ಊಟಿಯ “ಚಂದನವನ’ ಸದ್ಯದಲ್ಲೇ ಲೋಕಾರ್ಪಣೆ
Team Udayavani, Jul 3, 2017, 3:45 AM IST
ಬೆಂಗಳೂರು: ಪ್ರವಾಸಿಗರ ಸ್ವರ್ಗ ಖ್ಯಾತಿಯ ಕರ್ನಾಟಕಕ್ಕೆ ಹೊಂದಿಕೊಂಡಿರುವ ಊಟಿಯಲ್ಲಿರುವ ರಾಜ್ಯ ತೋಟಗಾರಿಕೆ ಇಲಾಖೆಗೆ ಸೇರಿದ ಮೂವತ್ತೆಂಟು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಸುಂದರ ಸಸ್ಯೋದ್ಯಾನ ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ.
ಕರ್ನಾಟಕದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಊಟಿಗೆ ಭೇಟಿ ನೀಡುವುದರಿಂದ ಅಲ್ಲಿ ರಾಜ್ಯ ಒಡೆತನದ 38 ಎಕರೆ ಜಾಗದಲ್ಲಿರುವ “ಫೆರ್ನ್ ಹಿಲ್ಸ್ ಗಾರ್ಡನ್’ ಅನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಊಟಿಗೆ ಬರುವಂತಹ ಪ್ರವಾಸಿಗರನ್ನು ಸೆಳೆಯಲು ಕಳೆದ 10 ವರ್ಷದಿಂದಲೂ ವಿವಿಧ ಹಂತದಲ್ಲಿ ಈ ಉದ್ಯಾನದ ನವೀಕರಣ ಕಾಮಗಾರಿ ಮುಗಿದಿದ್ದು,ಜುಲೈನಲ್ಲಿ ಉದ್ಯಾನ ಸಾರ್ವಜನಿಕ ವೀಕ್ಷಣೆಗೆ ಸಮರ್ಪಣೆಯಾಗಲಿದೆ.
ಹೊಸ ಸ್ವರೂಪ: ಫೆರ್ನ್ ಹಿಲ್ಸ್ ಗಾರ್ಡನ್‌ನಲ್ಲಿ ಅಲಂಕಾರಿಕ ಸಸ್ಯಗಳ ಗಾರ್ಡನ್‌ನಲ್ಲಿ ಶೀತ ಪ್ರದೇಶಕ್ಕೆ ಅನುಗುಣವಾದ ವಿವಿಧ ಬಗೆಯ ಅಲಂಕಾರಿಕ ಗಿಡಗಳನ್ನು ಬೆಳೆಯಲಾಗಿದೆ.ಇದು ಗುಡ್ಡಗಾಡಿನ ಪ್ರದೇಶವಾಗಿರುವುದರಿಂದ ಇಳಿಜಾರು ಪ್ರದೇಶವನ್ನು ಅಂದಗಾಣಿಸಲು ಇಳಿಜಾರು ಉದ್ಯಾನ, ಅರ್ಧ ಎಕರೆ ಜಾಗದಲ್ಲಿ ಇಟಾಲಿಯನ್ ಗಾರ್ಡನ್ ನಿರ್ಮಿಸಲಾಗಿದೆ.
ಐದು ಎಕರೆಯಲ್ಲಿ ಲಾನ್ ಏರಿಯಾ ಇದ್ದು, ಪ್ರವಾಸಿಗರಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡಲು ವೇದಿಕೆ ನಿರ್ಮಿಸಲಾಗಿದೆ. ಅಂತೆಯೇ ಅರ್ಧ ಎಕರೆಯಲ್ಲಿ ಮಜೆ ಗಾರ್ಡನ್ ನಿರ್ಮಿಸಲಾಗಿದೆ. ಈ ಜಾಗದಲ್ಲಿರುವ ತಗ್ಗು
ಪ್ರದೇಶಗಳಿಗೆ ಅನುಗುಣವಾದ ಗಿಡಗಳನ್ನು ಬೆಳೆಸಿ ಉದ್ಯಾನ (ಸಂಕನ್‌ಗಾರ್ಡನ್)ವಾಗಿ ಪರಿವರ್ತಿಸಿರುವುದು ವಿಶೇಷ. ಜೊತೆಗೆ ವಿವಿಧ ಬಗೆಯ ಗಿಡ ಮೂಲಿಕೆ ಸಸ್ಯಗಳ ಉದ್ಯಾನ,ತರಕಾರಿ ಗಾರ್ಡನ್, ವಾಣಿಜ್ಯ ಹೂವುಗಳ ಬೆಳೆಯುವ ಪಾಲಿಹೌಸ್, ಸಸ್ಯಾಲಂಕಾರದ ಗಾರ್ಡನ್(ಟೋಪಿಯರಿ) ಇಲ್ಲಿನ ಮತ್ತೂಂದು ಆಕರ್ಷಣೆ.
