“ಒಂದು ದೇಶ ಒಂದು ಕಾರ್ಡ್” ಯೋಜನೆ: ಕೂಡಿಬಾರದ ಮುಹೂರ್ತ
Team Udayavani, Dec 24, 2021, 10:18 AM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ “ಒಂದು ದೇಶ ಒಂದು ಕಾರ್ಡ್’ (ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್) ಯೋಜನೆ ಜಾರಿಗೆ ಮುಹೂರ್ತವೇ ಕೂಡಿಬರುತ್ತಿಲ್ಲ. ಈ ಹೊಸ ವ್ಯವಸ್ಥೆಗೆ ಪೂರಕವಾಗಿ “ನಮ್ಮ ಮೆಟ್ರೋ’ ನಿಲ್ದಾಣಗಳಲ್ಲಿರುವ ಎಲ್ಲ ಅಟೋಮೆಟಿಕ್ ಫೇರ್ ಕಲೆಕ್ಷನ್ ಗೇಟ್ (ಎಎಫ್ಸಿ)ಗಳನ್ನು ಮಾರ್ಪಾಡು ಮಾಡಿ ಮೂರು ತಿಂಗಳು ಕಳೆದಿದೆ. ಇದರ ಬಳಕೆಗೆ ಪ್ರಯಾಣಿಕರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ.
ಆದರೆ, ಉದ್ಘಾಟನೆಗೆ ಮುಹೂರ್ತ ಕೂಡಿಬರುತ್ತಿಲ್ಲ. ಇದರಿಂದ ಯೋಜನೆ ಸಿದ್ಧಗೊಂಡಿದ್ದರೂ, ಜನರಿಗೆ ಸೇವೆಯ ಭಾಗ್ಯ ಸಿಗದಂತಾಗಿದೆ. ಈ ಬಗ್ಗೆ ಕೇಳುವ ಪ್ರಯಾಣಿಕರಿಗೆ ಬಿಎಂಆರ್‌ಸಿಲ್ ಹೊಸ ವರ್ಷದ ಮೊದಲ ವಾರದ ಕಡೆಗೆ ಬೊಟ್ಟು ತೋರಿಸುತ್ತಿದೆ. “ನಮ್ಮ ಮೆಟ್ರೋ’ ಮೊದಲ ಹಂತದ ಎಲ್ಲ ನಿಲ್ದಾಣಗಳಲ್ಲಿ ಈ ಹಿಂದಿದ್ದ ಎಎಫ್ಸಿ ಗೇಟ್‌ಗಳನ್ನು ಕ್ಯೂಆರ್ ಕೋಡ್‌ಸಹಿತ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್‌ಗೆ ಪೂರಕವಾಗಿ ಸೆಪ್ಟೆಂಬರ್ ಕೊನೆಯ ವಾರದಲ್ಲೇ ರೆಟ್ರೋಫಿಟಿಂಗ್ ಮಾಡಲಾಗಿದೆ. ಇನ್ನೇನೂ ಉದ್ಘಾಟನೆಗೆ ದಿನಾಂಕ ನಿಗದಿಯಾಗಿತ್ತು.
ಇದನ್ನೂ ಓದಿ; 3000 ರೂ.ಗಾಗಿ ಇಬ್ಬರ ಮೇಲೆ ತಡರಾತ್ರಿ ಕಲ್ಲುಗಳಿಂದ ಹಲ್ಲೆ: ಓರ್ವ ಸಾವು
ಅಷ್ಟರಲ್ಲಿ ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಘೋಷಣೆಯಾಯಿತು. ನವೆಂಬರ್ ಅಕ್ಟೋಬರ್ ಅಂತ್ಯಕ್ಕೆ ಮುಗಿಯಿತು. ಇದರ ಬೆನ್ನಲ್ಲೇ ಅಂದರೆ ನವೆಂಬರ್ ಎರಡನೇ ವಾರದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ಆಯ್ಕೆಯಾಗುವ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಯಿತು. ಮುಗಿದಿದ್ದು ಡಿಸೆಂಬರ್ 14ಕ್ಕೆ. ಈ ಮಧ್ಯೆ ಕಳೆದೆರಡು ವಾರಗಳಿಂದ ಚಳಿಗಾಲದ ಅಧಿವೇಶನಕ್ಕಾಗಿ ಸರ್ಕಾರ ಬೆಳಗಾವಿಗೆ ಶಿಫ್ಟ್ ಆಗಿದೆ. ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲರೂ ಅಲ್ಲಿಯೇ ಬೀಡುಬಿಟ್ಟಿದ್ದಾರೆ.
ನಿಗಮದ ಉನ್ನತ ಮೂಲಗಳ ಪ್ರಕಾರ ಹೊಸ ವರ್ಷದ ಮೊದಲ ವಾರದಲ್ಲೇ ಮುಹೂರ್ತ ನಿಗದಿ ಯಾಗುವ ಸಾಧ್ಯತೆ ಇದೆ. ಒಟ್ಟಾರೆ ಮೆಟ್ರೋ ಜಾಲದಲ್ಲಿ ಪ್ರಸ್ತುತ 52 ನಿಲ್ದಾಣಗಳಿದ್ದು, ಇದರಲ್ಲಿ ಸುಮಾರು ಹತ್ತು ನಿಲ್ದಾಣಗಳು ವಿಸ್ತರಿತ ಮಾರ್ಗಗಳಲ್ಲಿ ಬರುವುದರಿಂದ ಈ ಮೊದಲೇ ಎನ್‌ಸಿಎಂಸಿ ವ್ಯವಸ್ಥೆವುಳ್ಳ ಗೇಟ್‌ಗಳನ್ನು ಅಳವಡಿಸಲಾಗಿತ್ತು. ಉಳಿದ 42ರಲ್ಲಿ ರೆಟ್ರೋ μಟಿಂಗ್ ಮಾಡಲಾಗಿದ್ದು, ಪ್ರತಿ ನಿಲ್ದಾಣದಲ್ಲಿ ಸರಾಸರಿ 8ರಿಂದ 10 ಎಎಫ್ಸಿ ಗೇಟ್‌ಗಳಿವೆ ಎಂದು ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದರು.
