ಷರತ್ತಿನ ವರ್ಗಾವಣೆಗೆ ವಿರೋಧ
Team Udayavani, Jul 14, 2017, 11:21 AM IST
ಬೆಂಗಳೂರು: ಅಂತರ ಸಾರಿಗೆ ನಿಗಮಗಳ ವರ್ಗಾವಣೆ ಬಯಸುವವರಿಗೆ ಸೇವಾ ಹಿರಿತನ ಅಥವಾ ಮುಂಬಡ್ತಿ ಇಲ್ಲ ಎಂಬ ಷರತ್ತು ನೌಕರರಿಗೆ ಪ್ರತಿಕೂಲವಾಗಿದ್ದು, ಕೂಡಲೇ ಈ ಷರತ್ತು ಕೈಬಿಡಬೇಕು ಎಂದು ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಮಹಾಮಂಡಳಿ ಆಗ್ರಹಿಸಿದೆ.
ಅಂತರ ಸಾರಿಗೆ ನಿಗಮಗಳ ವರ್ಗಾವಣೆಗೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ, ಈ ವರ್ಗಾವಣೆ ಬಯಸಿದವರಿಗೆ ವಿಧಿಸಿರುವ ಷರತ್ತುಗಳು ಏಕಪಕ್ಷೀಯ. ಅದರ ಪ್ರಕಾರ ಸಾರಿಗೆ ನೌಕರರಿಗೆ ಮುಂಬಡ್ತಿಯನ್ನೇ ತಡೆಹಿಡಿಯಲಾಗುತ್ತದೆ. ಇಂತಹ ಷರತ್ತುಗಳನ್ನು ತಕ್ಷಣ ಕೈಬಿಡಬೇಕು ಎಂದು ಮಹಾಮಂಡಳಿ ಕಾರ್ಯಾಧ್ಯಕ್ಷ ಎ.ಎಸ್. ರಾಮಣ್ಣ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಇದಲ್ಲದೆ, ಕಳೆದ ವರ್ಷ ಜುಲೈನಲ್ಲಿ ನಡೆದ ಬಸ್ ಮುಷ್ಕರದ ವೇಳೆ ಕಾರ್ಮಿಕರ 41 ಬೇಡಿಕೆಗಳನ್ನು ನಿಗಮದ ಆಡಳಿತ ಮಂಡಳಿಯು ತಿಂಗಳಲ್ಲಿ ಈಡೇರಿಸುವ ಭರವಸೆ ನೀಡಿತ್ತು. ಆದರೆ, ಇದುವರೆಗೆ ಹಲವು ಬೇಡಿಕೆಗಳು ಈಡೇರಿಲ್ಲ. ಅಲ್ಲದೆ, ಕಳೆದೊಂದು ವರ್ಷದಿಂದ ಮಹಾಮಂಡಳಿಯೊಂದಿಗೆ ಯಾವುದೇ ಸಭೆ ಕರೆದು ಚರ್ಚಿಸಿಲ್ಲ. ಇದೇ ಧೋರಣೆ ಮುಂದುವರಿದರೆ, ಹೋರಾಟ ಅನಿವಾರ್ಯ ಆಗಲಿದೆ ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BGT 2024-25: ಅಡಿಲೇಡ್ ಟೆಸ್ಟ್ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ
Bengaluru: ಮರಕ್ಕೆ ಬೈಕ್ ಡಿಕ್ಕಿ : 2 ವಿದ್ಯಾರ್ಥಿಗಳು ಸಾವು
Bengaluru Crime: ಅತಿಯಾಗಿ ಮೊಬೈಲ್ ಬಳಸಿದಕ್ಕೆ ಪ್ರೇಯಸಿ ಹತ್ಯೆ?
Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!
Maharashtra; ಗೊಂಡಿಯಾ ಬಸ್ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.