೊಳ್ಳಬಲ್ಲ ಮರಗಳ ಬದಲು ಅಲಂಕಾರಿಕ ಸಸ್ಯಗಳನ್ನೇ ನೆಡಲಾಗಿದೆ.

ಇವುಗಳಿಗೆ ನಿತ್ಯ ನೀರು ಣಿಸುವುದು ಅನಿವಾರ್ಯವಾಗಿದ್ದು, ಬೇಸಿಗೆ ವೇಳೆ ನೀರುಣಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಬಹುತೇಕ ಉದ್ಯಾನಗಳಿಗೆ ಸಮಸ್ಯೆ ಉಂಟಾಗಲಿದೆ ಎಂದು ಸ್ವತಃ ಪಾಲಿಕೆಯ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೇ ಹೇಳುತ್ತಿದ್ದಾರೆ. 

ಒಣಗುವ ಭೀತಿ ಏಕೆ?: 1,326 ಉದ್ಯಾನಗಳಲ್ಲಿ 898 ಉದ್ಯಾನಗಳಲ್ಲಿ ಬೋರ್‌ವೆಲ್‌ಗ‌ಳಿವೆ. ಜೆ.ಪಿ.ಪಾರ್ಕ್‌ನಂತಹ ಬೆರಳೆಣಿಕೆಯಷ್ಟು ಉದ್ಯಾನಗಳಲ್ಲಿ ಹೊರತುಪಡಿಸಿ ಉಳಿದೆಲ್ಲಾ ಕಡೆಗಳಲ್ಲಿ ಉದ್ಯಾನಕ್ಕೆ ಒಂದು ಬೋರ್‌ವೆಲ್‌ ಮಾತ್ರ ಇವೆ. ಇನ್ನು ಸುಮಾರು 410 ಉದ್ಯಾ ನಗಳಲ್ಲಿ ಬೋರ್‌ವೆಲ್‌ಗ‌ಳೇ ಇಲ್ಲ. ಇರುವ 898 ಬೋರ್‌ವೆಲ್‌ ಪೈಕಿ ಈಗಾಗಲೇ 298 ಬೋರ್‌ವೆಲ್‌ಗ‌ಳು ಅಂತರ್ಜಲ ಕುಸಿತದಿಂದ ಖಾಲಿಯಾಗಿವೆ.

ಉಳಿದಂತೆ ಸುಮಾರು 200 ಬೋರ್‌ವೆಲ್‌ಗ‌ಳು ನಿರ್ವಹಣೆ ಕೊರತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಈಗಾಗಲೇ ಬಹುತೇಕ ಕಡೆ ಉದ್ಯಾನಗಳು ದುಸ್ಥಿತಿಗೆ ಜಾರುತ್ತಿವೆ. ಬೇಸಿಗೆಯಲ್ಲೂ ಇದೇ ಸ್ಥಿತಿ ಮುಂದುವರೆದರೆ ಶೇ.50 ರಷ್ಟು ಉದ್ಯಾನಗಳು ಒಣಗುವ ಆತಂಕ ಎದುರಾಗಿದೆ. ಬೇಸಿಗೆಯಲ್ಲಿ ನಗರಕ್ಕೆ ಕಾವೇರಿ ನೀರಿನ ಕೊರತೆ ಉಂಟಾಗಲಿದ್ದು, ಟ್ಯಾಂಕರ್‌ ನೀರಿಗೆ ಬೇಡಿಕೆ ಹೆಚ್ಚಾಗಲಿದೆ.

