ಮೂರು ದಿನಗಳ ಸಿರಿಧಾನ್ಯ ಮೇಳಕ್ಕೆ ತೆರೆ
Team Udayavani, Jan 22, 2018, 11:54 AM IST
ಬೆಂಗಳೂರು: ಸಾವಯವ ಮತ್ತು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಭಾನುವಾರ ತೆರೆಬಿದ್ದಿದ್ದು, ಮೂರು ದಿನಗಳ ಮೇಳದಲ್ಲಿ ಅಂದಾಜು 2.10 ಲಕ್ಷ ಜನ ಭೇಟಿ ನೀಡಿದ್ದು, ಮಾರಾಟ ಮಳಿಗೆಗಳು, ಖಾನಾವಳಿಯೂ ಸೇರಿ ಒಟ್ಟಾರೆ 107 ಕೋಟಿ ರೂ. ವಹಿವಾಟು ನಡೆದಿದೆ.
ಈ ಪೈಕಿ ಕಂಪನಿಗಳು ನೇರವಾಗಿ ರೈತರಿಂದ 27 ಕೋಟಿ ಮೊತ್ತದ ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳ ಖರೀದಿಗೆ ಆಸಕ್ತಿ ತೋರಿವೆ. ಇದೇ ವೇಳೆ ರೈತರು ಮತ್ತು ಉದ್ದಿಮೆದಾರರ ನಡುವೆ 34 ಒಡಂಬಡಿಕೆಗಳು ಏರ್ಪಟ್ಟಿವೆ. ಎಲ್ಲ 14 ಪ್ರಾಂತೀಯ ಸಹಕಾರಿ ಸಾವಯವ ಸಂಘಗಳ ಒಕ್ಕೂಟದೊಂದಿಗೆ ಈ ಲೆಟರ್ ಆಫ್ ಇಂಟರೆಸ್ಟ್‌ಗೆ ಸಹಿ ಹಾಕಲಾಗಿದೆ.
ಅಷ್ಟೇ ಅಲ್ಲ, ಮುಂದಿನ ಮೂರು ವರ್ಷಗಳಲ್ಲಿ ಈ ಉದ್ದಿಮೆದಾರರು ರೈತರಿಂದ ಸುಮಾರು 340 ಕೋಟಿ ರೂ. ವ್ಯಾಪಾರ-ವಹಿವಾಟು ನಡೆಸುವ ನಿರೀಕ್ಷೆ ಇದ್ದು, ಈ ಸಂಬಂಧ ಉದ್ದಿಮೆದಾರರು ಮೇಳದಲ್ಲಿ ಭರವಸೆ ನೀಡಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ರಾಜ್ಯದ ಸಿರಿಧಾನ್ಯ ಮತ್ತು ಸಾವಯವ ರೈತರಿಗೆ ಅವಕಾಶಗಳ ಬಾಗಿಲು ತೆರೆದುಕೊಳ್ಳಲಿದೆ.
ಅಮೆರಿಕ, ಕೆನಡ, ದಕ್ಷಿಣ ಕೋರಿಯ, ಚೈನಾ, ಯುಎಇ, ಮಲೇಷಿಯ, ಉಗಾಂಡ, ಸ್ವಿಡ್ಜರ್‌ಲ್ಯಾಂಡ್ ಸೇರಿದಂತೆ 15 ಅಂತರರಾಷ್ಟ್ರೀಯ ಖರೀದಿದಾರರು ಮತ್ತು 50ಕ್ಕೂ ಹೆಚ್ಚು ದೇಶೀಯ ಖರೀದಿದಾರರು ಬಿ2ಬಿ ಸಭೆಗಳಲ್ಲಿ ಭಾಗವಹಿಸಿದ್ದರು. ಈ ಮೇಳವು ಒಂದೆಡೆ ರೈತರು ಮತ್ತು ಉದ್ಯಮಿಗಳ ನಡುವೆ ವೇದಿಕೆಯಾದರೆ, ಮತ್ತೂಂದೆಡೆ ವ್ಯಾಪಾರಿಗಳು ಮತ್ತು ಗ್ರಾಹಕರ ನಡುವೆ ಸಂಪರ್ಕ ಕೊಂಡಿಯಾಯಿತು.
