3ನೇ ಹಂತದ ವೈಟ್‌ಟಾಪಿಂಗ್‌ಗೆ ವಿರೋಧ

Team Udayavani, Apr 22, 2019, 3:00 AM IST

3ne-hanta

ಬೆಂಗಳೂರು: ನಗರದಲ್ಲಿನ ರಸ್ತೆಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಬಿಬಿಎಂಪಿ ಕೈಗೆತ್ತಿಕೊಂಡ ವೈಟ್‌ಟಾಪಿಂಗ್‌ ಯೋಜನೆ ಹಲವು ರಸ್ತೆಗಳಲ್ಲಿ ದಟ್ಟಣೆ ಸಮಸ್ಯೆಗೆ ಸೃಷ್ಟಿಸಿದ್ದು, ಎರಡು ಹಂತಗಳ ಕಾಮಗಾರಿ ಮುಗಿಯುವ ಮೊದಲೇ ಪಾಲಿಕೆ 3ನೇ ಹಂತಕ್ಕೆ ಕೈಹಾಕಿರುವುದು ಟೀಕೆಗೆ ಕಾರಣವಾಗಿದೆ.

ಪಾಲಿಕೆಯಿಂದ ವಿವಿಧ ರಸ್ತೆಗಳಲ್ಲಿ ನಡೆಸುತ್ತಿರುವ ವೈಟ್‌ಟಾಪಿಂಗ್‌ ಕಾಮಗಾರಿಯ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಇದೀಗ 3ನೇ ಹಂತದ ಕಾಮಗಾರಿ ಕೈಗೆತ್ತಿಕೊಂಡಂತೆ ನಗರದ ರಸ್ತೆಗಳಲ್ಲಿನ ದಟ್ಟಣೆ ಮತ್ತಷ್ಟು ಹೆಚ್ಚಾಗಲಿದೆ.

ಈಗಾಗಲೇ ವೈಟ್‌ಟಾಪಿಂಗ್‌, ಟೆಂಡರ್‌ಶ್ಯೂರ್‌ ಕಾಮಗಾರಿಗಳಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಷೇಧಿಸಿ ಕಾಮಗಾರಿ ನಡೆಸಲಾಗುತ್ತಿದೆ. ಇದೀಗ ಮತ್ತೆ 89 ರಸ್ತೆಗಳಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ನಡೆಸಲು ಉದ್ದೇಶಿಸಿರುವುದು ವಾಹನ ಸವಾರರ ಕೋಪ ಹೆಚ್ಚುವಂತೆ ಮಾಡಿದೆ.

ನಗರದಲ್ಲಿ ಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಪ್ರಮುಖ ರಸ್ತೆಗಳನ್ನು ವೈಟ್‌ಟಾಪಿಂಗ್‌ಗೊಳಿಸಲು ಪಾಲಿಕೆ ಯೋಜನೆ ರೂಪಿಸಿತ್ತು. ಅದರಂತೆ ಮೊದಲ ಹಂತದಲ್ಲಿ 39.80 ಕಿ.ಮೀ. ಉದ್ದದ ರಸ್ತೆಗಳಲ್ಲಿ ಕಾಮಗಾರಿ ಸಹ ಆರಂಭಿಸಲಾಗಿದೆ. ಆದರೆ, ಈವರೆಗೆ ಕೇವಲ 12-15 ಕಿ.ಮೀ. ಉದ್ದ ರಸ್ತೆ ಕಾಮಗಾರಿ ಮಾತ್ರ ಪೂರ್ಣಗೊಂಡಿದ್ದು, 25 ಕಿ.ಮೀ.ನಷ್ಟು ಉದ್ದದ ಕಾಮಗಾರಿ ಬಾಕಿಯಿದೆ.

ಅದರ ನಡುವೆಯೂ ಪಾಲಿಕೆಯ ಅಧಿಕಾರಿಗಳು 2ನೇ ಹಂತದ ವೈಟ್‌ಟಾಪಿಂಗ್‌ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಕಾಮಗಾರಿ ಆರಂಭವಾಗಬೇಕಿದೆ. ಈಗ ಮತ್ತೆ 89 ರಸ್ತೆಗಳನ್ನು 3ನೇ ಹಂತದಲ್ಲಿ ವೈಟ್‌ಟಾಪಿಂಗ್‌ಗೊಳಿಸಲು ಟೆಂಡರ್‌ ಆಹ್ವಾನಿಸಿರುವ ಪಾಲಿಕೆಯು, ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಪೂರ್ಣಗೊಂಡ ಬಳಿಕ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವ ಸಾಧ್ಯತೆಯಿದೆ.