ಇದರಿಂದ ಟ್ಯಾಂಕರ್‌ಗಳಲ್ಲಿ ಗಿಡ ಹಾಗೂ ಹುಲ್ಲು ಹಾಸಿಗೆ ನೀರು ಪೂರೈಸಲು ಕಷ್ಟವಾಗಬಹುದು. ಅದರಲ್ಲೂ 600ಕ್ಕೂ ಹೆಚ್ಚು ಉದ್ಯಾನಗಳಿಗೆ ನಿತ್ಯ ಟ್ಯಾಂಕರ್‌ ಮೂಲಕ ಸಮರ್ಪಕವಾಗಿ ನೀರು ಪೂರೈಸು ವುದು ಅಸಾಧ್ಯವಾದ ವಿಚಾರ. ಹೀಗಾಗಿ ಬಿಬಿಎಂಪಿ ಕೂಡಲೇ ಎಚ್ಚೆತ್ತುಕೊಂಡು ಬೋರ್‌ವೆಲ್‌ ನಿರ್ವಹಣೆ ಮಾಡಬೇಕು. ದೀರ್ಘಾವದಿ ಯಲ್ಲಿ ಸಮಸ್ಯೆ ಮರುಕಳಿಸದಂತೆ ಮಳೆ ನೀರಿನ ಕೊಯ್ಲು ಮತ್ತಿತರ ಪದ್ಧತಿಗಳಿಗೆ ಗಮನ ನೀಡಬೇಕು ಎಂದು ಪರಿಸರವಾದಿ ಯಲ್ಲಪ್ಪ ರೆಡ್ಡಿ ಹೇಳಿದ್ದಾರೆ.

290 ಕಡೆ ಮಳೆ ನೀರು ಕೊಯ್ಲು: ಪ್ರತಿ ವರ್ಷವೂ ಬೇಸಿಗೆಯಲ್ಲಿ ಉದ್ಯಾನವನಗಳ ನಿರ್ವಹಣೆ ಕಷ್ಟವಾಗುತ್ತಿದೆ. ಇದಕ್ಕಾಗಿಯೇ ಡಿ.ವೆಂಕಟೇಶಮೂರ್ತಿ ಮೇಯರ್‌ ಆಗಿದ್ದ ಅವಧಿಯಲ್ಲಿ ಪಾಲಿಕೆಯ ಬಹುತೇಕ ಉದ್ಯಾನಗಳಲ್ಲಿ ಮಳೆ ನೀರಿನ ಇಂಗುಗುಂಡಿ ನಿರ್ಮಾಣ ಮಾಡಲಾಯಿತು. ಆದರೆ, ಕಾಲಕ್ರಮೇಣ ನಿರ್ವಹಣೆ ಲೋಪದಿಂದಾಗಿ ಬಹುತೇಕ ಕಡೆ ಗುಂಡಿಗಳು ಮುಚ್ಚಿಹೋಗಿವೆ.

ಇದರ ಬದಲು ಎಲ್ಲಾ ಉದ್ಯಾನವನಗಳಲ್ಲಿ ಮಳೆ ನೀರಿನ ಕೊಯ್ಲು ಪದ್ಧತಿ ಅಳವಡಿಸಿ ಮಳೆ ನೀರು ಸಂರಕ್ಷಿಸಲಾಗುವುದು. ಬಳಿಕ ನೀರಿನಿಂದ ಅಂತರ್ಜಲ ಮಟ್ಟ ವೃದ್ಧಿಸುವ ಜತೆಗೆ ಅಭಾವವಿರುವಾಗ ನೀರಿನ ಬಳಕೆ ಮಾಡಿಕೊಳ್ಳಲಾಗುವುದು. ಈಗಾಗಲೇ 290 ಉದ್ಯಾನಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಉಳಿದ ಕಡೆಗಳಲ್ಲೂ ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. 