ಇದನ್ನೂ ಓದಿ; ಕಾನೂನು ಬಾಹಿರವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ತೆರವಿಗೆ ಆಗ್ರಹ
ಮೂರು ಕಾರ್ಯಕ್ರಮಗಳು? “ನಮ್ಮ ಮೆಟ್ರೋ’ ದಶಕದ ಹೊಸ್ತಿಲಲ್ಲಿದ್ದು, ಈ ಸಂಭ್ರಮಾಚರಣೆ ಹಾಗೂ ಹೊರವರ್ತುಲ ರಸ್ತೆಯಲ್ಲಿ ಕೈಗೆತ್ತಿಕೊಳ್ಳಲಾದ 2ಎ ಮತ್ತು 2ಬಿ ಯೋಜನೆಗೆ ಅಧಿಕೃತ ಚಾಲನೆ ಜತೆಗೆ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಸೇವೆಗೂ ಚಾಲನೆ ನೀಡಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ. ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಏನು ಉಪಯೋಗ? ಈಗಾಗಲೇ ಗೊತ್ತಿರುವಂತೆ “ಒಂದು ದೇಶ ಒಂದು ಕಾರ್ಡ್’ ಸೌಲಭ್ಯದಡಿ ಪ್ರಯಾಣಿ ಕರು ಆ ಕಾರ್ಡ್ ಅನ್ನು ಬಿಎಂಟಿಸಿ ಬಸ್‌ಗಳಲ್ಲಿ (ಇನ್ನೂ ಅಲ್ಲಿ ಈ ಸೌಲಭ್ಯ ಅಳವಡಿಕೆ ಆಗಿಲ್ಲ) ಮಾತ್ರವಲ್ಲ; ದೇಶದ ಯಾವುದೇ ಮೆಟ್ರೋ ಮತ್ತು ನಗರ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಸಂಚರಿಸಬಹುದಾಗಿದೆ.
ಆದರೆ, ಆ ರಾಜ್ಯದ ಮೆಟ್ರೋ ಅಥವಾ ನಗರ ಸಂಚಾರ ವ್ಯವಸ್ಥೆಯಲ್ಲಿ ಇದೇ ಮಾದರಿಯನ್ನು ಅಳವಡಿಸಿಕೊಂಡಿರಬೇಕಾಗುತ್ತದೆ. ನಮ್ಮ ಮೆಟ್ರೋದಲ್ಲಿ ಎನ್‌ಸಿಎಂಸಿ ಜತೆಗೆ ಕ್ಯೂಆರ್ ಕೋಡ್ ಕೂಡ ಅಳವಡಿಸಲಾಗುತ್ತಿದ್ದು, ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲೇ ಸ್ಕ್ಯಾನ್ ಮಾಡಿ ಓಡಾಡಬಹುದು ಅಥವಾ ಪೇಪರ್ ಟಿಕೆಟ್‌ಗಳನ್ನು ಖರೀದಿಸಿ, ಅದನ್ನು ಗೇಟ್‌ಗಳಲ್ಲಿರುವ ಕ್ಯೂಆರ್ ಕೋಡ್‌ನಲ್ಲಿ ತೋರಿಸಿ ಕೂಡ ಸಂಚರಿಸಬಹುದಾಗಿದೆ. ಈ ಮಧ್ಯೆ ಈಗಾಗಲೇ ಬಿಎಂಟಿಸಿ ಮತ್ತು ಬಿಎಂಆರ್‌ಸಿಎಲ್ ಸೇರಿ ಭಾರತ್ ಎಲೆಕ್ಟ್ರಾನಿಕ್ಸ್ ಲಿ., (ಬಿಇಎಲ್)ಗೆ ಮೊದಲ ಹಂತದಲ್ಲಿ 25 ಸಾವಿರ “ಒನ್ ನೇಷನ್ ಒನ್ ಕಾರ್ಡ್’ಗಳ ಪೂರೈಕೆಗೆ ಬೇಡಿಕೆ ಇಟ್ಟಿವೆ.
“ಮೊದಲ ಹಂತದ ಎಲ್ಲ ನಿಲ್ದಾಣಗಳಲ್ಲಿರುವ ಎಲ್ಲ ಎಎಫ್ಸಿ ಗೇಟ್‌ಗಳ ರೆಟ್ರೋಫಿಟಿಂಗ್ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಸೇವೆಗೆ ಸಿದ್ಧವಾಗಿವೆ. ಶೀಘ್ರ ಲೋಕಾರ್ಪಣೆ ಮಾಡಲಾಗುವುದು.” ●ಅಂಜುಂ ಪರ್ವೇಜ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
MUST WATCH
ಹೊಸ ಸೇರ್ಪಡೆ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Perth test: ಜೈಸ್ವಾಲ್-ರಾಹುಲ್ ಅಜೇಯ ಆಟ; ಪರ್ತ್ ನಲ್ಲಿ ಭಾರತದ ಮೇಲಾಟ
Mother: ಅಮ್ಮನ ಜೀವನವೇ ಆದರ್ಶ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.