ಎಚ್ಚೆತ್ತುಕೊಳ್ಳದ ಅಧಿಕಾರಿಗಳು: ವೈಟ್‌ಟಾಪಿಂಗ್‌ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿರುವ ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಕಾಮಗಾರಿ ನಡೆಯುವ ರಸ್ತೆಗಳಿಗೆ ಪರ್ಯಾಯ ರಸ್ತೆ ಗುರುತಿಸದ ಪರಿಣಾಮ ಕಾಮಗಾರಿ ಕೈಗೆತ್ತಿಕೊಂಡ ಕಡೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ಜನರು ಕಿರಿಕಿರಿ ಅನುಭವಿಸುವಂತಾಗಿದೆ. ಪರಿಣಾಮ ಸಂಚಾರ ಪೊಲೀಸರು ಕಾಮಗಾರಿಗೆ ಅನುಮತಿ ನೀಡದೆ ಕೆಲಸ ಅರ್ಧಕ್ಕೆ ನಿಲ್ಲುವಂತಾಗಿತ್ತು.

ಆ ಬಳಿಕವೂ ಎಚ್ಚೆತ್ತುಕೊಳ್ಳದ ಪಾಲಿಕೆಯ ಅಧಿಕಾರಿಗಳು 3ನೇ ಹಂತದ ಯೋಜನೆಯಲ್ಲಿಯೂ ಒಬ್ಬರೇ ಗುತ್ತಿಗೆದಾರರಿಗೆ 8 ರಿಂದ 22 ರಸ್ತೆಗಳನ್ನು ನೀಡಲು ಮುಂದಾಗಿದ್ದು, ಇದರಿಂದ ಕಾಮಗಾರಿ ಪೂರ್ಣಗೊಳ್ಳುವುದು ವಿಳಂಬವಾಗಲಿದೆ. ಒಬ್ಬರೇ ಗುತ್ತಿಗೆದಾರರಿಗೆ ಎಲ್ಲ ಹೆಚ್ಚಿನ ರಸ್ತೆಗಳನ್ನು ನೀಡುವುದರಿಂದ ಕಾಮಗಾರಿಯೂ ವಿಳಂಬವಾಗಲಿದೆ. ಒಂದೊಮ್ಮೆ ಎಲ್ಲ ರಸ್ತೆಗಳಲ್ಲಿ ಒಮ್ಮೆಗೆ ಕಾಮಗಾರಿ ಕೈಗೆತ್ತಿಕೊಂಡರೂ ದಟ್ಟಣೆ ಸಮಸ್ಯೆ ಕಾಡಲಿದೆ.

2ನೇ ಹಂತದಲ್ಲಿ 40 ರಸ್ತೆಗಳು: ವೈಟ್‌ಟಾಪಿಂಗ್‌ ಕಾಮಗಾರಿಗೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ 281 ಕೋಟಿ ರೂ. ವ್ಯಯಿಸಿದರೆ, 2ನೇ ಹಂತದ ಕಾಮಗಾರಿಗೆ 642.46 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಅದರಂತೆ 2ನೇ ಹಂತದಲ್ಲಿ 40 ರಸ್ತೆ ಮತ್ತು ಜಂಕ್ಷನ್‌ಗಳನ್ನು ವೈಟ್‌ಟಾಪಿಂಗ್‌ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಈಗಾಗಲೇ ಮೊದಲ ಹಂತ ರಸ್ತೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, 2ನೇ ಹಂತದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಆರಂಭಿಸಬೇಕಿದೆ.

3ನೇ ಹಂತಕ್ಕೆ ಸಿದ್ಧತೆ: ಎರಡು ಹಂತದ ಕಾಮಗಾರಿಗಳಲ್ಲಿ ಕೆಲ ರಸ್ತೆಗಳಲ್ಲಿ ಕಾಮಗಾರಿಯೇ ಆರಂಭವಾಗಿಲ್ಲ. ಅಷ್ಟರೊಳಗೆ ಬಿಬಿಎಂಪಿ 3ನೇ ಹಂತದ ಕಾಮಗಾರಿಗೆ ಸಿದ್ಧತೆ ನಡೆಸಿದೆ. ಅದರಂತೆ 975.21 ಕೋಟಿ ರೂ. ವ್ಯಯಿಸಿ 89 ರಸ್ತೆಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಟೆಂಡರ್‌ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ಆ ಮಾಸಾಂತ್ಯಕ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಮುಂದಿನ ತಿಂಗಳು ಗುತ್ತಿಗೆದಾರರನ್ನು ನೇಮಿಸಲಾಗುತ್ತದೆ. ಒಟ್ಟು 6 ಪ್ಯಾಕೇಜ್‌ನಲ್ಲಿ ಗುತ್ತಿಗೆ ನೀಡಲಾಗುತ್ತದೆ.