ಅಪರೂಪದ ವೇದಿಕೆ ಅಂದಾಜು 391 ಮಳಿಗೆಗಳು, “ಖಾನಾವಳಿ’ಯಲ್ಲಿ 25ಕ್ಕೂ ಹೆಚ್ಚು ಪ್ರತಿಷ್ಠಿತ ಹೋಟೆಲ್‌ಗಳನ್ನು ಇಲ್ಲಿ ತೆರೆಯಲಾಗಿತ್ತು. ಕೊನೆಯ ದಿನ ಜನ ಅಕ್ಷರಶಃ ಅಲ್ಲಿ ಮುಗಿಬಿದ್ದರು. ಹಾಗಾಗಿ, ಭರಪೂರ ವ್ಯಾಪಾರ-ವಹಿವಾಟು ನಡೆಯಿತು. “ಸಾವಯವ ಖಾದ್ಯಗಳನ್ನು ತಯಾರಿಸುವ ನಮ್ಮಂತಹವರಿಗೆ ಇದೊಂದು ಅಪರೂಪದ ವೇದಿಕೆ. ಮೂರು ದಿನಗಳೂ ಉತ್ತಮ ವ್ಯಾಪಾರ ಆಯಿತು.
ಕೊನೆಯ ದಿನವಂತೂ ಕಂಟ್ರೋಲ್ ಮಾಡುವುದೂ ಕಷ್ಟವಾಯಿತು’ ಎಂದು ಖಾನಾವಳಿಯಲ್ಲಿ ಹೋಟೆಲ್ ತೆರೆದಿದ್ದ ಯೋಗೀಶ್ ಸಂತಸ ವ್ಯಕ್ತಪಡಿಸಿದರು. ನೇಯ್ಗೆ ಮಾಡದ ಬಟ್ಟೆಗಳ ಕಾರ್ಖಾನೆ ಕೋರಿಯನ್ ಕಂಪನಿಯೊಂದು ರಾಜ್ಯದಲ್ಲಿ ನೇಯ್ಗೆ ಮಾಡದ ಬಟ್ಟೆ ತಯಾರಿಕೆ ಕಾರ್ಖಾನೆ ಸ್ಥಾಪನೆಗೆ ಆಸಕ್ತಿ ತೋರಿಸಿದೆ.
ಬೆಂಗಳೂರು ಮೂಲದ ಕಂಪನಿಯೊಂದಿಗೆ ಕೋರಿಯನ್ ಕಂಪನಿಯು ಈ ಕಾರ್ಖಾನೆ ತೆರೆಯುತ್ತಿದ್ದು, ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಕಂಪನಿಯು ಈ ಭರವಸೆ ನೀಡಿದೆ. ಮೇಳದಲ್ಲಿ ಸುಮಾರು 7ರಿಂದ 8 ಸಾವಿರ ರೈತರನ್ನು ನಿರೀಕ್ಷಿಸಲಾಗಿತ್ತು. ಆದರೆ, ಮೊದಲ ದಿನವೇ 10 ಸಾವಿರ ಗಡಿ ದಾಟಿತು. ಕೊನೆಯ ದಿನದ ಅಂತ್ಯಕ್ಕೆ ನಿರೀಕ್ಷೆಗಿಂತ ಎರಡು-ಮೂರು ಪಟ್ಟು ರೈತರು ಲಗ್ಗೆ ಇಟ್ಟರು.
ಬಗೆಹರಿದ ಗೊಂದಲ: ಬೆಸೆದ ಸಂಪರ್ಕ “ಸಾಕಷ್ಟು ಸಾವಯವ ಮಳಿಗೆಗಳು ನಗರದಲ್ಲಿವೆ. ಆದರೆ, ಅವುಗಳ ಗುಣಮಟ್ಟದ ಬಗ್ಗೆ ಹಲವು ಅನುಮಾನ, ಗೊಂದಲಗಳಿದ್ದವು. ಸರ್ಕಾರವೇ ಮೇಳ ಆಯೋಜಿಸಿದ್ದರಿಂದ ಅಪ್ಪಟ ಸಾವಯವ ಉತ್ಪನ್ನಗಳ ಬಗೆಗಿನ ಗೊಂದಲ ಬಗೆಹರಿಯಿತು. ಜತೆಗೆ ಮಳಿಗೆಗಳ ಪರಿಚಯವಾಗಿದ್ದರಿಂದ ನಿರಂತರ ಖರೀದಿ ವ್ಯವಹಾರಕ್ಕೆ ಅನುಕೂಲವಾಗಿದೆ. ಅಲ್ಲದೆ, ಎಷ್ಟೋ ಖಾದ್ಯಗಳು ನಮಗೆ ಗೊತ್ತೇ ಇರಲಿಲ್ಲ. ಅದರ ಪರಿಚಯ ಕೂಡ ಮೇಳದಲ್ಲಾಯಿತು’ ಎಂದು ಜಯನಗರದ ಸಾಕ್ಷಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.