ಆನ್ಲೈನ್ನಲ್ಲಿ ಬಟ್ಟೆ ಖರೀದಿಸಿದ ಮಹಿಳೆಗೆ 65 ಸಾವಿರ ರೂ. ವಂಚನೆ
Team Udayavani, Jun 20, 2023, 5:02 PM IST
ಬೆಂಗಳೂರು: ಆನ್ಲೈನ್ನಲ್ಲಿ ಬಟ್ಟೆಗಳನ್ನು ಖರೀದಿಸಲು ಹೋದ ಮಹಿಳೆಯೊಬ್ಬರು ಸೈಬರ್ ಕಳ್ಳರ ಗಾಳಕ್ಕೆ ಸಿಲುಕಿ ಬರೋಬ್ಬರಿ 65 ಸಾವಿರ ರೂ. ಕಳೆದುಕೊಂಡಿದ್ದಾರೆ.
ನಾಗರಬಾವಿಯ ನಿವಾಸಿ ಅರ್ಪಿತಾ ಬಾಸಕ್ (44) ವಂಚನೆಗೊಳಗಾದವರು.
ಅರ್ಪಿತಾ ಜೂ.14ರಂದು ಆನ್ಲೈನ್ ವೆಬ್ಸೈಟ್ ವೊಂದರಲ್ಲಿ ಬಟ್ಟೆ ಖರೀದಿಸಲು ಕೆಲ ಪ್ರಕ್ರಿಯೆ ನಡೆಸಿದ್ದರು. ಇದಾದ ಕೆಲ ಹೊತ್ತಿನಲ್ಲಿ ಇದೇ ವೆಬ್ಸೈಟ್ನ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿದ ಅಪರಿಚಿತ ಯುವಕ, “ನೀವು ಬಹುಮಾನಗಳನ್ನು ಗೆದ್ದಿದ್ದೀರಿ’ ಎಂದು ನಂಬಿಸಿದ್ದ. ಬಹುಮಾನವಾಗಿ ಗೆದ್ದ ಬೆಲೆ ಬಾಳುವ ಉಡುಗೊರೆ ಪಡೆಯಲು 65 ಸಾವಿರ ರೂ. ಅನ್ನು ವಿವಿಧ ಅಪರಿಚಿತ ಯುಪಿಐ ಐಡಿಗಳಿಗೆ ವರ್ಗಾವಣೆ ಮಾಡುವಂತೆ ಸೂಚಿಸಿದ್ದ. ಆತನ ಮಾತಿನ ಮೋಡಿಗೆ ಮರುಳಾದ ಅರ್ಪಿತಾ, ಅಪರಿಚಿತ ವ್ಯಕ್ತಿ ಸೂಚಿಸಿದ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ಇದಾದ ಬಳಿಕ ಅರ್ಪಿತಾ ಮನೆಗೆ ಉಡುಗೊರೆ ಬಂದಿರಲಿಲ್ಲ. ಇತ್ತ ಕರೆ ಮಾಡಿದ ವ್ಯಕ್ತಿಯೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಬಗ್ಗೆ ಪರಿಶೀಲಿಸಿ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.