ಪ್ರವಾಸಿಗರನ್ನು ಸೆಳೆಯಲು ವಿಶಿಷ್ಟವಾದ ಜಪಾನಿ ವಾಸ್ತುಶಿಲ್ಪ ಮಾದರಿಯಲ್ಲಿ ಪಗೋಡಾ (ಗೋಪುರ) ನಿರ್ಮಿಸಲು ತೋಟಗಾರಿಕೆ ಇಲಾಖೆ ಯೋಜನೆ ರೂಪಿಸಿದೆ.
ಚೇಸಿಂಗ್ ಫೌಂಟೆನ್: ನೀಲಗಿರಿ ಬೆಟ್ಟಗಳಿಂದ ಹರಿದು ಬರುವ ನೀರನ್ನು ಸುಮಾರು ಕಾಲು ಕಿಮೀ ಉದ್ದದಲ್ಲಿ ನಾಲ್ಕು ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸಿ, ತಡೆಯುವ ಯೋಜನೆ ಇದೆ. ಈ ಕೆರೆಗಳಲ್ಲಿ ಬಾತುಕೋಳಿಗಳು, ಮೀನುಗಳನ್ನು ಬಿಡಲಾಗುವುದು, ಜತೆಗೆ ಪ್ರವಾಸಿಗರಿಗೆ ಇಷ್ಟವಾಗುವಂತೆ ಕೊನೆಯ ಕೆರೆಯ ಸಮೀಪವೇ ಚೇಸಿಂಗ್ ಫೌಂಟೆನ್(ಕಾರಂಜಿ) ನಿರ್ಮಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಆಯುಕ್ತ ಪಿ.ಸಿ.ರೇ ತಿಳಿಸಿದ್ದಾರೆ.
ಹಿಂದೆ ಹಣ್ಣಿನ ತೋಟವಿದ್ದ ಜಾಗದಲ್ಲಿ ಹೊಸದಾಗಿ ವಿವಿಧ ತಳಿಯ ಮರಗಿಡಗಳನ್ನು ಬೆಳೆಸಲಾಗುತ್ತಿದೆ. ಜತೆಗೆ ಮಕ್ಕಳಿಗೆ ಇಷ್ಟವಾಗುವಂತೆ 15 ನೀಲಗಿರಿ ಕುರಿಗಳನ್ನು ಸಾಕಲಾಗುತ್ತಿದ್ದು, ಈ ಪ್ರದೇಶ ಅಭಿವೃದಿಟಛಿ ಪಡಿಸಿದ ನಂತರ ಅವುಗಳನ್ನು ಇಲ್ಲಿ ಬಿಡಲಾಗುವುದು. ಟೀ ಫ್ಲಾಂಟ್ ಬೆಳೆಯುವ ವಿಧಾನ ಇತ್ಯಾದಿ ಮಾಹಿತಿ ಪರಿಚಯಿಸಲು ಎರಡು ಎಕರೆ ಜಾಗದಲ್ಲಿ ಟೀ ಗಾರ್ಡನ್ ಬೆಳೆಯಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಜಗದೀಶ್ ತಿಳಿಸಿದರು. ಇಲ್ಲಿ ಪ್ರವಾಸಿಗರು ಉಳಿಯಲು ಅತಿಥಿ ಗೃಹ ಸಹ ಇದ್ದು, ರಾಜ್ಯದ ಪ್ರವಾಸಿಗರ ನೆಚ್ಚಿನ ಸ್ಥಳವೂ ಹೌದು.
ಫೆರ್ನ್ ಹಿಲ್ಸ್ ಗಾರ್ಡ್‌ನನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಸ್ತುತ 20 ಎಕರೆ ಪ್ರದೇಶದಲ್ಲಿ ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಉಳಿದ 18 ಎಕರೆಯಲ್ಲಿ ವಿವಿಧ ಯೋಜನೆಗಳು ಸಾಕಾರಗೊಳ್ಳಬೇಕಿದೆ. ಈ ತಿಂಗಳಲ್ಲೇ ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ ಮಾಡಿಸುವ ಯೋಜನೆ ಇದ್ದು, ಸಿದ್ಧತೆಯಲ್ಲಿದ್ದೇವೆ.
– ಎಸ್.ಎಸ್.ಮಲ್ಲಿಕಾರ್ಜುನ್,
ತೋಟಗಾರಿಕೆ ಇಲಾಖೆ ಸಚಿವ
– ಸಂಪತ್ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ರಾಯಚೂರಲ್ಲಿ ಮತ್ತೋರ್ವ ಬಾಣಂತಿ, ಹಸುಗೂಸು ಸಾವು
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ
Poster Campaign: ಸಚಿವ ಪ್ರಿಯಾಂಕ್ ವಿರುದ್ಧ ಬಿಜೆಪಿ ಪೋಸ್ಟರ್ ಆಂದೋಲನ;ಎಫ್‌ಐಆರ್ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.