ಸ್ಟೀಲ್ ಬ್ರಿಡ್ಜ್ ಗೆ ಪರಂ ಮರುಜೀವ
Team Udayavani, Jan 2, 2019, 12:50 AM IST
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ “ಕಿಕ್‌ಬ್ಯಾಕ್’ ಆರೋಪದಿಂದ ವಿವಾದಕ್ಕೆ ಕಾರಣವಾಗಿ, ಕೈ ಬಿಡಲಾಗಿದ್ದ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಯೋಜನೆ ಇದೀಗ ಮತ್ತೆ ಪ್ರಸ್ತಾಪವಾಗಿದೆ. “”ಬಸವೇಶ್ವರ ವೃತ್ತದಿಂದ ಹೆಬ್ಟಾಳದ ಎಸ್ಟೀಮ್
ಮಾಲ್‌ವರೆಗೆ ಸಂಚಾರ ದಟ್ಟಣೆ ನಿವಾರಣೆಗೆ ಸ್ಟ್ರೀಲ್ ಬ್ರಿಡ್ಜ್ ನಿರ್ಮಾಣ ಮಾಡಬೇಕಾಗುತ್ತದೆ,” ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, “ಹಿಂದಿನ ಸರ್ಕಾರದ ತೀರ್ಮಾನದ ಬಗ್ಗೆ ಸಾರ್ವಜನಿಕರ ವಿರೋಧ ವ್ಯಕ್ತವಾಗಿತ್ತು. ನಂತರ ಯೋಜನೆಯನ್ನೇ ಕೈ ಬಿಡಲಾಗಿತ್ತು. ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪವೂ ಇದೆ. ಆದರೆ, ಇದೀಗ ಮತ್ತೆ ಯೋಜನೆ ಅನುಷ್ಠಾನದ ಬಗ್ಗೆ ಡಿಸಿಎಂ ಮಾತನಾಡಿರುವುದು ಸರಿಯಲ್ಲ,’ ಎಂದು ಹೇಳಿದ್ದಾರೆ. “ಸ್ಟೀಲ್ ಬ್ರಿಡ್ಜ್ ಯೋಜನೆಯ ಸಾಧಕ-ಬಾಧಕಗಳ ಕುರಿತು ವಿಧಾನಸಭೆಯಲ್ಲಿ ಚರ್ಚಿಸಿದ ನಂತರವಷ್ಟೇ ತೀರ್ಮಾನ ಮಾಡಬೇಕು,’ ಎಂದು ಆಗ್ರಹಿಸಿದ್ದಾರೆ.
ಪರಮೇಶ್ವರ್ ಹೇಳಿದ್ದೇನು?: ಚಾಲುಕ್ಯ ವೃತ್ತದಿಂದ ಎಸ್ಟೀಮ್ ಮಾಲ್‌ವರೆಗೆ ಸ್ಟೀಲ್ ಬ್ರಿಡ್ಜ್ ನಿರ್ಮಿಸುವ ಅಗತ್ಯವಿದೆ. ಏರ್‌ಪೋರ್ಟ್ ರಸ್ತೆಯೂ ಅದೇ ಮಾರ್ಗದಲ್ಲಿ ಬರುವುದರಿಂದ ಸ್ಟೀಲ್ ಬ್ರಿಡ್ಜ್ ನಿರ್ಮಿಸಿದರೆ ಅನುಕೂಲವಾಗಲಿದೆ. 20 ನಿಮಿಷದಲ್ಲಿ ಏರ್
ಪೋರ್ಟ್‌ಗೆ ಹೋಗಬಹುದಾಗಿದೆ. ಹೀಗಾಗಿ, ಸ್ಟ್ರೀಲ್ ಬ್ರಿಡ್ಜ್ ನಿರ್ಮಾಣ ಮಾಡಲೇಬೇಕಾಗುತ್ತದೆ. ಯೋಜನೆ ಪುನರ್ ಪರಿಶೀಲನೆ ಮಾಡಲು ತೀರ್ಮಾನಿ ಸಲಾಗಿದ್ದು, ಸಾರ್ವಜನಿಕ ಅಭಿಪ್ರಾಯ ಆಧರಿಸಿ ಯೋಜನೆಗೆ ಚಾಲನೆ ನೀಡಲಾಗುವುದು. ರಾಜಕೀಯ ಕಾರಣಗಳಿಂದಾಗಿ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯೋಜನೆ ಕೈ ಬಿಡಲಾಗಿತ್ತು. ಸಾರ್ವಜನಿಕರ ಸಲಹೆ ಮೇರೆಗೆ ಯೋಜನೆ ಜಾರಿಗೊಳಿ ಸಲಾ ಗುವುದು ಎಂದು ಹೇಳಿದರು. ಲೋಕಸಭೆ ಚುನಾವಣೆ ಹತ್ತಿರ ಇರುವಾಗ ಮತ್ತೆ ಸ್ಟೀಲ್ ಬ್ರಿಡ್ಜ್ ವಿವಾದದ ಸ್ವರೂಪ ಪಡೆಯುವ ಲಕ್ಷಣಗಳು ಕಾಣುತ್ತಿವೆ.
ಸತ್ಯ ಹರಿಶ್ಚಂದ್ರನ ಮಕ್ಕಳು ಯಾರು ಎಂಬುದು ಗೊತ್ತಿದೆ. ಸ್ಟೀಲ್ ಬ್ರಿಡ್ಜ್ ವಿಚಾರದಲ್ಲಿ ಏನೇನಾಯ್ತು ಎಂದೂ ಗೊತ್ತಿದೆ. ಗೋವಿಂದರಾಜು ಡೈರಿ ಸಿಕ್ತು, ವಿಚಾರಣೆಗೆ ಕರೆದರು, ನನ್ನನ್ನೂ ವಿಚಾರಣೆಗೆ ಕರೆದರು ಎಂದೆಲ್ಲಾ ಹೇಳಿದರು. ಏನೂ ಆಗಲಿಲ್ಲ.
ಯಾವುದೂ ಸತ್ಯವಲ್ಲ. ಜನರ ಹಿತ ಮುಖ್ಯ.
ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.