ಪ್ರಮುಖ ರಸ್ತೆಗಳಲ್ಲಿ ಉಂಟಾಗಲಿದೆ ಟ್ರಾಫಿಕ್‌: ಎರಡನೇ ಹಂತದ ಯೋಜನೆಯಂತೆ ಹೆಚ್ಚು ವಾಹನ ಸಂಚಾರವಿರುವ ರಸ್ತೆಗಳನ್ನೇ ಹೆಚ್ಚಾಗಿ ಕಾಮಗಾರಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಮುಖವಾಗಿ, ಗೋರಿಪಾಳ್ಯ ಮುಖ್ಯರಸ್ತೆ, ಬಿನ್ನಿಮಿಲ್‌ ರಸ್ತೆ, ಚಂದ್ರಲೇಔಟ್‌ ಮುಖ್ಯರಸ್ತೆ, ಮೈಸೂರು ರಸ್ತೆ (ಕವಿಕಾವರೆಗೆ), ಹೊಸಕೆರೆಹಳ್ಳಿ ಮುಖ್ಯರಸ್ತೆ ಸೇರಿ ಇನ್ನಿತರ ಕಡೆಗಳಲ್ಲಿ ಕಾಮಗಾರಿ ನಡೆಸಲಾಗುತ್ತದೆ. ಹೀಗಾಗಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಒಮ್ಮೆಲೆ ಕಾಮಗಾರಿ ಆರಂಭಿಸಿದರೆ, ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಲಿದೆ.

ಚಾಲ್ತಿಯಲ್ಲಿರುವ ಕಾಮಗಾರಿ ವಿವರ: ಹೊರವರ್ತುಲ ರಸ್ತೆಯ ಜ್ಞಾನಭಾರತಿಯಿಂದ ಸುಮನಹಳ್ಳಿ ಜಂಕ್ಷನ್‌, ತುಮಕೂರು ರಸ್ತೆಯಿಂದ ಹಳೆ ಮದ್ರಾಸ್‌ ರಸ್ತೆ, ನಾಗವಾರ ಹೊರವರ್ತುಲ ರಸ್ತೆ, ವಿಜಯನಗರ, ಹೊಸೂರು ರಸ್ತೆ, ಕೋರಮಂಗಲ, ಮೈಸೂರು ರಸ್ತೆಗಳಲ್ಲಿ ಕಾಮಗಾರಿ ನಡೆಸಿ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಕಾಮಗಾರಿ ಆರಂಭಿಸಲಾಗಿದೆ.

ಟಾಪ್ ನ್ಯೂಸ್

Sanatana Dharma Warning: ಆಂಧ್ರ, ತಮಿಳುನಾಡು ಡಿಸಿಎಂಗಳ ನಡುವೆ ಸನಾತನ ಜಟಾಪಟಿ!

Sanatana Dharma Warning: ಆಂಧ್ರ, ತಮಿಳುನಾಡು ಡಿಸಿಎಂಗಳ ನಡುವೆ ಸನಾತನ ಜಟಾಪಟಿ!

