ಹೊಸ ಜಾಹೀರಾತು ಬೈಲಾಗೆ ವಿರೋಧ
Team Udayavani, Oct 26, 2018, 12:30 PM IST
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ ಜಾರಿಗೊಳಿಸಲು ಉದ್ದೇಶಿಸಿರುವ ಜಾಹೀರಾತು ಹೊರಾಂಗಣ ಹಾಗೂ ಒಳಾಂಗಣ ಉಪವಿಧಿ (ಬೈಲಾ)ಗಳನ್ನು ವಿರೋಧಿಸಿ ಹೊರಾಂಗಣ ಜಾಹೀರಾತು ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಟೌನ್‌ಹಾಲ್ ಮುಂಭಾಗ ಪ್ರತಿಭಟನೆ ನಡೆಸಿದ ಸಂಘಟನೆ ಸದಸ್ಯರು, ಹಳೆಯ ಜಾಹೀರಾತು ನಿಯಮವನ್ನೇ ಮುಂದುವರಿಸಬೇಕು ಹಾಗೂ ಅಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿದ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಚಿಕ್ಕಣ್ಣ, ನಗರದಲ್ಲಿನ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ತಿಳಿಸಿದೆ. ಆದರೆ, ಬಿಬಿಎಂಪಿಯವರು ಅಧಿಕೃತ ಜಾಹೀರಾತುಗಳನ್ನು ಬ್ಯಾನ್ ಮಾಡುವ ಮೂಲಕ ಆರು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬರುವಂತೆ ಮಾಡಿದ್ದರೆ ಎಂದು ಆರೋಪಿಸಿದರು.
ಪೋಸ್ಟರ್‌ಗಳು, ಬ್ಯಾನರ್ ಹಾಗೂ ಕಟೌಟ್‌ಗಳಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಆದರೆ ಹೋರ್ಡಿಂಗ್‌ಗಳಿಂದ ಯಾವುದೇ ಸಮಸ್ಯೆಯಿಲ್ಲ. ನಾವು ಕಾನೂನು ಪ್ರಕಾರವೇ ಜಾಹೀರಾತು ಫಲಕಗಳನ್ನು ಅಳವಡಿಸಿದ್ದು, ಮರು ಬಳಕೆ ಮಾಡಬಹುದಾದ ಉತ್ಪನ್ನಗಳನ್ನು ಜಾಹೀರಾತು ಪ್ರದರ್ಶಿಸಲು ಬಳಸುತ್ತಿದ್ದೇವೆ.
ಆದರೆ, ಪಾಲಿಕೆಯ ಹೊಸ ನಿಯಮಗಳಿಂದ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯವಾಗಿದೆ ಎಂದು ದೂರಿದರು. ಜಾಹೀರಾತು ಫಲಕಗಳಿಂದ ರಿಯಲ್ ಎಸ್ಟೇಟ್ ಉದ್ಯಮಗಳ ಅಭಿವೃದ್ಧಿಯಾಗುತ್ತಿದ್ದು, ವಿದೇಶಿ ಬಂಡವಾಳ ಆಕರ್ಷಿಸಲು ಸಾಧ್ಯವಾಗುತ್ತಿದೆ.
ಅದರೆ, ಇದೀಗ ಜಾಹೀರಾತು ಫಲಕಗಳನ್ನು ಬ್ಯಾನ್ ಮಾಡಿರುವುದರಿಂದ ಜಾಹೀರಾತು ಏಜೆನ್ಸಿಗಳೊಂದಿಗೆ ಸರ್ಕಾರಕ್ಕೂ ನಷ್ಟವಾಗಲಿದೆ. ಇನ್ನು ಕೇವಲ ಬಸ್ ಶೆಲ್ಟರ್, ಸ್ಕೈವಾಕ್‌ಗಳಲ್ಲಿ ಜಾಹೀರಾತು ಪ್ರಕಟಿಸಲು ಅನುಮತಿ ನೀಡುವ ಮೂಲಕ ಪ್ರಭಾವಿಗಳಿಗೆ ಮಾತ್ರ ಪ್ರಯೋಜನ ಮಾಡಿಕೊಡಲು ಬಿಬಿಎಂಪಿ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊರಾಂಗಣ ಜಾಹೀರಾತು ಸಂಘದ ಅಧ್ಯಕ್ಷ ಎಸ್.ಎಂ.ಜಾವೀದ್, ಅಧಿಕೃತವಾಗಿ ಪ್ರಕಟಿಸುವ ಜಾಹೀರಾತುದಾರರಿಗೆ ಪಾಲಿಕೆ ಅನುಮತಿ ನೀಡಲೇಬೇಕು. ನೂತನ ಬೈಲಾ ವಿರೋಧಿಸಲು ಕೊನೆ ದಿನವಾದ್ದರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ನೂತನ ಜಾಹೀರಾತು ನೀತಿಯು, ವಿದೇಶಿ ನೀತಿಗಳನ್ನು ಕಟ್ ಪೇಸ್ಟ್ ಮಾಡಿದಂತಿದೆ. ಪಾಲಿಕೆಯ ಹಳೆಯ ನೀತಿಯೇ ಸಮಗ್ರವಾಗಿದ್ದು, ಅದನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.