ಪ್ರತಿ ಉದ್ಯಾನಗಳಲ್ಲೂ ಮಳೆ ನೀರು ಶೇಖರಣೆಗೆ ಬೃಹತ್‌ ತೊಟ್ಟಿಯನ್ನು ನಿರ್ಮಿಸ ಲಾಗುತ್ತಿದ್ದು, ಪ್ರತಿ ತೊಟ್ಟಿಯೂ 8 ಸಾವಿರದಿಂದ 15 ಸಾವಿರ ಲೀ. ನೀರು ಶೇಖರಣೆಯ ಸಾಮರ್ಥ್ಯ ಹೊಂದಿರಲಿದೆ. ಆಮೂಲಕ ಉದ್ಯಾನಗಳಿಗೆ ನೀರು ಹಾಯಿಸುವುದರ ಜತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ಶುದ್ಧೀಕರಿಸಿದ ತ್ಯಾಜ್ಯ ನೀರು ಪೂರೈಕೆ
ಈಗಾಗಲೇ ನೀರಿನ ಅಭಾವ ಗಮನಕ್ಕೆ ಬಂದಿದೆ. ಹೀಗಾಗಿ ಬೇಸಿಗೆಯಲ್ಲಿ ನೀರಿನ ಅಭಾವ ನೀಗಿಸಲು ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುವುದು. ಪ್ರತಿ ವಲಯದಲ್ಲಿ ಆಯಾ ಭಾಗದ ಜಲಮಂಡಳಿ ತ್ಯಾಜ್ಯ ನೀರು ಶುದ್ಧೀಕರಣ ಕೇಂದ್ರದಿಂದ ಶುದ್ಧೀಕರಿಸಿದ ತ್ಯಾಜ್ಯ ನೀರು ಪಡೆದು ಉದ್ಯಾನದಲ್ಲಿನ ಮರ, ಗಿಡ, ಹುಲ್ಲು ಹಾಸಿಗೆ ಉಣಿಸಲು ಸೂಚಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡಲು ಆಯುಕ್ತರಿಗೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೀನಾಕ್ಷಿ ಹೇಳಿದ್ದಾರೆ.

* ವಿಶೇಷ ವರದಿ

ಟಾಪ್ ನ್ಯೂಸ್

Social–media-Stars

Social Media Virals: ಸೋಶಿಯಲ್‌ ಮೀಡಿಯಾ ತಂದುಕೊಟ್ಟ “ಸ್ಟಾರ್‌ ಪಟ್ಟ’

Rajanna-CM-DCM

Congress Talk Fight: ಡಿಸಿಎಂ ಡಿ.ಕೆ.ಶಿವಕುಮಾರ್‌ಗೇ ಸಚಿವ ಕೆ.ಎನ್‌.ರಾಜಣ್ಣ ಸಡ್ಡು!

Madhu-Bangarappa1

ನಾವು ಕಾನ್ವೆಂಟ್‌ನಲ್ಲಿ ಓದಿದವರು ಕನ್ನಡದ ಬಗ್ಗೆ ತಿಳಿವಳಿಕೆ ಇಲ್ಲ: ಶಿಕ್ಷಣ ಸಚಿವ ಮಧು

Tragedy: ಡೆ *ತ್‌ನೋಟ್‌ ಬರೆದಿಟ್ಟು ಪುತ್ರಿಯ ಕೊ*ದು ಗ್ರಾ.ಪಂ.ಅಧ್ಯಕ್ಷೆಯೂ ಆತ್ಮಹ*ತ್ಯೆ!

Tragedy: ಡೆ *ತ್‌ನೋಟ್‌ ಬರೆದಿಟ್ಟು ಪುತ್ರಿಯ ಕೊ*ದು ಗ್ರಾ.ಪಂ.ಅಧ್ಯಕ್ಷೆಯೂ ಆತ್ಮಹ*ತ್ಯೆ!

Chikki

Govt School: ಶಾಲಾ ಮಕ್ಕಳಿಗೆ ಚಿಕ್ಕಿ ವಿತರಣೆ ಸ್ಥಗಿತಗೊಳಿಸಿದ ಶಿಕ್ಷಣ ಇಲಾಖೆ!

Sathish-jarakhoili

Udupi: ಗ್ರಾಮೀಣ ಭಾಗದ ಕಾಲುಸಂಕ 3 ವರ್ಷಗಳಲ್ಲಿ ಪೂರ್ಣ: ಸಚಿವ ಸತೀಶ್‌ ಜಾರಕಿಹೊಳಿ

Chalavadi1

ಗ್ಯಾರಂಟಿ ಯೋಜನೆಗೆ ಮೀಸಲಿಟ್ಟ 52,000 ಕೋಟಿ ರೂ.ಎಲ್ಲಿ ಹೋಗುತ್ತೆ?: ಛಲವಾದಿ ನಾರಾಯಣಸ್ವಾಮಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragedy: ಡೆ *ತ್‌ನೋಟ್‌ ಬರೆದಿಟ್ಟು ಪುತ್ರಿಯ ಕೊ*ದು ಗ್ರಾ.ಪಂ.ಅಧ್ಯಕ್ಷೆಯೂ ಆತ್ಮಹ*ತ್ಯೆ!