Tirupati Laddu Controversy: ತಿರುಪತಿ ಲಡ್ಡು ವಿವಾದ ಸ್ವತಂತ್ರ ತನಿಖೆಗೆ SIT: ಸುಪ್ರೀಂ

Tirupati Laddu Controversy: ತಿರುಪತಿ ಲಡ್ಡು ವಿವಾದ ಸ್ವತಂತ್ರ ತನಿಖೆಗೆ SIT: ಸುಪ್ರೀಂ

Hockey India League: 7 ವರ್ಷ ಬಳಿಕ ಹಾಕಿ ಇಂಡಿಯಾ ಲೀಗ್‌ ಪುನಾರಂಭ.. ಡಿ.28ಕ್ಕೆ ಕೂಟ ಶುರು

Hockey India League: 7 ವರ್ಷ ಬಳಿಕ ಹಾಕಿ ಇಂಡಿಯಾ ಲೀಗ್‌ ಪುನಾರಂಭ.. ಡಿ.28ಕ್ಕೆ ಕೂಟ ಶುರು

Haryana: ಯಾರಿಗೆ ಗೆಲುವಿನ ಹರಿವಾಣ? ಬಿಜೆಪಿಗೆ ಆಡಳಿತ ವಿರೋಧ ಅಲೆ ಭೀತಿ

Haryana: ಯಾರಿಗೆ ಗೆಲುವಿನ ಹರಿವಾಣ? ಬಿಜೆಪಿಗೆ ಆಡಳಿತ ವಿರೋಧ ಅಲೆ ಭೀತಿ

uppunda

Disease: ಉಪ್ಪುಂದದಲ್ಲಿ ಕಾಲರಾ ಭೀತಿ; 200ಕ್ಕೂ ಅಧಿಕ ಮಂದಿ ಅಸ್ವಸ್ಥ; ತಹಶೀಲ್ದಾರ್‌ ಭೇಟಿ

1-horoscope

Daily Horoscope: ಅವಕಾಶಗಳ ಆಯ್ಕೆಯ ವಿಷಯದಲ್ಲಿ ಗೊಂದಲ, ವ್ಯಾಪಾರಿಗಳಿಗೆ ಉತ್ತಮ ಲಾಭ

Navratri: ಮಾತೃಶಕ್ತಿ ಆರಾಧನೆಯ ನವರಾತ್ರಿ

Navratri: ಮಾತೃಶಕ್ತಿ ಆರಾಧನೆಯ ನವರಾತ್ರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengalru-Bomb

Bomb Threat: ಬೆಂಗಳೂರು ನಗರದ ಪ್ರತಿಷ್ಠಿತ ಮೂರು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ!

Manipal Hospital has set a new Guinness World Record by performing 3,319 CPRs in just 24 hours!

24 ಗಂಟೆಗಳಲ್ಲಿ 3,319 ಸಿಪಿಆರ್; ಗಿನ್ನೆಸ್ ವಿಶ್ವ ದಾಖಲೆ ಬರೆದ ಮಣಿಪಾಲ್‌ ಆಸ್ಪತ್ರೆ

7-bng

Bengaluru ನಗರದಲ್ಲಿ ಸಂಭ್ರಮದ ನವರಾತ್ರಿ, ವಿಶೇಷ ಪೂಜೆ

6-darshan

Darshan Bail: ಇಂದು ದರ್ಶನ್‌ ಜಾಮೀನು ಅರ್ಜಿ ವಿಚಾರಣೆ: ಕುತೂಹಲ

4-bng-rain

Bengaluru: ರಾಜಧಾನಿಯಲ್ಲಿ ತಿಂಗಳ ಬಳಿಕ ಮಳೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Sanatana Dharma Warning: ಆಂಧ್ರ, ತಮಿಳುನಾಡು ಡಿಸಿಎಂಗಳ ನಡುವೆ ಸನಾತನ ಜಟಾಪಟಿ!

Sanatana Dharma Warning: ಆಂಧ್ರ, ತಮಿಳುನಾಡು ಡಿಸಿಎಂಗಳ ನಡುವೆ ಸನಾತನ ಜಟಾಪಟಿ!

Tirupati Laddu Controversy: ತಿರುಪತಿ ಲಡ್ಡು ವಿವಾದ ಸ್ವತಂತ್ರ ತನಿಖೆಗೆ SIT: ಸುಪ್ರೀಂ

Tirupati Laddu Controversy: ತಿರುಪತಿ ಲಡ್ಡು ವಿವಾದ ಸ್ವತಂತ್ರ ತನಿಖೆಗೆ SIT: ಸುಪ್ರೀಂ

Hockey India League: 7 ವರ್ಷ ಬಳಿಕ ಹಾಕಿ ಇಂಡಿಯಾ ಲೀಗ್‌ ಪುನಾರಂಭ.. ಡಿ.28ಕ್ಕೆ ಕೂಟ ಶುರು

Hockey India League: 7 ವರ್ಷ ಬಳಿಕ ಹಾಕಿ ಇಂಡಿಯಾ ಲೀಗ್‌ ಪುನಾರಂಭ.. ಡಿ.28ಕ್ಕೆ ಕೂಟ ಶುರು

Haryana: ಯಾರಿಗೆ ಗೆಲುವಿನ ಹರಿವಾಣ? ಬಿಜೆಪಿಗೆ ಆಡಳಿತ ವಿರೋಧ ಅಲೆ ಭೀತಿ

Haryana: ಯಾರಿಗೆ ಗೆಲುವಿನ ಹರಿವಾಣ? ಬಿಜೆಪಿಗೆ ಆಡಳಿತ ವಿರೋಧ ಅಲೆ ಭೀತಿ

uppunda

Disease: ಉಪ್ಪುಂದದಲ್ಲಿ ಕಾಲರಾ ಭೀತಿ; 200ಕ್ಕೂ ಅಧಿಕ ಮಂದಿ ಅಸ್ವಸ್ಥ; ತಹಶೀಲ್ದಾರ್‌ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.