ಚಿಕಿತ್ಸೆಗೆ ಆನ್‌ಲೈನ್ ತರಬೇತಿ
Team Udayavani, Mar 29, 2020, 10:49 AM IST
ಬೆಂಗಳೂರು: ಕೋವಿಡ್ 19 ಸೋಂಕಿತರಿಗೆ ರಾಜ್ಯವ್ಯಾಪಿ ಏಕರೂಪ ಚಿಕಿತ್ಸೆ ನೀಡಲು ಮತ್ತು ಅವರ ಆರೈಕೆಗೆ ಅನುಕೂಲ ಆಗುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ವೈದ್ಯರಿಗೆ, ನರ್ಸ್‌ಗಳಿಗೆ ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿ ವರ್ಗಕ್ಕೆ ಆನ್‌ಲೈನ್ ಮೂಲಕ ತರಬೇತಿ ನೀಡಲು ನಿರ್ಧರಿಸಿದೆ.
ಕೋವಿಡ್ 19 ಸೋಂಕಿತರಿಗೆ ಏಕ ರೂಪದ ಚಿಕಿತ್ಸೆ ಇರಬೇಕು ಮತ್ತು ಅದನ್ನು ಎಲ್ಲರೂ ಪಾಲಿಸಲೇ ಬೇಕಾಗಿರುತ್ತದೆ. ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಚಿಕಿತ್ಸಾ ವಿಧಾನ ಹಾಗೂ ಆರೈಕೆಗಳು ಅಗತ್ಯ ಇರುವುದರಿಂದ ಎಲ್ಲ ಜಿಲ್ಲೆಗಳ ವೈದ್ಯರಿಗೆ, ನರ್ಸ್‌ಗಳಿಗೆ ಮಾತ್ತು ಪ್ಯಾರಾಮೆಡಿಕಲ್ ಸಿಬ್ಬಂದಿ ವರ್ಗಕ್ಕೆ ಆನ್ಲ„ನ್ ಮೂಲಕ ತರಬೇತಿ ನೀಡಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದೇವೆ. ಆಯಾ ಜಿಲ್ಲೆಗಳಲ್ಲಿ ವೈದ್ಯರು, ನರ್ಸ್‌ಗಳು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿ ಲಭ್ಯತೆಯ ಆಧಾರದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ವಿವಿಯ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ ಖಚಿತಪಡಿಸಿದ್ದಾರೆ.
ತಜ್ಞರ ಮೂಲಕ ತರಬೇತಿ: ಈ ವಿಚಾರದಲ್ಲಿ ವೈದ್ಯರಿಗೆ ಅಥವಾ ನರ್ಸ್‌ಗಳಿಗೆ ತರಬೇತಿ ನೀಡುವವರೂ ಕೂಡ ತುಂಬ ವಿಚಾರವನ್ನು ತಿಳಿದವರಾಗಿ ರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ವೈದ್ಯಕೀಯ ತಜ್ಞರ ಮೂಲಕ ತರಬೇತಿ ನೀಡಲಿದೆ. ಸರ್ಕಾರದ ಒಪ್ಪಿಗೆಯಲ್ಲೇ ಈ ತರಬೇತಿ ಕಾರ್ಯ ನಡೆಯಲಿದೆ ಎಂದು ವಿವರಿಸಿದರು.
ಏನೇನು ತರಬೇತಿ?: ಕೋವಿಡ್ 19 ವೈರಸ್ ತಡೆಯುವ ನಿಟ್ಟಿನಲ್ಲಿ ಅನೇಕ ಕ್ರಮ ಗಳನ್ನು ಸರ್ಕಾರ ಈಗಾಗಲೇ ಜಾರಿಗೊಳಿಸಿದೆ. ಆದರೆ, ಸೋಂಕಿತರನ್ನು ಮಾತ್ರ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿ ದವರು ಮಾತ್ರ ನೋಡಿಕೊಳ್ಳಬೇಕು. ಹೀಗಾಗಿ ವೈದ್ಯರಿಗೆ, ನರ್ಸ್ ಗಳಿಗೆ ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿ ವರ್ಗಕ್ಕೆ ಅತ್ಯಾಧುನಿಕ ಸೌಲಭ್ಯವನ್ನು ವೈದ್ಯಕೀಯ ಸೌಲಭ್ಯ ಬಳಸಿ ಯಾವುದೇ ರೀತಿಯಲ್ಲೂ ಅಪಾಯವಿಲ್ಲದ ರೀತಿಯಲ್ಲಿ ಆರೈಕೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ. ತರಬೇತಿ ಆನ್ಲ„ನ್ ಮೂಲಕ ಇರುವುದರಿಂದ ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿ ತಾವು ಇರುವ ಜಾಗಗಳಿಂದಲೇ ತರಬೇತಿ ಪಡೆಯಬಹುದಾಗಿದೆ ಎಂದು ವಿವಿಯ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.
ಈಗಾಗಲೇ ಕಾರ್ಯೋನ್ಮುಖ : ರಾಜ್ಯದಲ್ಲಿರುವ ಬಹುತೇಕ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜುಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಅಧೀನದಲ್ಲಿ ಬರುತ್ತದೆ. ಕೊರೊನಾ ತಡೆಯುವ ನಿಟ್ಟಿನಲ್ಲಿ ವಿವಿಯೂ ಈಗಾಗಲೇ ಕಾರ್ಯೋನ್ಮುಖವಾಗಿದ್ದು, ವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ಸಂಬಂಧ ಅಗತ್ಯ ಸೂಚನೆಯನ್ನು ನೀಡಿದ್ದು, ಈಗ ವೈದ್ಯರಿಗೆ ಹಾಗೂ ವೈದ್ಯಕೀಯ ಸೇವೆಯ ಸಿಬ್ಬಂದಿ ವರ್ಗಕ್ಕೆ ತರಬೇತಿ ನೀಡಲು ಮುಂದಾಗಿದೆ.
ಕೋವಿಡ್ 19 ಚಿಕಿತ್ಸೆ ಮತ್ತು ಆರೈಕೆ ಸಂಬಂಧಿಸಿದಂತೆ ದೇಶದಲ್ಲೇ ಏಕರೂಪ ಕ್ರಮ ಅಳವಡಿಸಿಕೊಳ್ಳಬೇಕು. ಹೀಗಾಗಿ ರಾಜ್ಯದೆಲ್ಲೆಡೆ ಏಕರೂಪ ಚಿಕಿತ್ಸೆ ಮತ್ತು ಆರೈಕೆ ಕ್ರಮಕ್ಕಾಗಿ ವೈದ್ಯರು ಹಾಗೂ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿ ವರ್ಗಕ್ಕೆ ತರಬೇತಿ ನೀಡಲಿದ್ದೇವೆ. ಇದು ಚಿಕಿತ್ಸೆಗೆ ಅನುಕೂಲ ಆಗುವ ಜತೆಗೆ ಆಧುನಿಕ ಉಪಕರಣಗಳ ಸರಳ ಬಳಕೆಗೆ ಉಪಯೋಗ ಆಗಲಿದೆ. -ಡಾ.ಎಸ್.ಸಚ್ಚಿದಾನಂದ, ಕುಲಪತಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿವಿ
-ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.