Tragedy: ಡೆ *ತ್‌ನೋಟ್‌ ಬರೆದಿಟ್ಟು ಪುತ್ರಿಯ ಕೊ*ದು ಗ್ರಾ.ಪಂ.ಅಧ್ಯಕ್ಷೆಯೂ ಆತ್ಮಹ*ತ್ಯೆ!

Bengaluru: ಮೇ 30 ರೊಳಗೆ ಜಿ.ಪಂ-ತಾ.ಪಂ ಅಂತಿಮ ಮೀಸಲಾತಿ ಪಟ್ಟಿ ಆಯೋಗಕ್ಕೆ ಸಲ್ಲಿಕೆ

ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆ: ಮೇ 30 ರೊಳಗೆ ಮೀಸಲಾತಿ ಪಟ್ಟಿ ಸಲ್ಲಿಕೆ

Bengaluru: ನೀರಿನ ಸಮಸ್ಯೆಯಾಗದಂತೆ ಜಲಮಂಡಳಿ ಸಿದ್ಧತೆ

Bengaluru: ನೀರಿನ ಸಮಸ್ಯೆಯಾಗದಂತೆ ಜಲಮಂಡಳಿ ಸಿದ್ಧತೆ

Bengaluru: ಈ ವಾರವೇ ಕಾವೇರಿ ನೀರಿನ ದರ ಏರಿಕೆ ಬಿಸಿ?

Bengaluru: ಈ ವಾರವೇ ಕಾವೇರಿ ನೀರಿನ ದರ ಏರಿಕೆ ಬಿಸಿ?

Theft Case: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ 2 ಕೆ.ಜಿ. ಚಿನ್ನ ಕಳವು ಮಾಡಿದ್ದವರ ಸೆರೆ

Theft Case: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ 2 ಕೆ.ಜಿ. ಚಿನ್ನ ಕಳವು ಮಾಡಿದ್ದವರ ಸೆರೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Social–media-Stars

Social Media Virals: ಸೋಶಿಯಲ್‌ ಮೀಡಿಯಾ ತಂದುಕೊಟ್ಟ “ಸ್ಟಾರ್‌ ಪಟ್ಟ’

Rajanna-CM-DCM

Congress Talk Fight: ಡಿಸಿಎಂ ಡಿ.ಕೆ.ಶಿವಕುಮಾರ್‌ಗೇ ಸಚಿವ ಕೆ.ಎನ್‌.ರಾಜಣ್ಣ ಸಡ್ಡು!

Madhu-Bangarappa1

ನಾವು ಕಾನ್ವೆಂಟ್‌ನಲ್ಲಿ ಓದಿದವರು ಕನ್ನಡದ ಬಗ್ಗೆ ತಿಳಿವಳಿಕೆ ಇಲ್ಲ: ಶಿಕ್ಷಣ ಸಚಿವ ಮಧು

Tragedy: ಡೆ *ತ್‌ನೋಟ್‌ ಬರೆದಿಟ್ಟು ಪುತ್ರಿಯ ಕೊ*ದು ಗ್ರಾ.ಪಂ.ಅಧ್ಯಕ್ಷೆಯೂ ಆತ್ಮಹ*ತ್ಯೆ!

Tragedy: ಡೆ *ತ್‌ನೋಟ್‌ ಬರೆದಿಟ್ಟು ಪುತ್ರಿಯ ಕೊ*ದು ಗ್ರಾ.ಪಂ.ಅಧ್ಯಕ್ಷೆಯೂ ಆತ್ಮಹ*ತ್ಯೆ!

Chikki

Govt School: ಶಾಲಾ ಮಕ್ಕಳಿಗೆ ಚಿಕ್ಕಿ ವಿತರಣೆ ಸ್ಥಗಿತಗೊಳಿಸಿದ ಶಿಕ್ಷಣ ಇಲಾಖೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.