ಪುಸ್ತಕಗಳು ಓದುಗರ ಕೈ ಸೇರಿದರೆ ಮಾತ್ರ ಸಾರ್ಥಕ
Team Udayavani, Nov 5, 2018, 12:20 PM IST
ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ಸಿನಿಮಾಕ್ಕೆ ಸಂಬಂಧಿಸಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದು, ಆದರೆ ಅವುಗಳು ಓದುಗರ ಕೈ ಸೇರಲು ವಿಫಲವಾಗುತ್ತಿವೆ. ಪುಸ್ತಕಗಳು ಸಾಹಿತ್ಯಸಕ್ತರನ್ನು ತಲುಪುವ ನಿಟ್ಟಿನಲ್ಲಿ ಅಕಾಡೆಮಿ ಮತ್ತಷ್ಟು ಕಾರ್ಯನಿರ್ವಹಿಸಲಿದೆ ಎಂದು ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ಗಾಂಧಿಭವನದಲ್ಲಿ ಭಾನುವಾರ ಕರ್ನಾಟ ಚಲನಚಿತ್ರ ಅಕಾಡೆಮಿ ಹಮ್ಮಿಕೊಂಡಿದ್ದ ಲೇಖಕ ಎನ್.ಎಸ್.ಶಂಕರ್‌ಅವರ “ಚಿತ್ರಕಥೆ ಹಾಗೆಂದರೇನು?’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪುಸ್ತಕಗಳು ಓದುಗರ ಕೈ ಸೇರಬೇಕು ಆಗ ಮಾತ್ರ ಸಾರ್ಥಕತೆ ಸಿಗುತ್ತದೆ ಎಂದು ಹೇಳಿದರು.
ಸಿನಿಮಾ ಓದನ್ನು ಪ್ರೋತ್ಸಾಹಿಸುವ ಸಲುವಾಗಿ ಅಕಾಡೆಮಿ, ಹಲವು ಲೇಖಕರ ಕೃತಿಗಳನ್ನು ಪ್ರಕಟಿಸುತ್ತಿದೆ.ಅದರೆ ಅದನ್ನು ಓದುಗರಿಗೆ ತಲುಪಿಸುವಲ್ಲಿ ವಿಫಲವಾಗುತ್ತೆ ಎಂಬ ಆರೋಪ ಇದೆ. ಇದನ್ನು ನಿವಾರಿಸಲು ಅಕಾಡೆಮಿ ಮುಂದಾಗಿದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಪ್ರಮುಖ ಮಳಿಗೆಗಳಲ್ಲಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ನುಡಿದರು.
ಚಿತ್ರ ನಿರ್ದೇಶ ಮತ್ತು ಗೀತೆ ರಚನೆಕಾರ ಯೋಗರಾಜ್ ಭಟ್ ಮಾತನಾಡಿ, ಸಿನಿಮಾ ಮಾಡುವ ತುಡಿತ ಇರುವವರಿಗೆ ಈ ಪುಸ್ತಕ ತುಂಬಾ ಸಹಕಾರಿಯಾಗಲಿದೆ. ಈಗಿನ ಯುವಕರು ಯಾವುದೋ ಸಿನಿಮಾ ನೋಡಿ ಆಕರ್ಷಣೆಗೊಂಡು ಚಿತ್ರರಂಗಕ್ಕೆ ಬಂದಿರುತ್ತಾರೆ.ಹೀಗಾಗಿ ಅವರಿಗೆ ಅನುಭವ ತುಂಬಾ ಕಡಿಮೆ ಇರುತ್ತದೆ. ಅಂತವರಿಗೆ ಈ ಕೃತಿ ಸಹಾಯಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನೀನಾಸಂ ಹಿಂದೆ ಈ ರೀತಿಯ ಕೃತಿಯನ್ನು ಹೊರತಂದಿತ್ತು.ಆದರೆ ಎಲ್ಲ ಅಂಶಗಳನ್ನು ಆ ಪುಸ್ತಕ ಒಳಗೊಂಡಿಲ್ಲ. ಈ ಕೃತಿ ಸಿನಿಮಾಕ್ಕೆ ಸಂಬಂಧಿಸಿದ ಹಲವು ಅಂಶಗಳನ್ನು ಒಳಗೊಂಡಿದ್ದು,ಶಂಕರ್ ಅವರಿಂದ ಇಂತಹ ಮತ್ತಷ್ಟು ಕೃತಿಗಳು ಮೂಡಿಬರಲಿ ಎಂದು ಆಶಿಸಿದರು.
ಎನ್.ಎಸ್.ಶಂಕರ್ ಅವರೊಂದಿಗೆ ಕೆಲಸ ಮಾಡಿದ ದಿನಗಳನ್ನು ನೆನಪಿಸಿಕೊಂಡ ಚಿತ್ರ ನಟ ರಮೇಶ್ ಅರವಿಂದ್, ಶಂಕರ್ ಅವರು ಚಿತ್ರೀಕರಣದ ವೇಳೆ ನೀಡುತ್ತಿದ್ದ ಚಿತ್ರಕಥೆ ತುಂಬಾ ಸರಳವಾಗಿರುತ್ತಿತ್ತು.ಇವರ ಉಲ್ಟಾ ಪಲ್ಟಾ ಚಿತ್ರ ನಿರ್ಮಾಣವಾಗುತ್ತಿದ್ದ ವೇಳೆ ನಾನು ಸುಮಾರು ಹತ್ತು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೆ.
ಆದರೆ ಈ ಚಿತ್ರದಷ್ಟು ಸರಳವಾದ ಚಿತ್ರಕಥೆ ನಾನು ಉಳಿದ ಚಿತ್ರಗಳಲ್ಲಿ ನೋಡಿರಲಿಲ್ಲ ಎಂದು ಶ್ಲಾ ಸಿದರು. ರಾಜ್ಯ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಎಚ್.ಬಿ.ದಿನೇಶ್ , ಲೇಖಕ ಎನ್.ಎಸ್.ಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.